ಹೊನ್ನಾವರ: ಅಭಿವೃದ್ಧಿ ನಿಷೇದಿತ ಕಡಲ ತೀರದಲ್ಲಿ ನಿಯಮಬಾಹೀರ ಕಾಮಗಾರಿ ನಡೆಸಲು ಪೋಲಿಸ್ ಬಂದೋಬಸ್ತು ಒದಗಿಸಿ ಕಾನೂನನ್ನು ರಕ್ಷಿಸಬೇಕಾದವರೇ ಅದನ್ನು ಇಲ್ಲಿ ಉಲ್ಲಂಘಿಸುತ್ತಿರುವದರ ವಿರುದ್ಧ ಮತ್ತು ಪರಿಸರ ಹಾಗೂ CRZ ಪರವಾನಗಿ ಪಡೆಯದೇ ಕಡಲ ತೀರದಲ್ಲಿ ನಿಯಮ ಬಾಹಿರವಾಗಿ ನಿರ್ಮಿಸಿರುವ ಕಚ್ಛಾ ರಸ್ತೆಯ ಮೂಲಕ ಭಾರಿ ಯಂತ್ರೋಪಕರಣಗಳನ್ನು ಮತ್ತು ಭಾರಿ ವಾಹನಗಳನ್ನು ತೆಗೆದುಕೊಂಡು ಹೋಗದಂತೆ ತಡೆ ಹಾಕಿ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಕಂಪನಿಯ ವಿರುದ್ಧ ಕಾಸರಕೋಡ ಟೊಂಕದ ಮೀನುಗಾರರು ಕಳೆದ ಎರಡು ದಿನಗಳಿಂದ ನಡೆಸುತ್ತಿದ್ದ ತೀವೃ ಪ್ರತಿಭಟನೆಯಿಂದಾಗಿ ಇಂದು ಭಾರಿಯಂತ್ರೋಪಕರಣ ಹೊತ್ತು ತಂದ ಬಂದರು ನಿರ್ಮಾಣ ಕಂಪನಿಯ ಭಾರಿ ವಾಹನಗಳು ಇಂದು ಮರಳಿ ಹಿಂದಕ್ಕೆ ಹೋಗಿರುವ ಹಾಗೂ ದಿಡೀರಾಗಿ ಪೋಲಿಸ್ ಬಂದೋ ಬಸ್ತನ್ನು ಹಿಂದಕ್ಕೆ ಪಡೆದಿರುವ ವಿದ್ಯಮಾನವು ಹೊನ್ನಾವರದ ಕಾಸರಕೋಡ ಟೊಂಕದಲ್ಲಿ ನಡೆದಿದೆ.
ಒಂದು ಹಂತದಲ್ಲಿ ಸ್ಥಳೀಯರು ಪೋಲಿಸ ಅಧಿಕಾರಿಗಳೊಂದಿಗೆ ಜಟಾಪಟಿ ನಡೆಸಿ ನಿಯಮ ಬಾಹೀರ ಕಾಮಗಾರಿಗಳಿಗೆ ಪೋಲಿಸ ಬಂದೋಬಸ್ತ್ ನೀಡುತ್ತಿರುವುದರ ಕ್ರಮದಕುರಿತು ಪ್ರಶ್ನಿಸಿ, ಒಂದು ವೇಳೆ ಬಲ ಪ್ರಯೋಗ ಮಾಡಿದರೆ ತಾವು ಸಮುದ್ರಕ್ಕೆ ಹಾರಿ ಪ್ರಾಣ ತ್ಯಾಗ ಮಾಡುವ ಬೆದರಿಕೆ ಹಾಕಿದ ಘಟನೆಯೂ ನಡೆದು ಹಲವು ಮೀನುಗಾರರು ಸಮುದ್ರಕ್ಕೆ ಹಾರಿದ ವಿದ್ಯಮಾನದಿಂದ ಕೆಲವು ಕಾಲ ಸ್ಥಳದಲ್ಲಿ. ತೀವ್ರ ಅತಂಕ ಸೃಷ್ಠಿಯಾಗಿ ಕರಾವಳಿ ಕಾವಲು ಪಡೆಯ ಮುನ್ನೆಚ್ಚರಿಕೆಯಿಂದಾಗಿ ಅನಾಹುತ ತಪ್ಪಿ ಮೀನುಗಾರರ ಪ್ರತಿಭಟನೆಯು ತಡರಾತ್ರಿವರೆಗೆ ಮುಂದುವರಿದು ಇಂದು ಮುಂಜಾನೆ ಶಾಂತಿಯುತವಾಗಿ ಯಶಸ್ವಿಯಾಗಿ ಸುಖಾಂತ್ಯ ಕಂಡಿದೆ. ಎರಡು ದಿನ ಬಂದರುಕಂಪನಿಯ ಯಂತ್ರೋಪಕರಣಗಳಿಗೆ ರಕ್ಷಣೆ ಒದಗಿಸಿದ ಪೋಲಿಸರು ಇಂದು ಮುಂಜಾನೆ ಪೋಲಿಸ್ ಬಂದೋ ಬಸ್ತ ಹಿಂದಕ್ಕೆ ಪಡೆದಿರುವದು ಹಾಗೂ ಯಂತ್ರೋಪಕರಣಗಳನ್ನು ಹೊತ್ತು ತಂದ ಭಾರಿ ವಾಹನಗಳನ್ನು ಮರಳಿ ಹಿಂದಕ್ಕೆ ಕಳಿಸಿರುವುದರ ಹಿಂದೆ ಜಿಲ್ಲಾಧಿಕಾರಿಗಳಿಗೆ ಮತ್ತು ಹೊನ್ನಾವರ ತಹಶೀಲ್ದಾರರಿಗೆ ಕಾಸರಕೋಡ ಟೊಂಕದ ಮೀನುಗಾರರ ಪರವಾಗಿ ಹೈಕೋರ್ಟ ನ್ಯಾಯವಾದಿ ಶ್ರೀಜಾ ಚಕ್ರವತಿ೯ ಎನ್ನುವವರು ಆಭಿವೃದ್ದಿ ನಿಷೇಧಿತ ಕಾಸರಕೋಡ ಕಡಲತೀರದಲ್ಲಿ ಪರಿಸರ ಕಾಯಿದೆ ಮತ್ತು CRZ ನಿಯಮಗಳನ್ನು ಉಲ್ಲಂಘಿಸಿ ಖಾಸಗಿ ಮೂಲದ ವಾಣಿಜ್ಯ ಬಂದರು ಕಂಪನಿಗಾಗಿ ಕಾನೂನು ಬಾಹೀರವಾಗಿ ರಸ್ತೆ ಕಾಮಗಾರಿ ನಡೆಸುತ್ತಿರುವುದರ ವಿರುದ್ಧ ನ್ಯಾಯಾಲಯ ನಿಂದನೆಯೂ ಸೇರಿದಂತೆ ಪ್ರಮುಖ ನಾಲ್ಕು ಕಾನೂನಾತ್ಮಕ ವಿಚಾರವಾಗಿ ಲೀಗಲ್ ನೋಟಿಸು ನೀಡಿರುವುದೇ ಪ್ರಮುಖ ಕಾರಣ ಎನ್ನಲಾಗಿದೆ.
