” ಸಂವಿದ್ ನೀತಿಃ ” ಶ್ರೀ ಸಾಯಿ ಮುನಿ ಸ್ವಾಮೀಜಿಯವರ “ಕೊಂಕಣಿ ಖಾರ್ವಿ ಮತ್ತು ಸಾರಸ್ವತ ಹಿರಿಯ ನಾಗರೀಕತೆ”

ಕೊಂಕಣಿ ಖಾರ್ವಿ ಮತ್ತು ಸಾರಸ್ವತ ಹಿರಿಯ ನಾಗರಿಕತೆ

ಸ್ವಾಮಿ ವಿವೇಕಾನಂದರ ವಚನದಂತೆ ಹಿಂದಿನವರ ಜೀವನ ಶೈಲಿಯೂ ಮುಂದಿನ ಜನಾಂಗದ ಭವಿಷ್ಯ ನಿರ್ಮಾಣಕ್ಕೆ ಅಡಿಪಾಯವಾಗಿರುತ್ತದೆ. ಗತ ಕಾಲದ ಚರಿತ್ರೆಯ ವೈಭವವನ್ನು ತಿಳಿದುಕೊಂಡಷ್ಟು ಕೊಂಕಣಿ ಖಾರ್ವಿಯವರ ಜೀವನ ಉಜ್ವಲವಾಗುತ್ತದೆ. ಯಾರು ಗತ ಚರಿತ್ರೆಯ ವೈಭವವನ್ನು ಪ್ರತಿಯೊಬ್ಬರಿಗೂ ಮನವರಿಕೆ ಮಾಡುತ್ತಾರೋ ಅವರೇ ನಿಜವಾದ ಸಮಾಜದ ಶ್ರೋಯೋಭಿಲಾಷಿಗಳು.

ವೇದ ಕಾಲದ ಋಷಿಗಳು ಋಗ್ವೇದದಲ್ಲಿ (10.6.75; 7.95.2; 3.33.1) ಸರಸ್ವತಿ ನದಿಯ ಪ್ರಾಶಸ್ತö್ಯವನ್ನು ಕುರಿತು ಗಾನ ಮಾಡಿದ್ದಾರೆ. ಆಗಮಗಳು ಮತ್ತು ಸ್ಮತ್ರಿಗಳು ಸರಸ್ವತಿ ನದಿ ಜಲದ ಔನ್ಯತ್ಯಕ್ಕೆ ವಂದನೆಗಳನ್ನು ಸಲ್ಲಿಸಿವೆ ಮತ್ತು ನಮ್ಮ ದಿನ ನಿತ್ಯದ ಪ್ರಾರ್ಥನೆ ಪೂಜೆಗಳನ್ನು ಸರಸ್ವತಿ ನದಿಗೆ ಸಲ್ಲಿಸುವಂತೆ ಹೇಳಿವೆ. ಮಾನವ ಕುಲದ ಪ್ರಥಮ ರಾಜನಾದ ಮನುವು ತನ್ನ ಸ್ಥಾನವನ್ನು ಸರಸ್ವತಿ ನದಿ ದಡದಲ್ಲಿ ಹೊಂದಿದ್ದನೆAದು ಇತಿಹಾಸವಿದೇ. ಆರ್ಯ ನಾಗರಿಕತೆಗೆ ಮೂಲ ಪುರುಷನಾದ ರಾಜರ್ಷಿಗಳು, ಬ್ರಹ್ಮರ್ಷಿಗಳು ಸರಸ್ವತಿ ನದಿ ತೀರದಲ್ಲಿದ್ದವರೇ ಎಂದು ತಿಳಿದು ಬಂದಿದೆ. ಭಾರತ ದೇಶದ ಎಲ್ಲ ಸುಸಂಕೃತ ಪುರುಷ, ಮಹಿಳೆಯರಿಗೂ ಸರಸ್ವತಿಯ ಹೆಸರು ವಂದನೀಯವಾಗಿದೆ.

ಈಗಿನ ರಾಜಸ್ತಾನದ ಮರುಭೂಮಿಯಲ್ಲಿರುವ “ವಿನಾಶನಂ” ಎಂಬ ಸ್ಥಳದಲ್ಲಿ ಈ ಪವಿತ್ರ ನದಿಯು ಅದ್ರಶ್ಯವಾಯಿತೆಂದು ಮನುಸ್ಮೃತಿಯಿಂದ ತಿಳಿದು ಬರುತ್ತದೆ. ಆಧುನಿಕ ಜನರು ಅದನ್ನು ಊಹಾಘನದ ನದಿ ಎಂದು ಅದು ನಿಜವಾಗಿ ಇದ್ದ ನದಿಯೇ ಅಲ್ಲವೆಂದು ಹೇಳುವವರಿದ್ದಾರೆ. ಈ ಪರಿಸ್ಥಿತಿಯಲ್ಲಿ ಸೆಂಟ್ರಲ್ ಅಂಡ್ ಜೋನ್ ರಿಸರ್ಚ್ INSTITUTE (ICAR) ನವರು ಸಿಂಧೂ ಕಣಿವೆಗಳಲ್ಲಿ ಮತ್ತು ಪಂಜಾಬ್, ರಾಜಸ್ತಾನ್, ಗುಜರಾತ್, ಮರುಭೂಮಿ ಪ್ರದೇಶಗಳಲ್ಲಿ ಸಂಶೋಧನೆ ನೆಡೆಸಿದ್ದಾರೆ. ಅಲ್ಲಿ ಅವರು ಭೂಮಿಯಲ್ಲಿ ಸಮಾಧಿಯಾಗಿರುವ ಸುಮಾರು ನಲ್ವತ್ತು ನಗರಗಳ ಅವಶೇಷಗಳನ್ನು ದ್ವಾಪರಯುಗದಲ್ಲಿ ಬಳಕೆಯಲ್ಲಿದ್ದ ಪೈಶಾಚಿಕ ಭಾಷೆಯ ಲಿಪಿಯ ಮೊಹರು ಮತ್ತು ಫಲಕಗಳನ್ನು ಹೊರ ತೆಗೆದಿದ್ದಾರೆ. ಅದು ಇವತ್ತಿಗೂ ರಹಸ್ಯವಾಗಿಯೇ ಇಟ್ಟಿರುತ್ತಾರೆ, ರಾಜಸ್ತಾನ ಮರುಭೂಮಿಯಲ್ಲಿ ಮರಳು ಗುಡ್ಡೆಗಳಲ್ಲಿ ಸರಸ್ವತಿ ನದಿ ಕವಲೊಡೆದ ಬಿಡಿ ಭಾಗಗಳನ್ನು ಕಂಡುಕೊAಡಿದ್ದಾರೆ. (“LOST COURSES OF THE SARWATHI RIVER IN THE GREAT INDIAN DESERT “GEOGRAPHICAL JOURNAL LONDON VOL 145 /3 1979 BIMA GOSH) ಮತ್ತು ಲೇಖನ ಸಂಶೋಧನೆ ಮಾಡಿದ ಸ್ಥಳ ವಿಷಯ ಅವಶೇಷ ವರದಿಯನ್ನು “ದಿ ಸ್ಕೂಲ್ ಆ ನ್ಯಾಷನಲ್ ಸ್ವಡೀಸ್” ತ್ರಿಶೂಲ್‌ನವರು ಓದುಗರ ಮುಂದೆ ಕೆಲವು ಚಾರಿತ್ರಿಕ ಘಟಣೆಗಳನ್ನು ಇಡುವುದರ ಮೂಲಕ ಈ ಸಮಸ್ಯೆಗಳ ಪರಿಹಾರವನ್ನು ನೀಡಲು ಆಷಿಶಿದ್ದಾರೆ.

ಪೂರ್ವ ಕಾಲದಲ್ಲಿ ಸರಸ್ವತಿ ಮತ್ತು ದ್ರಸಧ್ವತಿ ಎಂಬ ಎರಡು ನದಿಗಳು ಸಿಂಧು ನದಿಯ ಐದು ಉಪನದಿಗಳೊಡನೆ ಸೇರಿ ಬೇರೆ ಬೇರೆಯಾಗಿ ಸಮುದ್ರದೊಳಗೆ ಹರಿಯುತ್ತಿತ್ತು. ಅದು ಈಗಿನ ನರ್ಮದಾ ನದಿಯ ತುದಿಯಲ್ಲಿರುವ ಕೆಂಬ ಕೊಲ್ಲಿ ಅಥವಾ ಪರ್ಷಿಯನ್ ಕೊಲ್ಲಿ ಒಳಭಾಗದವರೆಗೂ ಮುಂದುವರಿಯಿತು. ಸಿಂಧೂವೀನ ಈ ಕೊಲ್ಲಿಯನ್ನು ಅಥವಾ ಆಗ ಕರೆಯುತ್ತಿದ್ದಂತೆ ಸಿಂದೂಸಾಗರವನ್ನು ನಂತರ ಕಚ್ಚಾ ಎಂದು ಮಧ್ಯದಲ್ಲಿ ಕೆಲವೂ ದ್ವೀಪಗಳು ಕೂಡ ಇದ್ದವು. ಅವು ಶಾಂತಿಮತಿ, ದ್ವಾರಕಾ, ಪಂಚಜನ್ಯಮ್ (ಈಗಿನ ಕಛ್) ಮತ್ತು ರಮಣಕಮ್ (ಈಗಿನ ಪಾಕಿಸ್ತಾನದಲ್ಲಿರುವ ಸಿಂಧೂ ಹೈದರಾಬಾದ್) ಎಂಬ ಪುರಾಣ ನಾಮಗಳಿಂದ ಹೆಸರು ವಾಸಿಯಾಗಿದ್ದವು. ಈ ಕೊಲ್ಲಿಯ ಪೂರ್ವ ಭಾಗಗಳು ಈಗಿನ ಪಶ್ಚಿಮದಲ್ಲಿ ರಾಜಸ್ತಾನ, ಮಥುರಾ, ಮತ್ತು ಕುರುಕ್ಷೇತ್ರದ ವಿಶಾಲವಾದ ಬಯಲು ಪ್ರದೇಶವನ್ನು ಒಳಗೊಂಡAತೆ ಇರುವ ಸ್ಥಳವೆಲ್ಲ ಆಗ “ವಜ್ರಭೂಮಿ” ಎಂದು ಹೆಸರುವಾಸಿಯಾಗಿತ್ತು. ಆ ಪ್ರದೇಶಗಳೆಲ್ಲ ಸರಸ್ವತಿ ಮತ್ತು ಅದರ ಕಾಲುವೆಗಳು ಜಲ ಹರಿಯುತ್ತಿದ್ದರಿಂದ ಹಿಂದಿನ ಕಾಲದಲ್ಲಿ ಆ ಭೂಪ್ರದೇಶ ಬಹಳ ಸತ್ವಸಾರವಾಗಿದ್ದವು. ಸಿಂಧೂ ಸಾಗರದ ಎರಡು ಕಡೆ ಇರುವ ಕರಾವಳಿ ಪ್ರದೇಶವೆಲ್ಲ ಬಹಳ ತಗ್ಗು ಪ್ರದೇಶವಾದದ್ದರಿಂದ ಅದನ್ನು ಪಾತಾಳ ಭೂಮಿ ಅಥವಾ ಕೆಳಗಣ ಪ್ರದೇಶವೆಂದು ಕರೆಯಲಾಗುತ್ತಿತ್ತು. ಈ ಸಿಂಧೂ ಸಾಗರದ ಎರಡು ಕಡೆ ಇದ್ದ ಕರಾವಳಿ ಪ್ರದೇಶಗಳಲ್ಲಿ ಮತ್ತು ಅದರ ಬಳಿ ಇದ್ದ ದ್ವೀಪಗಳಲ್ಲಿ ವಾಸಿಸುತ್ತಿದ್ದ ಜನರನ್ನು “ಸೋಮಾರ್ಯ ಪಂಚ ಜನರು” ಎಂದು ಕರೆಯುತ್ತಿದ್ದರು. ಅಂದರೆ ಯಯಾತಿಯ (ಋಷಿ) ಐವರು ಮಕ್ಕಳಿಂದ ಬೆಳೆದ ವಂಶವಾದರಿAದ ಆ ರೀತಿ ಕರೆಯುತ್ತಿದ್ದರು. ಯದು, ತುರ್ವಸು, ಧ್ರಹ್ಯು, ಅನುಧ್ರಹ್ಯು, ಮತ್ತು ಪುರು ಎನ್ನುವ ಐವರು ಯಯಾತಿಯ ಮಕ್ಕಳು ಇವರ ವಂಶದವರೇ ಪಂಚಜನರು. ಅವರನ್ನು ಪುರಾಣಗಳಲ್ಲಿ ಸೋಮಾರ್ಯರು ಎಂದು ಕರೆಯುತ್ತಿದ್ದರು. ಅವರೇ ಆರ್ಯ ಕ್ಷತ್ರಿಯ ಮನೆತನದವರು, ಕಾಲಾನುಸಾರವಾಗಿ ಅವರಿಂದಲ ನೂರಾರು ಕುಲ ಗೋತ್ರ ಜನಾಂಗಗಳು ವೃದ್ಧಿ ಹೊಂದಿದವು ಅವರಲ್ಲಿ ಮುಖ್ಯವಾದವರು ಅಂದರೆ ಯಾದವರು, ಹೈಹವರು, ಕುರುವಂಶ, ಸೈಂದವರು, ದಶಾರ್ಣರು ಮತ್ತು ಭೃಗು ವಂಶದವರು. ಪಂಚಜನರು ಅನ್ನುವ ಈ ಹೆಸರು ಸೋಮಾರ್ಯರ ವಂಶ ಕುಲಗೋತ್ರದ ಪ್ರತಿಯೊಬ್ಬರಿಗೂ ವರ್ತಿಸುವುದು ಅವರಲ್ಲಿ ದಶಾರ್ಣ ಮಹರ್ಷಿ ಮತ್ತು ಭೃಗು ಮಹರ್ಷಿಯ ವಂಶದವರು ಬ್ರಾಹ್ಮಣರು ಅವರೆಲ್ಲ ಬಹಳ ಉದ್ಯಮಶೀಲರು ಮತ್ತು ಸಾಹಸ ಪ್ರಿಯರು ಆಗಿದ್ದರು ಅದರಲ್ಲೂ ಭೃಗು ವಂಶದವರು ಬಹುದೊಡ್ಡ ಸಮುದ್ರಯಾನ ಪ್ರವೀಣರು ಮತ್ತು ವಿದೇಶದವರೊಡನೆ ವ್ಯಾಪಾರ ಮಾಡುವವರು ಆಗಿದ್ದರು ಅವರಿಗೆಲ್ಲ ಮಹಾದೇವ, ಪಶುಪತಿ ಮತ್ತು ದುರ್ಗೆ ಮಾತೆಯನ್ನು ಬಿಟ್ಟರೆ ಬೇರೆ ಪ್ರಭುಗಳು ಯಾರು ಇರಲಿಲ್ಲ, ಈ ದೇವತೆಗಳನ್ನು ಆಲಯಗಳಲ್ಲಿ ಆಗಮ ಅಥವಾ ತಾಂತ್ರಿಕದ ಶಾಸ್ತ್ರೋಕ್ತ ಪೂಜಿಸುತ್ತಿದ್ದರು.

