ಕಂಚಗೋಡು ಜನರ ಸ್ಮಶಾನ ಭೂಮಿಯ ನನಸಾದ ಕನಸು

ಕಡಲತೀರದ ಪುಟ್ಟ ಗ್ರಾಮ ಕಂಚಗೋಡ ಜನತೆ ಇಂದು ಸಂತಸ ಪಡುವ ದಿನ.ಅವರ ಬಹುದಿನಗಳ ಕನಸೊಂದು ನನಸಾದ ಸುದಿನವೆಂದು ಹೇಳಬಹುದು.ಈ ಊರಿನಲ್ಲಿ ಸ್ಮಶಾನಭೂಮಿಯ ಕೊರತೆ ಇತ್ತು.ಅಂತಿಮ ಸಂಸ್ಕಾರ ಮಾಡುತ್ತಿದ್ದ ಸ್ಥಳವು ಬೇರೆಯವರ ಹೆಸರಿನಲ್ಲಿ ಇದ್ದಿದ್ದರಿಂದ ಇಲ್ಲಿನ ಜನರಿಗೆ ಪರದಾಟ ಪಡಬೇಕಾಗಿತ್ತು.ಇದು ಬಹುಕಾಲದ ತನಕವೂ ಸಮಸ್ಯೆಯಾಗಿಯೇ ಉಳಿದಿತ್ತು.ವಾಡಿಕೆಯಂತೆ ಅಂತಿಮ ಸಂಸ್ಕಾರ ಮಾಡುತ್ತಿದ್ದ ಸ್ಥಳವು ಖಾಸಗಿ ಬೀಚ್ ರೆಸಾರ್ಟ್ ನವರ ಸುಪರ್ದಿಯಲ್ಲಿ ಇದ್ದಿದ್ದರಿಂದ ಜನರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದರು.

ಕಂಚಗೋಡಿಗೆ ಸುವ್ಯವಸ್ಥಿತವಾದ ಸ್ಮಶಾನ ಬೇಕೆಂಬ ನೆಲೆಯಲ್ಲಿ ಊರಿನ ಯುವಕರು ಸಾರ್ವಜನಿಕ ಹಿತರಕ್ಷಣಾ ಸಂಘ ರಚಿಸಿಕೊಂಡು ಅದನ್ನು ನೋಂದಣಿ ಮಾಡಿ ಸತತ ಎರಡು ವರ್ಷಗಳ ನಿರಂತರ ಅಲೆದಾಟ,ಹೋರಾಟ ಮಾಡಿದರ ಫಲಶೃತಿಯಾಗಿ ಇಂದು ಬೀಚ್ ರೆಸಾರ್ಟ್ ಮಾಲಕಿಯಾದ ಶ್ರೀಮತಿ ಶಾಂತಿ ಡಿಸೋಜಾ ರವರು ಕೇರಳದಿಂದ ಕಂಚಗೋಡಿಗೆ ಬಂದು ಸ್ಮಶಾನಕ್ಕಾಗಿ ಜಾಗವನ್ನು ಸಾರ್ವಜನಿಕರಿಗೆ ದಾನರೂಪದಲ್ಲಿ ಬರೆದುಕೊಟ್ಟು ತಮ್ಮ ಹೃದಯ ವೈಶ್ಯಾಲತೆ ಮೆರೆದಿದ್ದಾರೆ.ಅವರಿಗೆ ಸಮಸ್ತ ಕಂಚಗೋಡು ಜನತೆ ಹೃದಯಂತರಾಳದ ಕೃತಜ್ಞತೆಗಳನ್ನು ಸಮರ್ಪಿಸುತ್ತದೆ.ಇನ್ನು ಮುಂದೆ ಇಲ್ಲಿ ಸೂಕ್ತ ರೀತಿಯಲ್ಲಿ ಸ್ಮಶಾನ ನಿರ್ಮಾಣ ಮಾಡಬೇಕಾದ ಹೊಣೆಗಾರಿಕೆ ಈ ಊರಿನ ಜನತೆಯದ್ದು.ಅದಕ್ಕಾಗಿ ಕಂಚಗೋಡು ವ್ಯಾಪ್ತಿಯ ಖಾರ್ವಿಕೇರಿ,ಭಗತ್ ನಗರ, ಕಂಚಗೋಡು ಮತ್ತು ಸನ್ಯಾಸಿ ಬಲ್ಲೆಯ ಜನರೆಲ್ಲರೂ ಒಂದಾಗಿ ಸ್ಮಶಾನವನ್ನು ನಿರ್ಮಾಣ ಮಾಡಬೇಕಾಗಿದೆ. ಅದಕ್ಕಾಗಿ ರೂಪುರೇಷೆಗಳನ್ನು ತಯಾರಿಸಿ ಮುನ್ನಡೆಯಬೇಕಾಗಿದೆ.ಸಮಾಜ ಸೇವೆಯೇ ಶ್ರೀ ರಾಮನ ಸೇವೆ ಎಂದು ಸದಾಕಾಲವೂ ಸಮಾಜಸೇವೆಯ ಕೈಂಕರ್ಯಗಳಲ್ಲಿ ತೊಡಗಿಕೊಂಡಿರುವ ಸಹೃದಯಿ ಮನಸ್ಸುಗಳಿಗೆ ಎಲ್ಲರೂ ಬೆಂಬಲ ನೀಡಬೇಕಾಗಿದೆ.

www.kharvionline.com

Leave a Reply

Your email address will not be published. Required fields are marked *