ಪ್ರಸ್ತುತ ಕಾಲಘಟ್ಟದ ದಿನಮಾನಗಳಲ್ಲಿ ಸಮಾಜವೊಂದು ತನ್ನ ಆಸ್ಮಿತೆಯನ್ನು ಉಳಿಸಿಕೊಳ್ಳಬೇಕಾದರೆ ಪ್ರಬಲವಾದ ರಾಜಕೀಯ ನೆಲೆಗಟ್ಟು ಅನಿರ್ವಾಯತೆ ಇದೆ.ಆದರೆ ನಮ್ಮ ಕೊಂಕಣಿ ಖಾರ್ವಿ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ಬಹಳ ಕಡಿಮೆ.ಹಾಗಾಗಿ ನಾವು ಪ್ರತಿಯೊಂದು ಕ್ಷೇತ್ರದಲ್ಲೂ ಹಿಂದುಳಿದಿದ್ದೇವೆ.ಪ್ರತಿಯೊಂದು ಸಮಾಜವೂ ಅಭಿವೃದ್ಧಿ ಹೊಂದಿರಬೇಕಾದರೆ ನಾವು ಯಾಕೆ ಹಿಂದೆ ಬಿದ್ದಿದ್ದೇವೆ ಎಂಬ ಪ್ರಶ್ನೆಯೊಂದಿಗೆ ಚಿಂತನೆ ನಡೆಸಬೇಕಾಗಿದೆ.ಅದಕ್ಕೆ ಇದೀಗ ಸೂಕ್ತಕಾಲ ಒದಗಿ ಬಂದಿದೆ.ಪ್ರತಿಯೊಂದು ಪಕ್ಷಗಳು ನಮ್ಮ ಸಮಾಜವನ್ನು ಕೇವಲ ದಾಳವನ್ನಾಗಿ ಬಳಸಿಕೊಂಡಿದ್ದು ನಮ್ಮ ಸಮಾಜದ ಆಶೋತ್ತರಗಳಿಗೆ ಸ್ಪಂದಿಸಿಲ್ಲ ಎಂಬುದು ವಿಷಾದದ ಸಂಗತಿ.ಈ ನಿಟ್ಟಿನಲ್ಲಿ ವಿವಿಧ ರಾಜಕೀಯ ಪಕ್ಷಗಳಲ್ಲಿ ಸಕ್ರಿಯರಾಗಿರುವ ನಮ್ಮ ಸಮಾಜದ ರಾಜಕೀಯ ಪಟುಗಳು ಪಕ್ಷ ಬೇಧ ಮರೆತು ಏಕೀಕೃತ ಮನಸ್ಥಿತಿಯಿಂದ ಸಮಾಜದ ಅಭಿವೃದ್ಧಿಗಾಗಿ ಕಂಕಣಬದ್ದರಾಗಬೇಕಾದ ಸಂಕ್ರಮಣ ಕಾಲಘಟ್ಟದಲ್ಲಿ ನಾವಿದ್ದೇವೆ.
ಸಮಾಜದ ಅಭಿವೃದ್ಧಿಯ ಮೂಲಮಂತ್ರದೊಂದಿಗೆ ನಾವೆಲ್ಲರೂ ಸೈಂಧಾತಿಕ ಬಿನ್ನ ನಿಲುವುಗಳನ್ನು ಬದಿಗಿಟ್ಟು ಒಂದಾಗಿ ದುಡಿಯಬೇಕಾಗಿದೆ. ಸಮಾಜದ ಒಳಿತಿಗಾಗಿ ಸರ್ವರೂ ರಾಜಕೀಯ ಅವಕಾಶಗಳನ್ನು ಸಾವಾಕಾಶವಾಗಿ ಬಳಸಿಕೊಂಡು ಮುನ್ನಡೆಯಬೇಕಾಗಿರುವುದು ಇಂದಿನ ತುರ್ತು ಅಗತ್ಯವಾಗಿದೆ.
ಈ ನಿಟ್ಟಿನಲ್ಲಿ ಸಮಾಜವನ್ನು ಜಾಗೃತಗೊಳಿಸಲು ಖಾರ್ವಿ ಆನ್ಲೈನ್ ಕೊಂಕಣಿ ಖಾರ್ವಿ ಸಮಾಜದ ರಾಜಕೀಯ ಬೆಳವಣಿಗೆ ಮತ್ತು ಆಸ್ಮಿತೆಗಾಗಿ “ಯುವ ಆನಿ ರಾಜಕೀಯ” ವಿಷನ್ 2030 ಎಂಬ ಶೀರ್ಷಿಕೆಯಡಿಯಲ್ಲಿ ಚಿಂತನ ಮಂಥನ ಚರ್ಚಾಕೂಟ ಹಮ್ಮಿಕೊಂಡಿದ್ದು ಸಮಾಜದ ಸರ್ವರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಕಳಕಳಿಯ ವಿಜ್ಞಾಪನೆ.
Team kharvionline.com