ಕಲಿಯುಗದ ಪ್ರಾರಂಭವೇ ಈ ಎಲ್ಲ ಪ್ರಾಚೀನ ನಾಗರಿಕತೆಯ ನಾಶಕ್ಕೆ ನಾಂದಿಯಾಯಿತು. ಕ್ರಿ.ಪೂ 3067 ರಲ್ಲಿ ನಡೆದ ಮಹಾಭಾರತ ಯುದ್ದದಿಂದ ಸೈನ್ಯದ ಸಂತತಿ ನಾಶವಾಯಿತು. ಆ ಯುದ್ಧವಾದ ಮೇಲೆ ಪ್ರಾಚೀನ ನಾಗರಿಕತೆಗೆ ಗುರುತಾಗಿ ಉಳಿದವರೆಂದರೆ ಪಶ್ಚಿಮ ಭಾರತದಲ್ಲಿ ಕೃಷಿ ಜೀವನ ನಡೆಸುತ್ತಿದ್ದರು ಮತ್ತು ವ್ಯಾಪಾರಸ್ಥ ವಂಶದವರು ಮಾತ್ರ ಅವರಲ್ಲಿ ಹೆಚ್ಚಿನವರು ಕ್ರಿ.ಪೂ 3031 ರಲ್ಲಿ ಶ್ರೀ ಕೃಷ್ಣ ನಿರ್ಣಯದ ನಂತರ ನಡೆದ ಸಾಮಾಜಿಕ ಕ್ರಾಂತಿಯಲ್ಲಿ ನಾಶವಾದರು ಇದು ಎರಡನೇ ಹಂತ. ಕ್ರಿ.ಪೂ 2900 ರಲ್ಲಿ ಭೂಕಂಪವಾಯಿತು. ಈ ಭೂಕಂಪದಿAದ ವಜ್ರಭೂಮಿ ಮತ್ತು ಸಮುದ್ರ ತಳವೂ ಕೆಲವು ಅಡಿಗಳಷ್ಟು ಉಬ್ಬಿಕೊಂಡಿತು ಆದ್ದರಿಂದ ದಕ್ಷಿಣಕ್ಕೆ ಹರಿಯುತ್ತಿದ್ದ ಸರಸ್ವತಿ ನದಿಯ ಹರಿಯುವಿಕೆಗೆ ಅಡಚಣೆಗಾಗಿ ಕ್ರಮೇಣ ಒಣಗಿ ಹೋಗಿತ್ತು. ಹಾಗಾಗಿ ಆ ಪ್ರದೇಶದಲ್ಲಿ ಸಮೃದ್ಧ ಬೆಳೆ ಬೆಳೆಯುದು ಕಷ್ಟವಾಯಿತು. ಈ ಕಡೆ ಸಮುದ್ರ ತಳವೂ ಉಬ್ಬಿದ್ದರಿಂದ ಜಲ ಹವಾಗುಣ ವ್ಯತ್ಯಾಸವಾಯಿತು. ದೊಡ್ಡ ದೊಡ್ಡ ಅಲೆಗಳ ಉಬ್ಬರ, ಇಳಿತಗಳು ಪ್ರಾರಂಭವಾದವು ನಿಧಾನವಾಗಿ ದ್ವೀಪಗಳು ಕೊಚ್ಚಿ ಹೋಗಲು ಪ್ರಾರಂಭವಾಯಿತು. ಅದರಲ್ಲೂ ಕಷ್ಟಕರ ಜೀವನ ಸಾಗಿಸುತ್ತಿದ್ದಂತೆ ಕ್ಷಾಮ (ಬರಗಾಲ) ಪ್ರಾರಂಭವಾಯಿತು. ಹನ್ನೆರಡು ವರ್ಷಗಳವರೆಗೆ ಮಳೆ ಬರಲಿಲ್ಲ “ಪರೀಕ್ಷಿತ್ತಿನ” ನಂತರ ಐದನೇ ರಾಜನಾದ” ಅಶ್ವಮೇಧಜ” ನ ಕಾಲದಲ್ಲಿ ಹನ್ನೆರಡು ವರ್ಷ ಭಯಂಕರ ಕ್ಷಾಮವಿತ್ತೆಂದು ಪುರಾಣಗಳಿಂದ ತಿಳಿದು ಬರುತ್ತದೆ. ಆಹಾರಗಳ ತೊಂದರೆಯಾಯಿತು ಸ್ವಲ್ಪ ಸಮಯದಲ್ಲಿ ಕೆಲವರು ದಕ್ಷಿಣದ ಕರ್ನಾಟಕಕ್ಕೆ ವಲಸೆ ಹೋದರು ಅವರಿಗೆ ಸಾರಸ್ವತ ಬ್ರಾಹ್ಮಣರು ಎಂದು ಕರೆಯಲಾಯಿತು. ಅಲ್ಲೇ ಉಳಿದವರು ಆಹಾರದ ತೊಂದರೆಯಿAದ ಪ್ರಾಣ ಉಳಿಸಲಿಗೋಸ್ಕರ ಮೀನು ಎನ್ನುವ ಪ್ರಸಂಗ ಒದಗಿತು. ಅವರಲ್ಲಿ ಸಮುದ್ರಯಾನ ಪ್ರವೀಣರಾದ ಸಾಹಸ ಪ್ರವೃತ್ತಿಯವರು ನದಿಯಿಂದ ಮೀನು ತೆಗೆಯಲು ಮುಂದಾದರು.

ಈ ರೀತಿ ಮೀನು ಹಿಡಿದು ತಿನ್ನುವುದು ಪ್ರಾರಂಭವಾಯಿತು. ಕೆಲವು ವರ್ಷ ಕಳೆದರೂ ಕ್ಷಾಮ ಮುಂದುವರಿಯುತ್ತಿದ್ದAತೆ ಇತ್ತ ಕಡೆ ದ್ವೀಪಗಳು ಸುಮಾರು ಕೊಚ್ಚಿಹೋಯಿತು. ಈ ನಿರಂತರ ಪರಿಸ್ಥಿತಿ ಗಮನಿಸಿ ಈ ದ್ವೀಪವು ನಾಶವಾಗುವುದು ಖಂಡಿತ ಮತ್ತು ಕರಾವಳಿಯಲ್ಲಿ ಮರಳು ಬೀಳುತ್ತಿರುವುದು ವಾಸಕ್ಕೆ ದುಸ್ಥರವಾದ ಕಾರಣ ಎಲ್ಲರೂ ಅವರವರಿಗೆ ಸರಿ ಕಂಡAತೆ ಹಳ್ಳಿ, ಪಟ್ಟಣಗಳನ್ನೂ ಬಿಟ್ಟು ಮಧ್ಯಭಾರತ, ಕಾಶ್ಮೀರ, ಮತ್ತು ಹಿಮಾಲಯ ಸೇರಿದಂತೆ ಹಲವು ಕಡೆ ವಲಸೆ ಹೋದರು. ಪರ್ವತದ ತೀರದ ಗ್ರಾಮಕ್ಕೆ ಸಂಸ್ಕೃತದಲ್ಲಿ ಖರ್ವಟ; ಎಂದು ಹೇಳುತ್ತಾರೆ. ಅಂತ ಖರ್ವಟ;ದಲ್ಲಿ ನದಿಯ ಅನುಕೂಲ ಕಂಡು ಆಗಲೇ ಮೀನು ತಿನ್ನುವ ಅಭ್ಯಾಸವಾದವರು ಆ ಖರ್ವಟ;ದಲ್ಲಿ ವಾಸಮಾಡ ತೊಡಗಿದರು. ಉಳಿದವರು ಆಸುಪಾಸಿನಲ್ಲೆ ವಾಸಮಾಡಿದರು. ಮೀನು ಹಿಡಿದು ತಿನ್ನುವವರು ದಿನ ನಿತ್ಯದ ವಿಧಿವಿಧಾನದೊಂದಿಗೆ ಜೀವನ ಕಳೆದರೆ ಉಳಿದವರು ನಿತ್ಯ ಕರ್ಮಾಂಗದೊAದಿಗೆ ವ್ಯಾಪಾರ ವ್ಯವಹಾರ ಮಾಡಿ ಜೀವನ ಕಳೆಯುತ್ತಿದ್ದರು. ಖರ್ವಟದಲ್ಲಿ ವಾಸ ಮಾಡುವವರಿಗೆ ಖಾರೆ ಎಂದು ಗೌರವ ಸೂಚಕ ನಾಮದಿಂದ (SURNAME) ಕರೆಯ ತೊಡಗಿದರು. ಖಾರೆ ಎಂದು ಕರೆಯಲು ಖರ್ವಟ:ದಲ್ಲಿ ವಾಸವಿರುವ ಕಾರಣ ಇರಬಹುದು ಅಥವಾ ಎರಡು ಕಡೆ ನೆಲವಿದ್ದು ಒಂದು ಕಡೆ ನೀರು ಹರಿಯುವ, ಮತ್ತೊಂದು ಕಡೆ ವಿಶಾಲವಾದ ಸಮುದ್ರ ಸಂಪರ್ಕವಿರುವ ಜಲಪ್ರದೇಶವನ್ನು ಖಾರಿ ಎಂದು ಹೇಳುತ್ತಾರೆ. ಇವರು ಖಂಬಾತ್ ಖಾರಿ ಮತ್ತು ಕಛ್ ಖಾರಿಯಲ್ಲಿ ಬರಗಾಲ ಸಮಯ ಮೀನು ಹಿಡಿಯಲು ಹೋದ ಕಾರಣ ಖಾರೆ ಎಂದು ಗೌರವ ಸೂಚಕ ನಾಮದಿಂದ ಕರೆಯಲು ಪ್ರಾರಂಭಿಸಿದರು. ಹೀಗೆ ಹಲವಾರು ವರ್ಷ ಕಳೆಯುತ್ತಿದ್ದಂತೆ 11ನೇ ಶತಮಾನದಲ್ಲಿ ಮಹಮದ್ ಘಜನೀಯ ದಾಳಿಯ ಪ್ರಾರಂಭವನ್ನು ಕಂಡು ಇವರೆಲ್ಲರೂ ದಕ್ಷಿಣ ಭಾರತದ ಗೋವಾಕ್ಕೆ ವಲಸೆ ಬಂದರು. ಕೆಲವು ಕರ್ನಾಟಕದ ಕಾರ್ಕಳ ಕಡೆ ವಲಸೆ ಹೋದರು, ಹೆಚ್ಚಿನ ಗೌಡ ಸಾರಸ್ವತರು ಮತ್ತು ಖಾರೆ ಎಂದು ಗೌರವ ಸೂಚಕ ನಾಮದಿಂದ ಕರೆಲ್ಪಡುವವರು ಗೋವಾದಲ್ಲೇ ವಾಸ ಮಾಡತೊಡಗಿದರು. ಗೋವಾದಲ್ಲಿ ಕುಲ ದೇವಸ್ಥಾನಗಳನ್ನು ಕಟ್ಟಿಸಿದರು. ದೇವರ ಆರಾಧನೆಯೊಂದಿಗೆ ಮೊದಲಿನಂತೆ ಅವರವರು ಮಾಡಿಕೊಂಡು ಬಂದ ಕೆಲಸವನ್ನು ಮುಂದುವರಿಸಿದರು. ಉತ್ತರ ಭಾರತಕ್ಕೆ ಗೌಡ ಎಂದು ಹೇಳುವುದರಿಂದ ಅಲ್ಲಿಂದ ಬಂದAತ ಇವರಿಗೆ ಗೌಡ ಸಾರಸ್ವತ ಬ್ರಾಹ್ಮಣರು ಎಂದು ಕರೆಯಲಾಯಿತು. ಗೋವಾ ಪೊಂಡದ ಸಮೀಪ ಶ್ರೀ ರಾಮನಾಥ ಶಾಂತೇರಿ ಕಾಮಾಕ್ಷಿ ದೇವಸ್ಥಾನದ ಹೊರವಲಯದಲ್ಲಿ ಗುರುಲಿಂಗ ಗುಡಿ ಸ್ಥಾಪಿಸಿ ಅದರಲ್ಲಿ ಅದಕ್ಕೆ ಸಂಬಂದ ಪಟ್ಟ ಎಲ್ಲಾ ಗೌರವ ಸೂಚಕ ನಾಮಗಳ ಗುರುಲಿಂಗ ಸ್ಥಾಪಿಸಿ ನಾಮಫಲಕ ಇರಿಸಲಾಯಿತು. ಅದರಲ್ಲಿ ಖಾರೆ ನಾಮಫಲಕದ ಲಿಂಗವು ಇದೆ, ಆದುದರಿಂದ ಖಾರೆ ಎನ್ನುವುದು ಗೌರವ ಸೂಚಕ ನಾಮ ಎಂದು ಖಚಿತವಾಗುತ್ತದೆ. ಅದು ಕದಂಬ ರಾಜಾಡಳಿತದ ಸಮಯವಾದರಿಂದ ಇವರಲ್ಲಿ ಕೆಲವರು ಆಡಳಿತ ಕಾರ್ಯವಿಭಾಗಗಳಲ್ಲಿ ಮುಖಂಡತ್ವ ವಹಿಸಿದರು, ಅವರಿಗೆ “ನಾಯಕ್” ಎಂದು ಗೌರವ ಸೂಚಕ ನಾಮದಿಂದ ಕರೆದರು (ಕದಂಬರ ಇತಿಹಾಸ ಅಧ್ಯಯನ ಮಾಡಿದವರಿಂದ ತಿಳಿದು ಬಂದಿದೆ.) ಮೀನು ಹಿಡಿಯುವವರ ನಿತ್ಯ ವಿಧಿ ವಿಧಾನ ಸಂಸ್ಕಾರ ಸಂಪ್ರದಾಯಗಳು ಕಡಿಮೆಯಾಗ ತೊಡಗಿ ಈ ಖಾರೆ ಗೌರವ ಸೂಚಕ ನಾಮದವರ ಪ್ರತ್ಯೇಕ ಪಂಗಡವಾಯಿತು. ಮುಂದೆ ಖಾರ್ವಿ ಜಾತಿಯಾಗಿ ಪರಿಗಣನೆಯಾಯಿತು.

