ಅದೇನೋ ಗೊತ್ತಿಲ್ಲ…!!!ಚಿಕ್ಕವನಿರುವಾಗಲೇ ಚಿತ್ರ ಕಲೆ ಕಡೆ ಆಸಕ್ತಿ ಮೂಡುತದೆ ಈ ಹುಡುಗನಿಗೆ. ತನ್ನ ಇಷ್ಟದಂತೆ ಗಿಚುತ್ತ ಗಿಚುತ್ತಲೇ ಚಿತ್ರಕಲೆಯ ಆರಾಧಕನಾಗುತ್ತಾನೆ ನೀರಜ್.ಈತನ ಪ್ರಯತ್ನಕ್ಕೆ ಈತನ ಶ್ರದ್ಧೆಗೆ ಈ ಕಲೆ ಈ ಬಾಲಕನ ಮಾಂತ್ರಿಕ ಶಕ್ತಿಯ ಕೈ ಗಳಿಗೆ ಶರಣಾಗಿ god bless u my boy ಎಂದು ಶುಭ ಹಾರೈಸುತ್ತದೆ.ನಂತರ ಈತ u tube ನೋಡಿ ಚಿತ್ರಕಲೆಯ ಒಳ ಹೊರಗೂ ತಿಳಿದು ಕೊಂಡು ತನ್ನ ಸ್ವ ಪ್ರಯತ್ನದಿಂದ ಇಂದು ಚಿತ್ರಕಲೆಯಲ್ಲಿ ವಿಶಿಷ್ಟವಾಗಿ ಗುರುತಿಕೊಂಡಿದ್ದಾರೆ.
ರಮೇಶ್ ಮತ್ತು ಪುಷ್ಪ ರವರ ಪುತ್ರ ನೀರಜ್ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜ್ ನ BCA ಸ್ಟೂಡೆಂಟ್. ತಂದೆಯಂತೆ ಉತ್ತಮ ಬ್ಯಾಡ್ಮಿಂಟವ್ನ್ ಆಟಗಾರ.ಈತ ಶಟಲ್ ಆಟಗಾರನೂ ಹೌದು.ಮಂಗಳೂರು ಯೂನಿವರ್ಸಿಟಿ ಯಲ್ಲಿ ಲೀಗ್ ಮತ್ತು ಚಾಂಪಿಯನ್ ಶಿಪ್ ನಲ್ಲಿ ಗಮನಸೆಳೆದ ಆಟಗಾರ ಮತ್ತು ಪ್ರಶಸ್ತಿ ಭಾಜನ ಆಟಗಾರನೂ ಹೌದು.ತಂದೆ ಹಾಗೆ ಮೃದು ಭಾಷಿಗ ನೀರಜ್ ತನ್ನ ಚಿತ್ರಕಲೆಯಿಂದ ಎಲ್ಲರ ಗಮನ ಸೆಳೆದಿದ್ದು,ಇತ್ತೀಚಿಗೆ ಇವರ ಮನೆಯ ಪರಿಸರದಲ್ಲಿ ಶೂಟಿಂಗ್ ಗೆ ಬಂದ ಚಿತ್ರನಟಿ ರಚಿತಾ ರಾಮ್ ರವರ ಚಿತ್ರ ಬಿಡಿಸಿ ಅವರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಈ ಯುವ ಪ್ರತಿಭೆ ಇನ್ನೂ ಹೆಚ್ಚು ಬೆಳಗಲಿ. ಖಾರ್ವಿ ಸಮುದಾಯದ ಈ ಪ್ರತಿಭೆಗೆ hatsup
ಈತನ ಪ್ರತಿಭೆಗೆ ಇಲ್ಲಿರುವ ಈತ ಬರೆದ ಚಿತ್ರಗಳೇ ಜ್ವಲಂತ ಸಾಕ್ಷಿ
ರವಿ ಕುಮಾರ್ ಗಂಗೊಳ್ಳಿ