ಉದ್ಯೋಗ ಸಂದರ್ಶನಗಳಿಗೆ ಹೇಗೆ ಸಿದ್ಧರಾಗಬೇಕು?

ಶ್ರೀಯುತ ಪ್ರಕಾಶ್ ಮೇಸ್ತಾ ಅವರ ಸಂಕ್ಷಿಪ್ತ ವಿವರ

18+ Years Experience in:

▪ Continuous Improvement and Innovation
▪ Digital Solutions and Automations
▪ Process Improvement and Process Re-designing
▪ Enterprise-level Quality & Service Excellence
▪ Process Re-engineering and Transitions
▪ Org level MIS and Business Intelligence Reporting
▪ Leadership and Organization Development Trainings
▪ Designing and Implementing Shared Services Functions

Academics and Accreditations:
▪ Entrepreneurship – IIM, Kashipur
▪ Master of Business Administration – Symbiosis, Pune
▪ Mech Engineering – NTTF, Bangalore
▪ Master Black Belt – Lean Six Sigma (ISI, ASQ, Infosys, IBM)
▪ Project Management and Business Analysis Certified

Previous Roles:
▪ Director, Operations Excellence – Sourcepoint (FirstSource)
▪ Director, Quality/Operations Excellence – Visionet Systems
▪ Continuous Improvement Leader – IBM/Concentrix
▪ Quality Assurance Manager – CoreLogic/Cognizant
▪ Quality Specialist – Infosys

LIVE WEBINAR

ವಿಷಯ : ಉದ್ಯೋಗ ಸಂದರ್ಶನಗಳಿಗೆ ಹೇಗೆ ಸಿದ್ಧರಾಗಬೇಕು?

ತಾರೀಕು: 12 ಸೆಪ್ಟೆಂಬರ್ 2021, ಭಾನುವಾರ
ಸಮಯ : ಬೆಳಿಗ್ಗೆ 10.30
ಕಾರ್ಯಕ್ರಮ ನಡೆಸಿಕೊಡುವವರು:
ಹಲವಾರು ವರ್ಷಗಳ ಕಾರ್ಪೊರೇಟ್ ಅನುಭವ ಹೊಂದಿರುವ ಮ್ಯಾನೇಜ್ಮೆಂಟ್ ತಜ್ಞರಾದ ಶ್ರೀಯುತ ಪ್ರಕಾಶ್ ಮೇಸ್ತ , ಸಂಸ್ಥಾಪಕರು ಮತ್ತು ನಿರ್ದೇಶಕರು, NuyWaz Solutions Pvt.Ltd., ಬೆಂಗಳೂರು.

ವಿದ್ಯಾಭ್ಯಾಸ ಮುಗಿಸಿರುವ ಯುವಕ/ ಯುವತಿಯರಿಗೆ ಮತ್ತು ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಸಂದರ್ಶನಗಳಿಗೆ ಹೇಗೆ ಸಿದ್ಧರಾಗಬೇಕು ಎಂದು ತಿಳಿಯಲು ಇದು ಒಂದು ಉತ್ತಮ ಅವಕಾಶ.

ಪ್ರತಿಯೊಬ್ಬ ವಿಧ್ಯಾರ್ಥಿ ತಮ್ಮ ಶೈಕ್ಷಣಿಕ ವಿಷಯಗಳಲ್ಲಿ ಎಷ್ಟೇ ಉತ್ತಮ ಅಂಕ ಗಳಿಸಿದರೂ, ತಾನು ಪದವಿ ಪಡೆದು ಕೊಂಡ ನಂತರ, ಉದ್ಯೋಗಕ್ಕಾಗಿ ಸಂದರ್ಶನದ ಸವಾಲುಗಳನ್ನು ಎದುರಿಸಬೇಕಾಗುತ್ತದೆ.

ಪದವಿ ಪಡೆದ ನಂತರ ನೌಕರಿಗಾಗಿ ಎದುರಿಸುವ ಸಂದರ್ಶನದ ಆ ಒಂದು ಹಂತ ಅವರ ಜೀವನದ ನಿರ್ಣಾಯಕ ಘಟ್ಟ ಮತ್ತು ಬಹುತೇಕ ಆ ವ್ಯಕ್ತಿಯ ಭವಿಷ್ಯವನ್ನು ನಿರ್ಧರಿಸುತ್ತದೆ.

ಉದ್ಯೋಗ ಸಂದರ್ಶನಗಳು ಕೆಲವೊಮ್ಮೆ ಕ್ಯಾಂಪಸ್ ನೇಮಕಾತಿಯ ಮೂಲಕ ಮತ್ತು ಕೆಲವೊಮ್ಮೆ ಮುಕ್ತ ಉದ್ಯೋಗ ಮಾರುಕಟ್ಟೆಯಲ್ಲಿ ಉದ್ಯೋಗಾಕಾಂಕ್ಷಿಗಳು ಎದುರಿಸುತ್ತಾರೆ. ಅದರಲ್ಲಿ ಕೆಲವು ಸಾಮಾನ್ಯ ಸವಾಲುಗಳ ಅನುಭವ ಎಲ್ಲರಿಗೂ ಆಗುತ್ತದೆ.

ಸಾಮಾನ್ಯವಾಗಿ ಉದ್ಯೋಗಾಕಾಂಕ್ಷಿಗಳು ಮೂರು ರೀತಿಯ ಸಂದರ್ಶನ ಎದುರಿಸ ಬೇಕಾಗುತ್ತದೆ. ಅವು ಲಿಖಿತ ಪರೀಕ್ಷೆ (written test), ಗುಂಪು ಚರ್ಚೆ(group discussion) ಮತ್ತು ವ್ಯಕ್ತಿಗತ ಚರ್ಚೆ( in person interview). ಈ ಪ್ರತಿಯೊಂದು ಸುತ್ತುಗಳು ಪ್ರತಿಯೊಬ್ಬರಿಗೂ ವಿಭಿನ್ನ ಸವಾಲುಗಳನ್ನು ಒಡ್ಡಬಹುದು. ಉದ್ಯೋಗಾಕಾಂಕ್ಷಿಗಳು ಈ ರೀತಿಯ ಉದ್ಯೋಗ ಸಂದರ್ಶನಗಳು (Job interview) ಸುಲಭವಾಗಿ ನಿಭಾಯಿಸುವ ಮಟ್ಟ ತಲುಪುವ ಮೊದಲು ಹಲವು ಬಾರಿ ಹಲವು ಕಾರಣಗಳಿಂದ ವಿಫಲರಾಗಬಹುದು.

ಉದ್ಯೋಗ ಸಂದರ್ಶನದಲ್ಲಿ ಯಶಸ್ವಿಯಾಗಬೇಕಾದರೆ ಪೂರ್ವ ಸಿದ್ಧತೆಯ ಅಗತ್ಯವಿದೆ. ಉದ್ಯೋಗಾಕಾಂಕ್ಷಿಗಳಿಗೆ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನದೊಂದಿಗೆ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವಲ್ಲಿ ಈ ಕಾರ್ಯಕ್ರಮ ತುಂಬಾ ಉಪಯುಕ್ತವಾಗಲಿದೆ.

www.kharvionline.com

Leave a Reply

Your email address will not be published. Required fields are marked *