ಕಾಲದ ಜೊತೆಗೆ ಪಯಣ ಬದುಕಿನ ಅನಿರ್ವಾಯತೆ. ಕಾಲಮಿತಿಯಲ್ಲಿ ಸಾಧನೆ ಬದುಕಿನ ಅನನ್ಯತೆ. ತೊಟ್ಟ ಸಂಕಲ್ಪ,ಇಟ್ಟ ಹೆಜ್ಜೆಗಳು ಸಮಾಜಮುಖಿ ಮಜಲುಗಳ ಸಾರ್ಥಕತೆ. ನಂಬಿದ ತತ್ವಾದರ್ಶಗಳ, ಉನ್ನತ ಧೇಯ್ಯೋದ್ದೇಶವನ್ನಿಟ್ಟುಕೊಂಡು ವರ್ಷಗಳ ಹಿಂದೆ ಹುಟ್ಟಿಕೊಂಡು ಖಾರ್ವಿ ಸಮಾಜದ ಮುಖವಾಣಿಯಾಗಿ ಖಾರ್ವಿ ಆನ್ಲೈನ್ ಸಾಧನೆಯ ಹಾದಿಯಲ್ಲಿ ಬೆಳೆದು ನಿಂತಿದೆ.
ಕಾಲೇಜು ದಿನದಿಂದಲೇ ಸಮಾಜ ಸೇವೆಯಲ್ಲಿ ನಿರತನಾಗಿದ್ದು,ಉದ್ಯೋಗ ನಿಮಿತ್ತ 20 ವರ್ಷಗಳ ಹಿಂದೆ ದುಬೈಗೆ ಹೋಗಬೇಕಾಯಿತು. ಊರಿನಿಂದ ದೂರವಿದ್ದ ಈ ಸಂದರ್ಭದಲ್ಲಿ ಸಮಾಜದ ಆಗುಹೋಗುಗಳನ್ನು ತಿಳಿದುಕೊಳ್ಳಲು ತುಡಿತ ತೀವ್ರವಾಗಿತ್ತು. ಸಮಾಜದೊಂದಿಗೆ ನಿರಂತರವಾಗಿ ಸಂಪರ್ಕ ಹೊಂದುವ ಹಂಬಲದಿಂದ ಮಾಧ್ಯಮವೊಂದರ ಹುಡುಕಾಟದಲ್ಲಿದಾಗ ಮನಸ್ಸಿನಲ್ಲಿ ದಾರಿ ಸ್ಪಷ್ಟವಾಗಿ ಗೋಚರವಾಯಿತು Digitil ಮಾಧ್ಯಮ ಅಂದು Orkut ತುಂಬಾ ಪ್ರಚಲಿತದಲ್ಲಿತ್ತು. ಆ ಒಂದು ವೇದಿಕೆಯನ್ನು ಬಳಸಿಕೊಂಡು ಹದಿನೆಂಟು ವರ್ಷಗಳ ಹಿಂದೆ kharvionline ಎಂಬ ID open ಮಾಡಿ ಅದರ ಮೂಲಕ ಕೆಲವೇ ಬೆರಳೆಣಿಕೆಯಷ್ಟು ಸಮಾಜ ಭಾಂಧವರನ್ನು ಸೇರಿಸಿಕೊಂಡು ಸಮಾಜದ ಆಗುಹೋಗುಗಳ ವಿಚಾರ ವಿನಿಮಯ ಮಾಡುತ್ತಿದೆ. ತದ ನಂತರ Facebook ಮತ್ತು WhatsApp ಮೂಲಕ ಸಮಾಜದ ಜೊತೆಗೆ ನಿರಂತರವಾಗಿ ಬೆಸೆಯುವ ಉದ್ದೇಶ ಬಲವಾಗಿ ಸಮಾಜದ ಹಬ್ಬ, ಹರಿದಿನ, ಕ್ರೀಡೆ, ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳ ಬಗ್ಗೆ ನಿರಂತರವಾಗಿ ಪ್ರಕಟಿಸುತ್ತಿದ್ದೆ. ಇದೇ ಸಂದರ್ಭದಲ್ಲಿ srimahakali temple kundapura ಎಂಬ Facebook page ಗೆ ಚಾಲನೆ ದೊರಕಿತು. ಅದು ಸುಮಾರು 3634 ಜನ ಸದಸ್ಯರನ್ನು ಹೊಂದಿದ್ದು,ದೇಗುಲದ ವಿವಿಧ ಧಾರ್ಮಿಕ ವಿಧಿ ವಿಧಾನಗಳು, ಆಚರಣೆಗಳನ್ನು ಪ್ರಸರಿಸುತ್ತಾ ಪ್ರಮುಖ Facebook page ಆಗಿ ಕಾರ್ಯ ನಿರ್ವಹಿಸುತ್ತಿದೆ.
