ಕುಂದಾಪುರ ನಗರದ ಶಕ್ತಿದೇವತೆ ಶ್ರೀ ಮಹಾಕಾಳಿ ದೇವಸ್ಥಾನದ 33 ನೇ ವರ್ಷದ ಪ್ರತಿಷ್ಠಾ ವರ್ಧಂತಿ ಮಹೋತ್ಸವವು ತಾರೀಕು 21.1 2023 ರಿಂದ 24.1 2023 ರ ತನಕ ವೈಭವಪೂರ್ಣವಾಗಿ ಜರುಗಲಿದೆ. ಪ್ರಥಮ ದಿನ 21.1.2023 ರಂದು ಗಣಹೋಮ ಇತ್ಯಾದಿ ಪೂಜಾಕೈಂಕರ್ಯಗಳು, ಸಂಜೆ 6 ಗಂಟೆಯಿಂದ ಶ್ರೀ ಮಹಾಕಾಳಿ ಅಮ್ಮನವರ ಪುಷ್ಪಾಲಂಕೃತ ಪಲ್ಲಕ್ಕಿ ಉತ್ಸವ ಪುರ ಮೆರವಣಿಗೆ ಮದ್ದುಗುಡ್ಡೆ ಪ್ರವೇಶಿಸುತ್ತದೆ.
ತಾರೀಕು 22.1.2023 ರಂದು ಪಲ್ಲಕ್ಕಿ ಉತ್ಸವ ಮೆರವಣಿಗೆಯು ಬಹೂದ್ದೂರ್ ಷಾ ರಸ್ತೆ ಪರಿಸರಕ್ಕೆ ಪ್ರವೇಶ. ತಾರೀಕು 23.1.2023 ರಂದು ವಾಸ್ತುಪೂಜೆ, ರಾಕ್ಷೋಘ್ನ ಹೋಮ, ಬ್ರಹ್ಮಕಲಶ ಸ್ಥಾಪನೆ ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ಮತ್ತು ರಾತ್ರಿ 8 ಗಂಟೆಗೆ ಊರ ಪರವೂರ ಪ್ರಸಿದ್ಧ ಭಜನಾ ತಂಡದವರಿಂದ ಸ್ಪರ್ಧಾತ್ಮಕ ಭಜನಾ ಕಾರ್ಯಕ್ರಮ ನಡೆಯಲಿದೆ.
ತಾರೀಕು 24.1.2023 ರಂದು ಅಶ್ವತ ವೃಕ್ಷ ಪೂಜೆ, ಶ್ರೀ ನಾಗದೇವರಿಗೆ ಕಲಾಶಾಭಿಷೇಕ, ಚಂಡಿಕಾಹೋಮ, ಬ್ರಹ್ಮಕಲಶಾಭಿಷೇಕ ಇತ್ಯಾದಿ ಕಾರ್ಯಕ್ರಮ ಮದ್ಯಾಹ್ನ 1 ಗಂಟೆಯಿಂದ ಸೇವಾಕರ್ತರಿಂದ ಅನ್ನಸಂತರ್ಪಣೆ ಇರುತ್ತದೆ ಸಂಜೆ ವಾರ್ಷಿಕವಾಗಿ ಜರಗುವ ಪಲ್ಲಕ್ಕಿ ಉತ್ಸವದ ಪುರಮೆರವಣಿಗೆ ಖಾರ್ವಿಮೇಲ್ಕೇರಿ ಶ್ರೀ ನಾಗಜಟ್ಟೀಗೇಶ್ವರ ಸಾನ್ನಿಧ್ಯಕ್ಕೆ ಆಗಮನ, ವಿಶೇಷ ಪೂಜೆ, ಅರ್ಚಕರಿಂದ ಆಶೀರ್ವಚನ, ಪ್ರಸಾದ ವಿತರಣೆಯೊಂದಿಗೆ ಸಂಪನ್ನಗೊಳ್ಳಲಿದೆ ಜಗನ್ಮಾತೆ ಶ್ರೀ ಮಹಾಕಾಳಿ ದೇವಸ್ಥಾನ ಖಾರ್ವಿಕೇರಿ ಕುಂದಾಪುರ ಇಲ್ಲಿ ನಡೆಯುವ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ದೇಗುಲದ ಆಡಳಿತ ಮಂಡಳಿಯ ಪ್ರಕಟಣೆಯಲ್ಲಿ ಕೋರಲಾಗಿದೆ.