ಜೂನ್ 01 1944 ಇಂತು ಕುಂದಾಪುರಾಜೆ ಕೋಡಿಬೆಂಗಂತು ಹಾಂಗೆಲೆ ಜನನ್ ಜಾಲೆಂ 1962 ಇಂತು ಅಂಚೆ ಇಲಾಖೇತು ಗ್ರಾಮೀಣ್ ಅಂಚೆ ನೌಕರ ಜಾವನು ಕೇಂದ್ರ ಸರ್ಕಾರಿ ಸೇವಾ ಶುರು ಕೆಲಿಂ, ಪ್ರಸ್ತುತ ನಿವೃತ್ತಿ ಜೀವನ ಚಲಯ್ಕೆ ಅಸ್ಸಾ ಕೊಂಕಣಿ ಲೋಕವೇದಾ ಕ್ಷೇತ್ರಾಂತು ತಾಂಗೆಲೆ ಬಾಲ್ಯಾಥಾವ್ನ್ ಆಸಕ್ತಿ ವ್ಯಕ್ತಿ ಕೋಡಿ ಬೆಂಗ ಯುವಜನಾಂಕ್ ಒಟ್ಟು ಕೋರ್ನು, ಸಂಘಟನ್ ಬಾಂದುನ್ ಖಾರ್ವಿ ಲೋಕಾರ ಲೋಕವೇದ್ ಆನಿ ಧಾರ್ಮಿಕ ಆಚರಣೆ ಉರೊವ್ಯಾ ಖಾತಿರ್ ಮಾಲ್ಗಡ್ಯಾ ಥಾವ್ನ್ ತರಬೇತಿ ದೀಂವ್ಕ್ ಸುರು ಕೆಲೆಂ ಮುಖಾರಿ ಕುಂದಾಪುರ, ಕಾರವಾರ, ಹಳದಿಪುರ, ಎರ್ಮಾಳ, ಬ್ರಹ್ಮಾವರ ಪರಿಸರಾಂತು ಖಾರ್ವಿ ಸಂಘಟನ್ ಸ್ಟಾಪನ್ ಕೋರ್ನು ಖಾರ್ವಿ ಲೋಕಾಲೆ ಲೋಕ್ ನೇದ್ ಊರೊಂದೈ, ವಾಪರ್ಚೆ ಕಾಮ್ ಅಭಿಯಾನ ರೂಪಾರಿ ಶುರು ಕೆಲೆಂ, ಖಾರ್ವಿ ಸಮಾಜಾಚ ಬಾಯ್‌ಮನ್ಯಾಂಕ್ ಹೋಳಿ ಹೊರ್ದೇಚೆ ನಡೆ ತರ್ಬೇತಿ ದೀವ ತಾಂಕಾಯಿ ಅವ್ಯಾಸ್ ದೀಂದ್ರ ಶುರು ಕೆಲೆಂ ಖಾರ್ವಿ ಜನಾಂಗಚೆ ಮುಖಾವಿಯಲ್ಲಿ ಪ್ರಜೆ ಚೆರ್ಡುವಂಕ್ ಒಟ್ಟು ಕೋರ್ನು ನಾಚ್, ತೊನಿಯಾ ನಾಚ್, ಹೋಳಿ ಕಥಾ, ಲೋಕ್ ದೇವ್ ಗಾಯನ/ಗೀತಾಂ ತರ್ಬೇಸ್ ದಿತ್ತೇ ಅಸ್ಸಾ ಖಾರ್ವಿ ಲೊಕಾಲೆ ಲೋಕ್‌ವೇದ್ ಆನಿಕೀ ಜೀವಂತ್ ಆಸಾ ಮ್ಹಣ್ ಜಾಲ್ಯಾರಿ ತಾಕ್ಕಾ ಮಾಧವ ಖಾರ್ವಿ ಹಾನ್ನಿ ದಿಲ್ಲೆ ಯೋಗ್ಯ ದಾನ್ ಪ್ರಮುಖ ಜಾವಾಸಾ ತಾಂಗೆಲೆ ಹೆ ಜೀವಮಾನಾಡ ಕೊಂಕಣಿ ಲೋಕ್ವೇದ ಸೇವಾ ಖಾತಿರ್, ಕರ್ನಾಟಕ ಕೊಂಕಣಿ ಸಾಹಿತ್ಯ ಆಕಾಡೆಮಿಚಂ 2021 ವ್ಯಾ ವರ್ಸಾಚಿ ಕೊಂಕಣಿ ಲೋಕ್‌ವೇದ್ ಗೌರವ ಪ್ರಶಸ್ತಿ ದೀವ್ ಮಾನ್ ಕರುಂಕ್ ಖುಷಿ
