ಹಲವಾರು ಮಂದಿ ಕೇಳುವವರು, “ನಾನೇರುವೆತ್ತರಕೆ ನೀನೇರಬಲ್ಲೆಯಾ?” ಎಂದು.
ಆದರೆ ನಾನು ಅವರಲ್ಲಿ ಕೇಳುವೇ “ನಮ್ಮ ಕೊಂಕಣಿ ಖಾರ್ವಿ ಸಮಾಜ ಬಾಂಧವರು ಇಳಿಯುವ ಆಳಕ್ಕೆ ನೀವು ಇಳಿಯ ಬಲ್ಲಿರಾ?” ಎಂದು. ಮನುಷ್ಯ ಏರುವುದು ದೊಡ್ಡ ಸಂಗತಿಯಲ್ಲ, ಆಳಕ್ಕೆ ಇಳಿದು ನಿಲ್ಲುವುದು ಸಾಮಾನ್ಯ ವಿಷಯ ಅಲ್ಲಾ, ಆ ನಿಟ್ಟಿನಲ್ಲಿ ಖಾರ್ವಿ ಸಮಾಜ ಒಂದು ಕೈ ಮುಂದೆ ಎಂದು ಹೇಳಬಲ್ಲೆ.
ನೋಡಿದ್ದೇನೆ ನಾ…….. ಎಷ್ಟೇ ಉನ್ನತ ಕೆಲಸ ದಲ್ಲಿರಲಿ, ಚಿಕ್ಕ ಕೆಲಸ ದಲ್ಲಿರಲಿ, ಎಷ್ಟೇ ಹಣ ಇರಲಿ, ಹಣ ಇಲ್ಲದಿರಲಿ, ಎಷ್ಟೇ ದೊಡ್ಡ ವ್ಯಕ್ತಿ ಆಗಲಿ, ಚಿಕ್ಕ ವ್ಯಕ್ತಿ ಆಗಲಿ, ನಿಮ್ಮ ದೇವರ ಕಾರ್ಯಕ್ರಮ ದಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ, ಯಾವುದೇ ಕಾರ್ಯಕ್ರಮ ದಲ್ಲಿ ಎಲ್ಲರೂ ಒಂದೇ.
ನೀವುಗಳು ಒಂದು ಕಾರ್ಯ ಕೈಗೊಂಡರೆ, ಅದು ಪೂರ್ಣ ಆಗದೆ ಹಿಂದೆ ಸರಿದವರೇ ಅಲ್ಲಾ, ಎದುರು ನಿಂತವರು ಎಷ್ಟೇ ಬಲಶಾಲಿ ಆಗಿರಲಿ, ಎಂದೂ ಜಗ್ಗದ ಜಾಯಮಾನ ವೇ ಇಲ್ಲಾ. ನಿಮ್ಮ ಮಂತ್ರ ಒಂದೇ ನುಗ್ಗಿ ನಡೆ, ನುಗ್ಗಿ ನಡೆ, ನುಗ್ಗಿ ನಡೆ ಮುಂದೆ, ಹಿಗ್ಗದಯೆ, ಕುಗ್ಗದಯೆ, ಜಗ್ಗಿ ನಡೆ ಮುಂದೆ.
ಐದು ನದಿ ಝರಿಗಳಿಂದ ಬಳುಕಿ ಬರುವ ಹಾಲ್ನೊರೆಯ ನೀರು, ಜುಳು ಜುಳು – ಬುಳು ಬುಳು ನಿನಾದದಿಂದ ಪಂಚಗಂಗಾವಳಿ ಪ್ರಕೃತಿ ನಿತ್ಯ ಹಸಿರು. ಕೊಂಕಣಿ ಖಾರ್ವಿ ಜೀವರಾಶಿ ಬಂಧು ಬಾಂಧವರೊಳಗೊಂಡ ಸಹಬಾಳ್ವೆ ಯ ಬದುಕು, ತಂಗಾಳಿಯ ಹಿತಹವೆಯಲ್ಲಿ ಯಾವ ಶತ್ರು ಚಿಂತೆ ಇಲ್ಲ ಎದಕು. ಮಹಾಂಕಾಳಿ ಮಾತೆ, ಪ್ರಕೃತಿ ಮಾತೆ ನೆಲೆಸಿ ಇಲ್ಲಿ ಚೆಂಬಳಕನು ಚೆಲ್ಲಿ, ನೀಡುತಿರಲು ಐಸಿರಿಯನು ನಿತ್ಯ ಬದುಕಿಗಿಲ್ಲಿ.
ಹುಲುಮಾನವರಲ್ಲಿ ಸ್ವಾರ್ಥ – ಲೋಭ ಮನೆ ಮಾಡುವುದು ಸ್ವಾಭಾವಿಕ ಕಲಿಯುಗದಲ್ಲಿ,
ಅದು ಸೊಂಕದು ಅಮ್ಮನವರ ಶಕ್ತಿ – ಭಕ್ತಿ ಕೂಂತಿಹುದು ಕೊಂಕಣಿ ಖಾರ್ವಿ ಸಮಾಜ ಬಾಂಧವರ ಎದೆಯ ಗರ್ಭದಾಳದಲ್ಲಿ. ಎಲ್ಲೆಡೆ ಕುರುಡು ಕಾಂಚಾಣದ ನಿತ್ಯ ರುದ್ರ ನರ್ತನ,
ಬನ್ನಿ ನಮ್ಮೂರ ಅಮ್ಮನ ನೆಡೆಗೆ ನಿತ್ಯ ದೇವಿ ದರ್ಶನ.
ವಂದನೆಗಳು
ಶಶಿಕಾಂತ್ ಗಂಗೊಳ್ಳಿ