ಇದಕ್ಕೂ ಮೊದಲು ಬಂದರು ಅಧಿಕಾರಿ ಪೋಲಿಸ ಅಧಿಕಾರಿಮತ್ತು ತಹಶೀಲ್ದಾರರೇ ಕಾನೂನನ್ನು ಉಲ್ಲಂಘಿಸಿ ಸಾರ್ವಜನಿಕ ಹಿತಾಸಕ್ತಿಯನ್ನು ಕಡೆಗಣಿಸುತ್ತಿದ್ದಾರೆ ಎನ್ನುವ ನೇರ ಅರೋಪದೊಂದಿಗೆ ಅಧಿಕಾರಿಗಳೊಂದಿಗೆ ಜಟಾಪಟಿಗಿಳಿದ ಸ್ಥಳೀಯ ಮೀನುಗಾರರಿಗೆ ಸ್ಥಳೀಯ ಗ್ರಾಮ ಪಂಚಾಯತದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಸಹ ಮಿನುಗಾರರನ್ನು ಬೆಂಬಲಿಸಿ ನಿಯಮಗಳನ್ನು ಉಲ್ಲಂಘಸಿ ಕಡಲ ತೀರದಲ್ಲಿ ಯಾವದೇ ಕಾಮಗಾರಿ ನಡೆಸದಂತೆ ಎಚ್ಚರಿಸಿಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವದು ಸಹ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಅಭಿವೃದ್ಧಿ ನಿಷೇದಿತ ಕಡಲ ತೀರದಲ್ಲಿ ಪರಿಸರ ಮತ್ತು ಸಿ ಆರ್ ಜೆಡ್ ನಿಯಮಗಳನ್ನು ಉಲ್ಲಂಘಿಸಿ ಬಲವಂತರಿಂದ ರಸ್ತೆ ಕಾಮಗಾರಿ ನಡೆಸಲು ಯತ್ನಿಸುತ್ತಿರುವ ಅಧಿಕಾರಿಗಳ ಹಿಂಬಾಗಿಲ ಯತ್ನವನ್ನು ಪ್ರಶ್ನಿಸುತ್ತಿರುವ ಸ್ಥಳೀಯ ಮೀನುಗಾರ ಸಂಘಟನೆಗಳವರು ಕೆಲವು ಅಧಿಕಾರಿಗಳ ವಿರುದ್ಧ ಬ್ರಷ್ಟಾರದ ನೇರಆರೋಪ ಹೊರಿಸಿ ಸರಕಾರಕ್ಕೆ ದೂರು ಸಲ್ಲಿಸಿರುವದು ಸಹ ಬೆಳಕಿಗೆ ಬಂದಿದೆ. ಪರಿಸರ ಮತ್ತು CR2 ಪರವಾನಗಿಯ ಬಗ್ಗೆ ಪ್ರಶ್ನಿಸಿದರೆ ನೀವು ಒಮ್ಮೆ ಪೋಟ್೯ ಅಧಿಕಾರಿಯನ್ನು ಇನ್ನೊಮ್ಮೆ ಡಿ.ಸಿ.ಯವರಿಗೆ ಕೇಳಿ ಎನ್ನುತ್ತೀರಿ. ತಾವು ಕೇವಲ ಬಂದರು ಅಧಿಕಾರಿ ಮತ್ತು ಡಿಸಿಯವರ ಅದೇಶವನ್ನು ಪಾಲಿಸುತ್ತಿದ್ದೇವೆ ಅನ್ನುತ್ತೀರಿ. ಆದರೆ ಪರಿಸರ ಮತ್ತು CR2 ಪರವಾನಿಗೆ ಪಡೆಯದೇ ಸ್ಥಳೀಯರ ತೀವ್ರ ವಿರೋಧದ ನಡುವೆಯೂ ನೀವುಅಭಿವೃದ್ಧಿ ನಿಷೇದಿತ ಕಾಸರಕೋಡ ಕಡಲತೀರದಲ್ಲಿ ಬಲವಂತದಿಂದ ಅಕ್ರಮ ರಸ್ತೆ ಕಾಮಗಾರಿ ನಡೆಸಲು ಅನುವು ಮಾಡಿಕೊಟ್ಟಿದ್ದೀರಿ ಮತ್ತು ಖಾಸಗಿ ಬಂದರು ನಿರ್ಮಾಣ ಕಂಪನಿಯ ಆಮೀಶ ಗಳಿಗೆ ಒಳಗಾಗಿ ಸರಕಾರಿ ಆಡಳಿತ ಯಂತ್ರದ ದುರ್ಬಳಕೆ ಮಾಡುತ್ತಿದ್ದೀರಿ ಇದು ಸರಿಯಲ್ಲ.
