ಭವಿಷ್ಯದ ಭಾವಿ ನಾಯಕ ರಾಘವೇಂದ್ರ ಖಾರ್ವಿ

ಬೆಂಗಳೂರು ರಾಜಾಜಿನಗರ ವಾರ್ಡ್‌ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಸಕ್ರಿಯ ಕಾರ್ಯಕರ್ತರಾಗಿ ಹಾಗೂ ನರೇಂದ್ರ ಮೋದಿಯವರ ಅಪ್ಪಟ ಅಭಿಮಾನಿಗಳಾಗಿರುವ ಆತ್ಮೀಯ ಗೆಳಯರಾದ ನಮೋ ರಾಘವೇಂದ್ರ ಖಾರ್ವಿರವರ ಬಗ್ಗೆ ನನಗೆ ಗೊತ್ತಿಲ್ಲದೆ ಇರುವ ಸಾಮಾಜಿಕ ಕಾರ್ಯಗಳು ಅನೇಕ ಇರಬಹುದು ನಿನ್ನ ಕಾರ್ಯ ಬಗ್ಗೆ ಸ್ವಲ್ಪ ಹೇಳು ಬರಿಬೇಕು ಅಂದರೆ ಸುಮ್ನೇ ಇರು ಮರಯ ಅಂತಾನೇ, ಅದಕ್ಕಾಗಿ ನನಗೆ ಗೊತ್ತಿರುವಷ್ಟು ಕಾರ್ಯಗಳನ್ನು ನಿಮಗೆ ತಿಳಿಸಬೇಕೆಂದು ಯಾಕೆಂದರೆ ಸಾಮಾಜಿಕ ಸೇವೆ ಮಾಡುವರು ಪ್ರತಿಯೊಬ್ಬರು ಕೂಡ ಸಮಾಜ ಗುರುತಿಸಬೇಕು ಅದರಿಂದ ಮತ್ತಷ್ಟು ಹೆಚ್ಚಿನ ಸೇವೆ ಮಾಡುವ ಹುಮ್ಮಸ್ಸು ಅವರಿಗೆ ಬರಬೇಕು.

ಸಮಾಜಕ್ಕೆ ತನ್ನಿಂದಾ ಏನಾದರೂ ಸಹಾಯ ಮಾಡಬೇಕೆಂಬ ಭಾವನೆಯಿಂದ ತೆರೆಯ ಹಿಂದೆ ನಿಂತು ಯಾವುದೇ ಪ್ರಚಾರ ಬಯಸದೇ ಮಾಡಿದ ಸಾಮಾಜಿಕ ಕಾರ್ಯಗಳು ಅನೇಕ. ಬಲಗೈಯಲ್ಲಿ ಕೊಟ್ಟರೆ ಎಡಗೈಗೆ ಗೊತ್ತಾಗಬರದು ಎನ್ನುವ ಸೇವಾ ಮನೋಭಾವ. ಮೊನ್ನೆಯಷ್ಟೇ ಆರ್ಥಿಕ ಸಮಸ್ಯೆಯಿಂದ ಶಿಕ್ಷಣದಿಂದ ವಂಚಿತರಾಗಬರದೆಂಬ ಉದ್ದೇಶದಿಂದ ಇಬ್ಬರೂ ವಿದ್ಯಾರ್ಥಿನಿಯರಿಗೆ ಫೀಸು ಕಟ್ಟಲು ನೆರವಾಗಿದ್ದಾರೆ ಮತ್ತೆ ಯಾರಾದರೂ ಬಡ ವಿದ್ಯಾರ್ಥಿಗಳಿದ್ದಾರೆ ನನ್ನ ಗಮನಕ್ಕೆ ತನ್ನಿ ಕೈಲಾದಷ್ಟು ಸಹಾಯ ಮಾಡುತ್ತೇನೆ ಎಂದು ಶಿಕ್ಷಕರ ಬಳಿ ಹೇಳಿದ್ದಾರೆ. ಹೀಗೆಯೇ ನಮಗೆ ಗೊತ್ತಿಲ್ಲದೇ ಅದೆಷ್ಟೋ ವಿದ್ಯಾರ್ಥಿಗಳಿಗೆ ಸಹಾಯ ಮಾಡಿರಬಹುದು. ಬಲಗೈಯಲ್ಲಿ ಕೊಟ್ಟರೆ ಎಡಗೈ ಗೆ ಗೊತ್ತಾಗಬರದು ಮರಯ ಅಂತಾರೆ. ಬ್ರೈನ್ ಆಪರೇಶನ್ ಗಾಗಿ ಅರ್ಥಿಕ ಸಮಸ್ಯೆಯಿಂದ ಕಂಗೆಟ್ಟ ಗೆಳಯನಿಗೆ ಶಿಕ್ಷಣ ಸಚಿವವರ ಮನವೊಲಿಸಿ ಸಚಿವರ ಸಹಯೋಗದೊಂದಿಗೆ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ 2 ಲಕ್ಷ ರೂ ಗಳ ಅನುದಾನವನ್ನು ಮಾಡಿಕೊಟ್ಟು ಕಣ್ಣೀರು ಒರೆಸುವ ಕಾರ್ಯ ಮಾಡಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಯಾರಿಗೂ ಗೊತ್ತಾಗದಾಗೇ ಗುಟ್ಟಾಗಿ ಹೆಚ್ಚಿನವರಿಗೆ ಆಹಾರ ಕಿಟ್ ನ್ನು ನೀಡಿ ಅಶಕ್ತರಿಗೆ ಬೆಳಕಾಗಿದ್ದಾರೆ.

