ಕುಂದಾಪುರದ ಮಹಾರಾಜನಿಗೆ ಒಮ್ಮೆ ನೋಡ ಬನ್ನಿ…

ಕುಂದಾವರ್ಮ ರಾಜರು ಆಳಿದ ಸುಪ್ರಸಿದ್ಧ ತಾಣ ಈ ನಮ್ಮ ಕುಂದಾಪುರ. ಸೌಪರ್ಣಿಕಾ, ವರಾಹಿ, ಕುಬ್ಜ, ಕೆದಕ, ಚಕ್ರೆ ಈ ಐದು ಪವಿತ್ರ ನದಿಗಳ ಸಂಗಮವಾಗಿ ದುಮ್ಮಿಕ್ಕಿ ಹರಿಯುವ ಪುಣ್ಯ ಪಂಚಗಂಗಾವಳಿ ನದಿಯು ಉಗಮವಾಗುವ ಸುಂದರ ತಾಣವು ಹೌದು ಈ ನಮ್ಮ ಕುಂದಾಪುರ.

ಪರಶುರಾಮರು ಸ್ರಷ್ಟಿಸಿದ ಕರಾವಳಿ ತೀರ ದ ಒಂದು ಭಾಗವಾಗಿರುವ ಈ ನಮ್ಮೂರು ಹಲವಾರು ಪ್ರಸಿದ್ದ ಧಾರ್ಮಿಕ ಭಕ್ತಿ ಕ್ಷೇತ್ರಗಳ ತವರೂರು. ಇಂತಹ ಸುಂದರ ತಾಣ ಕುಂದಾಪುರ ದ ಮಧ್ಯಭಾಗದಲ್ಲಿ ದುಮ್ಮಿಕ್ಕಿ ಹರಿಯುವ ಪಂಚಗಂಗಾವಳಿ ನದಿಯ ತಟದಲ್ಲಿ ನೆಲೆ ನಿಂತಿದ್ದಾಳೆ ಭಕ್ತ ವತ್ಸಲೆ, ಶ್ರೀ ಮಹಾಕಾಳಿ ಅಮ್ಮ ನವರು.

ಸುಮಾರು ಎಂಬತ್ತರ ದಶಕದಲ್ಲಿ ದಕ್ಷಿಣನ್ಮಯ ಶ್ರೆಂಗೇರಿ ಶ್ರೀ ಶಾರದ ಪೀಠಾಧೀಶರಾದ. ಶ್ರೀ ಶ್ರೀ ಮಧಭಿನವ ವಿದ್ಯಾ ತೀರ್ಥ ಮಹಾಸ್ವಾಮಿಗಳವರ ಅಮ್ರತ ಹಸ್ತಗಳಿಂದ ಶೀಲಾನ್ಯಾಸಗೊಂಡ ಶ್ರೀ ಮಹಾಕಾಳಿ ದೇವಸ್ಥಾನ ವು ವಿಷೇಶ ಭಕ್ತಿಯ ಕೇಂದ್ರವಾಗಿ ಊರ ಪರ ಊರ ಜನರ ಆರಾದ್ಯ ಕ್ಷೇತ್ರವಾಗಿದೆ.

ಜಗನ್ಮಾತೆ ಮಹಾಕಾಳಿ ಅಮ್ಮನವರು ನೆಲೆನಿಂತಿರುವ ಈ ಕ್ಷೇತ್ರದಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ಬ್ರಹ್ಮಕಲಶ ನೆರವೆರುವುದು ಪ್ರತೀತಿ. ಅಂತಹೆ 1988 ರಲ್ಲಿ ಶ್ರೀ ಶ್ರೀ ಶ್ರೀ ಮದಭಿನವ ವಿದ್ಯಾ ತಿರ್ಥ ಸ್ವಾಮಿಗಳವರಿಂದ ಶೀಲಾನ್ಯಾಸ ಗೊಂಡು ಬ್ರಹ್ಮಕಲಶ ನೆರವೇರಿತು ನಂತರ 2002 ರಲ್ಲಿ ಇವರ ಶಿಷ್ಯರುಗಳದ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿ ಗಳವರ ಅಮ್ರತ ಹಸ್ತಗಳಿಂದ ಬ್ರಹ್ಮಕಲಶ ನೇರವೆರಿತು.

