ಕೊಂಕಣಿ ಖಾರ್ವಿ ಪ್ರಗತಿಪರ ಸಂಘದ ವತಿಯಿಂದ ಅಕ್ಕಿ ವಿತರಣೆ ಕಾರ್ಯಕ್ರಮ

ಕೊಂಕಣಿ ಖಾರ್ವಿ ಪ್ರಗತಿಪರ ಸಂಘ (ರಿ). ಮದ್ದುಗುಡ್ಡೆ ಕುಂದಾಪುರ. ಉಡುಪಿ ಜಿಲ್ಲೆ.

ಸಮಾನ ಆಸಕ್ತಿ ಅಥವಾ ಉದ್ದೇಶಗಳು ಹಾಗೂ ಸಹಕಾರ ಮನೋಭಾವಗಳು ಸಂಘ ಸ್ಥಾಪನೆಯ ಪ್ರಧಾನ ಅಂಶಗಳಾಗಿವೆ. ಇದರ ಕಾರ್ಯ ನಿರ್ವಹಣೆಯಲ್ಲಿ ನಿರ್ದಿಷ್ಟ ಪಾತ್ರಗಳ ಹಾಗೂ ಸ್ಥಾನಮಾನಗಳ ಹಂಚಿಕೆಯ ಮೂಲಕ ಮಾಡುವ ಸಂಘಟನಾ ಪ್ರಕ್ರಿಯೆ ಸಂಘಕ್ಕೆ ಸ್ಥಿರತೆಯನ್ನೊದಗಿಸುತ್ತದೆ. ಸೇವಾ ಮನೋಭಾವನೆಯನ್ನು ಗಟ್ಟಿಗೊಳಿಸುವ ನೆಲೆಯಲ್ಲಿ ಸಂಸ್ಥೆಯ ಅಂಗಸಂಸ್ಥೆಯಾದ ಕೊಂಕಣಿ ಖಾರ್ವಿ ಪ್ರಗತಿಪರ ಸ್ವಸಹಾಯ ಸಂಘದ ವತಿಯಿಂದ ಸಂಘದ 73 ಸದಸ್ಯ ಕುಟುಂಬಕ್ಕೆ ತಲಾ 50 ಕೆಜಿ ಅಕ್ಕಿ ವಿತರಣೆಯನ್ನು ಸಂಘದ ಕಾರ್ಯಾಲಯದಲ್ಲಿ ಮಾಡಲಾಯಿತು. ಇದಕ್ಕೆ ಸಂಘದ ವತಿಯಿಂದ 1,41,000.00 ಮೊತ್ತವನ್ನು ವಿನಿಯೋಜನೆ ಮಾಡಲಾಗಿದೆ.

ಅಕ್ಕಿ ವಿತರಣೆ ಕಾರ್ಯಕ್ರಮ ದಲ್ಲಿ ಶ್ರೀ ಮಹಾಕಾಳಿ ದೇವಸ್ಥಾನ ಖಾರ್ವಿಕೇರಿ ಕುಂದಾಪುರ ಇದರ ಅಧ್ಯಕ್ಷರಾದ ಜಯಾನಂದ ಖಾರ್ವಿ, ಕೊಂಕಣಿ ಖಾರ್ವಿ ಪ್ರಗತಿಪರ ಸಂಘ ರಿ ಮದ್ದುಗುಡ್ಡೆ ಇದರ ಅಧ್ಯಕ್ಷರಾದ ಶ್ರೀ ನಾರಾಯಣ ಖಾರ್ವಿ, ಗೌರವಾಧ್ಯಕ್ಷರಾದ ಶ್ರೀ ಸಂಜೀವ ಖಾರ್ವಿ, ಸಮಾಜದ ಹಿರಿಯ ವ್ಯಕ್ತಿ ಶ್ರೀ ರಾಮದಾಸ್ ಖಾರ್ವಿ, ಉಪಾಧ್ಯಕ್ಷರಾದ ಶ್ರೀ ಗಣಪತಿ ಖಾರ್ವಿ, ಕಾರ್ಯದರ್ಶಿ ಗಿರಿಧರ್ ಖಾರ್ವಿ, ಕೋಶಾಧಿಕಾರಿ ದಯಾನಂದ ಖಾರ್ವಿ, ಸ್ವಸಹಾಯ ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜ್ ಖಾರ್ವಿ, ಪುರಸಭಾ ಸದಸ್ಯರಾದ ಶ್ರೀ ರಾಘವೇಂದ್ರ ಖಾರ್ವಿ ಹಾಗೂ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.

ವರದಿ.
ಅನಿಲ್ ಖಾರ್ವಿ ಮದ್ದುಗುಡ್ಡೆ.

2 thoughts on “ಕೊಂಕಣಿ ಖಾರ್ವಿ ಪ್ರಗತಿಪರ ಸಂಘದ ವತಿಯಿಂದ ಅಕ್ಕಿ ವಿತರಣೆ ಕಾರ್ಯಕ್ರಮ

  1. ಉದಾತ್ತ ಮಾನವೀಯ ಮೌಲ್ಯಗಳನ್ನು ಉದ್ದೀಪನಗೊಳಿಸುವ ಶ್ರೇಷ್ಠ ಕಾರ್ಯಕ್ರಮ.ಮಾನವೀಯ ಕಾಳಜಿಯ ಇಂತಹ ಸತ್ಕಾರವನ್ನು ಆಯೋಜಿಸಿದ್ದ ಮದ್ದುಗುಡ್ಡೆಯ ಕೊಂಕಣಿ ಖಾರ್ವಿ ಪ್ರಗತಿಪರ ಸಂಘಕ್ಕೆ ಹೃದಯಸ್ಪರ್ಶಿ ಅಭಿನಂದನೆಗಳು.ನಿಮ್ಮ ಈ ಸಮಾಜಮುಖಿ ಕಾರ್ಯಗಳು ಸರ್ವರಿಗೂ ಮಾದರಿ ಮತ್ತು ಪ್ರೇರಣೆಯಾಗಿದೆ.ಇದು ದೇವರು ಮೆಚ್ಚುವ ಕಾರ್ಯ👏👏👏👏👍👌🙏🙏🙏🙏🙏💐💐💐💐🙏🙏🙏

  2. ಸಂಸ್ಥೆಯಿಂದ ಅತ್ಯಂತ ಶ್ಲಾಘನೀಯ ಚಟುವಟಿಕೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜ ಬಾಂಧವರಿಗೆ ಸೇವೆ ಸಲ್ಲಿಸುವ ಶಕ್ತಿಯನ್ನು ದೇವರು ಅವರಿಗೆ ನೀಡಲಿ.

Leave a Reply

Your email address will not be published. Required fields are marked *