ಆದರೆ ಇದು ನಿರ್ದಿಷ್ಟ ಪರಿಮಿತಿಗೆ ಸೀಮಿತವಾಗಿದ್ದರಿಂದ ಸಮಾಜದ ಆಗುಹೋಗು, ಸಂಸ್ಕೃತಿ, ಪರಂಪರೆಗಳ ಸಮಗ್ರ ಚಿತ್ರಣವನ್ನು ಜಗತ್ತಿನ ಮುಂದೆ ಅನಾವರಣಗೊಳಿಸಬೇಕೇಂಬ ಹಂಬಲ ತೀವ್ರವಾಗಿ ಕಾಡಿದ್ದರಿಂದ ಸಮಾಜದ ಮುಖವಾಣಿಯಾಗಿ ವೆಬ್ಸೆಟ್ ಒಂದನ್ನು ಆರಂಭಿಸಬೇಕೆಂಬ ಆಲೋಚನೆ ಬಂತು. ಸುಮಾರು ಹದಿನೈದು ವರ್ಷಗಳ ಹಿಂದೆ ನನ್ನದೆಯಲ್ಲಿ ಮಡುಗಟ್ಟಿದ್ದ ಆ ಆಲೋಚನೆ, ತುಡಿತಗಳು ಕಾರ್ಯರೂಪಕ್ಕೆ ಬಂದು ಪರಿಪಕ್ವವಾಗಲು ಶುಭಮೂಹೂರ್ತವೂ ಕೂಡಿ ಬಂತು. ಕಳೆದ ವರ್ಷ ಕೋವಿಡ್ ಸಮಯದಲ್ಲಿ ಅಧಿಕೃತವಾಗಿ ಸಮಾಜದ ಹೆಮ್ಮೆಯ ಮುಖವಾಣಿಯಾಗಿ ಖಾರ್ವಿ ಆನ್ಲೈನ್ ಅನಾವರಣಗೊಂಡಿತ್ತು. ಸಮಾಜದ ಆಶೋತ್ತರಗಳಿಗೆ ಬದ್ಧವಾಗಿ ಶಿಕ್ಷಣ, ಕಲೆ, ಸಾಹಿತ್ಯ ಕ್ರೀಡೆ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಪ್ರತಿಭಾವಂತ ಸಮಾಜ ಬಂಧುಗಳನ್ನು ತೆರೆಯ ಮುಂದೆ ವಿದ್ಯುಕ್ತವಾಗಿ ಪರಿಚಯಿಸುವ ಕೈಂಕರ್ಯಗಳನ್ನು ಖಾರ್ವಿ ಆನ್ಲೈನ್ ನಡೆಸಿಕೊಂಡು ಬಂದಿದೆ.
