ಖಾರ್ವಿಕೇರಿ ರಿಂಗ್ ರೋಡ್ ದುರಸ್ತಿ

ಕುಂದಾಪುರ ಪಂಚಗಂಗಾವಳಿ ನದಿತೀರದ ಖಾರ್ವಿಕೇರಿಯಿಂದ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ರಿಂಗ್ ರೋಡ್ ನ್ನು ಡಬಲ್ ರಿಂಗ್ ರೋಡ್ ಆಗಿ ಪರಿವರ್ತಿಸುವ ಸಮಗ್ರ ಅಭಿವೃದ್ಧಿಗಾಗಿ ಕುಂದಾಪುರ ಶಾಸಕರಾದ ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ವಿಶೇಷ ಪ್ರಯತ್ನದಿಂದ ರೂ.19.50 ಕೋಟಿ ಅನುದಾನ ಮಂಜೂರಾಗಿರುವುದು ಮೀನುಗಾರರಲ್ಲಿ ಹರ್ಷವನ್ನುಂಟು ಮಾಡಿದೆ.

ಪ್ರಸ್ತುತ ರಿಂಗ್ ರೋಡ್ ನಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿದ್ದು,ರಿಂಗ್ ರೋಡ್ ಉದ್ದಕ್ಕೂ,ಹೊಂಡಗಳು ಬಿದ್ದು ಕೆಸರುಮಯವಾಗಿತ್ತು. ಸ್ಥಳೀಯ ಪುರಸಭಾ ಸದಸ್ಯರೂ, ಪುರಸಭೆಯ ಪ್ರತಿಪಕ್ಷ ನಾಯಕರು ಆಗಿರುವ ಕೆಚ್ಚೆದೆಯ ಯುವ ನಾಯಕ ಶ್ರೀ ಚಂದ್ರಶೇಖರ್ ಖಾರ್ವಿ ಯವರ ದಿಟ್ಟ ಪ್ರಯತ್ನ,ಅವಿರತವಾದ ರಾಜಕೀಯ ಇಚ್ಛಾಶಕ್ತಿಯ ಫಲವಾಗಿ ಕುಂದಾಪುರ ಪುರಸಭೆಯ ವತಿಯಿಂದ ಮಳೆಗಾಲದ ಸಂದರ್ಭದಲ್ಲಿ ಈ ರಸ್ತೆಯಲ್ಲಿ ಸುಗುಮವಾಗಿ ಓಡಾಡಲು ಅನುಕೂಲವಾಗುವಂತೆ ದುರಸ್ತಿ ಕಾಮಗಾರಿ ನಡೆಯುತ್ತಿದೆ.

ಪ್ರಬಲ ರಾಜಕೀಯ ಇಚ್ಛಾಶಕ್ತಿ,ದಿಟ್ಟ ಪ್ರಯತ್ನ,ಸಾಮಾಜಿಕ ಸೇವೆಯ ಕಳಕಳಿಯಿರುವ ಜನಪ್ರತಿನಿಧಿಯಿಂದ ಪರಿಸರದ ಸಮಸ್ಯೆಗಳು ಪರಿಹಾರವಾಗುತ್ತದೆ ಎಂಬ ಅಭಿಪ್ರಾಯ ಜನಸಮೂಹದಲ್ಲಿ ವ್ಯಕ್ತವಾಗುತ್ತಿದೆ.ಮುಂದಿನ ಪ್ರಯತ್ನವಾಗಿ ಚಂದ್ರಶೇಖರ್ ಖಾರ್ವಿಯವರು ಬಹೂದ್ದೂರ್ ಷಾ ರಸ್ತೆಯ ಸುಡುಗಾಡು ತೋಡಿನ ದುರಸ್ಥಿ ಕಾರ್ಯದ ಬಗ್ಗೆ ವಿಶೇಷ ಆಸಕ್ತಿ ತೋರಿದ್ದಾರೆ.ಅವರ ಪ್ರಯತ್ನದಿಂದ ಸುಡುಗಾಡು ತೋಡಿನ ಸಮಸ್ಯೆಗಳು ಕೂಡಾ ಪರಿಹಾರವಾಗಲಿ ಎಂದು ಜನರು ಆಶಿಸುತ್ತಿದ್ದಾರೆ.

ವರದಿ: www.kharvionline.com

One thought on “ಖಾರ್ವಿಕೇರಿ ರಿಂಗ್ ರೋಡ್ ದುರಸ್ತಿ

  1. ಕೆಚ್ಚೆದೆಯ ಹೋರಾಟಗಾರ,ದಿಟ್ಟನಡೆಯ ರಾಜಕೀಯ ಪಟು H N ಚಂದ್ರಶೇಖರ್ ಖಾರ್ವಿಯವರ ಅವಿರತ ಪ್ರಯತ್ನದ ಫಲವಾಗಿ ಖಾರ್ವಿಕೇರಿ ರಿಂಗ್ ರೋಡ್ ದುರಸ್ತಿಗೊಂಡು ಹೊಸ ಕಳೆ ಮೂಡಿ ಬಂದಿದೆ.ಅವರಿಗೆ ಅಭಿನಂದನೆಗಳು💐💐💐💐💐👏👏👏👏👏👍👍👌🙏🙏🙏🙏

Leave a Reply

Your email address will not be published. Required fields are marked *