ಸುನಿಲ್ ಖಾರ್ವಿ ಸಮಾಜದ ಒಬ್ಬ ಪ್ರತಿಭಾವಂತ ಯುವ ನಾಯಕ

ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಗೆ ಎಲ್ಲರೊಳಗೊಂದಾಗು ಮಂಕುತಿಮ್ಮ. ಇದು ಡಿವಿಜಿಯವರ ಮಂಕುತಿಮ್ಮನ ಕಗ್ಗದ ಪರಮಶ್ರೇಷ್ಠ ಸಾಲುಗಳು.

ನಮ್ಮ ಕೆಲಸ ಕಾರ್ಯ ನಡೆ ನುಡಿಗಳಿಂದ ಇತರರ ಪಾಲಿಗೆ ಉಪಕಾರಿಯಾಗಬೇಕೆಂಬುದು ಈ ಅದ್ಬುತ ಸಾಲುಗಳ ತಾತ್ಪರ್ಯ. ನಮ್ಮ ಬದುಕು ಇತರರಿಗೆ ಮಾದರಿಯಾಗಬೇಕು. ನಮ್ಮ ಆಸ್ತಿತ್ವ ಇತರರ ನೋವಿಗೆ ದ್ವನಿಯಾಗಬೇಕು. ನಾವು ಮಾಡುವ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಬೇಕು. ಹೌದು ಮಂಕುತಿಮ್ಮನ ಕಗ್ಗದ ಈ ಅದ್ಭುತವಾದ ಸಾಲುಗಳು ಕುಂದಾಪುರ ಬಹೂದ್ದೂರ್ ಷಾ ರಸ್ತೆಯ ಜನಪ್ರಿಯ ಯುವ ನಾಯಕ ಸುನಿಲ್ ಖಾರ್ವಿ ಗೆ ಅತ್ಯುತ್ತಮ ವಾಗಿ ಅನ್ವಯವಾಗುತ್ತದೆ.

ಯಾರೋ ತಮ್ಮ ಕಷ್ಟವನ್ನು ಹೇಳಿಕೊಳ್ಳುತ್ತಾರೆ. ಅವರ ಕಷ್ಟಗಳಿಗೆ ಸುನಿಲ್ ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ ನೊಂದವರ ಕಷ್ಟ ಪರಿಹಾರ ಕಾಣುತ್ತದೆ ಬದುಕೇ ಬೇಡವೆನ್ನುವ ವ್ಯಕ್ತಿಯಲ್ಲಿ ಭರವಸೆಯ ಚೈತನ್ಯ ಮೂಡಿಸಿ ಸ್ಪೂರ್ತಿ ತುಂಬುತ್ತಾರೆ ರಾಜಕೀಯ ಕ್ಷೇತ್ರದ ಅವಕಾಶವನ್ನು ಸುನಿಲ್ ಸಮಾಜ ಸೇವೆಯ ರೂಪದಲ್ಲಿ ವಿಧೇಯಿಸಿಕೊಂಡಿದ್ದಾರೆ. ಸಹಾಯ ಅಂತ ಬಂದಾಗ ಮೊದಲು ನೆನಪಾಗುವುದು ಸುನಿಲ್ ಖಾರ್ವಿ. ಕೊಂಕಣಿ ಖಾರ್ವಿ ಸಮಾಜದ ಮುಂಚೂಣಿಯ ಯುವ ನಾಯಕರಾದ ಸುನಿಲ್ ಚಿಕ್ಕ ವಯಸ್ಸಿನಿಂದಲೇ ಸಾಮಾಜಿಕ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡವರು. ತನ್ನ 21 ನೇ ವಯಸ್ಸಿನಲ್ಲಿ ವಿದ್ಯಾರಂಗ ಮಿತ್ರ ಮಂಡಳಿಯ ಪ್ರಧಾನ ಕಾರ್ಯ ದರ್ಶಿಯಾಗಿ 2 ನೇ ಅವಧಿಗೆ ಸೇವೆ ಸಲ್ಲಿಸಿ ಸುವರ್ಣ ಸಮಿತಿಯಲ್ಲಿ ಸಾಮಾಜಿಕ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

