ಕೊಂಕಣಿ ಖಾರ್ವಿ ಸಮಾಜ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಇವರಿಂದ ಶೃಂಗೇರಿಯಲ್ಲಿ ಗುರುವಂದನೆ ಕಾರ್ಯಕ್ರಮ

ಗುರುವಂದನ ಸಮಿತಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ

ಕೊಂಕಣಿ ಖಾರ್ವಿ ಸಮಾಜ ಇವರಿಂದ ಶೃಂಗೇರಿ ಶ್ರೀ ಶಾರದಾಪೀಠದಲ್ಲಿ

ಚಾತುರ್ಮಾಸ್ಯ ಗುರುವಂದನೆ ಕಾರ್ಯಕ್ರಮ

(ಶನಿವಾರ, ಜುಲೈ 08,2023)
|| ಶ್ರೀ ಶಾರದಾ ಗುರುಭ್ಯೋ ನಮಃ ||

ಗುರುವಂದನ ಸಮಿತಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಇವರು ಸಮಾಜದ ಹಿರಿಯರು, ಪಟೇಲರು ಹಾಗೂ ಉಭಯ ಜಿಲ್ಲೆಯ ಕೊಂಕಣಿ ಖಾರ್ವಿ ಸಮಾಜದ ಆಡಳಿತಕ್ಕೆ ಒಳಪಟ್ಟ ದೇವಸ್ಥಾನಗಳ ಮೊಕ್ತೇಸರರು, ಮತ್ತು ಪ್ರಾದೇಶಿಕ ಸಮುದಾಯ ಹಾಗೂ ಸಂಘ ಸಂಸ್ಥೆಗಳ ಮುಖಂಡರ ಮುಂದಾಳತ್ವದಲ್ಲಿ ಮತ್ತು ಗುರು ಪೀಠದ ಪ್ರಾಂತೀಯ ಧರ್ಮಾಧಿಕಾರಿಯವರ ದಕ್ಷ ಮಾರ್ಗದರ್ಶನದಲ್ಲಿ, ಶ್ರೀ ದೇವರ ಪ್ರೇರಣೆ ಮತ್ತು ಪರಮಪೂಜ್ಯನೀಯ ಶೃಂಗೇರಿ ಶಾರದಾಪೀಠದ ಯತಿವರೇಣ್ಯರಾದ ಶ್ರೀ ಶ್ರೀ ಭಾರತೀ ತೀರ್ಥ ಮಹಾ ಸ್ವಾಮೀಜಿಯವರು ಮತ್ತು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳರವರ ಆಶೀರ್ವಾದದಿಂದ ಚಾತುರ್ಮಾಸ್ಯದ ಶುಭ ಸಂದರ್ಭದಲ್ಲಿ ನಮಗೆ ತಾಯಿ ಶಾರದೆಯ ಪವಿತ್ರ ದರ್ಶನದೊಂದಿಗೆ ಗುರುಗಳ ಆಶೀರ್ವಾದ ಮತ್ತು ಅನುಗ್ರಹ ಸಾಮೂಹಿಕ ಗುರುವಂದನಾ ಕಾರ್ಯಕ್ರಮಕ್ಕೆ ಅವಕಾಶ ಮೂಲಕ ನಾವು ನಮ್ಮ ಪೂರ್ವ ಜನ್ಮದ ಪುಣ್ಯದ ಫಲ ಎಂದು ಭಾವಿಸುತ್ತೇವೆ. ಜಗತ್ತು ಒಮ್ಮತದಿಂದ ಗುರು ಎಂದು ಒಪ್ಪಿಕೊಳ್ಳುವಂತ ಅವತಾರ ಪುರುಷರಾದಂತ ಜಗದ್ಗುರು ಶಂಕರಾಚಾರ್ಯರ ದಕ್ಷಿಣದ ಪೀಠವಾದ ಶಾರದಾ ಪೀಠದ ಗುರುಪರಂಪರೆಯನ್ನು ನಾವು ಅನುಸರಿಸಿ ಗುರುದರ್ಶನಮಾಡಿ ಗುರುವಂದನೆಮಾಡವುದು ನಮ್ಮ ಸುಯೋಗ.

