ಸುಡುಗಾಡು ತೋಡು ಸುಡುಗಾಡ ಆಗಿಬಿಟ್ಟಿದೆ

ಕುಂದಾಪುರ: ಕುಂದಾಪುರ ಕಸಬಾ ಪುರಸಭಾ ವ್ಯಾಪ್ತಿಯ ಖಾರ್ವಿ ಕೇರಿಯ ಮಧ್ಯಭಾಗದಿಂದ ಹಾದು ಹೋಗುವ ಸುಡುಗಾಡು ತೋಡು ನಿರಂತರ ಕಸ ಎಸೆಯುವುದರಿಂದ ಮಾಲಿನ್ಯದಿಂದ ಬಳಲುತ್ತಿದೆ. ಹಲವು ದಶಕಗಳಿಂದ ಈ ಒಂದು ಸುಡುಗಾಡು ತೋಡಿನ ಉದ್ದಕ್ಕೂ ರಾಶಿರಾಶಿ ಕಸಗಳು ತುಂಬಿಕೊಂಡು ಅಸಹನೀಯ ದುರ್ವಾಸನೆ ಮತ್ತು ಸೊಳ್ಳೆ ಕಾಟಕ್ಕೆ ಕಾರಣವಾಗಿದ್ದು ಮಳೆಗಾಲದ ಸಮಯದಲ್ಲಿ ಎಲ್ಲಾ ಕಸಕಡ್ಡಿಗಳು ಪಂಚಗಂಗಾವಳಿ ನದಿಗೆ ಸೋರಿಕೆ ಯಾಗುತ್ತಿದೆ. ಈ ಒಂದು ಕಲುಷಿತ ನೀರಿನಿಂದ ಪಂಚಗಂಗಾ ನದಿ ತಟದಲ್ಲಿ ವಾಸಿಸುವ ಸಾಂಪ್ರದಾಯಿಕ ಮೀನುಗಾರರು ತೊಂದರೆಗೆ ಒಳಗಾಗಿದ್ದು. ಚರಂಡಿಯಲ್ಲಿ ಶೇಖರಣೆಯಾದ ಕಸವನ್ನು ಸ್ವಚ್ಛ ಗೊಳಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಸಮಸ್ಯೆಯನ್ನು ಪರಿಹರಿಸಬೇಕಾಗಿ ತಮ್ಮಲ್ಲಿ ಕಳಕಳಿಯ ವಿನಂತಿಸುತ್ತೇನೆ.

ವರದಿ ಖಾರ್ವಿ ಆನ್ಲೈನ್. www.kharvionline.com

Leave a Reply

Your email address will not be published. Required fields are marked *