RSS ಸಂಘ ಪರಿವಾರದ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದು ಗುರುತಿಸಿಕೊಂಡರು. 2018 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಜಿಲ್ಲಾ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸಿ ಬಿಜೆಪಿ ನಾಯಕರಿಂದ ಸೈ ಎನಿಸಿಕೊಂಡರು. ತನ್ನ ಕ್ರೀಯಾಶೀಲ ವ್ಯಕ್ತಿತ್ವ, ವಾಕ್ ಚಾತುರ್ಯ ಗಳಿಂದ ಜನಮೆಚ್ಚುಗೆ ಗಳಿಸಿದ ಸುನಿಲ್ ಖಾರ್ವಿ ಯವರನ್ನು ಕುಂದಾಪುರ ಕ್ಷೇತ್ರದ ಶಾಸಕರಾದ ಶೀ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕುಂದಾಪುರ ಕ್ಷೇತ್ರದ್ಯಕ್ಷರಾದ ಶ್ರೀ ಶಂಕರ್ ಅಂಕದಕಟ್ಟೆ ಹಾಗೂ ಬಿಜೆಪಿ ಮುಖಂಡ ಶ್ರೀ ಕಿರಣಕುಮಾರ್ ಕೊಡ್ಗಿಯವರ ಶಿಫಾರಸ್ಸು ಮೇರೆಗೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳನ್ನಾಗಿ ಸುನಿಲ್ ಖಾರ್ವಿ ಯವರನ್ನು ನೇಮಕ ಮಾಡಿದರು.

ಕೊರಾನಾ ಸಂಕಷ್ಟ ಕಾಲದಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ಹಸಿವೆಯಿಂದ ಬಳಲುತ್ತಿದ್ದ ನಿರ್ಗತಿಕರಿಗೆ ಆಹಾರ ಕಿಟ್, ಮೆಡಿಷನ್ ಕಿಟ್ ವಿತರಣೆ ಮಾಡಿ ಮಾನವೀಯ ಕಾರ್ಯ ಮಾಡಿದ್ದಾರೆ. ಬಡವರಿಗೆ, ನಿರ್ಗತಿಕರಿಗೆ, ಅನಾರೋಗ್ಯದ ಸಮಯದಲ್ಲಿ ವೈದ್ಯಕೀಯ ಶೂಶ್ರೂಷೆಗಾಗಿ ಸಹಾಯ ಹಸ್ತ ನೀಡಿ ಅದೆಷ್ಟೋ ಜೀವ ಉಳಿಸಿದ ಹೃದಯವಂತ ಸುನಿಲ್ ಖಾರ್ವಿ ಅನಾರೋಗ್ಯ ಪೀಡಿತರ ವೈದ್ಯಕೀಯ ಚಿಕಿತ್ಸೆ ಗಾಗಿ ವೈದಾಧಿಕಾರಿಗಳ ನಿರಂತರ ಸಂಪರ್ಕದಲ್ಲಿದ್ದು, ಆಯುಷ್ಮಾನ್ ಭಾರತ್ ಯೋಜನೆ ಮತ್ತಿತರ ವೈದ್ಯಕೀಯ ಸೌಲಭ್ಯ ಗಳ ವಿಚಾರದಲ್ಲಿ ಹಲವರಿಗೆ ಶಿಫಾರಸು ಮಾಡುವ ಮೂಲಕ ಸರ್ವರೀತಿಯಿಂದಲೂ ನೆರವಾಗಿದ್ದಾರೆ. ಲಾಕ್ ಡೌನ್ ದಿಂದಾಗಿ ತೀವ್ರ ಸಂಕಷ್ಟದಲ್ಲಿದ್ದ ಬೀದಿ ವ್ಯಾಪಾರಿಗಳಿಗೆ ಶಾಸಕರ ಜೊತೆಗೆ ವಿಚಾರ ಪ್ರಸ್ತಾಪಿಸಿ ವ್ಯಾಪಾರಕ್ಕೆ ಅನುಮತಿ ದೊರಕಿಸಿಕೊಡುವಲ್ಲಿ ಯಶಸ್ವಿಯಾದರು. ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲೂ ಬಡವರಿಗೆ ಕಿಟ್ ವಿತರಣೆ, ಇಂಜೆಕ್ಷನ್ ಹಾಗೂ ಬೆಡ್ ಗಳ ಕೊರತೆ ಉಂಟಾದಾಗ ಸಮಸ್ಯೆ ನಿವಾರಣೆಗೆ ಅವಿರತ ಶ್ರಮ ವಹಿಸಿ ಕೋವಿಡ್ ಪೀಡಿತರ ಸಂಕಷ್ಟಕ್ಕೆ ಸ್ಪಂದಿಸಿದ ಹೆಗ್ಗಳಿಕೆ ಇವರದ್ದು.

