ಆಮ್ಗೆಲೆ ಮಹಾರಾಜ ಗಣಪತಿ

ಕುಂದಾವರ್ಮ ರಾಜರು ಆಳಿದ ಸುಪ್ರಸಿದ್ಧ ತಾಣ ಈ ನಮ್ಮ ಕುಂದಾಪುರ. ಸೌಪರ್ಣಿಕಾ, ವರಾಹಿ, ಕುಬ್ಜ, ಕೆದಾಕ, ಚಕ್ರೆ ಈ ಐದು ಪವಿತ್ರ ನದಿಗಳ ಸಂಗಮವಾಗಿ ದುಮ್ಮಿಕ್ಕಿ ಹರಿಯುವ ಪುಣ್ಯ ಪಂಚಗಂಗಾವಳಿ ನದಿಯು ಉಗಮವಾಗುವ ಸುಂದರ ತಾಣವು ಹೌದು ಈ ನಮ್ಮ ಕುಂದಾಪುರ. ಪರಶುರಾಮರು ಸೃಷ್ಟಿಸಿದ ಕರಾವಳಿ ತೀರದ ಒಂದು ಭಾಗವಾಗಿರುವ ಈ ನಮ್ಮೂರು ಹಲವಾರು ಪ್ರಸಿದ್ದ ಧಾರ್ಮಿಕ ಭಕ್ತಿ ಕ್ಷೇತ್ರಗಳ ತವರೂರು. ಇಂತಹ ಸುಂದರ ತಾಣ ಕುಂದಾಪುರದ ಮಧ್ಯಭಾಗದಲ್ಲಿ ಹರಿಯುವ ಪಂಚಗಂಗಾವಳಿ ನದಿಯ ತಟದಲ್ಲಿ ನೆಲೆ ನಿಂತಿದ್ದಾಳೆ ಭಕ್ತ ವತ್ಸಲೆ ಶ್ರೀ ಮಹಾಕಾಳಿ ಅಮ್ಮನವರು.

ಸುಮಾರು ಎಂಬತ್ತರ ದಶಕದಲ್ಲಿ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶರಾದ ಶ್ರೀ ಶ್ರೀ ಶ್ರೀ ಮಧಭಿನವ ವಿದ್ಯಾ ತೀರ್ಥ ಮಹಾಸ್ವಾಮಿಗಳವರ ಅಮೃತ ಹಸ್ತಗಳಿಂದ ಶೀಲಾನ್ಯಾಸಗೊಂಡ ಶ್ರೀ ಮಹಾಕಾಳಿ ದೇವಸ್ಥಾನವು ವಿಶೇಷ ಭಕ್ತಿಯ ಕೇಂದ್ರವಾಗಿ ಊರ ಪರ ಊರ ಜನರ ಆರಾಧ್ಯ ಕ್ಷೇತ್ರವಾಗಿದೆ. ಜಗನ್ಮಾತೆ ಮಹಾಕಾಳಿ ಅಮ್ಮನವರು ನೆಲೆ ನಿಂತಿರುವ ಈ ಕ್ಷೇತ್ರದಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ಬ್ರಹ್ಮಕಲಶ ನೆರವೆರುವುದು ಪ್ರತೀತಿ ಅಂತಹೆ 1988 ರಲ್ಲಿ ಶ್ರೀ ಶ್ರೀ ಶ್ರೀಮದಭಿನವ ವಿದ್ಯಾ ತೀರ್ಥ ಸ್ವಾಮೀಜಿಗಳವರಿಂದ ಶೀಲಾನ್ಯಾಸ ಗೊಂಡು ಬ್ರಹ್ಮಕಲಶ ನೆರವೇರಿತು ನಂತರ 2002 ರಲ್ಲಿ ಇವರ ಶಿಷ್ಯರುಗಳದ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿ ಗಳವರ ಅಮ್ರತ ಹಸ್ತಗಳಿಂದ ಬ್ರಹ್ಮಕಲಶ ನೇರವೆರಿತು.

