ಕೊಂಕಣಿ ಖಾರ್ವಿ ನಮ್ಮ ಹೋಳಿ ನಮ್ಮ ಹೆಮ್ಮೆ ಕೊಂಕಣಿ ಖಾರ್ವಿ ವಿದ್ಯಾ ವೇದಿಕೆ (ರಿ) ಮಂಜುನಾಥನಗರ ಬೆಂಗಳೂರು ಇವರ ವತಿಯಿಂದ ಇಂದು ಬೆಂಗಳೂರಿನ ಹೊರಭಾಗದಲ್ಲಿ ತುಮಕೂರಿನ ದೇವರಾಯನ ದುರ್ಗದಲ್ಲಿ ನಡೆದ ಹೋಳಿ ಉತ್ಸವವು ಅದ್ದೂರಿಯಾಗಿ ನಡೆಯಿತು ಮತ್ತು ಮೊದಲು ಭೋಗ ಲಕ್ಷ್ಮಿ ನರಸಿಂಹ ಸ್ವಾಮಿಯ ಆಶೀರ್ವಾದ ಪಡೆದು ನಂತರ ರಾಮತೀರ್ಥಕ್ಕೆ ಹೋದೆವು (ಜಿಂಕೆ ಅರಣ್ಯ) ನಂತರ ಅಲ್ಲಿನ 1ಕಿರು ಅರಣ್ಯದಲ್ಲಿ ಹೋಳಿ ಉತ್ಸವ ಹಾಗೂ ಮಕ್ಕಳಿಗೆ ಮಹಿಳೆಯರಿಗೆ ಮತ್ತು ಪುರುಷರಿಗೆ ವಿವಿಧ ಸ್ಪರ್ಧೆಗಳು ನಡೆಯಿತು ನಂತರ ಬಣ್ಣವನ್ನು ಎರಚಿ ಎಲ್ಲರೂ ಸಾಮೂಹಿಕವಾಗಿ ಓಕುಳಿಯನ್ನು ಆಡಿದೆವು.
2ವರ್ಷ ಬ್ರೇಕ್ ಬಿದ್ದ ಈ ನಮ್ಮ ಸಮುದಾಯದ ಹೋಳಿ ಹಬ್ಬ ವಿಜೃಂಭಣೆಯಿಂದ ನಡೆಯಿತು
ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಚಂದಗಾಣಿಸಿಕೊಟ್ಟ ನಮ್ಮ ಬೆಂಗಳೂರಿನ ಕೊಂಕಣಿ ವಿದ್ಯಾ ವೇದಿಕೆಗೆ ಹಾಗೂ ಸರ್ವ ಸದಸ್ಯರಿಗೆ ಹೃದಯಾಂತರಾಳದಿಂದ ಧನ್ಯವಾದಗಳನ್ನು ಸಮರ್ಪಿಸುತ್ತೇವೆ.