ಸಂತೃಸ್ತ ಮೀನುಗಾರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲು ಅಖಿಲ ಭಾರತ ಕೊಂಕಣಿ ಖಾವಿ೯ ಮಹಾಜನ ಸಭಾ ಮುಖ್ಯಮಂತ್ರಿಗಳಿಗೆ ಮನವಿ
ಹೊನ್ನಾವರ: ಉತ್ತರ ಕನ್ನಡದ ಭಟ್ಕಳ ಮತ್ತು ಉಡುಪಿ ಜಿಲ್ಲೆಯ ಹಲವಡೆಯಲ್ಲಿ ಸೋಮವಾರ ರಾತ್ರಿ ಸುರಿದ ನಿರಂತರ ಮಳೆಯಿಂದ ಮೀನುಗಾರರಿಗೆ ಕೋಟ್ಯಾಂತರ ರೂಪಾಯಿ ಹಾನಿ ಆಗಿದ್ದು, ಜಿಲ್ಲಾಡಳಿತ ತಕ್ಷಣ ಸ್ಪಂಧಿಸಿ ಸೂಕ್ತ ಪರಿಹಾರ ನೀಡುವಂತೆ ಅಖಿಲ ಭಾರತ ಕೊಂಕಣ ಖಾವಿ೯ ಮಹಾಜನಾ ಸಭಾ ಸಕಾ೯ರಕ್ಕೆ ಮನವಿ ಮಾಡಿದೆ.
ಜೀವಮಾನದಲ್ಲಿಯೇ ಕಂಡು ಕೇಳರಿಯದ ಧಾರಾಕಾರವಾಗಿ ಸುರಿದ ಮಳೆಯಿಂದ ಭಟ್ಕಳ ಹಾಗೂ ಸುತ್ತಮುತ್ತಲಿನ ಮೀನುಗಾರರ ಕುಟುಂಬಗಳು ತೀವೃ ಸಂಕಷ್ಟಕ್ಕೊಳಗಾಗಿವೆ.
ಸುಮಾರು 558 ಸೆ.ಮೀ. ಮಳೆ ಸುರಿದ ಪರಿಣಾಮ ಸಮುದ್ರ ದಡದಲ್ಲಿ ಲಂಗರು ಹಾಕಿದ ನೂರಾರು ಯಾಂತ್ರೀಕೃತ ನಾಡದೋಣಿಗಳು ಹಾಗೂ ಪಾತಿದೋಣಿಗಳು ನೀರಿನ ರಭಸಕ್ಕೆ ಸಮುದ್ರಕ್ಕೆ ಕೊಚ್ಚಿ ಹೋಗಿ ಒಡೆದು ಚೂರಾಗಿದ್ದು, ಕೆಲವೊಂದು ನಾಪತ್ತೆಯಾಗಿವೆ. ಅಲ್ಲದೇ ದೋಣಿಗಳ ಸೆಡ್‌ನಲ್ಲಿದ್ದ ಬಲೆ ಹಾಗೂ ಇತರ ಪರಿಕರಗಳು ಸಮುದ್ರದ ಪಾಲಾಗಿವೆ. ಸಮುದ್ರ ಹಾಗೂ ನದಿಯ ದಡದಲ್ಲಿರುವ ಮೀನುಗಾರರ ಮನೆಗಳಿಗೆ ನೀರು ನುಗ್ಗಿದ ಪರಿಣಾಮವಾಗಿ ಲಕ್ಷಾಂತರ ರೂಪಾಯಿಗಳ ಆಸ್ತಿ-ಪಾಸ್ತಿ ನಷ್ಟವಾಗಿದೆ. ಮೊದಲೇ ಸಂಕಷ್ಟದಲ್ಲಿರುವ ಮೀನುಗಾರರಿಗೆ ಈ ಮಳೆಯ ಹಾನಿಯಿಂದ ಇನ್ನೊಂದು ಆಘಾತ ಸಂಭವಿಸಿದೆ. ಆದ್ದರಿಂದ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಆಗಮಿಸಿ ಪ್ರತಿಯೊಂದು ಕುಟುಂಬಗಳ ನಷ್ಟವನ್ನು ಪರಿಶೀಲಿಸಿ ನಡೆಸಿ ಸೂಕ್ತ ಪರಿಹಾರ ನೀಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಅಖಿಲ ಭಾರತ ಕೊಂಕಣಿ ಖಾವಿ೯ ಮಹಾಜನ ಸಭಾದ ಅಧ್ಯಕ್ಷ ಮೋಹನ ಬಾನಾವಳಿಕರ, ಪ್ರಧಾನ ಕಾಯ೯ದಶಿ೯ ಕೃಷ್ಣಾ ತಾಂಡೇಲ್ ಮನವಿ ಮಾಡಿಕೊಂಡಿದ್ದಾರೆ.