ಕುಂದಾಪುರದ ಖಾರ್ವಿಕೇರಿ ರಿಂಗ್ ರಸ್ತೆಯ ಪಂಚಗಂಗಾ ವಳಿಯ ತಟದಲ್ಲಿ ತಿರಂಗ ಹಾರಾಟ ಚಾಲನೆಯನ್ನು ಕುಂದಾಪುರ ಜನಪ್ರಿಯ ಶಾಸಕರಾದ ಹಾಲಾಡಿ ಶ್ರೀನಿವಾಸ್ ಶೆಟ್ಟಿ ನೀಡಿದರು.
ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ ಅವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾತಂತ್ರ್ಯಕ್ಕಾಗಿ ಮಡಿದವರನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು ಹಾಲಾಡಿ ಶ್ರೀನಿವಾಸ ಶೆಟ್ಟಿ, ಸ್ವಾತಂತ್ರ್ಯ ಲಭಿಸಿ ಇಂದಿಗೆ 75 ವರ್ಷ ಕಳೆದಿದೆ, ಆ ಕಾಲದಲ್ಲಿ ನಾವ್ಯಾರು ಇದ್ದಿರಲಿಲ್ಲ, ಲಕ್ಷಾಂತರ ಜನರ ತ್ಯಾಗ ಬಲಿದಾನ ಪರಾಕ್ರಮದಿಂದ ದೊರೆತ ಸ್ವಾತಂತ್ರ್ಯವನ್ನು ನಾವೆಲ್ಲಾ ಕಾಪಾಡಿಕೊಂಡಿ ಹೋಗಬೇಕಿದೆ. ಸ್ವಾತಂತ್ರ್ಯಕ್ಕಾಗಿ ದುಡಿದ ಲಕ್ಷಾಂತರ ಜನರನ್ನು ನಾವು ಸ್ಮರಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ಮಂಡಲ ಪ್ರಭಾರಿ ಬೈಕಾಡಿ ಸುಪ್ರಸಾದ್ ಶೆಟ್ಟಿ, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಶೆಟ್ಟಿ, ಸತೀಶ್ ಪೂಜಾರಿ ವಕ್ವಾಡಿ, ದಕ್ಷಿಣ ಕನ್ನಡ ಜಿಲ್ಲಾ ಸಹಪ್ರಭಾರಿ ರಾಜೇಶ್ ಕಾವೇರಿ, ಓಬಿಸಿ ಜಿಲ್ಲಾಧ್ಯಕ್ಷರು ಶ್ರೀ ಸುರೇಂದ್ರ ಪಣಿಯೂರ್, ಜಿಲ್ಲಾ ಓಬಿಸಿ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಬಾಣ, ಸತೀಶ್ ಕುಲಾಲ್ ಜಿಲ್ಲಾ ಓಬಿಸಿ ಉಪಾಧ್ಯಕ್ಷರಾದ ಸುಧೀರ್ ಕೆ ಎಸ್, ಮನೋಜ್ ಕರ್ಕೇರ, ಕಾರ್ಯಕಾರಣಿ ಸದಸ್ಯ ಸುನಿಲ್ ಶೇಟ್, ಓಬಿಸಿ ಮಂಡಲ ಅಧ್ಯಕ್ಷರು ಶ್ರೀ ಸತೀಶ್ ಕುಂದರ್ ಬಾರಿಕೆರೆ, ಓಬಿಸಿ ಪ್ರಧಾನ ಕಾರ್ಯದರ್ಶಿ ಶ್ರೀ ಜೀವನ್ ಅಂಕದಕಟ್ಟೆ ಶ್ರೀ ದಯಾನಂದ ಖಾರ್ವಿ ಹಾಗೂ ಓಬಿಸಿ ಎಲ್ಲಾ ಪದಾಧಿಕಾರಿಗಳು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುನೀಲ್ ಖಾರ್ವಿ, ಹಾಗೂ ಮಹಿಳಾ ಮೋರ್ಚಾ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಶ್ರೀ ಮಹಾಕಾಳಿ ದೇವಸ್ಥಾನದ ಅಧ್ಯಕ್ಷರಾದ ಜಯನಂದ ಖಾರ್ವಿ , ಪುರಸಭೆಯ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಬಿಜೆಪಿ ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.