ಕಿರು ವಿಡಿಯೋ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆಯ ಅವಿಸ್ಮರಣೀಯ ಕಾರ್ಯಕ್ರಮ

ಖಾರ್ವಿ ಆನ್ಲೈನ್ ಆಯೋಜಿಸಿದ್ದ ಕಿರು ವೀಡಿಯೋ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಮತ್ತು ಸ್ಪರ್ಧೆಯಲ್ಲಿ ಭಾಗಿಯಾದ ನಮ್ಮ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಅವರ ಮನೆ ಮತ್ತು ಶಾಲೆಗಳಿಗೆ ಹೋಗಿ ಬಹುಮಾನ ವಿತರಣೆ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಖಾರ್ವಿ ಆನ್ಲೈನ್ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಟೀಮ್ ಖಾರ್ವಿ ಆನ್ಲೈನ್ ನ ಸುಧಾಕರ ಖಾರ್ವಿ, ರವಿ ಟಿ ನಾಯ್ಕ್, ರಾಮಪ್ರಸನ್ನ ಖಾರ್ವಿ, ನಾಗರಾಜ್ ಖಾರ್ವಿ, ಭಟ್ಕಳ, ರಮೇಶ್ ಖಾರ್ವಿ ಗಂಗೊಳ್ಳಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಈ ಸ್ಪರ್ಧೆಯಲ್ಲಿ ಕರ್ನಾಟಕ ಮತ್ತು ಮುಂಬೈಯಿಂದ ಕೊಂಕಣಿ ಖಾರ್ವಿ ಸಮಾಜದ ವಿದ್ಯಾರ್ಥಿಗಳು ಬಲು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದುಕೊಟ್ಟಿದ್ದರು.

ಗಂಗೊಳ್ಳಿ, ಕಂಚಗೋಡು, ಭಟ್ಕಳ, ಕಾಸರಕೋಡು ಟೊಂಕ, ಹೊನ್ನಾವರದಲ್ಲಿ ವಿದ್ಯಾರ್ಥಿಗಳ ಮನೆಗೆ ಮತ್ತು ಶಾಲೆಗಳಿಗೆ ತೆರಳಿ ಅರ್ಥಪೂರ್ಣವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಗಂಗೊಳ್ಳಿ ಖಾರ್ವಿಕೇರಿ ಶಾಲೆಯಲ್ಲಿ ಸ್ಪರ್ಧಾವಿಜೇತ ಮಕ್ಕಳಿಗೆ ನಗದು ಬಹುಮಾನ ಮತ್ತು ಸರ್ಟಿಫಿಕೇಟ್ ವಿತರಿಸುವ ಸರಳ ಕಾರ್ಯಕ್ರಮವನ್ನು ಶಾಲಾ ಅಧ್ಯಾಪಕರ ಸಹಯೋಗದಲ್ಲಿ ಏರ್ಪಡಿಸಲಾಗಿತ್ತು. ಹೊನ್ನಾವರ ಕಾಸರಕೋಡು ಟೊಂಕದಲ್ಲಿ ಏರ್ಪಡಿಸಲಾಗಿದ್ದ ಬಹುಮಾನ ವಿತರಣೆ ಮತ್ತು ಸರ್ಟಿಫಿಕೇಟ್ ವಿತರಿಸುವ ಸಮಾರಂಭದಲ್ಲಿ ವಿದ್ಯಾರ್ಥಿಗಳ ಹೆತ್ತವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಲು ಸಮಾಜದಿಂದ ಸಹಕಾರ ದೊರಕಬೇ‌ಕು ಎಂದು ಕೇಳಿಕೊಂಡರು. ಸಮಾಜದ ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರತರಲು ಖಾರ್ವಿ ಆನ್ಲೈನ್ ಮಾಡುತ್ತಿರುವ ಅವಿರತ ಪ್ರಯತ್ನವನ್ನು ಗಂಗೊಳ್ಳಿ ಶಾಲೆಯ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಪೋಷಕರು ವಿಶೇಷವಾಗಿ ಶ್ಲಾಘಿಸಿದರು.

ಬೆಂಗಳೂರಿನಲ್ಲಿ ಈ ಸ್ಪರ್ಧೆಯ ವೀಜೇತರಿಗೆ ಕೊಂಕಣಿ ಖಾರ್ವಿ ವಿದ್ಯಾವೇದಿಕೆಯ ಮುತುವರ್ಜಿಯಲ್ಲಿ ಬಹುಮಾನ ವಿತರಣೆ ಮತ್ತು ಪ್ರಶಸ್ತಿ ವಿತರಣೆ ಮಾಡಲಾಗಿತ್ತು. ವಿಜೇತರಾದ ಸ್ಪರ್ಧಾಳುಗಳನ್ನು TEAM kharvionline ನ S.K.Naik ರವರ ನೇತೃತ್ವದಲ್ಲಿ ಬೆಂಗಳೂರಿನ ಕೊಂಕಣಿ ಖಾರ್ವಿ ವಿದ್ಯಾವೇದಿಕೆಯ ಅಧ್ಯಕ್ಷರಾದ ಶ್ರೀಯುತ ಸುರೇಶ ಖಾರ್ವಿ, ಸದಸ್ಯರಾದ ಶ್ರೀ ಗೋಪಾಲ್ ಕೋಟಾನ್ ಹಾಗೂ ಶ್ರೀ ರವಿರಾಮ್ ಖಾರ್ವಿಯವರು ಸ್ಪರ್ಧಾ ವಿಜೇತರ ನಿವಾಸಕ್ಕೆ ಭೇಟಿ ನೀಡಿ ಬಹುಮಾನ, ಸರ್ಟಿಫಿಕೇಟ್ ಹಾಗೂ ಪುಷ್ಪಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದರು. ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ವಿದ್ಯಾವೇದಿಕೆಯ ಎಲ್ಲಾ ಪಧಾಧಿಕಾರಿಗಳಿಗೆ ಟೀಮ್ ಖಾರ್ವಿ ಆನ್ಲೈನ್ ಕೃತಜ್ಞತೆಗಳನ್ನು ಸಲ್ಲಿಸುತ್ತದೆ.

ಕೊಂಕಣಿ ಖಾರ್ವಿ ಸಮಾಜದ ವತಿಯಿಂದ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಎಲ್ಲಾ ಕಡೆಯಿಂದಲೂ ಶ್ಲಾಘನೀಯ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು ಸಮಾಜದ ವಿದ್ಯಾರ್ಥಿಗಳ ಉದಯೋನ್ಮುಖ ಮತ್ತು ಉತ್ಕರ್ಷಕ್ಕಾಗಿ ಇಂತಹ ಸಮಾಜಮುಖಿ ಕಾರ್ಯಕ್ರಮಗಳು ಹೆಚ್ಚಚ್ಚು ಮೂಡಿ ಬರಬೇಕು ಎಂಬುದು ಸಾರ್ವರ್ತಿಕ ಅಭಿಪ್ರಾಯವಾಗಿರುತ್ತದೆ.ಈ ಅವಿಸ್ಮರಣೀಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮತ್ತು ತುಂಬುಹೃದಯದ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಖಾರ್ವಿ ಆನ್ಲೈನ್ ಧನ್ಯವಾದಗಳನ್ನು ಅರ್ಪಿಸುತ್ತದೆ.

Team Kharvionline.com

Leave a Reply

Your email address will not be published. Required fields are marked *