2016 ರಲ್ಲಿ ಇವರ ಕರಕಮಲ ಸಂಜಾತಾರಾದ ಶ್ರೀ ವಿಧುಶೇಖರ ಸ್ವಾಮಿಗಳವರ ಅಮೃತ ಹಸ್ತಗಳಿಂದ ಅಷ್ಟೋತ್ತರ ಬ್ರಹ್ಮಕುಂಭಾಭಿಷೇಕ ನೆರವೇರಿತು. ಶೃಂಗೇರಿ ಪೀಠಾದ ಗುರು ಪರಂಪರೆಯ ಮೂವರು ಗುರುಗಳಿಂದಲೂ ಈ ಸನ್ನಿಧಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನೆಡೆದಿದ್ದು ಅತೀ ವಿಶೇಷವಾಗಿದೆ ಮತ್ತು ಅತ್ಯಂತ ಪವಿತ್ರ ಹಾಗೂ ಧಾರ್ಮಿಕ ಕ್ಷೇತ್ರವಾಗಿರುದರ ಸಾಕ್ಷಿಯಾಗಿದ್ದು ಮಾತ್ರವಲ್ಲದೆ, ಸಾಕ್ಷತ್ ಪಾರ್ವತಿ ಸ್ವರೂಪಿಣಿ ಯಾಗಿರುವ ಶ್ರೀ ಮಹಾಕಾಳಿ ಅಮ್ಮನವರು ನೆಲೆನಿಂತಿರುವ ಈ ಸನ್ನಿಧಾನದಲ್ಲಿ ಪಾರ್ವತಿ ಪುತ್ರ ವಿಘ್ನೇಶ್ವರನ ಆರಾಧನೆಯು ಭಕ್ತಿ ಭಾವದಿಂದ ವಿಷೇಶವಾಗಿ ನೆಡೆಯುತ್ತದೆ.

ಭಾದ್ರಪದ ಮಾಸದಲ್ಲಿ ಬರುವ‌ ಪ್ರಥಮ ಪೂಜಿತ ಶ್ರೀ ಮಹಾಗಣೇಶನ ಹಬ್ಬವನ್ನು ಕಳೆದ 32 ವರ್ಷಗಳಿಂದ ಸಮಾಜದ ಭಕ್ತರು ಸೇರಿ ಗಣಪನ ಸುಂದರ ಮೂರ್ತಿ ಪ್ರತಿಷ್ಟಾಪಿಸಿ ಐದು ದಿನಗಳು ಶ್ರದ್ದೆ ಭಕ್ತಿಯಿಂದ ಗಣೇಶೋತ್ಸವ ಆಚರಿಸುತ್ತಾರೆ. ಶ್ರೀ ವಸಂತ್ ಗುಡಿಗಾರ್ ಇವರ ಕೈಯಿಂದ ಮೂಡಿಬರುವ ಈ ಚಂದದ ಮೂರ್ತಿಯನ್ನು ನೋಡಲೆಂದೆ ಜಿಲ್ಲೆಯ ಹಲವಾರು ಕಡೆಗಳಿಂದ ಭಕ್ತರು ಆಗಮಿಸುತ್ತಾರೆ. 2015 ರಲ್ಲಿ ಶ್ರೀ ಮಹಾಕಾಳಿ ದೇವಸ್ಥಾನ ಗಣೇಶೋತ್ಸವ ಸಮಿತಿಯು ರಜತ ಮಹೋತ್ಸವ ವೈಭವ ಪೂರಿತವಾಗಿ ಆಚರಿಸಿ ದೇವರಿಗೆ ಸಂಪೂರ್ಣ ಬೆಳ್ಳಿ ಸಿಂಹಾಸನ ಸಮರ್ಪಿಸಿ, ಸಹಸ್ರ ನಾಳಿಕೇರ ಗಣಯಾಗ ನೆರವೆರಿಸಿ ರಜತ ಮಹೋತ್ಸವದ ಭಕ್ತಿಯ ಸುಹಾಸನೆ ಕುಂದಾಪುರ ವೆಲ್ಲಾ ಪಸರಿಸಿ ಭಕ್ತಿ ವೈಭವಕ್ಕೆ ಸಾಕ್ಷಿಯಾದ ಕ್ಷಣ ಇಂದಿಗೂ ಕಣ್ಣಾ ಮುಂದೆ ನಿಂತಿದೆ.