2016 ರಲ್ಲಿ ಇವರ ಕರಕಮಲ ಸಂಜಾತಾರಾದ ಶ್ರೀ ವಿಧುಶೇಕರ ಸ್ವಾಮಿಗ ಳವರ ಅಮ್ರತ ಹಸ್ತಗಳಿಂದ ಅಷ್ಟೋತ್ತರ ಬ್ರಹ್ಮ ಕುಂಭಾಭಿಷೇಕ ನೆರವೇರಿತು. ಶ್ರೇಂಗೇರಿ ಪೀಠಾದ ಗುರು ಪರಂಪರೆಯ ಈ ಮೂವರು ಗುರುಗಳಿಂದಲೂ ಈ ಸನ್ನಿಧಾನದಲ್ಲಿ ಧಾರ್ಮಿಕ ಕಾರ್ಯಕ್ರಮ ಗಳು ನೆಡೆದಿದ್ದು ಅತೀ ವಿಶೇಷವಾಗಿದೆ ಮತ್ತು ಅತ್ಯಂತ ಪವಿತ್ರ ಹಾಗೂ ಧಾರ್ಮಿಕ ಕ್ಷೇತ್ರವಾಗಿರುದರ ಸಾಕ್ಷಿಯಾಗಿದ್ದು ಮಾತ್ರವಲ್ಲದೆ, ಸಾಕ್ಷತ್ ಪಾರ್ವತಿ ಸ್ವರೂಪಿಣಿ ಯಾಗಿರುವ ಶ್ರೀ ಮಹಾಕಾಳಿ ಅಮ್ಮನವರು ನೆಲೆನಿಂತಿರುವ ಈ ಸನ್ನಿಧಾನ ದಲ್ಲಿ ಪಾರ್ವತಿ ಪುತ್ರ ವಿಘ್ನೇಶ್ವರ ನ ಆರಾಧನೆ ಯು ಭಕ್ತಿ ಭಾವದಿಂದ ವಿಷೇಶವಾಗಿ ನೆಡೆಯುತ್ತದೆ.

ಭಾದ್ರಪದ ಮಾಸದಲ್ಲಿ ಬರುವ ಪ್ರಥಮ ಪೂಜಿತ ಶ್ರೀ ಮಹಾಗಣೇಶ ನ ಹಬ್ಬವನ್ನು ಕಳೆದ 30 ವರ್ಷಗಳಿಂದ ಸಮಾಜ ದ ಭಕ್ತರು ಸೇರಿ ಗಣಪನ ಸುಂದರ ಮೂರ್ತಿ ಪ್ರತಿಷ್ಟಾಪಿಸಿ ಐದು ದಿನಗಳು ಶ್ರದ್ದೆ ಭಕ್ತಿಯಿಂದ ಗಣೇಶೋತ್ಸವ ಆಚರಿಸುತ್ತಾರೆ. 31 ನೇ ವರ್ಷದಲ್ಲಿರುವ ಈ ವರ್ಷ ಕೊವೀಡ್ ನಿಯಮಗಳ ಅನ್ವಯ 3 ದಿನಗಳಷ್ಟೇ ಶ್ರದ್ದೇ ಭಕ್ತಿ ಪೂರ್ವಕವಾಗಿ ಗಣೇಶೋತ್ಸವ ನಡೆಯಲಿದೆ.

ಶ್ರೀ ವಸಂತ್ ಗುಡಿಗಾರ್ ಇವರ ಕೈಯಿಂದ ಮೂಡಿಬರುವ ಈ ಚಂದದ ಪೂರ್ತಿಯನ್ನು ನೋಡಲೆಂದೆ ಜಿಲ್ಲೆಯ ಹಲವಾರು ಕಡೆಗಳಿಂದ ಭಕ್ತರು ಆಗಮಿಸುತ್ತಾರೆ. 2015 ರಲ್ಲಿ ಶ್ರೀ ಮಹಾಕಾಳಿ ದೇವಸ್ಥಾನ ಗಣೇಶೋತ್ಸವ ಸಮಿತಿ ಯು ರಜತ ಮಹೋತ್ಸವ ವೈಭವ ಪೂರಿತ ವಾಗಿ ಆಚರಿಸಿ ದೇವರಿಗೆ ಸಂಪೂರ್ಣ ಬೆಳ್ಳಿ ಸಿಂಹಾಸನ ಸಮರ್ಪಿಸಿ, ಸಹಸ್ರ ನಾಳಿಕೇರ ಗಣಯಾಗ ನೆರವೆರಿಸಿ ರಜತ ಮಹೋತ್ಸವದ ಭಕ್ತಿಯ ಹೊಗೆ ಕುಂದಾಪುರವೆಲ್ಲಾ ಪಸರಿಸಿ ಭಕ್ತಿ ವೈಭವ ಕ್ಕೆ ಸಾಕ್ಷಿಯಾದ ಕ್ಷಣ ಇಂದಿಗೂ ಕಣ್ಣಾ ಮುಂದೆ ನಿಂತಿದೆ.