ಇತ್ತ ಸಿಂಧೂ ಸಾಗರದ ತುದಿಯಲ್ಲಿರುವ ದ್ವಾರಕಾ, ಶಾಂತಿಮತಿ ಮತ್ತು ರಮಣಕಮ್ ಹಾಗೂ ಪಂಚಜನ್ಯಮ್ ದ್ವೀಪಗಳು ಕೊಚ್ಚಿ ಹೋಗಿ ಮುಳುಗಿ ಹೋದವು. ಹೊರಬಂದ ಮರಳು ಎಷ್ಟು ಭಾಗ ಆಕ್ರಮಿಸಿತೆಂದರೆ ಅದು ಭೂ ಪ್ರದೇಶದ ಭಾಗವೇ ಆಗಿ ಹೋಯಿತು. ದ್ವೀಪಗಳು ಜಲ ಸಮಾಧಿಯಾಗಿ ಮರುಭೂಮಿಗಳು ಉಂಟಾಗಿದ್ದರಿAದ ಪಶ್ಚಿಮ ಪ್ರದೇಶದ ಹವಾಗುಣದಲ್ಲಿ ಬಹಳ ಬದಲಾವಣೆಗಳು ಆದವು. ಅದು ಬಹಳ ಒಣ ಪ್ರದೇಶವಾಯಿತು. ಇದರ ಜೊತೆಗೆ ಪ್ರಾಚೀನ ನಗರಗಳನ್ನು ಮರಳು ಬಿರುಗಾಳಿಯೂ ಭೂ ತಳದಲ್ಲಿ ಸಮಾಧಿ ಮಾಡಿತು.