ಶ್ರೀಯುತರು 1.06.1944 ರಂದು ಕುಂದಾಪುರದ ಕೋಡಿಬೆಂಗ್ರೆಯಲ್ಲಿ 1962 ರಲ್ಲಿ ಅಂಚೆ ಇಲಾಖೆಯಲ್ಲಿ ಗ್ರಾಮೀಣ ಅಂಚೆ ನೌಕರನಾಗಿ ಸೇವೆಗೆ ಸೇರಿ ಪ್ರಸ್ತುತ ನಿವೃತ್ತಿ ಜೀವನ ನಡೆಸುತ್ತಿದ್ದಾರೆ. ಕೊಂಕಣಿ ಜಾನಪದದ ಬಗ್ಗೆ ಬಾಲ್ಯದಿಂದಲೇ ಆಸಕ್ತಿ ಹೊಂದಿರುವ ಇವರು ಕೋಡಿ ಬೆಂಗ್ರೆ ಯವಕರ ಸಂಘಟನೆಯನ್ನು ಕಟ್ಟಿಕೊಂಡು ಖಾರ್ವಿ ಜಾನಪದ ಕಲೆ ಹಾಗೂ ಖಾರ್ವಿ ಧಾರ್ಮಿಕ ಆಚರಣೆಗಳು ಕುರಿತು ಹಿರಿಯ ನುರಿತರಿಂದ ತರಬೇತಿಯನ್ನು ನಡೆ ಖಾರ್ವಿ, ಜಾನಪದವನ್ನು ಉಳಿಸುವ ಕಾರ್ಯಕ್ಕೆ ಮುಂದಾದರು. ಮುಂದೆ ಕುಂದಾಪುರ, ಕಾರವಾರ, ಹಳೆವಿದುರ, ಎರ್ಮಾಳ, ಬ್ರಹ್ಮಾವರ ಪರಿಸರದಲ್ಲಿ ಖಾರ್ವಿ ಸಂಘಟನೆಯನ್ನು ಕಟ್ಟಿ ಖಾರ್ವಿ ಜಾನಪದ ಕಲೆಯನ್ನು ಉಳಿಸುವ, ಬೆಳೆಸುವ ಕಾರ್ಯ ಆರಂಭಿಸಿದರು. ಖಾರ್ವಿ ಸಮುದಾಯದ ಮಹಿಳೆಯರಿಗೆ ಹೋಳಿ ಹಬ್ಬದ ನೃತ್ಯ ತರಬೇತಿ, ಮನೆ ಮನೆಗೆ ತೆರಳಿ ಖಾರ್ವಿ ಸಮುದಾಯ, ಕೊಂಕಣಿ ಭಾಷೆ ಹಾಗೂ ಜಾನಪದ ಕಲೆಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಖಾರ್ವಿ ಜನಾಂಗದ ಮುಂದಿನ ಪ್ರಜೆಗಳಾಗುವ ಸಣ್ಣ ಮಕ್ಕಳನ್ನು ಒಟ್ಟುಗೂಡಿಸಿ ಅವರಿಗೆ ಗುಮಟೆ ನೃತ್ಯ, ಕೋಲಾಟ, ಹೋಳಿ ಕಥನ, ಜಾನಪದ ಗೀತ ಗಾಯನ ತರಬೇತಿಯನ್ನು ನೀಡುತ್ತಿದ್ದಾರೆ. ಖಾರ್ವಿ ಜಾನಪದ ಪರಂಪರೆ ಇನ್ನೂ ಜೀವಂತವಾಗಿದೆ ಎಂದರೆ ಅದಕ್ಕೆ ಶ್ರೀಯುತರು ತಮ್ಮ ಜೀವಮಾನವಿಡೀ ನೀಡಿರುವ ಕೊಡುಗೆಯೇ ಮುಖ್ಯ ಕಾರಣವೆನ್ನಬಹುದು ಕೊಂಕಣಿ ಖಾರ್ವಿ ಸಮುದಾಯದ ಪಾರಂಪರಿಕ ಆಚರಣೆ ಹಾಗೂ ಜಾನಪದಕ್ಕಾಗಿ ವಿರತ ಸೇವೆ ಸಲ್ಲಿಸುತ್ತಿರುವ ಇವರಿಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ 2021 ನೇ ಸಾಲಿನ ಕೊಂಕಣಿ ಜಾನಪದ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.