ಕೊಂಕಣಿ ಖಾರ್ವಿ ಸಮಾಜಕ್ಕೂ ಶ್ರೀ ಶಾರದಪೀಠಕ್ಕೂ ಏನಿದು ಸಂಬಂಧ?
ಪ್ರತಿಯೊಬ್ಬ ವ್ಯಕ್ತಿಗೂ ಅಥವಾ ಸಮುದಾಯಕ್ಕೆ ಮಾರ್ಗದರ್ಶನ ನೀಡಲು ಗುರು ಅನುಗ್ರಹ ಬಹುಮುಖ್ಯ. ಗುರುಗಳ ಮಾರ್ಗದರ್ಶನದಲ್ಲಿ ನಡೆದು ಭವ ಸಾಗರದಂತೆ ಇರುವ ನಮ್ಮ ಜೀವನ ನೌಕೆಯನ್ನು ಗುರುಗಳೇ ನಡೆಸಬಲ್ಲರು.
ಶೃಂಗೇರಿ ಮಠಕ್ಕೂ ಕೊಂಕಣಿ ಖಾರ್ವಿ ಸಮುದಾಯಕ್ಕೂ ಅವಿನಾಭಾವ ಸಂಬಂಧ ಇದೆ ಪೋರ್ಚುಗೀಸರ ದಾಳಿಯಿಂದ ಗೋವಾದಿಂದ ನೆಲೆಯನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕ ಬಂದಾಗ ಗುರು ಪೀಠ ಅಂದು ನಮ್ಮ ಹಿರಿಯರಿಗೆ ಆಶ್ರಯ ನೀಡಿದ ಪೀಠ.
ಶೃಂಗೇರಿ ಶ್ರೀ ಭಾರತಿ ತೀರ್ಥ ಸ್ವಾಮಿ ನಮ್ಮ ಕೊಂಕಣಿ ಖಾರ್ವಿ ಸಮುದಾಯದ ಗುರುಗಳಾಗಿ ಪಡೆದದ್ದು ನಮ್ಮ ಸೌಭಾಗ್ಯ. ಯಾಕೆಂದರೆ ಇವ್ರು ಯಾವತ್ತೂ ಹೆಚ್ಚಿನ ಸ್ವಾಮಿಗಳಾಗೆ ಜಾತಿ ಮತ ರಾಜಕೀಯ ಅಂತ ಜಾತಿ ರಾಜಕಾರಣ ಮಾಡಿದವರಲ್ಲ. ತನ್ನ ಕ್ಷೇತ್ರದಲ್ಲಿ ಸಾಮಾನ್ಯ ವ್ಯಕ್ತಿ ಬಂದರೂ ಒಂದು ಹಣ್ಣು ಮಾಂತ್ರಾಕ್ಷತೆ ಮುಖ್ಯಮಂತ್ರಿ ಬಂದ್ರು ಅದೇ ನಿಯಮ.
ಇಡೀ ಭಾರತದಲ್ಲಿ ಶ್ರೀ ಭಾರತೀ ತೀರ್ಥ ಸ್ವಾಮಿಗಳಿಗೆ ಸರಿಸಮಾನರಾಗಿ ನಿಲ್ಲಬಲ್ಲ ವಿದ್ವಾಂಸ ಘನ ಪಂಡಿತರು ಮತ್ತೊಬ್ಬರು ಇಲ್ಲ. ಇಡೀ ಭಾರತದಲ್ಲೇ ವೇದ ವೇದಾಂತಗಳಲ್ಲಿ ಪರಮಜ್ಞಾನಿ ಶ್ರೀ ಭಾರತೀ ತೀರ್ಥ ಸ್ವಾಮಿಗಳು. ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಸ್ವಾಮಿಯವರನ್ನು ನಮ್ಮ ಸಮುದಾಯದ ಗುರುಗಳನ್ನಾಗಿ ಮತ್ತು ಶಿವ ಸ್ವರೂಪ ಆದಿ ಶಂಕರಾಚಾರ್ಯರ ಪೀಠವು ನಮ್ಮ ಗುರುಮಠವಾಗಿ ನಾವು ಪಡೆದದ್ದು ನಮ್ಮ ಪುಣ್ಯ.