ಶ್ರೀ ಮಹಾಕಾಳಿ ದೇವಸ್ಥಾನ ದ ಕಲ್ಯಾಣ ಮಂಟಪದಲ್ಲಿ ಬೆಳ್ಳಿಯ ಸಿಂಹಾಸನದಲ್ಲಿ ಅಂದದ ಮಂಗಳ ಮುರುತಿ ಕುಳ್ಳಿರಿಸಿ ಶ್ರೀ ಮಂಜುನಾಥ ಸೋಮಯಾಜಿ ಇವರ ನೆತ್ರತ್ವದಲ್ಲಿ ಶ್ರದ್ದೆ, ಭಕ್ತಿ, ಭಾವ ಮತ್ತು ವಿಜ್ರಂಭಣೆ ಯೊಂದಿಗೆ ಪೋಜಿಸಿ ಐದನೆ ದಿನಕ್ಕೆ ಅನ್ನಸಂತರ್ಪಣೆ ನಡೆಯುತ್ತಿದ್ದಂತೆ. ಹಲವು ಕಲಾತಂಡಗಳ ಝೆಂಕಾರ ದೊಂದಿಗೆ ಮಧುವಾಣ ಗಿತ್ತಿಯಂತೆ ಶೃಂಗಾರಗೊಂಡ ವಾಹನದಲ್ಲಿ ವೈಭವದ ವಿಸರ್ಜನಾ ಪುರಮೆರವಣಿಗೆ ಯು ಕುಂದಾಪುರದ ಪ್ರಮುಖ ರಸ್ತೆಯ ಮಾರ್ಗವಾಗಿ ಪಂಚಗಂಗಾ ನದಿಗೆ ಸಮಿಸುತ್ತಿರಲು ಪ್ರಶಾಂತವಾಗಿ ಹರಿಯುತ್ತಿರುವ ಪಂಚಗಂಗಾ ನದಿ ಇನ್ನೇನೂ ತಾನು ಗಣಪತಿಯ ಸ್ವರ್ಶದಿಂದ ಇನ್ನಷ್ಟು ಪಾವನಾಗಳುವೆ ಎನ್ನುವ ಸಂತಸದ ಅಲೆಗಳ ನರ್ತನದೊಂದಿಗೆ ಸ್ವಾಗತಿಸುತ್ತಿರುವಳಂತೆ ಭಾಸವಗುತ್ತೆ. ಸಂಜೆಯ ತಂಪು, ಕೆಂಪಾದ ಆಗಸದ ಸೂರ್ಯ ತುಸು ‌ಮುಳುಗಿ, ಬೆಳದಿಂಗಳ ಚಂದ್ರೋದಯದ ಹೊತ್ತಲ್ಲಿ ಅಂಗೇಲೆ ಗಣಪತಿ ಎನ್ನುವ ಹರ್ಷೋದ್ಗಾರದ ಕೂಗು ಮುಗಿಲೇತ್ತರಕ್ಕೆ ಸಾಗುತ್ತಿರಲು ನಮ್ಮ ಮಹಾರಾಜ ಗಣೇಶ ಪಾವನ ಪಂಚಗಂಗಾ ನದಿಯಲ್ಲಿ ಜಲಸ್ಥಂಭನವಾಗುವ ದೃಶ್ಯ ಸಾವಿರಾರು ಭಕ್ತರು ಕಣ್ತುಂಬಿ ಕೊಳ್ಳುತ್ತಾರೆ.

ಸುನೀಲ್ ಖಾರ್ವಿ
ಬಹದ್ದೂರ್ ಶಾ ರಸ್ತೆ, ಕುಂದಾಪುರ

Leave a Reply

Your email address will not be published. Required fields are marked *