ಮೊದಲೇ ದಕ್ಷಿಣ ಕರ್ನಾಟಕ್ಕೆ ವಲಸೆ ಹೋದರ ಗೌಡ ಸಾರಸ್ವತರು ವಿಷ್ಣುವನ್ನು ಆರಾಧ್ಯ ದೇವರನ್ನಾಗಿ ಆರಾಧಿಸುತ್ತಿದ್ದರು. ಅದಕ್ಕೆ ಸರಿಯಾಗಿ ಇದೇ ವಂಶದಲ್ಲಿ ಸುಮಾರು 14ನೇ ಶತಮಾನದ ಸಮಯದಲ್ಲಿ ಮಹಾನ್ ಪುರುಷರೊಬ್ಬರು ಜನ್ಮತಾಳಿ ದ್ವೆöÊತಮತ ಪ್ರಚಾರ ಮಾಡಿದರು ಹಾಗಾಗಿ ಅಲ್ಲಿಯ ಎಲ್ಲಾ ಗೌಡ ಸಾರಸ್ವತ ಬ್ರಾಹ್ಮಣರು ದ್ವೆöÊತ ಮತಕ್ಕೆ ಆಕರ್ಷಿತರಾದರು. ಕ್ರಿ.ಶ 16ನೇ ಶತಮಾನದಲ್ಲಿ ಗೋವಕ್ಕೆ ದಾಳಿಗಾಗಿ ಪೋರ್ಚುಗೀಸರ ಪ್ರವೇಶವಾಯಿತು. ಇದನ್ನರಿತ ಗೋವಾದಲ್ಲಿರುವ ಗೌಡ ಸಾರಸ್ವತ ಬ್ರಾಹ್ಮಣರು ಮತ್ತು ಖಾರ್ವಿಯವರು ಹಡಗಿನಲ್ಲಿ ಸಮುದ್ರದ ಮೂಲಕ ಕರ್ನಾಟಕದ ಅಂಕೋಲದ ಕಡೆಗೆ ವಲಸೆ ಬಂದರು. ಕೆಲವರು ಕರಾವಳಿಯ ಬೇರೆ ಬೇರೆ ಕಡೆ ಹೋಗಿ ವಾಸಿಸತೊಡಗಿದರು. ದಕ್ಷಿಣ ಕರ್ನಾಟಕಕ್ಕೆ ಹೋದ ಗೌಡ ಸಾರಸ್ವತ ಬ್ರಾಹ್ಮಣರು ಮೊದಲಿನವರೊಂದಿಗೆ ಸೇರಿಕೊಂಡರು. ಖಾರ್ವಿ ಸಮಾಜದವರು ಶ್ರೀ ಶೃಂಗೇರಿ ಜಗದ್ಗುರು ಪೀಠದ ಆಸ್ರಯ ಪಡೆದರು. ಗೋವಾದಿಂದ ಬರುವಾಗ ಖಾರ್ವಿ ಸಮಾಜದ ಒಂದು ಕುಟುಂಬದವರು ಶ್ರೀ ಕಾತ್ಯಾಯಿನಿ ಬಾಣೇಶ್ವರ ದೇವರನ್ನು ತಂದಿರುವರು ಎಂದು ಶ್ರಾವ್ಯದಲ್ಲಿ ಪ್ರಚಲಿತವಿದೆ. ಈ ದೇವಸ್ಥಾನದ ಒಳಾಂಗಣವನ್ನು ಹಡಗಿಗೆ ಹೋಲುವಂತೆ ಕಟ್ಟಿಸಿರುತ್ತಾರೆ. ಗೋವಾ ಮತ್ತು ಅಂಕೋಲದ ಎಲ್ಲ ಕುಲ ದೇವಸ್ಥಾನದ ಪೂಜೆ ಮತ್ತು ಮೇಲ್ವಿಚಾರಣೆಗಳು ಅಗಮ ಮತ್ತು ತಾಂತ್ರಿಕ ವಿಧಿ ವಿಧಾನವನ್ನು ಅರಿತ ಗೌಡ ಸಾರಸ್ವತ ಬ್ರಾಹ್ಮಣರೇ ಮಾಡುತ್ತಾರೆ. ಖಾರ್ವಿಯವರು ಪೂಜೆ, ಸೇವೆ ಸಲ್ಲಿಸಲು ಹಾಗೂ ದೇವರ ದರ್ಶನಕ್ಕಾಗಿ ಆಗಾಗ್ಯೆ ಹೋಗುತ್ತಿರುತ್ತಾರೆ. ಖಾರ್ವಿಯವರು ಗುಂಪು ಗುಂಪಾಗಿ ವಾಸಿಸುವ ಗ್ರಾಮಗಳಲ್ಲಿ ತಮ್ಮದೇ ಆದ ಆರಾಧ್ಯ ದೇವಿ ದುರ್ಗಾ ಮಾತೆ ಹಾಗೂ ಕಾಳಿ ಮಾತೆಯರ ದೇವಾಲಯ, ಮಠಗಳನ್ನು ಕಟ್ಟಿ ಪಂಚೋಪಚಾರ ಪದ್ದತಿಯಂತೆ ಪೂಜೆ ಮಾಡಿ ಆರಾಧಿಸುತ್ತಾರೆ. ಕೆಲವು ಕಡೆ ಬ್ರಾಹ್ಮಣರನ್ನು ನೇಮಿಸಿರುತ್ತಾರೆ ಮತ್ತು ಸಮೀಪದ ಶಿವಾಲಯಾಗಳಿಗೆ ಹೋಗುತ್ತಾರೆ. ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯಲ್ಲಿ ಇವರಿಗೆ ಅಪಾರ ನಂಬಿಕೆ ಇದೆ. ಕುಟುಂಬದ ಹಿರಿಯರ ಮನೆಯಲ್ಲಿ ಪ್ರತ್ಯೇಕ ದೇವರ ಕೋಣೆ ಅಥವಾ ಚಿಕ್ಕ ಗುಡಿಯಲ್ಲಿ ಬೆಳ್ಳಿಯ ಅಥವಾ ಪಂಚಲೋಹದ ಕುಲದೇವರ ವಿಗ್ರಹವನ್ನು ಸ್ಥಾಪಿಸಿ ಅಥವಾ ತೆಂಗಿನ ಫಲದಲ್ಲಿ ಕುಲದೇವರನ್ನು ಆಹ್ವಾನಿಸಿ ಪೂಜಿಸುತ್ತಾರೆ. ಖಾರ್ವಿಯವರಿಗೆ ದೇವರಲ್ಲಿ ಬಹಳಷ್ಟು ಶ್ರದ್ಧ ಭಕ್ತಿ ಇದ್ದು ಶಾಸ್ತçಜ್ಞಾನದ ಕೊರತೆಯಿಂದ ಶ್ರದ್ಧೆಯಲ್ಲಿ ಅಂದತ್ವ ಹೊಂದಿದೆ. (ಅಂದಶ್ರದ್ಧೆ) ಸಂಸ್ಕಾರಗಳೊಂದಿಗೆ ಮುಖ್ಯವಾಗಿ ಉಪನಯನ ಶಾಸ್ತ ಗ್ರಂಥಗಳ ಅಧ್ಯಯನದಿಂದ ವಿವೇಕವು ಮೂಡುವುದರಿಂದ ಅಂಧತ್ವವನ್ನು ಕಳೆದುಕೊಂಡು ಧಾರ್ಮಿಕವಾಗಿ ಶ್ರೇಯಸ್ಸು ಹೊಂದಲು ಸಾಧ್ಯ. ಕೆಲವು ಸಂಸ್ಕಾರ ವಿಧಿವಿಧಾನ ಪದ್ದತಿಯ ಮಹತ್ವ ಮತ್ತು ಸಂಪ್ರದಾಯ ಶಿಷ್ಟಾಚಾರಗಳನ್ನು ಬಿಟ್ಟುಹೋದರು ಧರ್ಮವನ್ನು ಗೌರವಿಸುತ್ತಾರೆ ಮತ್ತು ಕುಲಕ್ಕೆ ಚ್ಯುತಿ ಬಾರದಿರಲೆಂದು ತಾವು ಬ್ರಾಹ್ಮಣರು ಎಂದು ಹೇಳಿಕೊಳ್ಳದೆ ತಾವು ಉತ್ತಮ ಜಾತಿಯವರು ಗೌಡ ಸಾರಸ್ವತ ಬ್ರಾಹ್ಮಣರಂತೆ ವೃತ್ತಿಯಿಂದ ಬೇರೆ ಆಗಿದೆ ಎಂದು ಹೇಳಿಕೊಳ್ಳುತ್ತಾರೆ. ಇದನ್ನು ಸ್ಥಳೀಯ ಬ್ರಾಹ್ಮಣರು ಒಪ್ಪುತ್ತಾರೆ. ಗೌಡ ಸಾರಸ್ವತ ಬ್ರಾಹ್ಮಣರು ಕೂಡ ಒಪ್ಪುದು ಮಾತ್ರವಲ್ಲ, ಶುದ್ಧ ಮನಸಿನವರು, ಹೃದಯಾಂತರಾಳದಿಂದ ನೀವು ನಮ್ಮವರೆ ಎಂದು ಹೇಳುತ್ತಾರೆ.

ಇತ್ತೀಚಿನ ಕೆಲವು ವರ್ಷಗಳಲ್ಲಿ ಹಿರಿಯರ ನೇತೃತ್ವದಲ್ಲಿ ನಿಶ್ಚಯಿಸಿ ಇವರೊಳಗೆ ಕೆಲವು ವಿವಾಹವು ನಡೆದಿದೆ. ವಿವಾಹದ ಸಂದರ್ಭದಲ್ಲಿ ಯಜ್ಞೋಪವೀತ ಧಾರಣೆ ಕ್ರಮ ಇಂದಿಗೂ ಇವೆ. ಗೌಡ ಸಾರಸ್ವತ ಬ್ರಾಹ್ಮಣರು ರಥೋತ್ಸವ ನಡೆಸುವ ಸಂದರ್ಭದಲ್ಲಿ ಹೆಚ್ಚಿನ ಕಡೆ ರಥವನ್ನು ನಡೆಸುವವರು ಖಾರ್ವಿಯವರೇ. ಮೂಲ ಮಾತ್ರ ಭಾಷೆ ಇವರಿಗೆಲ್ಲ ಕೊಂಕಣಿ ಹಾಗಾಗಿ ಇವರಿಗೆ ಕೊಂಕಣಿ ಖಾರ್ವಿ ಎಂದು ಕರೆಯುತ್ತಾರೆ. ಕೊಂಕಣಿಯು ಸರಸ್ವತಿ ನದಿಯ ಪ್ರದೇಶದಲ್ಲಿರುವಾಗಲೇ ಮಾತಾಡುತ್ತಿರುವ ಭಾಷೆ ಆದ್ದರಿಂದ 5000 ವರ್ಷಗಳಿಗಿಂತ ಹಿಂದಿನ ಪುರಾತನ ಭಾಷೆಯಂತಾಯಿತು. ಅಂಕೋಲಾ ಮತ್ತು ಗೋವಾಗಳಲ್ಲಿನ ಎಲ್ಲ ಕುಲದೇವಸ್ಥಾನಗಳಲ್ಲಿ ಕೇರಳದ ಗೌಡ ಸಾರಸ್ವತ ಬ್ರಾಹ್ಮಣರು, ಕರ್ನಾಟಕ ಗೌಡ ಸಾರಸ್ವತ ಬ್ರಾಹ್ಮಣರು ಮತ್ತು ಕೊಂಕಣಿ ಖಾರ್ವಿಯವರು ಭೃಗು ವಂಶದವರಾಗಿದ್ದು ಇವತ್ತಿಗೂ ಒಂದೇ ಕುಲದೇವರಲ್ಲಿ ಮೊರೆ ಹೋಗುತ್ತಾರೆ. ಶ್ರೀ ಪರಶುರಾಮ ಕೊಂಕಣಿ ಖಾರ್ವಿಯವರಿಗೆ ವಂಶದ “ಗುರು” ಅಂತ ಹೇಳುವ ಒಂದು ಚಾರಿತ್ರಿಕ ಘಟನೆಯೂ ಶ್ರಾವ್ಯದಲ್ಲಿದೆ, ಹಾಗಾಗಿ ಈ ಎಲ್ಲಾ ಕಾರಣಗಳಿಂದ ಕೊಂಕಣಿ ಖಾರ್ವಿಯವರು “ಭೃಗು ವಂಶದ ಬ್ರಾಹ್ಮಣರೇ” ಅಲ್ಲದೆ ಮತ್ಯಾರೂ ಅಲ್ಲ. ಷೋಡಶ ಸಂಸ್ಕಾರಗಳಲ್ಲಿ ಹೆಚ್ಚಿನದು ಇದೆ ಆದರೂ ಅದರ ಮಹತ್ವ ಕಳೆದುಕೊಂಡಿದೆ. ಶಾಸ್ತ್ರೋಕ್ತ ವಿಧಿವಿದಾನಗಳಿಂದ ಸಂಸ್ಕಾರಗಳನ್ನು ಪಡೆದು ಅದರ ಮಹತ್ವ ಅರಿತುಕೊಂಡು ಸಂಪ್ರದಾಯ ಶಿಷ್ಟಾಚಾರಗಳೊಂದಿಗೆ ನಡೆಯುವುದು ಮುಖ್ಯ, ಧರ್ಮವನ್ನು ಎಷ್ಟು ಪಾಲಿಸುತ್ತಿರೋ ಅಷ್ಟೇ ಭಗವಂತನು ಸುಪ್ರೀತನಾಗುತ್ತಾನೆ.

