ನಮ್ಮ ಸಮುದಾಯದ ಎಲ್ಲ ಸದಸ್ಯರಿಗೆ ಹೃತ್ಪೂರ್ವಕ ನಮನಗಳು.
KharviOnline ಆಯೋಜಿಸಿದ ಕಿರು ಭಾಷಣ ವೀಡಿಯೊ ಸ್ಪರ್ಧೆಯಲ್ಲಿ ಸಕಾರಾತ್ಮಕವಾಗಿ ಬೆಂಬಲ ನೀಡಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇವೆ.
ಕಂಚುಕೋಡು/ಗಂಗೊಳ್ಳಿ ಮತ್ತು ಕಾಸರಗೋಡು/ಹೊನ್ನಾವರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಿಕೆಯನ್ನು ಕಂಡು ನಮಗೆ ತುಂಬಾ ಸಂತೋಷವಾಯಿತು.
ಹಾಗೆ ನಮಗೆ ಉತ್ತೇಜನ ನೀಡಿದ ಅಂಶವೆಂದರೆ , ಈ ಬಾರಿ ಮುಂಬೈ ಮತ್ತು ಕಾರವಾರದಿಂದಲೂ ನಮ್ಮ ಸಮುದಾಯದ ಮಕ್ಕಳು ಭಾಗವಹಿಸಿದ್ದು, ಆ ಪ್ರದೇಶಗಳಿಂದ ಮುಂದೆ ಮತ್ತಷ್ಟು ಭಾಗವಹಿಸುವಿಕೆಯನ್ನು ನೀರಿಕ್ಷಿಸುತ್ತೆವೆ.
KharviOnline ಸಮುದಾಯದ ಯುವಕರ ಮತ್ತು ಮಕ್ಕಳ ಅಭಿವೃದ್ಧಿಗಾಗಿ ನೆಡೆಸುವ ಡಿಜಿಟಲ್ ಕಾರ್ಯಕ್ರಮಗಳಲ್ಲಿ ಮತ್ತು ಚಟುವಟಿಕೆಗಳ ಹಿಂದಿನ ಮೂಲ ಉದ್ದೇಶವನ್ನು ಅರ್ಥಮಾಡಿಕೊಂಡು ಯಾವಾಗಲೂ ತುಂಬಾ ಉತ್ಸಾಹದಿಂದ ಭಾಗವಹಿಸುತ್ತಿರುವುದಕ್ಕಾಗಿ ನಮ್ಮ ಬೆಂಗಳೂರು ಸಮುದಾಯದ ಸದಸ್ಯರಿಗೆ ನಾವು ಯಾವಾಗಲೂ ಕೃತಜ್ಞರಾಗಿರುತ್ತೇವೆ.
ಕಾರ್ಯಕ್ರಮದ ಎಲ್ಲಾ ಪ್ರಾಯೋಜಕರಿಗೆ ನಾವು ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಇಂತಹ ಸಮುದಾಯ ಆಧಾರಿತ ಕಾರ್ಯಕ್ರಮಗಳನ್ನು ನಡೆಸಲು ನಿಮ್ಮ ಬೆಂಬಲ ಬಹಳಷ್ಟಿದೆ.
Team-KharviOnline ಈ ಬಾರಿ ತಮ್ಮ ಕ್ಷೇತ್ರದ ಮಕ್ಕಳನ್ನು ಪ್ರೇರೇಪಿಸುವ ಮತ್ತು ಪ್ರೋತ್ಸಾಹಿಸುವ ಮೂಲಕ ಅದ್ಭುತವಾದ ಕಾರ್ಯಕ್ರಮವನ್ನು ಸಜ್ಜುಗೊಳಿಸುವ ಚಟುವಟಿಕೆಯನ್ನು ಮಾಡಿದೆ, ಅವರಿಗೆ ಅಭಿನಂದನೆಗಳು ಮತ್ತು ನಾವು ಒಂದು ತಂಡವಾಗಿ, ನಾವು ಇಂತಹ ಹೆಚ್ಚಿನ ಕಾರ್ಯಕ್ರಮಗಳನ್ನು ನಡೆಸಲು ಎದುರುನೋಡುತ್ತೇವೆ.
ಈ ವೀಡಿಯೊಗಳ ಮೂಲಕ ನಮ್ಮ ಸಮುದಾಯದ ಮಕ್ಕಳು ಹಂಚಿಕೊಂಡ ಆಲೋಚನೆಗಳು “ಖಾರ್ವಿ ಯುವಕರ ಧ್ವನಿ” ಮತ್ತು ಅವರ ಅಭಿಪ್ರಾಯಗಳು ಎಲ್ಲ ಜವಾಬ್ದಾರಿಯುತ ಹೀರಿಯರಿಗೆ ಕೇಳಿಬರುತ್ತವೆ ಎಂದು ನಾವು ನಂಬಿದ್ದೇವೆ!
ಕೊನೆಯದಾಗಿ, ಈ ಮಕ್ಕಳು ತಮ್ಮ ಜೀವನದ ಪ್ರತಿಯೊಂದು ಅಂಶದಲ್ಲೂ ತಮ್ಮ ವೀಡಿಯೊಗಳಲ್ಲಿ ಇರುವಂತೆಯೇ ಆತ್ಮವಿಶ್ವಾಸದಿಂದ ಇರುವಂತೆ ನಾವು ಪ್ರೋತ್ಸಾಹಿಸುತ್ತೇವೆ ಮತ್ತು ಉತ್ತಮ ವೈಯಕ್ತಿಕ ಯಶಸ್ಸನ್ನು ಸಾಧಿಸಲಿ ಎಂದು ಹಾರೈಸುತೇವೆ ಹಾಗೆ ಮುಂದೆ ಅವರೆಲ್ಲ ಸೇರಿ ಒಂದು ಸ್ವಾವಲಂಬಿ, ಸ್ಥಿರ ಮತ್ತು ಪ್ರಗತಿಶೀಲ ಖಾರ್ವಿ ಸಮಾಜವನ್ನು ನಿರ್ಮಿಸಲಿ ಎಂದು ಕೋರುತೇವೆ.
Team Kharvionline.com