ಕೋವಿಡ್ ಲಸಿಕೆಯ ಸಮರ್ಪಕ ವಿತರಣೆಗೆ ಮಂಚೂಣಿಯಲ್ಲಿ ನಿಂತು ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಕುಂದಾಪುರ ಖಾರ್ವಿ ಕೇರಿ ಮಹಾಕಾಳಿ ದೇವಸ್ಥಾನದ ಆಡಳಿತ ಸಮಿತಿಯ ನಿರ್ದೇಶಕರಾಗಿರುವ ಸುನಿಲ್ ಖಾರ್ವಿ ಯವರು ಸಮಿತಿಯಲ್ಲಿ ಕಿರಿಯ ವಯಸ್ಸಿನಲ್ಲಿಯೇ ತನ್ನ ಸಮಾಜ ಸೇವಾ ಕೈಂಕರ್ಯ ದಿಂದ ಸ್ಥಾನ ಗಳಿಸಿಕೊಂಡಿದ್ದಾರೆ. ಸುಮಾರು 21 ಬಾರಿ ರಕ್ತದಾನ ಮಾಡುವ ಮೂಲಕ ಅನೇಕ ರೋಗಿಗಳ ಜೀವ ಉಳಿಸುವ ಮಹಾತ್ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಅಯೋಧ್ಯೆ ಶೀ ರಾಮಮಂದಿರ ನಿರ್ಮಾಣದ ನಿಧಿ ಸಮರ್ಪಣ ಕಾರ್ಯ ದಲ್ಲಿ ಕುಂದಾಪುರ ವಿಭಾಗದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆರ್ ಎಸ್ ಎಸ್ ಮತ್ತು ಬಿಜೆಪಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸುನಿಲ್ ಖಾರ್ವಿ ಯವರಿಗೆ ಸ್ಥಳೀಯ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದ ನಾಯಕರ ತನಕ ಉತ್ತಮ ಬಾಂಧವ್ಯವಿದೆ. 2018 ರಲ್ಲಿ ಕುಂದಾಪುರ ಪುರಸಭಾ ಚುನಾವಣೆಯ ಬಹೂದ್ದೂರ್ ಷಾ ವಾರ್ಡಿನ ಬಿಜೆಪಿ ಅಭ್ಯರ್ಥಿ ಯೆಂದು ಸುನಿಲ್ ಖಾರ್ವಿ ಯನ್ನು ಬಿಂಬಿಸಲಾಗಿತ್ತು. ಅಷ್ಟರ ಮಟ್ಟಿಗೆ ಜನ ಬೆಂಬಲ ಅವರಿಗಿತ್ತು. ಆದರೆ ಸುನಿಲ್ ಖಾರ್ವಿ ನಿಸ್ವಾರ್ಥ ಮನೋಭಾವದಿಂದ ಈ ಪರಿಸರದಲ್ಲಿ ನಡೆಯಬೇಕಾಗಿದ್ದ ದೇವರ ಕಾರ್ಯ ಕ್ಕೆ ಚಾಲನೆ ದೊರಕಬೇಕೆನ್ನುವ ಸದ್ದುದ್ದೇಶದಿಂದ ಟಿಕೇಟ್ ತ್ಯಾಗ ಮಾಡಿ ತಾನೇ ಅಭ್ಯರ್ಥಿಯಂತೆ ಓಡಾಡಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಟ್ಟು ಬಿಜೆಪಿ ನಾಯಕರಲ್ಲಿ ಸೈ ಎನಿಸಿಕೊಂಡರು.