ಬ್ರಾಹ್ಮಣರಲ್ಲಿ ಗೌರವ ಸೂಚಕ ನಾಮವು ಸಾಮಾನ್ಯವಾಗಿ ಪ್ರತಿಭೆ, ವೃತ್ತಿ ಹಾಗೂ ವಾಸಿಸುವ ಗ್ರಾಮ ಅಥವಾ ಪಟ್ಟಣ ಪ್ರದೇಶಗಳ ಹೆಸರನ್ನು ಹೊಂದಿಕೊAಡಿರುತ್ತದೆ. ಗ್ರಾಮದಲ್ಲಿ ಸಮಾಜದ ಮುಖಂಡರಿಗೆ “ಪಠೇಲ” ಕದಂಬರ ರಾಜ್ಯಾಡಳಿತ ಸಮಯದಲ್ಲಿ ಕೆಲವು ಕಾರ್ಯ ವಿಭಾಗಗಳಲ್ಲಿ ಮುಖ್ಯಸ್ಥರಾಗಿ ಕೆಲಸ ಮಾಡಿದವರಿಗೆ “ನಾಯಕ್” ಮರ್ಮ ಗೋವಾದ ಪಾಲೇಯಿಂದ ಬಂದವರಿಗೆ “ಪಾಲೇಕರ್” ಗೋವಾದ ಪೊಂಡ ಹತ್ತಿರದ ಕುರ್ತರ್ ನಗರದಿಂದ ಬಂದವರಿಗೆ “ಕುಡ್ತಲ್ಕರ್” ಅದೇ ರೀತಿ ಬಾನಾವಳಿಕರ್, ಕಾನೋಜಿ, ಕಲೈಕರ್, ಮೇಸ್ತ, ಸಾರಂಗ, ತಂಡೇಲ್, ಆರ್ಕಾಟಿ, ಸಿಪಾಯಿ ಎಂದು ಆಯಾ ಕಾರಣಗಳಿಂದ ಕರೆಯಿಸಿಕೊಂಡರು. ಅಂತೆಯೇ ಖಾವಿ ಕೂಡ ಗೌರವ ಸೂಚಕ ನಾಮವಾಗಿರುತ್ತದೆ. ಕಾರಣಾಂತರದಿಂದ ಖಾರ್ವಿ ಗೌರವಸೂಚಕ ನಾಮವೇ ಖಾರ್ವಿ ಜಾತಿಯಾಗಿ ಪರಿಗಣನೆಯಾಯಿತು.

ಭೃಗು ವಂಶದ ಇವರು ಉದ್ಯಮಶೀಲರು ಸಾಹಸ ಪ್ರಿಯರು ಹಾಗೂ ಸಮುದ್ರಯಾನ ಪ್ರವೀಣರು ಎಂದು ಪುರಾಣದಲ್ಲಿ ಹೇಳಿರುವಂತೆ ಗೌಡ ಸಾರಸ್ವತರು ರಾಷ್ಟಿçÃಯ ಮಟ್ಟದ ಬ್ಯಾಂಕುಗಳು ತೆರೆಯಲು ಕಾರಣರು. ಆಸ್ಪತ್ರೆ, ವಿದ್ಯಾಸಂಸ್ಥೆಗಳು, ಪತ್ರಿಕೋದ್ಯಮ, ಹಡಗುಗಳ ಉದ್ಯಮ ಸೇರಿದಂತೆ ಅನೇಕ ವಾಣಿಜ್ಯೋದ್ಯಮದಲ್ಲಿ ಇವರು ಮುಂಚೂಣಿಲ್ಲಿದ್ದಾರೆ. ಉದ್ಯಮ ಶೀಲತೆಯಲ್ಲಿ ಸಾಹಸವನ್ನು ತೋರಿಸಿದ್ದಾರೆ. ಕೊಂಕಣಿ ಖಾರ್ವಿಯವರು ವೃತ್ತಿ ನಿಮಿತ್ತಾ ಆರ್ಥಿಕವಾಗಿ ಹಿಂದುಳಿದರು. ಕ್ರಿ.ಶ. 1970 ರವರೆಗೂ ದಿಕ್ಕು ದೇಶ ತಿಳಿಸುವ ಸಾಧನ ಸಾಮಾಗ್ರಿ ಹೊಂದದೆ ಭಾರತದ ಪಶ್ಚಿಮ ಕರಾವಳಿ ಮತ್ತು ವಿದೇಶಗಳಿಗೆ ಸೂರ್ಯ ಚಂದ್ರ ನಕ್ಷತ್ರಾದಿ ಗ್ರಹಗಳ ಆಧಾರದಿಂದಲೇ ಸಮುದ್ರ ಮಾರ್ಗವಾಗಿ ಸರಿಯಾದ ಸ್ಥಳಕ್ಕೆ (ಬಂದರುಗಳಿಗೆ) ತಲುಪುತ್ತಿದ್ದರು, ಹಾಗೂ ಗೋಪಾಲ ಖಾರ್ವಿಯವರು ಗಂಗೊಳ್ಳಿಯಿಂದ ಮಲ್ಪೆಗೆ 50KM ಸಮುದ್ರದಲ್ಲಿ 11 ಘಂಟೆ 30 ನಿಮಿಷದಲ್ಲಿ ಈಜಿರುವುದು ಮತ್ತು ಕೈ ಕಾಲುಗಳನ್ನು ಬಂಧಿಸಿ (ಬೆಡಿ ಹಾಕಿ) 3.7KM 2 ಘಂಟೆ 43 ನಿಮಿಷದಲ್ಲಿ ಈಜುವುದರೊಂದಿಗೆ ವಿಶ್ವ ಗಿನ್ನಿಸ್ ದಾಖಲೆ ಮಾಡಿದ್ದಾರೆ., ಪ್ರಕಾಶ್ ಖಾರ್ವಿ (ಅಂಗವಿಕಲ) ಕೂಡ 3.7KM ದೂರವನ್ನು ಕೈಗಳಿಗೆ ಬೇಡಿ ಹಾಕಿ ಒಂದೇ ಕಾಲಿನಿಂದ ಈಜಿರುವುದು, ಮತ್ತು ಗಂಗೊಳ್ಳಿಯಿಂದ ಹಂಗಾರಕಟ್ಟೆ ಕೋಡಿಗೆ ಸುಮಾರು 25KM ದೂರವನ್ನು ಕೂಡ ಫ್ರೀ STYLE ಈಜಿರುತ್ತಾರೆ. ಹಾಗೆ ದಯಾನಂದ ಖಾರ್ವಿಯವರು ಕೂಡ ಗಂಗೊಳ್ಳಿಯಿಂದ ಮಂಗಳೂರಿಗೆ ಸಮುದ್ರದಲ್ಲಿ 110 KM ದೂರವನ್ನು ಈಜಿರುವುದಾಗಿ ಕೇಳಿ ಬಂದಿರುತ್ತದೆ. ಪುರಾಣಗಳಲ್ಲಿ ಭೃಗು ಮಹರ್ಷಿ ವಂಶದವರು ಸಾಹಸ ಪ್ರಿಯರು ಸಮುದ್ರಯಾನ ಪ್ರವೀಣರು ಎಂದು ಹೇಳಿರುವಂತೆ ಎಲ್ಲ ಲಕ್ಷಣಗಳು ಇವರಲ್ಲಿ ಈವಾಗಲೂ ಇವೆ. ಇನ್ನು ಅನೇಕ ಸಾಹಸಗಳು ಕರಾವಳಿಯಲ್ಲಿ ಪ್ರಚಲಿತ ಇದೆ. ಶೇಕಡಾ ಅವರವತ್ತರಷ್ಟು ಮಂದಿ ಮೀನುಗಾರಿಕೆಯಲ್ಲಿ ತೊಡಗಿರುವ ಇರುವ ಸುಮಾರು ಕ್ರಿ.ಶ. 1966 ರ ರವರೆಗೂ ಇವರು ತಮ್ಮವರೊಂದಿಗೆ ಸೇರಿಕೊಂಡು ಮೀನುಗಾರಿಕೆಯಲ್ಲಿ ತೊಡಗುತ್ತಿದ್ದರು. ಮೀನು ಮಾರಾಟ ಮಾಡುವ ಮಾತೆಯರು ಕೂಡ ಅಷ್ಟೇ ಇವರು ತಮ್ಮವರೊಂದಿಗೆ ಸೇರಿಕೊಳ್ಳುತ್ತಿದ್ದರು. ಹೆಚ್ಚಿನ ಮಾತೆಯರು ಸಹೋದರಿಯವರು ಮನೆ ಕೆಲಸದಲ್ಲಿ ತೊಡಗಿರುವುದು ಹೆಚ್ಚು. ತಾವು ಉತ್ತಮ ಕುಲದವರು ಎನ್ನುವ ದೃಷ್ಟಿಯಿಂದ ಬಹಳ ಹಿಂದಿನಿಂದಲೂ ಇತರರ ಕೈ ಕೆಳಗೆ ಕೆಲಸ ಮಾಡಲು ಹೋಗುತ್ತಿರಲಿಲ್ಲ. ಎಷ್ಟೇ ಕಡಿಮೆ ಆದಾಯ ಬಂದರು ಸ್ವಾಹಾಲಂಬಿಗಳಾಗಿರುತ್ತಿದ್ದರು. ಹಾಗಾಗಿ ಆರ್ಥಿಕವಾಗಿ ಹಿಂದುಳಿದರು ಇವರಲ್ಲಿ ಹೆಚ್ಚಿನ ಭೂ ಮಾಲಿಕರು ಕೂಡ ಕಾಣುದಿಲ್ಲ. ಆದರೂ ತುಂಬ ಪ್ರಾಮಾಣಿಕರು ಮತ್ತು ಅಷ್ಟೇ ಮುಗ್ದರು. ಇವರಲ್ಲಿ ಕಳ್ಳತನ, ಸುಲಿಗೆ, ದರೋಡೆಗಳು ಇರುವುದಿಲ್ಲ. ಅನ್ಯಾಯ ಮಾಡಿದರೆ ಸಹಿಸುವುದಿಲ್ಲ. ಅವರ ಆಸ್ತಿ ಪಾಸ್ತಿಗಳನ್ನೂ ಲೆಕ್ಕಿಸುವುದಿಲ್ಲ. ಒಂದು ರೀತಿಯಿಂದ ಅಭಿವೃದ್ಧಿಗೆ ತೊಡಕು ಸಹನೆಯಿಂದಿರುವುದು ಉತ್ತಮ, ಇವರಲ್ಲಿ ಶಾಖಾಹಾರಿಗಳಿದ್ದಾರೆ, ಬಹಳ ವೀರಳ. ಸಾಮಾನ್ಯವಾಗಿ ಸಮಾಜದ ಕೆಲವರಲ್ಲಿ ಹೆಚ್ಚಿನ ಸಂಸ್ಕಾರ ಸಂಪ್ರದಾಯ ಉಳಿದುಕೊಂಡಿದೆ ಆದರೆ ಹೆಚ್ಚಿನವರಲ್ಲಿ ಕೆಲವು ಸಂಸ್ಕಾರ ಸಂಪ್ರದಾಯಗಳು ಬಿಟ್ಟು ಹೋದಂತಿದೆ ಮತ್ತು ಕೆಲವರಲ್ಲಿ ಹೆಚ್ಚಿನ ಸಂಸ್ಕಾರ ಸಂಪ್ರದಾಯಗಳು ಬಿಟ್ಟು ಹೋದಂತಿದೆ.