ಸ್ನೇಹಿತರ ಜೊತೆ ಸೇರಿ ಮುಂದಾಳತ್ವದಲ್ಲಿ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿ.ಪ್ರಾ.ಶಾಲೆ ಖಾರ್ವಿಕೇರಿ ಗಂಗೊಳ್ಳಿ ಶಾಲೆಗೆ ಒಂದೊಮ್ಮೆ ಕಂಪ್ಯೂಟರ್ ನೀಡಿದಲ್ಲದೆ ತಾನು ಕಲಿತ ಶಾಲೆಯ ಋಣವ ತಿರಿಸಬೇಕು ನನ್ನ ಶಾಲೆಗೆ ಏನದಾರೂ ಕೊಡಬೇಕೆಂಬ ಉದ್ದೇಶದಿಂದ ಇಂದು ಎರಡು ಶಾಲೆಗೆ ಸೇರಿಸಿ ಉತ್ತಮ ಗುಣಮಟ್ಟದ ಒಟ್ಟು 200 ಶಾಲಾ ಬ್ಯಾಗ್ ಗಳನ್ನು ವಿತರಿಸಲಾಯಿತು ಇಂತಹ ಸಾತ್ವಿಕ ಮನೋಭಾವ ಪ್ರತಿಯೊಂದು ಹಳೆ ವಿದ್ಯಾರ್ಥಿ ಮನದಲ್ಲಿ ಮೂಢಿದರೆ ಸರಕಾರ ಸೌಲಭ್ಯಗಳ ಕಾಯುವ ಅಗತ್ಯವೇ ಇರಲ್ಲ.

ಇನ್ನಷ್ಟು ಮತ್ತಷ್ಟು ಅಶಕ್ತರಿಗೆ ಸೇವೆ ಮಾಡುವ ಶಕ್ತಿ ದೇವರು ನಿಮಗೆ ಅನುಗ್ರಹಿಸಲಿ ಎಂದು ದೇವರಲ್ಲಿ ಬೇಡುತ್ತ ಹಾಗೂ ನನ್ನನ್ನು ಅತಿಥಿಯಾಗಿ ಕರೆದು ಗೌರವಿಸಿದ ನಿಮಗೂ ಹಾಗೂ ಶಾಲಾ ಮಂಡಳಿಯವರಿಗೂ ಹೃತ್ಪೂರ್ವಕ ಧನ್ಯವಾದಗಳು🙏.

– ಹೆಬ್ಬುಲಿ ರಮ್ಮಿ

Leave a Reply

Your email address will not be published. Required fields are marked *