ಸಾವಿರಾರು ಮೀನುಗಾರರ ಬದುಕು ಮತ್ತು ಪರಿಸರದ ಹಿತಕ್ಕಿಂತ ಖಾಸಗಿ ಭಂಡವಾಳ ಶಾಹಿಗಳ ಹಿತವೇ ನಿಮಗೆ ಮುಖ್ಯವೇ ಎಂದು ಸ್ಥಳೀಯ ಮೀನುಗಾರರು ಅಧಿಕಾರಿಗಳನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿರುವದು ನಿನ್ನೆ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಕಂಡುಬಂತು. ಸಂಜೆಯ ವೇಳೆಗೆ, ಬೆಂಗಳೂರಿನಿಂದ ಆಗಮಿಸಿದ ಪರಿಸರ ಎನ್ ಜಿ ಓದ ಕೆಲವು ಕಾರ್ಯಕರ್ತರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿರುವದು ಹಾಗೂ ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ ಕೊಚರೇಕರ ಮತ್ತು ರಾಷ್ಟ್ರೀಯ ಫಿಶ್ ವರ್ಕರ್ಸ್ ಫೊರಮ್ಮಿನ ರಾಷ್ಟ್ರೀಯ ಅಧ್ಯಕ್ಷ . ಲೀಯೋ ಖೊಲೆಸೊ, ಉಪಾದ್ಯಕ್ಷ ರಾಮಕ್ರಷ್ಣ ತಾಂಡೇಲ, ಪ್ರಧಾನ ಕಾರ್ಯದರ್ಶಿ ಒಲೆನ್ಸೊ ಸೀಮನ್ಸ , ಕಾರ್ಯದರ್ಶಿ, ಜ್ಯೋತಿ ಮೆಹರ್, ಉಜ್ವಲಾ ಪಾಟೀಲ, ಹೈಕೋರ್ಟ್ ನ್ಯಾಯವಾದಿ ಶ್ರೀಜಾ ಚಕ್ರವರ್ತಿ, ಲೀವಿಂಗ್ ಅರ್ಥ್ ಫೌಂಡೇಶನ್ ಆಫ್ ಇಂಡಿಯಾದ ಸದಸ್ಯೆ ರಜನಿ ರಾವ್ ಸ್ಥಳಕ್ಕೆ ಭೇಟಿ ನೀಡಿ ಪರಿಸರ ಮತ್ತು ಮೀನುಗಾರರ ಜೀವನೋಪಾಯದ ಹಿತದೃಷ್ಠಿಯಿಂದ ಸ್ಥಳೀಯರವಾಣಿಜ್ಯ ಬಂದರು ವಿರೋಧಿ ಹೋರಾಟಕ್ಕೆ ತಮ್ಮ ಬೆಂಬಲ ನೀಡುವದಾಗಿ ಹೇಳಿ ಮುಂದಿನ ಕಾನೂನಾತ್ಮಕ ಹಾಗೂ ಸಂಘಟಿತ ಹೋರಾಟಕ್ಕೆ ಸಹಕರಿಸುವದಾಗಿ ತಿಳಿಸಿದರು.