ಶ್ರೀ ಮಹಾಕಾಳಿ ದೇವಸ್ಥಾನ ದ ಕಲ್ಯಾಣ ಮಂಟಪದಲ್ಲಿ ಬೆಳ್ಳಿಯ ಸಿಂಹಾಸನದಲ್ಲಿ ಅಂದದ ಮಂಗಳ ಮುರುತಿ ಕುಳ್ಳಿರಿಸಿ, ಶ್ರೀ ಮಂಜುನಾಥ ಸೋಮಯಾಜಿ ಇವರ ನೇತೃತ್ವದಲ್ಲಿ ಶ್ರದ್ದೆ, ಭಕ್ತಿ, ಭಾವ ಮತ್ತು ವಿಜೃಂಭಣೆ ಯೊಂದಿಗೆ ಪೂಜಿಸಿ ಐದನೆ ದಿನಕ್ಕೆ ಅನ್ನಸಂತರ್ಪಣೆ ನಡೆಯುತ್ತಿದ್ದಂತೆ. ಹಲವು ಕಲಾತಂಡಗಳ ಝೆಂಕಾರ ದೊಂದಿಗೆ ಮಧುವಾಣ ಗಿತ್ತಿ ಯಂತೆ ಶ್ರಂಗಾರಗೊಂಡ ವಾಹನ ದಲ್ಲಿ ವೈಭವದ ವಿಸರ್ಜನಾ ಪುರಮೆರವಣಿಗೆಯು ಕುಂದಾಪುರದ ಪ್ರಮುಖ ರಸ್ತೆಯ ಮಾರ್ಗವಾಗಿ ಪಂಚಗಂಗಾ ನದಿಗೆ ಸಮೀಪಿಸುತ್ತಿರಲು ಭೋರ್ಗರೆದು ಹರಿಯುತ್ತಿರುವ ಪಂಚಗಂಗಾ ನದಿ ಇನ್ನೇನೂ ತಾನು ಇವನ ಸ್ವರ್ಶದಿಂದ ಇನ್ನಷ್ಟು ಪಾವನಾಗಳುವೆ ಎನ್ನುವ ಸಂತಸದ ಅಲೆಗಳ ನರ್ತನದೊಂದಿಗೆ ಸ್ವಾಗತಿಸುತ್ತಿರುವಳಂತೆ ಭಾಸವಗುತ್ತೆ.

ಸಂಜೆಯ ತಂಪು, ಕೆಂಪಾದ ಆಗಸದ ಸೂರ್ಯ ತುಸು ಮುಳುಗಿ, ಬೆಳದಿಂಗಳ ಚಂದ್ರೋದಯದ ಹೊತ್ತಲ್ಲಿ ಅಂಗೇಲೆ ಗಣಪತಿ ಎನ್ನುವ ಹರ್ಷೋದ್ಗಾರದ ಕೂಗು ಮುಗಿಲೇತ್ತರಕ್ಕೆ ಸಾಗುತ್ತಿರಲು ನಮ್ಮ ಮಹಾಗಣೇಶ ಪಾವನ ಪಂಚಗಂಗಾ ನದಿಯಲ್ಲಿ ಜಲಸ್ಥಂಭನ ವಾಗುವ ದ್ರಶ್ಯ ಸಾವಿರಾರು ಭಕ್ತರು ಕಣ್ತುಂಬಿ ಕೊಳ್ಳುತ್ತಾರೆ.

ಎಸ್. ಸುನೀಲ್ ಖಾರ್ವಿ
ಕುಂದಾಪುರ

Leave a Reply

Your email address will not be published. Required fields are marked *