ಅಧಿಕೃತವಾಗಿ ಅನಾವರಣಗೊಂಡ ಒಂದು ವರ್ಷಗಳ ಅವಧಿಯಲ್ಲಿ ಸಾಕಷ್ಟು ಸಾಧನೆ ಮಾಡಿದ್ದೇವೆ ಎಂಬ ಸಂತೃಪ್ತಿಯು ಇದೆ. ಸಮಾಜದ ಬಂಧುಗಳು ಖಾರ್ವಿ ಆನ್ಲೈನ್ ನ್ನು ಹೃದಯಪೂರ್ವಕವಾಗಿ ಮೆಚ್ಚಿಕೊಂಡು ಹರಸಿ, ಹಾರೈಸಿದ ಪರಿ ನಿಜಕ್ಕೂ ಅನನ್ಯ. ಇಂದು ಖಾರ್ವಿ ಆನ್ಲೈನ್ ಖಾರ್ವಿ ಸಮಾಜದ ಜೀವನಾಡಿಯಾಗಿದ್ದು ಖಾರ್ವಿ ಆನ್ಲೈನ್ ಎಂದರೆ ಖಾರ್ವಿ ಸಮಾಜ ಖಾರ್ವಿ ಸಮಾಜವೆಂದರೆ ಖಾರ್ವಿ ಆನ್ಲೈನ್ ಎಂಬ ಹಿತವಾದ ಭಾವ ಸೃಷ್ಟಿಯಾಗಿದೆ. ಹತ್ತು ಹಲವು ಸೃಜನಶೀಲ ಮನಸ್ಸುಗಳಿಗೆ ವೇದಿಕೆಯಾದ ಖಾರ್ವಿ ಆನ್ಲೈನ್ ಪ್ರತಿಭಾವಂತ ಲೇಖಕರನ್ನು ಸಮಾಜಕ್ಕೆ ಪರಿಚಯಿಸಿದೆ ಪ್ರತಿಭಾವಂತ ಲೇಖಕರಾದ ಉಮಾಕಾಂತ ಖಾರ್ವಿ ಕುಂದಾಪುರ, ನಾಗರಾಜ್ ಕಂಚಗೋಡ್, ಶ್ರೀ ರವಿಕುಮಾರ್ ಗಂಗೊಳ್ಳಿ ಮುಂತಾದ ಸಾಹಿತ್ಯ ಪ್ರತಿಭೆಗಳ ಹಲವಾರು ಮೌಲ್ಯಯುತವಾದ ಮತ್ತು ಸಮಾಜದ ಆಗುಹೋಗುಗಳ ಮೇಲೆ ಕ್ಷಕಿರಣ ಬೀರುವ ಲೇಖನಗಳು ಬೆಳಕು ಕಂಡಿದೆ.
ಇದರೊಂದಿಗೆ ಖಾರ್ವಿ ಆನ್ಲೈನ್ ಬೆನ್ನೆಲುಭಾಗಿ ಸಮಾಜವನ್ನು ಔನತ್ಯಕ್ಕೆ ಏರಿಸಬಲ್ಲ ಹಲವಾರು ಶೈಕ್ಷಣಿಕ ತಂತ್ರಜ್ಞಾನದ ಪರಿಕಲ್ಪನೆ ಗಳನ್ನು ಶ್ರೀ ರಾಮ್ ಪ್ರಸನ್ನ ಖಾರ್ವಿ ಆನ್ಲೈನ್ ನಲ್ಲಿ ಪ್ರಸ್ತುತ ಪಡಿಸಿದ್ದು ನಿಜಕ್ಕೂ ಶ್ಲಾಘನೀಯ ಸಂಗತಿಯಾಗಿದೆ. ಖಾರ್ವಿ ಸಮಾಜದ ಮುಖವಾಣಿಗಾಗಿ ಕಾರ್ಯನಿರ್ವಹಿಸುತ್ತಿರುವ ಖಾರ್ವಿ ಆನ್ಲೈನ್ ಸಮಾಜದ ವೈಶಿಷ್ಟ್ಯಪೂರ್ಣ ಆಚರಣೆ, ಸಮೃದ್ಧ ಸಾಹಿತ್ಯ ಸಂಸ್ಕೃತಿ, ಪರಂಪರೆಗಳನ್ನು ಸಮಗ್ರ ಜಗತ್ತಿಗೆ ಪರಿಚಯಿಸಿದೆ. ಧನ್ಯತಾ ಭಾವವನ್ನು ಹೊಂದಿದೆ.