ಉತ್ತರದ ಶಿರೂರಿನಿಂದ ದಕ್ಷಿಣದ ಮಂಗಳೂರು ವ್ಯಾಪ್ತಿಯ ಸಮಸ್ತ ಕೊಂಕಣಿ ಖಾರ್ವಿ ಸಮುದಾಯದ ಬಾಂಧವರು ಶೃದ್ಧೆಯಿಂದ ಚಾತುರ್ಮಾಸ್ಯ ಯಾತ್ರೆಯನ್ನು ಕೈಗೊಂಡಿದ್ದು ತಮ್ಮ ವಾಹನವನ್ನು ಭಗವದ್ವಜಗಳಿಂದ ಮತ್ತು ಗುರುವಂದನಾ ಕುರಿತಾದ ಯಾತ್ರೆಯ ಬ್ಯಾನರನ್ನು ಅಳವಡಿಸಿಕೊಂಡು ಶುಭ್ರವಸ್ತ್ರಧಾರಿಯಾಗಿ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ವಿಶೇಷವಾಗಿ ಪುರುಷರು ಬಿಳಿ ಪಂಚೆ , ಬಿಳಿ ಅಂಗಿ, ಬಿಳಿ ಶಾಲು ಹಾಗೂ ಸ್ತ್ರೀಯರು ಸಾಂಪ್ರದಾಯಿಕ ಸಮವಸ್ತ್ರವನ್ನು ಧರಿಸಿಕೊಂಡು ಬರುವ ವೈಭವದಲ್ಲೇ ಧಾರ್ಮಿಕತೆ ಎದ್ದು ಕಾಣುತ್ತಿತ್ತು.

ಈ ಬಾರಿಯೂ ಮಳೆ ಇದ್ದರೂ ಲೆಕ್ಕಿಸಿದೆ ಸಮಾಜ ಬಾಂಧವರು ಪುಣ್ಯಭೂಮಿ ಶೃಂಗೇರಿಯಲ್ಲಿ ೧,೩೦೦ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದರು. ಕ್ಷೇತ್ರದ ಪ್ರಾಕೃತಿಕ ಮತ್ತು ಪೌರಾಣಿಕ ಸೊಬಗು ಮತ್ತು ತಾಯಿ ಶಾರದೆಯ ದರ್ಶನದಿಂದ ಮತ್ತು ವಿಶಿಷ್ಠವಾದ ತೇಜಸ್ಸಿನಿಂದ ಬಂದ ಪ್ರಭೆಯಿಂದ ಬಂದಂತ ಎಲ್ಲಾ ಆಸ್ತಿಕ ಬಂದುಗಳು ಪುನೀತರಾದರು ಹಾಗೇಯೇ ಗುರುದರ್ಶನಕ್ಕಾಗಿ, ಗುರುಗಳ ಆಶೀರ್ವಾದ ಮತ್ತು ಅನುಗ್ರಹ ಪಡೆಯಲು ಗುರುಭವನಕ್ಕೆ ಶಿಸ್ತಿನಿಂದ ಶೃದ್ಧೆಯಿಂದ ಭಕ್ತಿ-ಭಾವದೊಂದಿಗೆ ಪಾಲ್ಗೊಂಡರು ಎಂದರೆ ನಮ್ಮ ಸಮಾಜ ಬಂಧುಗಳಿಗೆ ಗುರುಗಳ ಮೇಲಿನ ಪ್ರೀತಿ, ಭಕ್ತಿ, ಶ್ರದ್ಧೆ ವ್ಯಕ್ತವಾಗುತ್ತಿತ್ತು.

ಗುರುಭವನದ ವೇದಿಕೆಯಲ್ಲಿ ಸ್ವಾಮೀಜಿಯವರಾದ ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರ ಪ್ರವೇಶ ಆದಾಗ ಎಲ್ಲಾ ಶಿಷ್ಯ ವರ್ಗದವರನ್ನು ಮಂತ್ರ ಮುಗ್ಧರನ್ನಾಗಿ ಮಾಡಿತು. ಪೀಠದ ಕುಂದಾಪುರ ಪ್ರಾಂತೀಯ ಧರ್ಮಾಧಿಕಾರಿಯವರಾದ ವೆ|| ಮೂ|| ಲೋಕೇಶ ಅಡಿಗರು ಗುರುವಂದನಾ ಕಾರ್ಯಕ್ರಮವನ್ನು ಗುರು ಶ್ಲೋಕದೊಂದಿಗೆ ನಿರೂಪಿಸಿದರು. ಉಡುಪಿ ಪ್ರಾಂತೀಯ ಧರ್ಮಾಧಿಕಾರಿಯವರಾದ ವೆ|| ಮೂ|| ವಾಗೀಶ ಶಾಸ್ತ್ರೀಯವರು ಮತ್ತು ವಿಪ್ರ ಶ್ರೇಷ್ಠರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಪ್ರಾರಂಭಗೊಂಡಿತು.

