ಕುಂದಾಪುರ: ವಿಶ್ವ ಕೊಂಕಣಿ ಅಕಾಡೆಮಿ ಮಾರ್ಗದರ್ಶನದಲ್ಲಿ ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾದ 500 ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ತಲಾ 25 kg ಅಕ್ಕಿಯನ್ನು ವಿತರಿಸುವ ಯೋಜನೆ ಹಮ್ಮಿ ಕೊಂಡಿದ್ದು… ಯೋಜನೆಯ ಪ್ರಕಾರ ಕುಂದಾಪುರ ಭಾಗದ ಖಾರ್ವಿಕೇರಿ, ಮದ್ದುಗುಡ್ಡೆ, ಬಹದ್ದೂರ್ ಷಾ ರಸ್ತೆ, ಕೋಡಿ, ಬಸ್ರೂರು, ಟಿಟಿ ರಸ್ತೆ, ಹೊರವಲಯ.. ಸೇರಿ ಒಟ್ಟು 55 ಫಲಾನುಭವಿಗಳಿಗೆ ಇಂದು ಅಕ್ಕಿಯನ್ನು ವಿತರಿಸಲಾಯಿತು… ಸರಳ ಕಾರ್ಯಕ್ರಮದಲ್ಲಿ ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾದ ಅಧ್ಯಕ್ಷರಾದ ಕೆಬಿ ಖಾರ್ವಿ, ಶ್ರೀ ಮಹಾಕಾಳಿ ದೇವಸ್ಥಾನದ ಅಧ್ಯಕ್ಷರಾದ ಜಯಾನಂದ ಖಾರ್ವಿ, ಶ್ರೀ ಮಹಾಕಾಳಿ ದೇವಸ್ಥಾನದ ಮಾಜಿ ಅಧ್ಯಕ್ಷರಾದ ಪ್ರಕಾಶ್ ಖಾರ್ವಿ, ವಿದ್ಯಾರಂಗ ಮಿತ್ರಮಂಡಳಿ ಖಾರ್ವಿಕೇರಿ ಕುಂದಾಪುರ ಇದರ ಅಧ್ಯಕ್ಷರಾದ ಅರುಣ್ ಖಾರ್ವಿ, ಉಪಾಧ್ಯಕ್ಷರಾದ ಮಹೇಶ್ ಪಟೇಲ್, ಹಾಗೂ ವಿದ್ಯಾನಿಧಿ ಯೋಜನೆಯ ಉಪಾಧ್ಯಕ್ಷರಾದ ವಸಂತಿ ಸಾರಂಗ ಹಾಗೂ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ವಿದ್ಯಾರಂಗ ಮಿತ್ರಮಂಡಳಿ ಖಾರ್ವಿಕೇರಿ ಕುಂದಾಪುರ ಇದರ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ವಹಿಸಿಕೊಂಡು… ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿ ಫಲಾನುಭವಿಗಳಿಗೆ ಅಕ್ಕಿಯನ್ನು ವಿತರಿಸಿದರು ವರದಿ: ಮಹೇಶ್ ಪಟೇಲ್.