“ಕೊಂಕಣಿ ಖಾರ್ವಿ ಮತ್ತು ಸಾರಸ್ವತ ಹಿರಿಯ ನಾಗರೀಕತೆ”ಲೇಖನ ಬಗ್ಗೆ ಒಂದು ಅಭಿಪ್ರಾಯ/ ವಿಮರ್ಶೆ

ಶ್ರೀ ಸಾಯಿ ಮುನಿ ಸ್ವಾಮೀಜಿಯವರ “ಕೊಂಕಣಿ ಖಾರ್ವಿ ಮತ್ತು ಸಾರಸ್ವತ ಹಿರಿಯ ನಾಗರೀಕತೆ” ಲೇಖನ ಬಗ್ಗೆ ಒಂದು ಅಭಿಪ್ರಾಯ/ ವಿಮರ್ಶೆ

ಡಾ|| ನಾಗೇಶ್ ಕುಮಾರ್ ಜಿ. ರಾವ್, ಸ್ಥಾಪಕಾಧ್ಯಕ್ಷ, ಕೊಂಕಣಿ ಸಂಸಾರ ಪ್ರತಿಷ್ಠಾನ #103, ಪ್ರೀಮಿಯರ್ ಗ್ರೀನ್‌ವೂಡ್ಸ್, ವಿದ್ಯಾರತ್ನ ನಗರ, ಮಣಿಪಾಲ 576 104.

ಶ್ರೀ ಸಾಯಿ ಮುನಿ ಸ್ವಾಮೀಜಿಯವರ ಲೇಖನ “ಕೊಂಕಣಿ ಖಾರ್ವಿ ಮತ್ತು ಸಾರಸತ್ವ ಹಿರಿಯ ನಾಗರೀಕತೆ” ಇದರ ನಿರೂಪಣೆ, ವಿವರಣಾ ಶೈಲಿ. ಖಾರ್ವಿ ಕೊಂಕಣಿ ಸಮಾಜದ ಗತ ವೈಭವ, ಹಾಗೂ ಹಲವು ಚಾರಿತ್ರಿಕ ಮಹತ್ವದ ವಿಚಾರಗಳು ಎಲ್ಲವೂ ಇಲ್ಲಿ ಬಹಳ ಸುಂದರವಾಗಿ ಬಂದಿದ್ದು, ಈ ಲೇಖನದ ಪ್ರಬುದ್ಧತೆಯ ಬಗ್ಗೆ ಎರಡು ಮಾತಿಲ್ಲ.

ಖಾರ್ವಿ ಸಮಾಜದವರಾಗಲೀ, ಅಥವಾ ಇನ್ನಿತರ‍್ಯಾರೇ ಆಗಲಿ ಪ್ರಸ್ತುತ ಲೇಖನವನ್ನು ಓದಲು ಕೈಗೆತ್ತಿಕೊಂಡು ಓದಲಾರಂಭಿಸಿದರೆ, ಪೂರ್ತಿ ಓದಿ ಮುಗಿಸುವವರೆಗೆ ಕೆಳಗಿಡದೇ ಓದಿಸಿ ಕೊಳ್ಳಬಲ್ಲ ಈ ಪ್ರಬಲವಾದ ಲೇಖನ, ಎಲ್ಲ ಕೊಂಕಣಿ ಭಾಂದವರ ಮನೆಯಲ್ಲಿ ಇರಲೇಬೇಕಾದ ಸಾಹಿತ್ಯವೆಂಬುದು ಈ ವಿಮರ್ಷಕರ ಅಭಿಪ್ರಾಯ. ಲೇಖನದ ಮೂಲ ಉದ್ದೇಶ : ಖಾರ್ವಿ ಜನಾಂಗದ ಇಂದಿನ ಹಾಗೂ ಮುಂದಿನ ಪೀಳಿಗೆಗೆ, ಹಿರಿಯರಾಗಿ ನಾವು ನೀಡಲೇ ಬೇಕಾದ ನಮ್ಮ ಪೂರ್ವಜರ ಮಾಹಿತಿ ಮತ್ತು ಅಂದಿನ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಜ್ಞಾನ ನೀಡುವುದೇ ಈ ಲೇಖನದ ಮೂಲ ಉದ್ಧೇಶವಾಗಿರುವುದು ಇಲ್ಲಿ ಸುಸ್ಪಷ್ಟ, ಲೇಖನದ ನಿರೂಪಣೆ ಎಲ್ಲ ವರ್ಗದ ಸಮಾಜ ಭಾಂದವರಿಗೆ, ಒಮ್ಮಲೇ ಓದಿ ಅರಿಯಲು ಸಾಧ್ಯವಾಗಬಲ್ಲ ಅತ್ಯಂತ ಸುಲಭ, ಸರಳ ಕನ್ನಡ ಭಾಷೆಯಲ್ಲಿ ಶ್ರೀ ಸಾಯಿ ಮುನಿ ಸ್ವಾಮೀಜಿಯವರು ಸೂಕ್ತವಾಗಿ ಚಿಕ್ಕದಾದರೂ ಚೊಕ್ಕವಾದ ರೀತಿಯಲ್ಲಿ ಪ್ರಸ್ತುತ ಲೇಖನದ ಮೂಲಕ ನೀಡಿರುವ ಸಂದೇಶ, ಮೆಚ್ಚಲೇ ಬೇಕಾದ ಅತ್ಯವಶ್ಯಕ ಗಮನಾರ್ಹ ವಿಚಾರವಾಗಿದ್ದು, ತನ್ಮೂಲಕ ಅವರ ಈ ಪ್ರಯತ್ನದ ಘನ ಉದ್ದೇಶ ಫಲಿಸುವುದರಲ್ಲಿ ಯಾವ ಸಂಶಯವೂ ಇಲ್ಲ.

