ಸ್ಥಳೀಯ ನಾಗರಿಕರನ್ನು ಆಕ್ರಮವಾಗಿ ಬಂಧನದಲ್ಲಿರಿಸಿ ಕಾಸರಕೋಡ ಕಡಲ ತೀರದಲ್ಲಿ ಪಾರಂಪರಿಕ ಮೀನುಗಾರರ ಮತ್ತು ಸ್ಥಳೀಯ ಪರಿಸರದ ಹಿತಕ್ಕೆ ಮಾರಕವಾಗುವಂತೆನಿಯಮ ಬಾಹಿರವಾಗಿ ಮತ್ತುಅಕ್ರಮವಾಗಿ ರಸ್ತೆ ಕಾಮಗಾರಿ ನಡೆಸುವ ಸ್ಥಳೀಯ ಆಡಳಿತದ ಆತುರದ ಬಲವಂತದ ಹಿಂಬಾಗಿಲಪ್ರಯತ್ನವು ಇಲ್ಲಿಯ ನಾಗರಿಕ ಹಕ್ಕುಗಳ ಮೇಲೆ ನಡೆದಿರುವ ದೌರ್ಜನ್ಯವಾಗಿದೆ. ಕಾನೂನಿನ ರಕ್ಷಣಿ ಮಾಡಬೇಕಾದವರೇ ಇಲ್ಲಿಕಾನೂನನ್ನು ಉಲ್ಲಂಘಿಸಿದ್ದಾರೆ. ಇಲ್ಲಿ ಬೇಲಿಯೇ ಎದ್ದು ಹೊಲ ಮೆಂದಿದೆ. ಜನರಿಗೆ ಸಾಮಾಜಿಕ ನ್ಯಾಯ ನೀಡಬೇಕಾದ ಜವಾಬ್ದಾರಿ ನಿರ್ವಹಿಸಬೇಕಾದವರಿಂದಲೇ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ನಡೆದಿರುವದು ಖಂಡನೀಯ ಸಂಗತಿಯಾಗಿದೆ ಎ೦ದು ರಾಜ್ಯದ ಮಾನವ ಹಕ್ಕು ಹೋರಾಟ ಕಾರ್ಯಕರ್ತೆ ಬೆಂಗಳೂರಿನ ರಜನೀಶ ಸಂತೋಷ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ಅವರು ರಾಜ್ಯದ ವಿವಿದೆಡೆಯಿಂದ ಅಗಮಿಸಿದ ಮಾನವ ಹಕ್ಕು ಹೋರಾಟ ಕಾರ್ಯಕರ್ತರೊಂದಿಗೆ ಕಾಸರಕೋಡ ಟೊಂಕ ಪ್ರದೇಶಕ್ಕೆ ಭೇಟಿ ನೀಡಿ ವಿವಾದಿತ ವಾಣಿಜ್ಯ ಬಂದರು ಯೋಜನೆಯ ಕುರಿತುಸ್ಥಳೀಯರ ಸಭೆ ನಡೆಸಿ ಮಾಹಿತಿ ಸಂಗ್ರಹಿಸಿ ಮಾತನಾಡಿದರು. ವಿದ್ದೇಶಿತ ವಾಣಿಜ್ಯ ಬಂದರು ಯೋಜನೆಯಿಂದ ಸ್ಥಳೀಯರ ಜೀವನೋಪಾಯಕ್ಕೆ ಮತ್ತು ಇಲ್ಲಿಯ ಅಪರೂಪದ ಸುಂದರ ಪರಿಸರಕ್ಕೆ ಅಪಾಯ ಇರುವದು ಗೊತ್ತಿದ್ದೂ ಹೇಗಾದರೂ ಸರಿ, ಯೋಜನೆಯನ್ನು ಅನುಷ್ಠಾನಿಸಿಯೇ ತೀರುತ್ತೇವೆ ಎನ್ನುವದು ಅತಿರೇಖದ ಪರಮಾವಧಿಯಾಗಿದೆ. ಪರಿಸರ ಮತ್ತು ಕಡಲತೀರದ ಪಾರಂಪರಿಕ ಮೀನುಗಾರರ ಹಿತರಕ್ಷಣೆಗಾಗಿ ಈ ದೇಶದಲ್ಲಿ ಸಿ ಆರ್ ಜೆಡ್ ಸಹಿತ ಹಲವು ಕಾನೂನುಗಳಿವೆ. ಜನರಿಗೊಂದು ,ಉದ್ಯಮಿಗಳಿಗೆ ಇನ್ನೊಂದು ಬೇರೆ ಬೇರೆ ಕಾನೂನುಗಳಿಲ್ಲ. ಪರಿಸರ ಮತ್ತು ಸಾವಿರಾರು ಜನರ ಬದುಕಿಗೆ ಕೊಳ್ಳಿ ಇಟ್ಟು ಮಾನವ ಹಕ್ಕುಗಳನ್ನು ದಮನಿಸಿ ಖಾಸಗಿಯವರಿಗೆ ಉದ್ದಿಮೆ ನಡೆಸಲು ಅವಕಾಶ ನೀಡಬೇಕೆಂದು ಯಾವ ಕಾನೂನು ಹೇಳಿಲ್ಲ.
ಸ್ಥಳೀಯರ ಅಸಹಾಯಕತೆಯನ್ನು ಕೆಲವರು ದುರ್ಬಲತೆ ಎ೦ದು ತಿಳಿದುಕೊಂಡಂತಿದೆ. ನಿಯಮ ಬಾಹಿರ ಕಾಮಗಾರಿಯನ್ನುತಡೆಯುವ ಮತ್ತು ಅಕ್ರಮವನ್ನು ಪ್ರತಿಭಟಿಸುವ ಹಕ್ಕು ಜನರಿಗಿದೆ ಎ೦ದು ಮೈತ್ರಿ ಕೃಷ್ಲನ್ ತಿಳಿಸಿದರು. ಮಾನವ ಹಕ್ಕು ಕಾರ್ಯ ಕರ್ತೆ ವಿದ್ಯಾ ದಿನಕರ, ಸಂಧ್ಯಾ ಬಾಲಸುಬ್ರಹ್ಮಣ್ಯನ್, ಸ್ಥಳಿಯರೊಂದಿಗೆ ಚರ್ಚಿಸಿದರು. ಸಭೆಯಲ್ಲಿ ನೂರಾರು ಸಂಖ್ಯೆಯಲ್ಲಿ ಸ್ಥಳೀಯರು ಭಾಗವಹಿಸಿ ಮುಕ್ತವಾಗಿ ಚರ್ಚಿಸಿದರು. ಡಾ.ಪ್ರಕಾಶ ಮೇಸ್ತ, ಗಣಪತಿ ತಾಂಡೆಲ, ರಾಜು ತಾಂಡೇಲ, ಪ್ರೀತಿ ತಾಂಡೇಲ, ರೇಣುಕಾ ತಾಂಡೇಲ, ಸಚೀನ ತಾಂಡೇಲ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.