ಚಿತ್ರಕಲೆಯತ್ತ ಚಿತ್ತ ಹರಿಸಿದ ಪೂಜಾಶ್ರೀ

ಸಾಹಸ, ಕ್ರೀಡೆಗಳಲ್ಲಿ ಪರಿಣಿತರಾಗಲು ದೇಹದಲ್ಲಿ ಶಕ್ತಿಯಿರಬೇಕು; ಸಾಧಿಸುವ ಚಲ ಇರಬೇಕು. ಆದರೆ ಕಲೆ, ಸಾಹಿತ್ಯ, ಸಂಗೀತ ಕಲಿಕೆಗೆ ಅಪಾರ ತಾಳ್ಮೆಯಿರಬೇಕು; ಜೊತೆಯಲ್ಲಿ ಕಲಿಯುವ ಉತ್ಸಾಹವೂ ಇರಬೇಕು. ಅತ್ಯಂತ ಸಂಯಮದಿಂದ ಚಿತ್ರಕಲೆಯನ್ನು ಸ್ವಯಂ ಕಲಿತು, ಈ ಕಲೆಯನ್ನು ಸಿದ್ಧಿಸಿಕೊಂಡಿರುವ , ಚಿತ್ರಕಲೆಯಲ್ಲಿ ಅರಳುತ್ತಿರುವ ಪ್ರತಿಭೆಯೆಂದರೆ ಕುಮಾರಿ ಪೂಜಾಶ್ರೀ ಕೋಟಾನ್ ಗಂಗೊಳ್ಳಿ.

ಗಂಗೊಳ್ಳಿಯ ಪರಿಸರ ಹಲವಾರು ವಿಖ್ಯಾತರನ್ನು ಚಿತ್ರಕಲಾ ಲೋಕಕ್ಕೆ ಪರಿಚಯಿಸಿದೆ. ಸಮೃದ್ಧವಾದ ಮತ್ತು ನೈಜವಾದ ಸುಂದರ ಪರಿಸರದ‌ ಸೊಬಗಿನ ಪ್ರಭಾವವೋ ಏನೋ, ಇಲ್ಲಿಯ ಮಣ್ಣಿಗೆ ಚಿತ್ರಕಲಾ ಪ್ರತಿಭೆಗಳನ್ನು ರೂಪಿಸುವ ಶಕ್ತಿಯಿದೆ. ಹೀಗೆ ಚಿತ್ರಕಲೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು, ಗಂಗೊಳ್ಳಿ ಖಾರ್ವಿಕೇರಿಯ ಪರಮೇಶ್ವರ ಕೋಟಾನ್ ಮತ್ತು ಲಲಿತಾ ಕೋಟಾನ್ ದಂಪತಿಯ ಪುತ್ರಿಯಾದ ಪೂಜಾಶ್ರೀಯವರು. ಪ್ರಸ್ತುತ ಇವರು ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಎಂ.ಎಸ್ಸಿ. ಓದುತ್ತಿದ್ದು, ಓದು ಮತ್ತು ಚಿತ್ರಕಲೆಯನ್ನು ಜೊತೆಜೊತೆಯಾಗಿ ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ. ಆರ್ಸಿಲಿಕ್ ಪೈಟಿಂಗ್ ಮತ್ತು ಗ್ರಾಪೈಟ್ ಪೈಟಿಂಗ್ ಇವರ ಮೆಚ್ಚಿನ ವಿಷಯಗಳು. ಅದಲ್ಲದೆ ವಾಲ್ ಪೈಂಟಿಂಗ್, ಪಾಟ್ ಪೈಂಟಿಂಗ್, ಕ್ಯಾನ್ವಾಸ್ ಪೈಂಟಿಂಗ್ ಮೂಲಕವೂ ಗಮನ ಸೆಳೆದಿದ್ದಾರೆ.

ಇತ್ತೀಚಿಗೆ ಉಡುಪಿಯ ಇನಾಯತ್ ಆರ್ಟ್ಸ್ ಗ್ಯಾಲರಿಯಲ್ಲಿ ನಡೆದ ರಜತ ಮಹೋತ್ಸವ ಸಂಭ್ರಮಾಚರಣೆಯ ಚಿತ್ರಕಲಾ ಪ್ರದರ್ಶನದಲ್ಲಿ ಇವರ ಹುಲಿವೇಶ ಮತ್ತು ಕಥಕ್ಕಳಿಯ ಚಿತ್ರಗಳು ಪ್ರದರ್ಶನಗೊಂಡಿದ್ದು ಕಲಾಸಕ್ತರ ಮೆಚ್ಚುಗೆಗೆ ಪಾತ್ರವಾಗಿತ್ತು. ಬಿಡುವಿನ ಪೂರ್ಣ ಸಮಯವನ್ನು ಕಲೆಗಾಗಿಯೇ ಮುಡಿಪಾಗಿಡುವ ಇವರು “ಚಿತ್ರಕಲೆಯಲ್ಲಿ ನಾನು ಕಲಿತದ್ದು ಕಡಿಮೆ, ಇನ್ನೂ ತುಂಬಾ ಕಲಿಯಲಿದೆ” ಎಂದು ವಿನಮ್ರರಾಗಿ ನುಡಿಯುತ್ತಾರೆ. ಇವರ ಕಲಾಪ್ರತಿಭೆ ಹೀಗೆ ಬೆಳಗಿ, ಸರ್ವ ಮಾನ್ಯತೆಯನ್ನು ಪಡೆಯಲಿ ಎಂದು ಶುಭ ಹಾರೈಸೋಣ.

ನಾಖಾರ್ವಿ ಕಂಚುಗೋಡು

5 thoughts on “ಚಿತ್ರಕಲೆಯತ್ತ ಚಿತ್ತ ಹರಿಸಿದ ಪೂಜಾಶ್ರೀ

  1. ನೈಜತೆ ಬಿಂಬಿಸುವ ಅಪೂರ್ವ ಕಲಾಕೃತಿಗಳು.ಪೂಜಾಶ್ರೀಯವರು ಚಿತ್ರಕಲೆಯ ಹಲವು ಶೈಲಿಯನ್ನು ಆಕರ್ಷಕವಾಗಿ ಅನಾವರಣಗೊಳಿಸಿದ್ದಾರೆ.ಹೃದಯಸ್ಪರ್ಶಿ ಅಭಿನಂದನೆಗಳು👌👌👌👍👍👍👋👋👋👋👋👋👋👋💐💐💐💐💐💐

  2. Congratulations sister. It is a matter of pride to have more art coming from you, especially from the daughters of our Kharvi society. Heartfelt congratulations.

  3. Colours of Life … Very beautiful drawings and painting … Good luck and keep creating more such art work

Leave a Reply

Your email address will not be published. Required fields are marked *