ಸರ್ವ ಮಂಗಳ ಮಾಂಗಲ್ಯೇ ಶಿವೇ ಸವಾರ್ಥ ಸಾಧಿಕೇ |
ಶರಣ್ಯೆ ತ್ರೆಯಾಂಬಿಕೇ ದೇವಿ ನಾರಾಯಣೀ ನಮೋಸ್ತುತೆ ||
ಶ್ರೀ ಮಹಾಕಾಳಿ ದೇವಸ್ಥಾನ ಕುಂದಾಪುರ.
ಮನವಿ
ರಜತ ಆಭರಣ ಸಮರ್ಪಣ ಯೋಜನೆ
ಪ್ರೀಯ ಭಕ್ತ ಮಹಾಶಯರೇ,
ಜಗನ್ಮಾತೇ ಶ್ರೀ ಮಹಾಕಾಳಿ ಅಮ್ಮನವರ ಪ್ರೀತ್ಯರ್ಥವಾಗಿ, ವರದಿ ವರ್ಷ ನವರಾತ್ರಿ ಉತ್ಸವ ಪರ್ವಕಾಲದಲ್ಲಿ ಅಮ್ಮನವರ ಬಿಂಬದ ಪಾದ – ಪದ್ಮ ಕಮಲಗಳ ಸಹಿತ ಪಾಣಿಪೀಠಕ್ಕೆ ರಜತ ಧಾರಣೆ ಮತ್ತು ಗರ್ಭಗುಡಿಯ ದ್ವಾರ ಬಾಗಿಲುಗಳಿಗೆ ಕಲಾತ್ಮಕ ರೀತಿಯ ಬೆಳ್ಳಿಯ ಹೊದಿಕೆ ಹಾಗೂ ಗರ್ಭಗುಡಿಯ ಪ್ರಧಾನ ಗೋಡೆಗೆ ನೂತನ ಮಾದರಿಯಲ್ಲಿ ಅಲಂಕೃತವಾದ ಹಿತ್ತಾಳೆ ಕವಚ ಅಳವಡಿಸಿ ಸಮರ್ಪಿಸುವ ಮಹತ್ಕಾರ್ಯಕ್ಕೆ, ಸುಮಾರು ರೂ. 25 ಲಕ್ಷ ಖರ್ಚು ಅಂದಾಜಿಸಲಾಗಿದ್ದು, ಭಗವದ್ಭಕ್ತರು ಈ ಸಮರ್ಪಣ ಕಾರ್ಯಕ್ಕೆ ತಮ್ಮ ಶಕ್ತ್ಯಾನುಸಾರ ದೇಣಿಗೆಯಾಗಿ
* 1 ಕೆ.ಜಿ ಬೆಳ್ಳಿ (ಮಜೂರಿ ಸಹಿತ) -ರೂ. 80000.00
* 500 ಗ್ರಾಂ ಬೆಳ್ಳಿ (ಮಜೂರಿ ಸಹಿತ) – ರೂ. 40000.00
* 250 ಗ್ರಾಂ ಬೆಳ್ಳಿ (ಮಜೂರಿ ಸಹಿತ) – ರೂ. 20000.00
* 100 ಗ್ರಾಂ ಬೆಳ್ಳಿ (ಮಜೂರಿ ಸಹಿತ) – ರೂ. 8,000.00
* 50 ಗ್ರಾಂ ಬೆಳ್ಳಿ (ಮಜೂರಿ ಸಹಿತ) – ರೂ. 4.000.00
ನೀಡಬಹುದಾಗಿದ್ದು , ಈ ಸೇವಾ ಯೋಜನೆಯಲ್ಲಿ ಸರ್ವರೂ ತನು-ಮನ-ಧನಗಳಿಂದ ಸಹಕರಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ .
ವಿಶೇಷ ಸೂಚನೆ :
* ರೂ 25,000/- ಹಾಗೂ ಅದಕ್ಕಿಂತ ಮೇಲ್ಪಟ್ಟು ದೇಣಿಗೆ ನೀಡಿದ್ದ ಭಕ್ತಾಧಿಗಳ ಹೆಸರನ್ನು ದೇವಸ್ಥಾನದ ಶಾಶ್ವತ ನಾಮಫಲಕದಲ್ಲಿ ಪ್ರಕಟಿಸಲಾಗುವುದು.
* ದೇಣಿಗೆ ನೀಡಬಯಸುವ ಭಕ್ತಮಹಾಶಯರು ದೇವಸ್ಥಾನದ ಸೇವಾಕೌಂಟರ್ ಅಥವ ದೇವಸ್ಥಾನದ ಉಳಿತಾಯ ಖಾತೆಗೆ ಜಮಾ ಮಾಡಬಹುದು.
ಶ್ರೀ ಮಹಾಕಾಳಿ ದೇವಸ್ಥಾನ ಕುಂದಾಪುರ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಕುಂದಾಪುರ ಶಾಖೆ
ಖಾತೆ ನಂ 54034833748
IFSC : SBINOO40150
ಸಂಪರ್ಕಿಸಿ :
08254-232225, 9448252038
ಮೂರು ಮೊಕ್ತೇಸರರು, ಅಧ್ಯಕ್ಷರು | ಸದಸ್ಯರು ಆಡಳಿತ ಸಮಿತಿ.