ಸಮಾಜದ ಸಾಮಾಜಿಕ ಸಮಸ್ಯೆಗಳಿಗೆ ಒಂದು ಪರಿಹಾರಾತ್ಮಕ ದಾರಿಯಲ್ಲಿ ಹುಡುಕಾಟಕ್ಕೆ ನೆರವಾಗುವ ಹಲವಾರು ವೆಬ್ನಾರ್ ಗಳನ್ನು ಸಂಘಟಿಸಿ ತನ್ನ ವ್ಯಾಪ್ತಿಯಲ್ಲಿ ಮಾಡಬಹುದಾದ ಸಮಾಜಮುಖಿ ಕೆಲಸದಲ್ಲಿ ತನ್ನನ್ನು ಖಾರ್ವಿ ಆನ್ಲೈನ್ ತೊಡಗಿಸಿಕೊಂಡಿದೆ. ಈ ಎಲ್ಲಾ ಧನಾತ್ಮಕ ಪ್ರಕ್ರಿಯೆಗಳು ಖಾರ್ವಿ ಆನ್ಲೈನ್ ನ್ನು ಸಮಾಜ ಮೆಚ್ಚುವಂತೆ ಮಾಡಿದೆ. ಹೊನ್ನಾವರ ಟೊಂಕ ಜನವಿರೋಧಿ ಖಾಸಗಿ ವಾಣಿಜ್ಯ ಬಂದರು ನಿರ್ಮಾಣದ ವಿರುದ್ದ ಹೋರಾಟದಲ್ಲಿ ಸಮಾಜ ಭಾಂಧವರ ಜೊತೆಗೆ ನಿಂತು ಖಾರ್ವಿ ಆನ್ಲೈನ್ ತೀಕ್ಷ್ಣವಾದ ಸರಣಿ ಲೇಖನಗಳನ್ನು ಪ್ರಕಟಿಸಿ ನ್ಯಾಯಯುತವಾದ ಹೋರಾಟದಲ್ಲಿ ಭಾಗಿಯಾಗಿದೆ.
ನಮ್ಮ ಸಮಾಜದ ಮೂಲನೆಲಗಟ್ಟಿನ ಮುಖ್ಯಭೂಮಿಕೆಯ ಅನ್ವೇಷಣೆಗಾಗಿ ಖಾರ್ವಿ ಆನ್ಲೈನ್ ಖಾರ್ವಿ ಫೈಲ್ಸ್ ಎಂಬ ವಿಶಿಷ್ಟ ಕಾರ್ಯಸೂಚಿಯನ್ನು ಹಮ್ಮಿಕೊಂಡಿದ್ದು, ನಮ್ಮ ಸಮಾಜದ ಮೂಲದ ಬಗ್ಗೆ ಅಧ್ಯಯನ ಕೈಗೊಳ್ಳಲು ಮುನ್ನಡಿ ಇಡಲಾಗಿದೆ. ಈ ಮಹತ್ವದ ಅಧ್ಯಯನಕ್ಕೆ ಸಮಾಜ ಭಾಂಧವರೆಲ್ಲರೂ ಸಹಕಾರ, ಬೆಂಬಲ ನೀಡಬೇಕಾಗಿ ಕಳಕಳಿಯ ವಿಜ್ಞಾಪನೆ.
ಟೀಮ್ ಖಾರ್ವಿ ಆನ್ಲೈನಿನ ಎಲ್ಲಾ ಸದಸ್ಯರ ಸಹಕಾರ ಖಾರ್ವಿ ಆನ್ಲೈನ್ ಬೆಳೆಯಲು ಮುಖ್ಯ ಪಾತ್ರ ವಹಿಸಿದೆ ಎಂದು ಹೇಳಲು ಬಯಸುತ್ತೇನೆ. ಖಾರ್ವಿ ಆನ್ಲೈನ್ ಉತ್ಕರ್ಷದ ಬೆಳವಣಿಗೆಯಲ್ಲಿ ಸಂಪೂರ್ಣ ಸಹಕಾರ,ಬೆಂಬಲ ನೀಡಿದ ಶ್ರೀ ಮೋಹನ ಬನಾವಳಿಕಾರ್, ಶ್ರೀ ಪ್ರಕಾಶ ಮೇಸ್ತಾ, ಶ್ರೀ ರವಿ ಟಿ ನಾಯ್ಕ್,
ಶ್ರೀ ಉದಯ್ ಎಸ್ ಕೋಡಿ ಮುಂಬೈ, ಶ್ರೀ ಮಾಧವ ಖಾರ್ವಿ ಬ್ರಹ್ಮಾವರ, ಶ್ರೀ ನಾಗೇಶ ಖಾರ್ವಿ, ಕಂಚುಗೋಡು ಮತ್ತು ಗೆಳೆಯರು, ಶ್ರೀ S K Naik ಮತ್ತು ಕೊಂಕಣಿ ಖಾರ್ವಿ ವಿದ್ಯಾವೇದಿಕೆ ಬೆಂಗಳೂರು ಇದರ ಅಧ್ಯಕ್ಷರು ಮತ್ತು ಸರ್ವ ಸದಸ್ಯರಿಗೆ, ಕಾಸರಕೋಡ ಟೊಂಕ ಸಮಾಜ ಬಾಂದವರಿಗು ಹೃತ್ಪೂರ್ವಕ ಧನ್ಯವಾದಗಳನ್ನು ಸಮರ್ಪಿಸುತ್ತಿದ್ದೇನೆ.