ಇವರ ನಿರಂತರ ಸಮಾಜ ಸೇವೆ, ಪಕ್ಷ ಸಂಘಟನಾ ಸಾಮರ್ಥ್ಯ ದಿಂದ ಜನಪ್ರಿಯರಾಗಿದ್ದು, ಮುಂದೊಂದು ದಿನ ರಾಷ್ಟ್ರೀಯ ಪಕ್ಷದ ವಿಧಾನಸಭಾ ಚುನಾವಣೆಯಲ್ಲಿ ಸುನಿಲ್ ಖಾರ್ವಿ ಗೆ ಟಿಕೆಟ್ ದೊರಕಿದರೂ ಅಚ್ಚರಿಪಡಬೇಕಾಗಿಲ್ಲ.ಅಷ್ಟರ ಮಟ್ಟಿಗೆ ಸುನಿಲ್ ತಮ್ಮ ಸಮಾಜ ಸೇವೆ ಸಂಘಟನಾ ಚಾತುರ್ಯ ಗಳಿಂದ ಸರ್ವರನ್ನೂ ಸಮ್ಮೋಹನಗೆ ಒಳಪಡಿಸಿದ್ದಾರೆ. ಒಂದೇ ಭೇಟಿಗೆ ಈ ವ್ಯಕ್ತಿ ಒಳ್ಳೆಯವನು ಎಂಬ ಮಾತುಗಳು ಜನರಿಂದ ಬರುತ್ತಿರುವುದು ಸುನಿಲ್ ಖಾರ್ವಿ ಯವರ ಸಮಾಜ ಸೇವಾ ಕಾರ್ಯ ತತ್ಪರತೆಗೆ ಉತ್ತಮ ಉದಾಹರಣೆಯಾಗಿದೆ.

ಜಾತಿ ಮತ ಭೇಧವಿಲ್ಲದೇ ಸಮಾಜದ ಎಲ್ಲಾ ವರ್ಗದ ಜನರೊಂದಿಗೆ ಒಂದಾಗಿ ತನ್ನನ್ನು ಸಮಾಜ ಸೇವೆಯ ಯಜ್ಞದಲ್ಲಿ ಸಮರ್ಪಿಸಿಕೊಂಡಿರುವ ಸುನಿಲ್ ಖಾರ್ವಿ ಯವರಿಗೆ ಖಾರ್ವಿ ಆನ್ಲೈನ್ ಹೃದಯ ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ. ಅವರಿಂದ ಮತ್ತಷ್ಟೂ ಒಳ್ಳೆಯ ಕಾರ್ಯಗಳು ಸಮಾಜಕ್ಕೆ ಪ್ರಾಪ್ತಿ ಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾ ಸುನಿಲ್ ಖಾರ್ವಿ ಯವರು ಮತ್ತಷ್ಟು ಉನ್ನತ ಸ್ಥಾನದಲ್ಲಿ ವಿರಾಜಮಾನವಾಗಲಿ ಎಂದು ಶುಭ ಹಾರೈಸುತ್ತೇನೆ.

ಸುಧಾಕರ್ ಖಾರ್ವಿ
Editor
www.kharvionline.com

3 thoughts on “ಸುನಿಲ್ ಖಾರ್ವಿ ಸಮಾಜದ ಒಬ್ಬ ಪ್ರತಿಭಾವಂತ ಯುವ ನಾಯಕ

  1. ಹೃದಯವಂತ ಯುವನಾಯಕ ಸುನಿಲ್ ಖಾರ್ವಿ ಎಲ್ಲರ ಪಾಲಿಗೆ ಸವಿಯಾದ ಬೆಲ್ಲ ಸಕ್ಕರೆ. ಇವರ ಸತ್ಕಾರ್ಯ ಗಳು ಮಲ್ಲಿಗೆಯಂತೆ ಘಮಘಮಿಸುತ್ತದೆ.ನೊಂದವರ ಪಾಲಿನ ಆಪತ್ಬಾಂಧವರಾಗಿರುವ ಸುನಿಲ್ ಖಾರ್ವಿ ಭವಿಷ್ಯದ ಜನನಾಯಕನಾಗುವುದರಲ್ಲಿ ಸಂಶಯವೇ ಇಲ್ಲ. ಆ ಶುಭ ಕಾಲ ಶೀಘ್ರದಲ್ಲೇ ಕೂಡಿ ಬರಲಿದೆ. ಅಭಿನಂದನೆಗಳು👍👌👍👌👍👌👋👋👋👋👋👋👋👌👍👍👌👌👍💐💐💐💐💐🎉🎉🎉🎉🎉🎉🙏🙏🙏🙏🙏

