ಮಕ್ಕಳು ದೇವರ ಪ್ರತಿರೂಪ ಮಕ್ಕಳ ನಗು ಭವಿಷ್ಯದ ಬೆಳಕು ಮುಗ್ದ ಮಕ್ಕಳ ಕಲರವ ನಮಗೆ ಪರಮಾನಂದ, ಮಕ್ಕಳು ಹೂತೋಟದ ಸುಂದರ ಮೊಗ್ಗುಗಳು ಈ ಮೊಗ್ಗುಗಳನ್ನು ಜೋಪಾನವಾಗಿ ಪೋಷಿಸಿ, ಬೆಳೆಸುವ ಜವಾಬ್ದಾರಿ ಹೆತ್ತವರದು ಮಕ್ಕಳಿಗೆ ಹೆತ್ತವರು ಉತ್ತಮ ಶಿಕ್ಷಣದ ಜೊತೆಗೆ ನಮ್ಮ ಸಂಸ್ಕೃತಿ, ಆಚಾರ ವಿಚಾರ ದೇಶಭಕ್ತಿಯನ್ನು ಉದ್ದೀಪನಗೊಳಿಸಿ ದೇಶದ ಸುಸಂಸ್ಕೃತ ಪ್ರಜೆಗಳನ್ನಾಗಿ ರೂಪಿಸಬೇಕು. ಅವರ ಮುಗ್ಧ ಮನಸ್ಸುಗಳನ್ನು ನೋಯಿಸದೇ , ಅವರ ಕನಸಿಗೆ ನೀರೆರೆಯಬೇಕು ಇಂದಿನ ಮಕ್ಕಳೇ ಭವಿಷ್ಯದ ಭಾರತದ ನಿರ್ಮಾತರು.
ಮಕ್ಕಳ ದಿನಾಚರಣೆಯನ್ನು ಅವಿಸ್ಮರಣೀಯಗೊಳಿಸಲು ದೇಶದ ನಾನಾ ಕಡೆ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. ಮಕ್ಕಳ ಪೋಟೋ ಸ್ಪರ್ಧೆ ಇವುಗಳಲ್ಲಿ ಒಂದಾಗಿದ್ದು ಹಲವಾರು ಮಕ್ಕಳ ಸುಂದರ ನಗುವಿನ ಮುಖಾರವಿಂದಗಳನ್ನು ಕಾಣುವ ಸೌಭಾಗ್ಯ ಈ ಮಕ್ಕಳ ಪೋಟೋ ಸ್ಪರ್ಧೆ ಕಲ್ಪಿಸಿಕೊಡುತ್ತದೆ. ಕೊಂಕಣಿ ಖಾರ್ವಿ ಸಮುದಾಯದ ಪ್ರಪ್ರಥಮ ಅಂತರ್ಜಾಲ ಪತ್ರಿಕೆಯಾದ ಖಾರ್ವಿ ಆನ್ಲೈನ್ ಪ್ರಪ್ರಥಮ ಬಾರಿಗೆ ಕೊಂಕಣಿ ಖಾರ್ವಿ ಸಮಾಜದ ಮಕ್ಕಳ ಪೋಟೋ ಸ್ಪರ್ಧೆ ಆಯೋಜಿಸಿದೆ.
ಇದು ಪ್ರಪಂಚದಾದ್ಯಂತ ಹರಡಿಕೊಂಡಿರುವ ನಮ್ಮ ಸಮಾಜ ಭಾಂಧವರನ್ನು ಮಕ್ಕಳ ಪೋಟೋ ಸ್ಪರ್ಧೆ ಹೆಸರಿನಲ್ಲಿ ಭಾವಾನಾತ್ಮಕವಾಗಿ ಬೆಸೆಯುವ ಪ್ರಯತ್ನವಾಗಿದೆ. ನಮ್ಮ ಸಮಾಜದ ಸುಂದರ ಮಕ್ಕಳ ಭಾವಚಿತ್ರ ನೋಡುವ ಭಾಗ್ಯ ನಮ್ಮದು. ಕೊಂಕಣಿ ಖಾರ್ವಿ ಸಮಾಜದ ಹೆತ್ತವರು ತಮ್ಮ ಮಕ್ಕಳ ಸುಂದರ ಪೋಟೋಗಳನ್ನು ಈ ಸ್ಪರ್ಧೆಗೆ ಕಳುಹಿಸಿ ಮಕ್ಕಳ ಪೋಟೋ ಸ್ಪರ್ಧೆಯನ್ನು ಯಶಸ್ವಿಗೊಳಿಸಲು ಈ ಮೂಲಕ ವಿಜ್ಞಾಪಿಸಿಕೊಳ್ಳುತ್ತೇನೆ.
ಮಕ್ಕಳ ದಿನಾಚರಣೆ ಅಂಗವಾಗಿ ಕೊಂಕಣಿ ಖಾರ್ವಿ ಸಮಾಜ ಭಾಂಧವರ ಮೂರು ವರ್ಷದ ಒಳಗಿನ ಮಕ್ಕಳಿಗಾಗಿ ಖಾರ್ವಿ ಆನ್ಲೈನ್ ಮುದ್ದು ಕಂದ ಸ್ಪರ್ಧೆ 2021 ಆಯೋಜಿಸಿದೆ. ಸಮಾಜ ಭಾಂಧವರು ತಮ್ಮ ಮೂರು ವರ್ಷದ ಒಳಗಿನ ಮಕ್ಕಳ ಸುಂದರ ಭಾವಚಿತ್ರ ಕಳುಹಿಸಿ ಮತ್ತು ಅತ್ಯುತ್ತಮ ಚಿತ್ರಕ್ಕೆ ಆಕರ್ಷಕ ಬಹುಮಾನ ಗೆಲ್ಲುವ ಅವಕಾಶವನ್ನು ಈ ಸ್ಪರ್ಧೆಯಲ್ಲಿ ಕಲ್ಪಿಸಲಾಗಿದೆ. ಮಕ್ಕಳ ಪೋಟೊ ಕಳುಹಿಸಲು ನವೆಂಬರ್ 12 ಕೊನೆಯ ದಿನವಾಗಿರುತ್ತದೆ. ಪೋಟೋಗಳನ್ನು ವಾಟ್ಸಾಪ್ (+91 9071278342 or Email newskharvionline@gmail.com) ಮೂಲಕ ಕಳುಹಿಸಬಹುದಾಗಿದೆ. ಮಕ್ಕಳ ಪೋಟೋ, ತಂದೆ ತಾಯಿಯ ಹೆಸರು ಊರು ಮತ್ತು ಮೊಬೈಲ್ ಸಂಖ್ಯೆಯನ್ನು ಬರೆಯಬೇಕು. ಅದರೊಂದಿಗೆ ಮಗುವಿನ ಜನ್ಮ ದಾಖಲಾತಿ ಪತ್ರವೂ ಇರಬೇಕು. ಅತ್ಯುತ್ತಮ ಚಿತ್ರಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ಕೊಟ್ಟು ಪುರಸ್ಕರಿಸಲಾಗುವುದು ಮತ್ತು ಮೆಚ್ಚುಗೆ ಪಡೆದ ಮಕ್ಕಳ ಚಿತ್ರಗಳನ್ನು ಖಾರ್ವಿ ಆನ್ಲೈನ್ ನಲ್ಲಿ ಪ್ರಕಟಿಸಲಾಗುವುದು.
ಸುಧಾಕರ್ ಖಾರ್ವಿ
Editor
www.kharvionline.com