ಶ್ರೀ ವೆಂಕಟೇಶ್ ಖಾರ್ವಿ escube ಮತ್ತು ನಿತ್ಯಾನಂದ ಬೋರ್ಕರ್ ಹಾಗು ಪ್ರತಿ ವೆಬ್ ನಾರ್ ಗಳ ಪ್ರಾಯೋಜಕತ್ವವನ್ನು ವಹಿಸಿಕೊಂಡು ಬೆಂಬಲಿಸಿದ ಎಲ್ಲಾ ಹೃದಯವಂತ ಪ್ರಾಯೋಜಕರಿಗೆ ತುಂಬು ಹೃದಯದ ಧನ್ಯವಾದಗಳು
ಕಳೆದ ವರ್ಷ ಮೇ ಇಪ್ಪತ್ತೇಳರಂದು ಅಧಿಕೃತವಾಗಿ ಸಮಾಜಕ್ಕೆ ಅರ್ಪಣೆಯಾದ ಖಾರ್ವಿ ಆನ್ಲೈನ್ ಗೆ ಇಂದು ವರುಷದ ಸಂಭ್ರಮ. ಈ ಸಂಭ್ರಮದ ಸುಸಂಧರ್ಭದಲ್ಲಿ ಸಮಾಜ ಭಾಂಧವರು ಖಾರ್ವಿ ಆನ್ಲೈನ್ ನ್ನು ಬೆಳೆಸಿದ ಪರಿ ಕಂಡು ನಿಜಕ್ಕೂ ಹೃದಯ ತುಂಬಿ ಬರುತ್ತದೆ. ನಮ್ಮ ಮುಂದೆ ಸವಾಲುಗಳು ತುಂಬಾ ಇದೆ ಸಮಾಜವನ್ನು ಪ್ರಗತಿಯ ಕಡೆ ಮುನ್ನಡೆಸುವ ಗುರುತರವಾದ ಜವಾಬ್ದಾರಿ ಇದೆ ಆ ಮಹತ್ತರವಾದ ನಂಬಿಕೆಯ ನೆರಳಿನಲ್ಲಿ ಖಾರ್ವಿ ಆನ್ಲೈನ್ ದೃಡವಾದ ಹೆಜ್ಜೆ ಇಡುತ್ತಿದೆ. ಇದಕ್ಕೆ ಸಮಾಜ ಭಾಂಧವರೆಲ್ಲರ ಸಹಕಾರ ಅತ್ಯಗತ್ಯ. ಈ ನಿಟ್ಟಿನಲ್ಲಿ ಎಲ್ಲರ ಮುಂದಡಿಯಿಡಲು ಸರ್ವರ ಪ್ರೀತಿ ವಿಶ್ವಾಸವು ನಮಗೆ ಪ್ರೇರಕ ಶಕ್ತಿಯಾಗಿರುತ್ತದೆ. ಸಮಾಜಮುಖಿಯಾದ ಈ ಹೆಜ್ಜೆಯಲ್ಲಿ ತಾವೆಲ್ಲರೂ ಖಾರ್ವಿ ಆನ್ಲೈನ್ ದೊಂದಿಗೆ ಸಹಕರಿಸಬೇಕಾಗಿ ವಿನಮ್ರ ವಿನಂತಿ.
ಸುಧಾಕರ್ ಖಾರ್ವಿ
Editor
www.kharvionline.com
Hearty Congratulations to your Great Vision. May God bless you Ayur, Arogya and Aishwarya to continue your Sincere effort for bringing the community together and also implementation of positive ideas for the youth of the community.