ರಾಷ್ಟ್ರಮಟ್ಟದ ಕಲೋತ್ಸವಕ್ಕೆ ನಿಯತಿ ಖಾರ್ವಿ ಆಯ್ಕೆ

ರಾಷ್ಟ್ರಮಟ್ಟದ ಕಲೋತ್ಸವಕ್ಕೆ ನಿಯತಿ ಆಯ್ಕೆ. ಪದವಿ ಪೂರ್ವ ಶಿಕ್ಷಣ ಇಲಾಖೆಯು ಆಯೋಜಿಸಿದ್ದ 2021 22 ನೇ ಶೈಕ್ಷಣಿಕ ಸಾಲಿನ ಕಲೋತ್ಸವದ ಭರತನಾಟ್ಯ ವಿಭಾಗದಲ್ಲಿ ಕುಂದಾಪುರ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ನಿಯತಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ನಿಯತಿರವರು ಕುಂದಾಪುರ ಹೂವಯ್ಯ ಖಾರ್ವಿ ಮತ್ತು ಅಮೃತ ದಂಪತಿಗಳ ಪುತ್ರಿಯಾಗಿದ್ದಾರೆ. ಕುಂದಾಪುರ ನೃತ್ಯ ವಸಂತ ನಾಟ್ಯಾಲಯದ ವಿದುಷಿ ಪೃವೀತಾ ಅಶೋಕ್ ರವರಲ್ಲಿ 9 ವರ್ಷಗಳಿಂದ ನೃತ್ಯಾಭ್ಯಾಸವನ್ನು ಪಡೆದುಕೊಂಡಿರುತ್ತಾರೆ.

ಕೇಂದ್ರ ಸರಕಾರದ CCRT ಸ್ಕಾಲರ್ಶಿಪ್ ಪಡೆದಿರುವ ನಿಯತಿರವರು ನೃತ್ಯದಲ್ಲಿ ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆಗಳನ್ನು ಮುಗಿಸಿದ್ದಾರೆ.ಇದೀಗ ವಿದ್ವತ್ ಹಂತದ ತಯಾರಿ ಮಾಡುತ್ತಿದ್ದಾರೆ.

ರಾಜ್ಯ ಮತ್ತು ರಾಷ್ಟ್ರವಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಬಹುಮಾನ ಪಡೆದಿರುವ ನಿಯತಿ ಕಿಶೋರ ನೃತ್ಯ ಪ್ರತಿಭೆ,ನಾಟ್ಯಮಂದಾರ,ನಾಟ್ಯ ವರ್ಷಿಣಿ ಮುಂತಾದ ಬಿರುದುಗಳನ್ನು ಪಡೆದಿರುತ್ತಾರೆ.

2018 ರ ಗೋಪಿನಾಥ್ ದಾಸ್ ನ್ಯಾಸಾ ರೋಲಿಂಗ್ ಶೀಲ್ಡ್ ಪಡೆದುಕೊಂಡಿರುವ ಇವರು 2019 20 ನೇ ಸಾಲಿನ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಭರತನಾಟ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ.

ನೃತ್ಯ ವಸಂತ ನಾಟ್ಯಾಲಯದ ವಿದ್ಯಾರ್ಥಿಗಳೊಂದಿಗೆ ಉಡುಪಿ ರಾಜಾಂಗಣದಲ್ಲಿ,ಆಳ್ವಾಸ್ ನುಡಿಸಿರಿ, ಆಳ್ವಾಸ್ ವಿರಾಸತ್ ನಂತಹ ಪ್ರತಿಷ್ಠಿತ ವೇದಿಕೆಯಲ್ಲಿ ಭರತನಾಟ್ಯ ಪ್ರದರ್ಶನ ನೀಡಿ ಅಪಾರ ಜನಪ್ರಿಯತೆ ಪಡೆದುಕೊಂಡಿರುತ್ತಾರೆ.

ಕೊಂಕಣಿ ಖಾರ್ವಿ ಸಮಾಜದ ಅಭಿಜಾತ ಕಲಾವಿದೆಯಾದ ನಿಯತಿರವರಿಗೆ ಮತ್ತಷ್ಟು ಯಶಸ್ಸು ಲಭಿಸಲಿ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಸಿಗಲಿ ಎಂದು ಖಾರ್ವಿ ಆನ್ಲೈನ್ ವತಿಯಿಂದ ಶುಭ ಹಾರೈಸುತ್ತೇನೆ.

TEAM www.kharvionline.com

One thought on “ರಾಷ್ಟ್ರಮಟ್ಟದ ಕಲೋತ್ಸವಕ್ಕೆ ನಿಯತಿ ಖಾರ್ವಿ ಆಯ್ಕೆ

Leave a Reply

Your email address will not be published. Required fields are marked *