ದೇವರು ಎಲ್ಲ ಕಡೆ ತಾನು ಇರುವುದು ಸಾಧ್ಯವಿಲ್ಲ ಎಂದು ತಾಯಿ ದೇವತೆಯನ್ನು ಸೃಷ್ಟಿಸಿದ.ತಾಯಿ ಗುರುವಿನ ಸ್ಥಾನವನ್ನು ತುಂಬುತ್ತಾಳೆ,ಸ್ನೇಹಿತರ ಸ್ಥಾನವನ್ನು ತುಂಬುತ್ತಾಳೆ,ಪ್ರತಿಯೊಬ್ಬರ ಸ್ಥಾನವನ್ನು ತುಂಬುತ್ತಾಳೆ.ಆದರೆ ಅಮ್ಮನ ಸ್ಥಾನವನ್ನು ಈ ಜಗತ್ತಿನಲ್ಲಿ ದೇವರು ಕೂಡಾ ತುಂಬುವುದಿಲ್ಲ.ವಾತ್ಸಲ್ಯಮಯಿ ತಾಯಿಯ ಸ್ಥಾನದ ಹಿರಿಮೆ ಗರಿಮೆ ಅನಂತ, ಅನನ್ಯ.
ತಾಯಿ ಹಿರಿಮೆಯ ಗರಿಮೆಯ ಅತ್ಕುಷ್ಠ ದೃಷ್ಟಾಂತವನ್ನು ನಮ್ಮ ಕೊಂಕಣಿ ಖಾರ್ವಿ ಸಮಾಜದ ಮೀನುಗಾರ ಮಹಿಳೆಯಲ್ಲಿ ಕಾಣಬಹುದಾಗಿದೆ ನಮ್ಮ ಸಮಾಜದಲ್ಲಿ ಪಿತೃಪ್ರಧಾನ ವ್ಯವಸ್ಥೆಯ ಜೊತೆಗೆ ಮಾತೃಪೃಧಾನ ವ್ಯವಸ್ಥೆಯ ಪ್ರಧಾನ ಭೂಮಿಕೆ ನೆಲೆ ನಿಂತಿದೆ.ಶ್ರಮಿಕ ಬದುಕಿನ ಖಾರ್ವಿ ಸಮಾಜದ ಮೀನು ಮಾರಾಟ ಮಾಡುವ ಮಹಿಳೆಯರು ತಮ್ಮ ಕುಟುಂಬದ ಶ್ರೇಯಸ್ಸಗಾಗಿ ಗಂಧದಂತೆ ತೇಯುತ್ತಾರೆ.
ಬಿಸಿಲಿನಲ್ಲಿ ಬೆಂದು, ಮಳೆಯಲ್ಲಿ ನೆಂದು ತನ್ನ ಸಂಸಾರಕ್ಕಾಗಿ ದಣಿವರಿಯದ ಕಾಯಕ ನಡೆಸುವ ಕೊಂಕಣಿ ಖಾರ್ವಿ ಸಮಾಜದ ಮೀನು ಮಾರಾಟ ಮಹಿಳೆಯರಿಗೆ ಅಭಿನಂದನೆಗಳು. ತನ್ನ ಕೌಟುಂಬಿಕ ಜೀವನದಲ್ಲಿ ಪದಪದಗಳಲ್ಲೂ ಪಡಿಮೂಡುವಂತೆ ಪಲ್ಲವಿಸಿ ಜೀವನ್ಮುಖಿ ಪಯಣದ ಗಮ್ಯದತ್ತ ತನ್ನನ್ನು ಸಮರ್ಪಿಸಿಕೊಳ್ಳುವ ಕೊಂಕಣಿ ಖಾರ್ವಿ ಸಮಾಜದ ಮೀನು ಮಾರುವ ಮಹಿಳೆಯರಿಗೆ ವಿಶ್ವ ತಾಯಂದಿರ ದಿನಾಚರಣೆಯ ದಿನದಂದು ಹೃದಯಸ್ಪರ್ಶಿ ಶುಭಾಶಯಗಳನ್ನು ಖಾರ್ವಿ ಆನ್ಲೈನ್ ಗೌರವಪೂರ್ವಕವಾಗಿ ಸಲ್ಲಿಸುತ್ತದೆ.
www.kharvionline.com