ಗಂಗೊಳ್ಳಿ ಕಡಲ ಕಿನಾರೆಯಲ್ಲಿ ಸಮುದ್ರ ಪೂಜೆ
ಕಡಲು ನಿನ್ನದೇ ಹಡಗು ನಿನ್ನದೇ ಎನ್ನುವ ಕವಿವಾಣಿಯಂತೆ ಕೋಟ್ಯಾಂತರ ಜನರ ಬದುಕಿನ ಜೀವ ಸಂಜೀವಿನಿ ಸಮುದ್ರ.ಸೃಷ್ಟಿಯ ಪಂಚಭೂತಗಳಲ್ಲಿ ನೀರು ಪ್ರಾಮುಖ್ಯತೆ ಪಡೆದುಕೊಂಡಿದೆ.ನೈಸರ್ಗಿಕ ಪರಿಸರ ಮತ್ತು ಎಲ್ಲ ಜೀವಿಗಳ ಬದುಕು ಪ್ರಕೃತಿಯ ಲಯದೊಂದಿಗೆ ಆಪ್ತವಾಗಿ ಬೆಸೆದುಕೊಂಡಿದೆ ಎಂದು ನಮ್ಮ ವೇದಗಳು ಹೇಳುತ್ತದೆ.ನೈಸರ್ಗಿಕ ಪರಿಸರವು ದೈವಿಕ ಪ್ರಕೃತಿಯ ಪ್ರತಿರೂಪವೆಂದೇ ಹಿಂದೂ ಧರ್ಮ ಹೇಳುತ್ತದೆ.ಮಾನವರಲ್ಲಿರುವ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆ ಪರಿಸರದ ಅವರ ಸಂಬಂಧದೊಂದಿಗೆ ಸಹಜವಾಗಿ ಬೆಸೆದುಕೊಂಡಿದೆ.ಮೀನುಗಾರರ ಬದುಕಿನ ಮೂಲ ಸೆಲೆ ಸಮುದ್ರ. ಮಳೆಗಾಲದ ಈ ಋತುವಿನಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುವ ಮೊದಲು ಮೀನುಗಾರರು ಗ್ರಾಮದೇವತೆ ಹಾಗೂ ಸಮುದ್ರ ದೇವತೆಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿಕೊಳ್ಳುವುದು ತಲೆತಲಾಂತರದಿಂದ ನಡೆದುಕೊಂಡು ಬಂದ ವಾಡಿಕೆಯಾಗಿದ್ದು.
ಇಂದು ಗಂಗೊಳ್ಳಿ ಲೈಟ್ ಹೌಸ್ ಕಡಲಕಿನಾರೆಯಲ್ಲಿ ಸಮುದ್ರ ಪೂಜೆಯು ಶ್ರದ್ಧಾ ಭಕ್ತಿಯಿಂದ ನೇರವೇರಿತು. ಗಂಗೊಳ್ಳಿ ಕರಾವಳಿ ಸಾಂಪ್ರದಾಯಿಕ ನಾಡದೋಣಿ ಸಂಘ ಗಂಗೊಳ್ಳಿ ವಲಯದ ವತಿಯಿಂದ ವೇದಮೂರ್ತಿ ಶ್ರೀ ರವೀಶ್ಯ ರವರ ಪುರೋಹಿತ್ಯದಲ್ಲಿ ಸಾಮೂಹಿಕವಾಗಿ ಸಮುದ್ರ ಪೂಜೆ ನೇರವೇರಿಸಲಾಯಿತು ಈ ಕಾರ್ಯಕ್ರಮದಲ್ಲಿ ಗಂಗೊಳ್ಳಿ ಕರಾವಳಿ ಸಾಂಪ್ರದಾಯಿಕ ನಾಡದೋಣಿ ಸಂಘದ ಅಧ್ಯಕ್ಷರಾದ ಯಶವಂತ್ ಗಂಗೊಳ್ಳಿ, ಸರ್ವ ಸದಸ್ಯರು, ಪರ್ಶಿನ್ ಯೂನಿಯನ್, 370 ಯೂನಿಯನ್, ನಾಡದೋಣಿ ಒಕ್ಕೂಟ ಉಪ್ಪುಂದದ ಪದಾಧಿಕಾರಿಗಳು, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ನಿರ್ದೇಶಕರಾದ ಸರೋಜಿನಿ ಖಾರ್ವಿ, ಗುರುರಾಜ್ ಖಾರ್ವಿಯವರು, ಗಂಗೊಳ್ಳಿ ವಲಯದ ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.
ವರದಿ: www.kharvionline.com