ಗುರು ವಂದನಾ ಯಾಕೆ ಮಾಡಬೇಕು ಅದಕ್ಕೂ ಕಾರಣವಿದೆ ಪ್ರತಿವರ್ಷ ನಮ್ಮ ಸಮಾಜದ ಸಾಮೂಹಿಕ ಸಮಸ್ಯೆಗಳನ್ನು ಸ್ವಾಮಿಗಳ ಗಮನಕ್ಕೆ ತಂದು ಪರಿಹರಿಸಲು ಬೇಡಿಕೊಳ್ಳುವುದು. ನಮ್ಮ ಸಮುದಾಯ ಅನೇಕ ಸಮಸ್ಯೆಗಳಿಂದ ಸದೃಢವಾಗಿ ಗಟ್ಟಿಮುಟ್ಟಾಗಿ ಅಭಿವೃದ್ಧಿ ಹೊಂದಬೇಕಾದರೆ ಗುರು ಬಲ ಗುರುಗಳ ಆಶೀರ್ವಾದ ಮಾರ್ಗದರ್ಶನ ಅತ್ಯಗತ್ಯ. ನಮ್ಮ ಸಮುದಾಯದ ಅದೆಷ್ಟೋ ಸಮಸ್ಯೆಗಳಿಗೆ ಮದುವೆ, ವರದಕ್ಷಿಣೆ ಪೀಡೆ, ದೋಣಿ ಅಪಘಾತ, ಮೀನುಗಾರಿಕೆ ಸಮಸ್ಯೆಗಳಿಗೆ ಎಲ್ಲದಕ್ಕೂ ಗುರುಗಳು ಸರಿ ಆಗುತ್ತದೆ ಮತ್ಸ್ಯ ಕ್ಷಾಮ ಪರಿಹರಿಸಿ ಒಳ್ಳೇ ಫಿಶಿಂಗ್ ಆಗುತ್ತೆ ಅಂತ ನುಡಿದ ಇಂತ ಎಷ್ಟೋ ಸಮಸ್ಯೆಗಳಿಗೆ ಗುರುಗಳು ಹೇಳಿದಾಗೆ ತಪ್ಪದೇ ನಡೆದಿದೆ ಎಂದೂ ಸುಳ್ಳಾಗಲಿಲ್ಲ.
ಭಟ್ಕಳದ ವಸಂತ ಖಾರ್ವಿ ಹೇಳಿರುವಂತೆ ಮೊದಲ ಗುರು ದರ್ಶನ ಆರಂಭಿಸಿದ್ದು 2000 ರಲ್ಲಿ. ನಮ್ಮ ಸಮಾಜದ ಬಾಂಧವರು ಅನಾದಿಕಾಲದಿಂದಲೂ ಶೃಂಗೇರಿ ಪೀಠವನ್ನು ಗುರು ಪೀಠವೆಂದು ನಂಬಿಕೊಂಡು ಅಲ್ಲಿ ಹೋಗಲು ಸೌಕರ್ಯ ಇಲ್ಲದ ಸಮಯದಲ್ಲಿ ಮದುವೆಯ ಪೂರ್ವ ಗುರು ಕಾಣಿಕೆಯನ್ನು ಕಾದಿರಿಸಿ ಅಥವಾ ಮನಿ ಅರ್ಡರ್ ಮಾಡಿ ಕಳಿಸಿ ಆಶೀರ್ವಾದ ಪಡೆದುಕೊಳ್ಳುತ್ತಿದ್ದರು.
ನಂತರ ದಿನಗಳಲ್ಲಿ ಲಗ್ನ ಪತ್ರಿಕೆ ಮುದ್ರಿಸುವ ಮೊದಲು ಶೃಂಗೇರಿ ಸ್ವಾಮಿಗಳಲ್ಲಿ ಹೋಗಿ ಆಶೀರ್ವಾದ ಪಡೆದು ಲಗ್ನ ಪತ್ರಿಕೆಯಲ್ಲಿ ಶೃಂಗೇರಿ ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಆಶೀರ್ವಾದ ಎಂದು ಮುದ್ರಿಸುತ್ತಿದ್ದರು ಇಂದಿನ ತಲೆಮಾರು ಕೂಡ ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಮನವಿ ಮಾಡಿದರು.
ಪ್ರತಿ ವರ್ಷ ಯಾಕೆ ಗುರುದರ್ಶನ ಮಾಡಬೇಕೆಂದರೆ ಅದು ಬ್ಯಾಟರಿ ಚಾರ್ಜ್ ಮಾಡಿದಾಗೆ, ವರ್ಷಕ್ಕೆ ಒಂದ್ಸಲ ಬಂದು ಬ್ಯಾಟರಿ ಚಾರ್ಜ್ ಮಾಡಿದರೆ ಮಾತ್ರ ಒಂದು ವರ್ಷದವರೆಗೆ ಚಾರ್ಜ್ ಇರುತ್ತೆ ಚಾರ್ಜ್ ಇದ್ರೆ ಮಾತ್ರ ಅದರ ಶಕ್ತಿ ಇರುತ್ತೆ ಅಂತ ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಸ್ವಾಮಿಜೀಗಳು ಹೇಳಿದ್ದಾರೆ.
|| ಶ್ರೀ ಶಾರದಗುರುಭ್ಯೋ ನಮಃ ||
✍️ ಹೆಬ್ಬುಲಿ ರಮ್ಮಿ