ಲೇಖನದ ಬಗ್ಗೆ : “ಹಿಂದಿನವರ ಜೀವನ ಶೈಲಿ ಮುಂದಿನ ಜನಾಂಗದ ಭವಿಷ್ಯ” ಎಂಬ ವಿವೇಕವಾಣಿಯೊಂದಿಗೆ ಪ್ರಾರಂಭವಾಗುವ ಈ ಲೇಖನ ಮನೋಜ್ಞವಾಗಿ ಮೂಡಿ ಬಂದಿದ್ದು, ಇದು ಎಲ್ಲ ಓದುಗರ ಮನ ತಟ್ಟುವುದು ಮಾತ್ರವಲ್ಲದೇ ವಿಷಯದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಅತ್ಯಂತ ಪ್ರಬಲ ಮಾಧ್ಯಮವೂ ಆಗಿದೆ ಎಂಬುದು ಖಚಿತ.

ಜಗತ್ತಿನ ಸರ್ವಕೊಂಕಣಿ ಭಾಂದವರ ಮೂಲ ಸ್ಥಾನವಾದ ಉತ್ತರ ಭಾರತದ ಅತೀ ಪ್ರಾಚೀನ “ಸರಸ್ವತಿ ನದಿ” ಯ ಬಗ್ಗೆ ಇಲ್ಲಿ ಸೂಕ್ತವಾಗಿ ಉಲ್ಲೇಖಿಸಿದ್ದು, ನದಿಯ ಉಗಮ, ಹರಿಯುವ ಭೂ ಭಾಗಗಳು, ಶಾಖೆಗಳು, ಅದರ ತಗ ವೈಭವ, ವೈಶಿಷ್ಟ, ಪ್ರಾಶಸ್ತö್ಯ, ಮನುಕುಲದ ಪ್ರಥಮ ಅರಸೊತ್ತಿಗೆಯ ಮನು ಚಕ್ರವರ್ತಿಯ ವಾಸ ಸ್ಥಾನ, ಇದಲ್ಲದೇ ಅತೀ ಪ್ರಾಚೀನ ಆರ್ಯ ಸಂಸ್ಕೃತಿಯ ಹಾಗೂ ನಾಗರೀಕತೆಯ ಚಿಂತಕರೂ, ಮೂಲ ಪುರುಷರಾದ ರಾಜರ್ಷಿ, ಬ್ರಹ್ಮರ್ಷಿಯರು-ಇವರೆಲ್ಲರೂ ಈ ನದೀ ತೀರದಲ್ಲೇ ಬದುಕಿದ್ದರೆಂಬುದರ ಬಗ್ಗೆ ಋಗ್ವೇದದಲ್ಲಿ ಹೇಳಿರುವ ಬಗ್ಗೆ ಲೇಖಕರು ಉಲ್ಲೇಖಿಸಿದುದನ್ನು ಗಮನಿಸಬೇಕಾದ ವಿಚಾರ. ಕಲಿಯುಗದಾರಂಭದಲ್ಲಿ ನಡೆದ ಚಾರಿತ್ರಿಕ, ಭೌಗೋಳಿಕ, ಪ್ರಾಕೃತಿಕ ವಿಪರ್ಯಾಸ, ಹಲವು ಪಾಶ್ಚಾತ್ಯ ಆಕ್ರಮಣಗಳು-ಹೀಗೆ ಹತ್ತು ಹಲವು ಕಾರಣಗಳಿಂದಾಗಿ ಸರಸ್ವತೀ ನದೀ ತೀರದ ನಾಗರೀಕತೆಯ ಎಲ್ಲ ಕೊಂಕಣಿಗಳ ಪೂರ್ವಜರ ಸ್ಥಾನ ಪಲ್ಲಟಕ್ಕೆ ನಾದಿ ಹಾಡಿತು.. ಕ್ರಿ. ಪೂ 2900 ರಲ್ಲಿ ಉಂಟಾಗಿ ಇಡಿಯ ಭರತ ಖಂಡವನ್ನೇ ನಡುಗಿಸಿದ ಪ್ರಚಂಡ ಭೂ-ಕಂಪನದಿAದಾಗಿ, ಸಮುದ್ರ ತಳವು ಉಬ್ಬಿಕೊಂಡು, ನದಿಯು ಸರಾಗವಾದ ಹರಿಯುವಿಕೆ ಅಸಾಧ್ಯವಾಗಿ, ನದಿಯು ಒಣಗುವಂತಾಯಿತು. ಇದರ ಪರಿಣಾಮವಾಗಿ ಉಂಟಾದ ಹದಿನೆರಡು (12) ವರ್ಷಗಳಷ್ಟು ದೀರ್ಘಕಾಲ ಬರ ಸೃಷ್ಠಿಯಾಗಿ, ಭಯಂಕರ ಬರಗಾಲಕ್ಕೆ ನದೀ ತಟದಲ್ಲಿ ಜೀವಿಸುತ್ತಿದ್ದ ಹೆಚ್ಚಿನ ಕೊಂಕಣಿಗರು ತುತ್ತಾಗಿ, ಸರಸ್ವತಿ ನದೀ ತೀರವನ್ನು ತ್ಯಜಿಸಿ ಕೆಲವರು ಉತ್ತರಾಭಿಮುಖವಾಗಿ ಹಿಮಾಲಯ, ಕಾಶ್ಮೀರದತ್ತ ಹೋದರೆ ಇನ್ನು ಕೆಲವರು ನದೀ ತೀರದಲ್ಲೇ ಪಯಣಿಸಿಕೊಂಡು ತಮಗೆ ಬೇಕಾದ ಸೂಕ್ತ ನೆಲೆಯನ್ನು ಕಂಡುಕೊಳ್ಳುತ್ತಾ, ದಕ್ಷಿಣಾಭಿಮುಖವಾಗಿ ವಲಸೆ ಹೋಗಿ, ಗೌಡಬಂಗಾಳ, ದಕ್ಷಿಣ ಭಾರತದ ಪಶ್ಚಿಮದ ಸಮುದ್ರ ಕರಾವಳಿ ಪ್ರದೇಶದ ಮಹಾರಾಷ್ಟç, ಗೋವಾ, ಅಂಕೋಲಾ, ಅವಿಭಾಜಿತ ದಕ್ಷಿಣ ಕನ್ನಡ, ಕೇರಳ ಮುಂತಾದ – ಹಲವೆಡೆ ಕೊಂಕಣಿಗರ ವಾಸಸ್ಥಾನವು ಪಲ್ಲಟವಾಗಿ ಸೌಂಸ್ಕೃತಿಗೆ ಧಕ್ಕೆಯಾದರೂ, ದೇಶವು ಪ್ರಬಲ ಹಿಂದೂ ನೆಲೆಯಾಗಿದ್ದುದರಿಂದ ಕೊಂಕಣಿಗರು 41 ಪಂಗಡಗಳಾಗಿ ಪರಿವರ್ತಿತರಾಗಿ, ಹಿಂದೂ, ಮುಸ್ಲೀಂ, ಕ್ರಿಶ್ಚಿಯನ್ ಧರ್ಮಿಯರಲಿರಲ್ಲಿ ಸಮ್ಮಿಳತವಾಗಿ ಇಂದಿಗೂ ತಮ್ಮದೇ ಅಸ್ಥಿತ್ವವನ್ನು ಉಳಿಸಿಕೊಂಡಿರುವುದು ಜಗಜ್ಜಾಹಿರ ವಿಚಾರ.