ಕೊಂಕಣಿ ಖಾರ್ವಿಯವರಲ್ಲಿ ಸ್ವಲ್ಪ ಮಟ್ಟಿಗೆ ಸಂಸ್ಕಾರ ಸಂಪ್ರದಾಯ ಉಳಿದಿರಲು ಕಾರಣ
1. ಶ್ರೀ ಶೃಂಗೇರಿ ಜಗದ್ಗುರು ಪೀಠದ ಆಶ್ರಯ
2. ಕುಲದೇವರನ್ನು ಹಾಗೂ ಆರಾಧ್ಯ ದೇವರನ್ನು ನಿರಂತರ ಆರಾಧಿಸಿಕೊಂಡು ಬಂದಿರುದು.
3. ಮೂಲ ಮಾತೃ ಭಾಷೆ ಬಿಡದೆ ಇರುವುದು (ಕೊಂಕಣಿ).
4. ಗೌಡ ಸಾರಸ್ವತ ಬ್ರಾಹ್ಮಣರ ಒಡನಾಟದೊಂದಿಗೆ ಅವರ ಪ್ರಭಾವ.

ತಮ್ಮ ಸಮಾಜದ ಅಭಿವೃದ್ಧಿ ಕಾಣದ ಇವರು ತಮಗೆ ತಪಸ್ವಿ ಗುರುಗಳ ಶಾಪ ಇರಬಹುದೆಂದು ಭಾವಿಸಿ ಆಗಾಗ್ಯೆ ತಮ್ಮೊಳಗೆ ಮಾತಾಡಿಕೊಳ್ಳುವುದಿದೆ. ನಿಜವಾಗಿ ತಪಸ್ವಿ ಮಹರ್ಷಿಗಳ ಕ್ರಪಾದ್ರಷ್ಠಿ ಆಶೀರ್ವಾದವಿದೆ. ಅವರು ಸಮಾಜಕ್ಕೆ ಅನ್ಯಾಯ, ಅಪಮಾನವಾಗುವುದನ್ನು ಇಚ್ಛಿಸುವುದಿಲ್ಲ. ನಿಧಾನವಾಗಿ ಚಿಂತನೆ ಮಾಡಿದರೆ ಹೆಚ್ಚಿನ ಘಟನೆಗಳಿಂದ ತಿಳಿದು ಬರುತ್ತದೆ. ಉದ್ಯೋಗ ವ್ಯವಹಾರ ಮಾಡುವವರು ಉತ್ತಮ ಜೀವನ ನಡೆಸುತ್ತಿದ್ದಾರೆ. ಆದರೆ ಮೀನುಗಾರಿಕೆ ವೃತ್ತಿ ಮಾಡುವವರು ಅಭಿವೃದ್ಧಿ ಕಾಣದಿರಲು ಕಾರಣ ಕುಲಧರ್ಮಕ್ಕೆ ಸರಿ ಹೊಂದದ ವೃತ್ತಿ ಮಾಡುವುದು ತಪಸ್ವಿ ಗುರುಗಳು ಇಚ್ಛಿಸುವುದಿಲ್ಲ ಎಂದು ತಿಳಿದು ಬರುತ್ತದೆ. ಕೊಂಕಣಿ ಖಾರ್ವಿಯವರಿಗೆ ಮೀನುಗಾರಿಕೆ ಎಂದರೆ “ಮೃಗ ಜಲದಂತೆ” ಬೆನ್ನು ಹತ್ತಬೇಡಿ.

ಗಮನಿಸಬೇಕಾದ ಮುಖ್ಯ ಅಂಶಗಳು:-

1. ಸರಸ್ವತಿ ನದಿಯ ದಡದಲ್ಲಿ ಯುಗದ ಪ್ರಾರಂಭದಿAದಲೂ ತಪಸ್ವಿ ಮಹರ್ಷಿಯವರು ವಾಸಮಾಡಿಕೊಂಡಿದ್ದರು.

2. ಶಾಂತಿಮತಿ, ದ್ವಾರಕಾ, ಪಂಚಜನ್ಯಮ್, ರಮಣಕಮ್, ದ್ವೀಪಗಳಲ್ಲಿ ಮತ್ತು ಸಿಂಧೂ ಸಾಗರದ ಎರಡು ಕಡೆಯ ಕರಾವಳಿಯಲ್ಲಿ ಸೋಮಾರ್ಯ ಪಾಂಚಜನರು ವಾಸಿಸುತ್ತಿದ್ದರು.