ನಂತರ ಪೋಲಿಸ ಅಧಿಕಾರಿಗಳನ್ನು ಮತ್ತು ಜಿಲ್ಲಾಧಿಕಾರಿಗಳನ್ನು ಭೇಟಿಮಾಡಿ ನಿಯಮಬಾಹಿರ ಕಾಮಗಾರಿಗಳಿಗೆ ಪೋಲಿಸ್ ಬದ್ರತೆ ಒದಗಿಸಿ ಸಾರ್ವಜನಿಕ ಹಿತಾಸಕ್ತಿಯನ್ನು ಕಡೆಗಣಿಸುತ್ತಿರುವ ಕುರಿತು ಲಿಖಿತ ದೂರನ್ನು ಸಲ್ಲಿಸಿ ಸಾರ್ವಜನಿಕ ಹಿತಾಸಕ್ತಿಯನ್ನು ಕಡೆಗಣಿಸಿ ಕಚ್ಛಾ ರಸ್ತೆಯ ಸುಧಾರಣಿಯ ಹೆಸರಿನಲ್ಲಿ ಖಾಸಗಿ ಮೂಲದ ಕಂಪನಿಯ ಅಮೀಷಕ್ಕೆ ಒಳಗಾಗಿ ಅಭಿವೃದ್ಧಿ ನಿಷೇದಿತ ಕಡಲತೀರದಲ್ಲಿ ಪರಿಸರ ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿಹೊಸ ರಸ್ತೆ ನಿರ್ಮಿಸಲು ಸರಕಾರಿ ಯಂತ್ರದ ದುರ್ಬಳಕೆ ಮಾಡಲಾಗುತ್ತಿದೆ. ಇದನ್ನು ಕೂಡಲೇ ಕೈಬಿಡಬೇಕು . ಪೋಲಿಸರ ಹಸ್ತಕ್ಷೇಪ ತಡೆಯಬೇಕು . ಪರಿಸರ ಮತ್ತು ಮೀನುಗಾರರ ಜೀವನೋಪಾಯವೂ ಸೇರಿದಂತೆ ಸಾರ್ವಜನಿಕ ಹಿತದೃಷ್ಟಿಯಿಂದ ಉದ್ದೇಶಿತ ವಾಣಿಜ್ಯ ಬಂದರು ಯೋಜನೆಯ ವಿರುದ್ಧದ ನಮ್ಮ ಶಾಂತಿಯುತ ಪ್ರತಿಭಟನೆಗಳು ಸಹಿತ ಸಂಘಟಿತ ಹೋರಾಟ ಮತ್ತು ಕಾನೂನು ಹೋರಾಟವು ವಾಣಿಜ್ಯ ಬಂದರು ಯೋಜನೆಯನ್ನು ಸರಕಾರ ಕೈಬಿಡುವ ವರೆಗೂ ಸ್ಥಳೀಯರ ಹೋರಾಟ ಮುಂದುವರಿಯಲಿದೆಯೆಂದು ನಿಯೋಗ ಜಿಲ್ಲಾಧಿಕಾರಿಗಳ ಗಮನ ಸೆಳೆದಿದೆ ಎಂದು ಜಂಟಿ ಹೋರಾಟ ಸಮಿತಿಯ ಅಧ್ಯಕ್ಷ ರಾಜೇಶ ಜಿ. ತಾಂಡೇಲ ಹೇಳಿದರು. ಈ ಸಂದರ್ಭದಲ್ಲಿ ಡಾ.ಪ್ರಕಾಶ ಮೇಸ್ತ,ಮೀನುಗಾರರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಗಣಪತಿ ತಾಂಡೇಲ, ಕಾರ್ಮಿಕ ಸಂಘದ ಕಾರ್ಯದರ್ಶಿ ರಾಜು ತಾಂಡೇಲ, ಭಾಷ್ಕರ ತಾಂಡೇಲ, ಸಂದೀಪ ತಾಂಡೇಲ, ರಮೇಶ ತಾಂಡೇಲ, ರೇಣುಕಾ ತಾಂಡೇಲ, ಸಚಿನ ತಾಂಡೇಲ, ಪ್ರೀತಿ ತಾಂಡೆಲ,ರೇಖಾ ತಾಂಡೇಲ, ಸುಸ್ಮಿತಾ ತಾಂಡೆಲ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.
ವರದಿ: ಚಂದ್ರಕಾಂತ ಕೊಚರೇಕರ