  2. ಸುನಿಲ್ ಖಾರ್ವಿ . ಈ ಹೆಸರು ಕುಂದಾಪುರ ಬಿಎಸ್ ರಸ್ತೆಯಿಂದ ಪ್ರಾರಂಭವಾಗಿ ಕುಂದಾಪುರ
    ಖಾರ್ವಿ ಸಮಾಜ ಮಾತ್ರವಲ್ಲದೆ ಕುಂದಾಪುರ ಹಾಗು ಅಸುಪಾಸಿನ ಇತರ ಊರುಗಳಲ್ಲಿ ಚಿರಪರಿಚಿತರು.
    ಚಿಕ್ಕಂದಿನಿಂದಲೂ ಜನಪರ ಕಾರ್ಯ ಮಾಡಿಕೊಂಡಿರುವ ನಿಸ್ವಾರ್ಥ ಮನೋಭಾವದ ಸುನಿಲ್ ಖಾರ್ವಿ ನಿಜಕ್ಕೂ ಒಬ್ಬ ಜನಪರ ಕಾಳಜಿ ಇರುವ ವ್ಯಕ್ತಿ. ಇವರ ಸೇವಾ ಮನೋಭಾವ ನಿಜಕ್ಕೂ ಶ್ಲಾಘನೀಯ… ಇವರ ಜೊತೆ ಸೇರಿ ಜನಪರ ಕಾರ್ಯ ಮಾಡಲು ಹೆಮ್ಮೆ ಎನಿಸುತ್ತದೆ. ಇವರ ರಾಜಕಿಯ ಭವಿಷ್ಯ ಉಜ್ವಲವಾಗಲೆಂದು ಹಾರೈಸುತ್ತೇನೆ.

  3. ಸುನಿಲ್ ಖಾರ್ವಿ . ಈ ಹೆಸರು ಕುಂದಾಪುರದ ಬಿಎಸ್ ರಸ್ತೆಯಿಂದ ಪ್ರಾರಂಭವಾಗಿ ಕುಂದಾಪುರ
    ಖಾರ್ವಿ ಸಮಾಜ ಮಾತ್ರವಲ್ಲದೆ ಕುಂದಾಪುರ ಹಾಗು ಅಸುಪಾಸಿನ ಇತರ ಊರುಗಳಲ್ಲಿ ಚಿರಪರಿಚಿತರಾದವರು.
    ಚಿಕ್ಕಂದಿನಿಂದಲೂ ಜನಪರ ಕಾರ್ಯ ಮಾಡಿಕೊಂಡಿರುವ ನಿಸ್ವಾರ್ಥ ಮನೋಭಾವದ ಸುನಿಲ್ ಖಾರ್ವಿ ನಿಜಕ್ಕೂ ಒಬ್ಬ ಜನಪರ ಕಾಳಜಿ ಇರುವ ವ್ಯಕ್ತಿ. ಇವರ ಸೇವಾ ಮನೋಭಾವ ನಿಜಕ್ಕೂ ಶ್ಲಾಘನೀಯ… ಇವರ ಜೊತೆ ಸೇರಿ ಜನಪರ ಕಾರ್ಯ ಮಾಡಲು ಹೆಮ್ಮೆ ಎನಿಸುತ್ತದೆ. ಇವರ ರಾಜಕಿಯ ಭವಿಷ್ಯ ಉಜ್ವಲವಾಗಲೆಂದು ಹಾರೈಸುತ್ತೇನೆ.

Leave a Reply

Your email address will not be published. Required fields are marked *