3. ಆ ಪ್ರದೇಶದಲ್ಲಿ ನೂರಾರು ಕುಲಗೋತ್ರಗಳು ವೃದ್ಧಿ ಹೊಂದಿದವು ಅವುಗಳಲ್ಲಿ ಮುಖ್ಯವಾಗಿ ಭೃಗು ವಂಶದ ಬ್ರಾಹ್ಮಣರು ಅವರು ಉದ್ಯಮಾಶೀಲರು ಮತ್ತು ಸಾಹಸ ಪ್ರಿಯರು, ಹಾಗೂ ಸಮುದ್ರಯಾನ ಪ್ರವೀಣರು ಆಗಿದ್ದರು ಎಂದು ಪುರಾಣಗಳಿಂದ ತಿಳಿದು ಬರುತ್ತದೆ.

4. ಕ್ರಿ.ಪೂ. 3067 ರ ಮಹಾಭಾರತ ಯುದ್ಧದಲ್ಲಿ ಹೆಚ್ಚಿನವರು ನಾಶವಾದರು.

5. ಕ್ರಿ.ಪೂ 3031 ರಲ್ಲಿ ಶ್ರೀ ಕೃಷ್ಣನ ನಿರ್ಣಯದ ನಂತರ ನಡೆದ ಸಾಮಾಜಿಕ ಕ್ರಾಂತಿಯಲ್ಲಿ ಪುನಃ ನಾಶವಾದರು, ನಂತರ ಭೂಕಂಪ ನಡೆಯಿತು. ಆ ಭೂ ಪ್ರದೇಶವು ಕೆಲವು ಅಡಿಗಳಷ್ಟು ಉಬ್ಬಿ ಸರಸ್ವತಿ ನದಿಯು ಒಣಗಿ ಹೋಯಿತು. 6. ಆ ಪ್ರದೇಶಗಳಲ್ಲಿ ಬರಗಾಲ ಉಂಟಾಗಿ ಮೀನು ಹಿಡಿದು ತಿನ್ನುವ ಪರಿಸ್ಥಿತಿ ಉಂಟಾಯಿತು. 7. ನದಿಯಿAದ ಮೀನು ತೆಗೆಯಲ್ಲಿಕ್ಕೆ ಸಾಹಸ ಪ್ರಿಯರು ಹಾಗೂ ಸಮುದ್ರಯಾನ ಪ್ರವೀಣರಾದರು ಮುಂದಾದರು.

8. ಆ ಪ್ರದೇಶದಲ್ಲಿ ವಾಸ ಮಾಡಲು ದುಸ್ತರವಾಗಿ ಗೌಡ ದೇಶಕ್ಕೆ (ಉತ್ತರ ಭಾರತ) ವಲಸೆ ಹೋದರು. 9. ಮೀನು ಹಿಡಿಯಲು ಮುಂದಾದವರಿಗೆ ಖಾರೆ ಎಂದು ಗೌರವ ಸೂಚಕ ನಾಮದಿಂದ ಕರೆಯತೊಡಗಿದರು.

10. ಖಂಬಾತ್ ಖಾರಿ ಮತ್ತು ಕಛ್ ಖಾರಿಯಲ್ಲಿ ಮೀನು ಹಿಡಿಯಲು ಹೋದ ಅಥವಾ ಖರ್ವಟ;ದಲ್ಲಿ ವಾಸವಾಗಿದ್ದ ಕಾರಣದಿಂದಾಗಿ ಖಾರೆ ಎಂದು ಗೌರವ ಸೂಚಕ ನಾಮ ಬಂದಿರುತ್ತದೆ.

11. ಸುಮಾರು ಕ್ರಿ.ಶ. 11ನೇ ಶತಮಾನದಲ್ಲಿ ದಾಳಿಗಾಗಿ ಮಹಮದ್ ಘಜನಿಯೂ ಸಯನ್ಯ ಸಮೇತ ಬಂದನು, ಆ ಕಾರಣಕ್ಕಾಗಿ ಗೌಡ ದೇಶದಿಂದ ದಕ್ಷಿಣ ಭಾರತದ ಗೋವಾ ಮತ್ತು ಕರ್ನಾಟಕ್ಕೆ ವಲಸೆ ಬಂದರು.

12. ಗೋವಾದಲ್ಲಿ ಮೀನು ಹಿಡಿಯುವವರ ಪ್ರತ್ಯೇಕ ಪಂಗಡವಾಗಿ ಖಾರೆ ಎಂದು ಕರೆಯುವ ಗೌರವ ಸೂಚಕ ನಾಮವೇ ಖಾರ್ವಿ ಜಾತಿಯಾಗಿ ಪರಿಗಣನೆಯಾಯಿತು.

13. ಕ್ರಿ.ಶ. 16ನೇ ಶತಮಾನದಲ್ಲಿ ಗೋವಾಕ್ಕೆ ಪೋರ್ಚುಗೀಸರು ದಾಳಿಗಾಗಿ ಬಂದರು, ಆ ಸಮಯದಲ್ಲಿ ಅಲ್ಲಿಂದ ಕರ್ನಾಟಕದ ಕರಾವಳಿಗೆ ವಲಸೆ ಬಂದರು.

14. ಕರ್ನಾಟಕ ಕರಾವಳಿಗೆ ಬಂದ ಸಮಯದಲ್ಲಿ ಕೊಂಕಣಿ ಖಾರ್ವಿಯವರು ಶ್ರೀ ಶೃಂಗೇರಿ ಜಗದ್ಗುರು ಪೀಠದ ಆಶ್ರಯ ಪಡೆದರು.

15. ಕುಟುಂಬದ ಹಿರಿಯರು ತಮ್ಮ ಸಂತತಿಗೆ ಹಿಂದಿನ ಚರಿತ್ರೆಯ ಮಾಹಿತಿ ಕೊಡುವುದು ಕಡಿಮೆಯಾಗುತ್ತ ಬಂದು ಇತ್ತೀಚಿನ 50 ವರ್ಷಗಳಿಂದ ಗತ ಚರಿತ್ರೆಯನ್ನು ಹೇಳುವುದುಬಿಟ್ಟಮತಾಗಿ ಹೊಸ ಜನಾಂಗವು ಎಲ್ಲಾ ಮರೆತಂತಾಯಿತು.

ಶ್ರೀ ಸಾಯಿ ಮುನಿ ಸ್ವಾಮೀಜಿ

2 thoughts on “” ಸಂವಿದ್ ನೀತಿಃ ” ಶ್ರೀ ಸಾಯಿ ಮುನಿ ಸ್ವಾಮೀಜಿಯವರ “ಕೊಂಕಣಿ ಖಾರ್ವಿ ಮತ್ತು ಸಾರಸ್ವತ ಹಿರಿಯ ನಾಗರೀಕತೆ”

  1. ಸಾಯಿ ಮುನಿಸ್ವಾಮಿಯವರ ಈ ಪುಸ್ತಕ ನಮ್ಮ ಸಮಾಜದ ಬಗ್ಗೆ ನಿಜವಾಗಿಯೂ ಬಹಳ ತಿಳಿವಳಿಕೆ ನೀಡುತ್ತವೆ. ಖಾರ್ವಿ ಸಮಾಜದ ಪ್ರತಿಯೊಬ್ಬ ಸದಸ್ಯರು ನಮ್ಮ ಪೂರ್ವಜರ ಪ್ರಯಾಣ, ಅವರ ಮೂಲಗಳು ಮತ್ತು ವಿವಿಧ ಕಾರಣಗಳು ಹೇಗೆ ಅವರ ಮೇಲೆ ಪ್ರಭಾವ ಬೀರಿದವು ಎಂಬುದನ್ನು ಓದಿ ಅರ್ಥಮಾಡಿಕೊಳ್ಳಬೇಕು. ಶ್ರೀ ಸಾಯಿ ಮುನಿ ಸ್ವಾಮೀಜಿಗೆ ಅದ್ಭುತವಾದ ಪುಸ್ತಕ ರಚಿಸಿದಕ್ಕಾಗಿ ಸಾವಿರ ಪ್ರಣಾಮಗಳನ್ನು ಹಾಗೆ ಇದನ್ನು ಹಂಚಿಕೊಂಡಿದ್ದಕ್ಕಾಗಿ ಖಾರ್ವಿ ಆನ್‌ಲೈನ್‌ಗೆ ಧನ್ಯವಾದಗಳು.

Leave a Reply

Your email address will not be published. Required fields are marked *