ಖಾರ್ವಿ ಆನ್ಲೈನ್ Resolution 2022

ಕೊಂಕಣಿ ಖಾರ್ವಿ ಸಮಾಜ ಭಾಂಧವರೆಲ್ಲರಿಗೂ ಪ್ರೀತಿಪೂರ್ವಕ ನಮಸ್ಕಾರಗಳು.

ಕೊಂಕಣಿ ಖಾರ್ವಿ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿಮಾಧ್ಯಮ ಖಾರ್ವಿ ಆನ್ಲೈನ್ ಆಯೋಜಿಸಿರುವ Resolution 2022 ಕಿರು ವೀಡಿಯೋ ಭಾಷಣ ಸ್ಪರ್ಧೆಯ ಕುರಿತಂತೆ ವಿಷಯ ಪ್ರಸ್ತುತ ಪಡಿಸುತ್ತಿದ್ದೇವೆ.

ಈ ಕಿರು ವೀಡಿಯೋ ಭಾಷಣ ಸ್ಪರ್ಧೆ ಮೂರು ನಿಮಿಷ ಅವಧಿಯದ್ದಾಗಿದೆ.

ಸ್ಪರ್ಧಾಳುಗಳು ಕೊಂಕಣಿ ಖಾರ್ವಿ ಸಮಾಜದ ವಿದ್ಯಾರ್ಥಿಗಳಾಗಿರಬೇಕು. ಈ ಸ್ಪರ್ಧೆಯನ್ನು ಅನುಕ್ರಮವಾಗಿ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ.

ಮೊದಲನೇ ಗುಂಪು: 5 ನೇ 6 ನೇ ಮತ್ತು 7 ನೇ ತರಗತಿ ವಿಧ್ಯಾರ್ಥಿಗಳಿಗಾಗಿ; ವಿಷಯ: ನೀವುಯಾವರೀತಿಯ ಶಿಕ್ಷಣವನ್ನು_ಇಷ್ಟಪಡುತ್ತೀರಿ? Online class ಅಥವಾ ಶಾಲಾ ಶಿಕ್ಷಣ.

ಎರಡನೆಯದಾಗಿ ಗುಂಪು 8 ನೇ ತರಗತಿ 9 ನೇ ಮತ್ತು 10 ನೇ ತರಗತಿ ವಿಧ್ಯಾರ್ಥಿಗಳಿಗಾಗಿ; ವಿಷಯ:ನನ್ನಗುರಿಗಳುಅಥವಾನನ್ನಹೆತ್ತವರ_ಕನಸುಗಳು.

ಮೂರನೇಯ ಗುಂಪು: ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ; ವಿಷಯ:ನನ್ನಮಾದರಿವ್ಯಕ್ತಿರೋಲ್ಮಾಡೆಲ್ಯಾರುಮತ್ತು_ಏಕೆ?

ಕೊನೆಯದಾಗಿ, ನಾಲ್ಕನೇ ಗುಂಪು ಯಾವುದೇ ಡಿಪ್ಲೊಮಾ ಮತ್ತು ಪದವಿ ವಿದ್ಯಾರ್ಥಿಗಳಿಗಾಗಿ; ವಿಷಯ:ಮುಂದಿನಎರಡು ದಶಕಗಳಲ್ಲಿನಮ್ಮಖಾರ್ವಿಸಮಾಜಸ್ವಾವಲಂಬಿಸ್ಥಿರ ಮತ್ತುಪ್ರಗತಿಪರಸಮಾಜ ಆಗಬೇಕಾದರೆನಾವು ಮೊದಲುಗಮನಹರಿಸಬೇಕಾದಪ್ರಮುಖಮೂರು ಕ್ಷೇತ್ರಗಳುಯಾವುದು?

ಮೇಲ್ಕಾಣಿಸಿದ ನಾಲ್ಕು ಗುಂಪುಗಳಿಗೆ ಇಲ್ಲಿ ನಿರ್ದಿಷ್ಟ ವಿಷಯಗಳನ್ನು ಕೊಡಲಾಗಿದ್ದು ಮೂರು ನಿಮಿಷಗಳಿಗೆ ಮೀರದಂತೆ ಇಂಗ್ಲಿಷ್ ಅಥವಾ ಕನ್ನಡದಲ್ಲಿ ಕಿರು ವಿಡಿಯೋ ಮಾಡಿ ಸ್ಪರ್ಧೆಯಲ್ಲಿ ಭಾಗವಹಿಸಲು ಕೋರಲಾಗಿದೆ. ಸ್ಪರ್ಧೆಯಲ್ಲಿ ವೀಜೇತರಿಗೆ ಆಕರ್ಷಕ ಬಹುಮಾನವಿದ್ದು, ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಮಾಣಪತ್ರ ನೀಡಲಾಗುತ್ತದೆ.

ಈ ಸ್ಪರ್ಧೆಯ ಬಹುಮಾನಗಳ ಪ್ರಾಯೋಜಕರಾಗಿ kharvi consultancy, DDR outdoor media, Nimisys engineering, N and N corp solutions, samikshaa advertising, ReverseGaze Technologies, sSYS Technology ಈ ಸ್ಪರ್ಧೆಗೆ ತಮ್ಮ ಅಭೂತಪೂರ್ವ ಬೆಂಬಲ, ಸಹಕಾರ ನೀಡಿದ್ದಾರೆ.

ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಹೆತ್ತವರಿಗೆ ಭಾಗವಹಿಸಲು ಅವಕಾಶವಿದೆ. ಆದರೆ ಮಾತನಾಡಲು ಕೇವಲ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ. ಇನ್ಯಾಕೆ ತಡ? ಇದೊಂದು ತಮ್ಮ ದೂರದೃಷ್ಟಿಯ ಚಿಂತನೆಯನ್ನು ಮತ್ತು ವಿಚಾರಶೀಲತೆಯ ಮನೋಭಾವವನ್ನು ಪ್ರಸ್ತುತ ಪಡಿಸುವ ಸುವರ್ಣಾವಕಾಶ. ಕೊಂಕಣಿ ಖಾರ್ವಿ ಸಮಾಜದ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ತಮ್ಮ ಅಮೂಲ್ಯ ಆಭಿಪ್ರಾಯಗಳನ್ನು ಮಂಡಿಸಬೇಕಾಗಿ ಪ್ರೀತಿಪೂರ್ವಕ ವಿಜ್ಞಾಪನೆ.

ತಮ್ಮಸುಂದರವಾದ ಅರ್ಥಪೂರ್ಣವಾದ ಕಿರು ವೀಡಿಯೊವನ್ನು ಇಂಗ್ಲಿಷ್ ಅಥವಾ ಕನ್ನಡದಲ್ಲಿ ವಾಟ್ಸಾಪ್ ನಂಬ್ರ 9916550448 ಗೆ ಇದೇ ತಿಂಗಳು 15 ನೇ ತಾರೀಕಿನ ಒಳಗೆ ಕಳುಹಿಸಿಕೊಡಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿಗಾಗಿ www.kharvionline.com ನ್ನು ಸಂಪರ್ಕಿಸಬೇಕಾಗಿ ಸೂಚಿಸಲಾಗಿದೆ. ತಮಗೆಲ್ಲರಿಗೂ ಹೃದಯಪೂರ್ವಕ ವಂದನೆಗಳು.

Team Kharvionline.com

Leave a Reply

Your email address will not be published. Required fields are marked *