ಇಂತಹ ಬರ ಪರಿಸ್ಥಿತಿಯಲ್ಲೂ ವಲಸೆ ಹೋಗದೆ ಸರಸ್ವತೀ ತಟದಲ್ಲೇ ಬದುಕಲು ನಿರ್ಧರಿಸಿದ ಕೆಲವರು ಬರಗಾಲದ ತೀಕ್ಷಣತೆಯಿಂದಾಗಿ, ಸಮುದ್ರ ಜೀವಿಗಳಾದವ ಮೀನನ್ನು ತಮ್ಮ ಬದುಕಿಗೆ ಪೂರಕ ಆಹಾರವನ್ನಾಗಿ ಸೇವಿಸಿ, ತಮ್ಮ ನಿತ್ಯ ಜೀವನದ ಶೈಲಿಯನ್ನು ನಡೆಸುತ್ತಿದ್ದವರೇ ‘ಖಾರ್ವಿ’ ಜನಾಂಗ. ಹೀಗೆ ಸರಸ್ವತೀ ನದಿ ತೀರದ ಕೊಂಕಣಿಗರಿಗೆ ‘ಖಾರ್ವಿ’ ನಾಮಕರಣದ ಬಗ್ಗೆ ಅವರ ಮೀನುಗಾರಿಕಾ ಅವಲಂಬಿತ ಜೀವನದ ಬಗ್ಗೆ, ಇನ್ನೂ ಹಲವು ವಿಷಯಗಳನ್ನು ಲೇಖಕರು ಲೇಖನದಲ್ಲಿ ಉಲ್ಲೇಖಿಸಿದ್ದು, ಅದೆಲ್ಲವೂ ಬಹಳ ಮಾರ್ಮಿಕವಾಗಿ ಮೂಡಿ ಬಂದಿದ್ದು, ಇನ್ನೂ ಮುಂದುವರಿಸುತ್ತಾ ಶ್ರೀ ಸಾಯಿ ಮುನಿ ಸ್ವಾಮೀಜಿಯವರು ಖಾರ್ವಿ ಜನಾಂಗದವರು ‘ನಾಯಕ್’ ಎಂಬ ಹೆಸರನ್ನು ಹೇಗೆ ಪಡಕೊಂಡರೆAಬುದನ್ನೂ ಬಹಳ ರಸವತ್ತಾಗಿ ವಿವರಿಸಿದ್ದು, ಈ ಬಗ್ಗೆ ನೀಡಿದ ಸಮರ್ಥನೆ ಸಮಂಜಸವಾಗಿದೆ.

ಇಷ್ಟೇ ಅಲ್ಲದೇ ಲೇಖಕರು, ಖಾರ್ವಿಯವರ ಉಗಮ ‘ಭೃಗು ಮುನಿ’ ಯವರಿಂದ ಎಂದು ತಮ್ಮ ಲೇಖನದಲ್ಲಿ ಸಾಧಾರ ಸಹಿತ ಸೂಚಿಸಿದ್ದು, ಜತೆಯಲ್ಲಿ ಖಾರ್ವಿಯವರನ್ನು ಬೇರೆಯೇ ಒಂದು ‘ಜಾತಿ’ ಎಂಬುದಾಗಿ ವಿವರಿಸಿದುದರ ಬಗ್ಗೆ ಸ್ವಲ್ಪ ಹೆಚ್ಚಿನ ವಿವರಣೆ ಕೊಟ್ಟರೆ ಸೂಕ್ತವೆಂದು ಈ ವಿಮರ್ಷಕರ ಒಂದು ಸಣ್ಣ ಅನಿಸಿಕೆ. ಶ್ರೀ ಸಾಯಿ ಮುನಿ ಸ್ವಾಮೀಜಿಯವರು ಲೇಖನದ ಕಡೆಯ ಭಾಗದಲ್ಲಿ ನೀಡಿದ ಹಿತನುಡಿಯ ಪ್ರಾರಂಭದಲ್ಲಿ ಶ್ರೇಷ್ಠ ನಾಗರಿಕತೆಯ ಸಮಾಜ ನಿರ್ಮಾಣಕ್ಕಾಗಿ ಖಾರ್ವಿಯವರನ್ನು ಬರೇ ಪ್ರಾರಂಭದಲ್ಲಿ ಶ್ರೇಷ್ಠ ನಾಗರಿಕತೆಯ ಸಮಾಜ ನಿರ್ಮಾಣಕ್ಕಾಗಿ ಖಾರ್ವಿಯವರನ್ನು ಬರೇ “ಕೊಂಕಣಿ ಖಾರ್ವಿ” ಎನ್ನುವುದರ ಬದಲು “ಕೊಂಕಣಿ ಖಾರ್ವಿ ಸಾರಸ್ವತ” ಎಂಬುದಾಗಿ ಕರೆಯುವುದರ ಬಗ್ಗೆ ಉಲ್ಲೇಖಿಸಿರುವುದು ಸೂಕ್ತವೆನಿಸಿದರೂ, ಇದು ಬಹುಷ್ಯ ಇತರ ಕೊಂಕಣಿ ಸಮಾಜದವರೊಡನೇ ಸಮಾನತೆಯನ್ನು ಸಾಧಿಸುವ ಕಾರಣಕಕಾಗಿ ಈ ಪರಿವರ್ತನೆಯ ಅಗತ್ಯವೆಂಬುದು ಲೇಖಕರ ಸ್ವ ಸೂಚನೆಯೋ ಅಥವಾ ಖಾರ್ವಿ ಸಮಾಜ ಭಾಂದವರ ಕೆಲವರ ಸಂಮಿಳಿತ ಅಭಿಪ್ರಾಯವೂ ಆಗಿರಬಹುದೆಂಬುದು ನನ್ನ ಸ್ವಂತಿಕೆ ಆದಾಗಲೇ ಇದ್ದು, ಈ ಬಗ್ಗೆ ಮರು ನಾಮಕರಣ ಬೇಕಾಗಿಲ್ಲವಾದರೂ, ಇದರ ಬಗ್ಗೆ ಖಾರ್ವಿ ಭಾಂದವರ ಎಲ್ಲ ಗುರು-ಹಿರಿಯರ ಜತೆ ಗಹನ ಚಿಂತನೆ ಇಲ್ಲಿ ಅವಶ್ಯಕವೆಂಬುದು ಈ ವಿಮರ್ಶಕರ ಅಭಿಪ್ರಾಯ.

ಶ್ರೀ ಸಾಯಿ ಮುನಿ ಸ್ವಾಮೀಜಿಯವರು, ಈ ಲೇಖನವನ್ನು, ಮುಖ್ಯವಾಗಿ ಸ್ವಾಮಿ ಸಖ್ಯನಂದನವರು ಬರೆದ “ದಿ ಗ್ರೇಟ್ ಸರಸ್ವತ್ ಸಿವಿಲೈಜೇಷನ್ ಆಪ್ ಎನ್ಶಿಯಂಟ್ ಇಂಡಿಯಾ” ಎಂಬ ಮೂಲ ಲೇಖನವನ್ನಾಧರಿಸಿ ಬರೆದಿರುವುದಾಗಿ ತಿಳಿಸಿದ್ದು, ಹೆಚ್ಚಿನ ಮಾಹಿತೆಗೆ ಶ್ರೀ ರಾಮಕೃಷ್ಣ ಮಿಷನ್ ಕ್ರಿ. ಶ. 1979 ರ “ಪ್ರಭುದ್ವಭಾರತ” ಪತ್ರಿಕೆಯಲ್ಲಿ ಧಾರವಾಹಿಯಾಗಿ ರೂಪಿತ “ಯಥಾ ರೂಪೇಣ ಭಾರತೀಯ ಚರಿತ್ರೆ” ಹಾಗೂ “ಇಂಡಿಯನ್ ಹಿಸ್ಟರಿ ಆಫ್ ರ‍್ಯಾಟ್ ಪರ್ಸ್ಪೆಕ್ಟಿವ್” ಎಂಬ ಲೇಖನ/ಗ್ರಂಥಗಳಲ್ಲಿ ಕಾಣಬಹುದೆಂದು ಅವರು ಹೇಳಿದ್ದರು ಸ್ವತಹ ಲೇಖಕರೇ ಈ ಹೆಚ್ಚಿನ ಮಾಹಿತಿಗಳನ್ನು ತಮ್ಮ ಇದೇ ಲೇಖನದ ಮುಂದಿನ ಆವೃತ್ತಿಯಲ್ಲಿ ಒದಗಿಸಿದ್ದಲ್ಲಿ ಈ ಲೇಖನವು “ಕೊಂಕಣಿ ಖಾರ್ವಿ ಸಾರಸ್ವತ” ರ ಬಗ್ಗೆ ಪೂರ್ಣರೂಪದ ಲೇಖನವಾಗುತ್ತಿತ್ತೋ ಎಂಬುದು ಈ ವಿಮರ್ಶಕರ ಒಂದು ಆಶಯ.

⦁ ಡಾ. ನಾಗೇಶ್ ಕುಮಾರ್ ಜಿ. ರಾವ್

Leave a Reply

Your email address will not be published. Required fields are marked *