ನೆರೆದ ಸಮಸ್ತ ಸಮಾಜ ಬಂಧುಗಳ ಪರವಾಗಿ ಗುರುವಂದನಾ ಸಮಿತಿಯ ಅಧ್ಯಕ್ಷರಾದ ಶ್ರೀ ಬಿ. ಮಾಧವ ಖಾರ್ವಿಯವರು ಸೇರಿದ ಸಮಸ್ತ ಸಮಾಜ ಬಾಂಧವರ ಪರವಾಗಿ ಸಾಷ್ಟಾಂಗ ಪ್ರಣಾಮಮಾಡಿ ನಮ್ಮ ಸಮಾಜ ಮತ್ತು ಗುರುಪರಂಪರೆಯೊಂದಿಗಿನ ನಮ್ಮ ಬಾಂಧವ್ಯವನ್ನು ವಿವರಿಸಿದರು. ಮತ್ತು ಗುರುಗಳ ಸಂಪೂರ್ಣ ಅನುಗ್ರಹ ಎಲ್ಲಾ ಬಂಧುಗಳ ಮೇಲೆ ಆಗಬೇಕು ಎಂದು ಹೇಳಿ ಸ್ವಾಮೀಜಿಯವರು ಸೂಕ್ತವಾದ ಮಾರ್ಗದರ್ಶನವನ್ನು ನೀಡಬೇಕೆಂದು ಕೇಳಿಕೊಂಡರು.

ಸ್ವಾಮೀಜಿಯವರು ಅನುಗ್ರಹ ಪೂರ್ವಕ ಆಶೀರ್ವಚನ ಭಾಷಣ ಶುರುಮಾಡಿದಾಗ ಶಿಷ್ಯವರ್ಗವೆಲ್ಲ ಭಕ್ತಿ-ಭಾವದಿಂದ ಪರವ
ಸ್ವಾಮೀಜಿಯವರ ಸಂದೇಶ :
ನಾವೆಲ್ಲಾ ಸನಾತನ ಈ ಹಿಂದೂ ಪರಂಪರೆಯನ್ನು ಜೀವನದಲ್ಲಿ ಅನುಷ್ಠಾನಗೊಳಿಸಿದರೆ ಅದರಿಂದಲೇ ತಮ್ಮ ವ್ಯಕ್ತಿತ್ವವನ್ನು ವಿಕಸಿತಗೊಳಿಸಬಹುದು ಮತ್ತು ಅದರಿಂದ ಲೌಕಿಕ ಜೀವನದಲ್ಲಿ ಶ್ರೇಯಸ್ಸನ್ನು ಕಾಣಬಹುದು. ಎಲ್ಲರೂ ಕ್ರೀಯಾಶೀಲರಾಗಬೇಕು ತಮ್ಮ ತಮ್ಮ ವೃತ್ತಿಯನ್ನು ಮಾಡಲೇಬೇಕು ಹೀಗಾದಲ್ಲಿ ಮಾತ್ರ ನಾವು ಜೀವನದಲ್ಲಿ ಉನ್ನತಿಯನ್ನು ಕಾಣುತ್ತೇವೆ. ಕೆಲವೊಮ್ಮೆ ಹೀಗಿದ್ದೂ ಕೆಲವೊಬ್ಬರು ಎಷ್ಟೇ ಶಕ್ತಿ ಮೀರಿ ಕೆಲಸ ಮಾಡಿದರೂ ಸಂಪತ್ತನ್ನು ಪಡೆಯುವಲ್ಲಿ ವಿಫಲರಾಗುತ್ತಾರೆ. ದುಃಖ ಕಷ್ಟವನ್ನು ಅನುಭವಿಸುತ್ತಾರೆ ಎಂತಾದರೆ ಅದಕ್ಕೆ ಬಲವಾದ ಎನ್ನೊಂದು ಕಾರಣ ವಿರುತ್ತದೆ. ಅದುವೇ ಪೂರ್ವ ಜನ್ಮದ ಪಾಪದ ಫಲ. ಅನಂತ ಯೋನಿಯಲ್ಲಿ ಹುಟ್ಟಿ ಪುನರಪಿಯಾಗಿ ಹುಟ್ಟಿದ ಮನುಷ್ಯ ಹಿಂದೆ ಮಾಡಿದ ಪಾಪದಿಂದ ಇಂದು ಕಷ್ಟವನ್ನು ಅನುಭವಿಸುತ್ತಾನೆ ಮತ್ತು ಏಳ್ಗೆಯನ್ನು ಹೊಂದಿದಲು ವಿಫಲನಾಗುತ್ತಾನೆ. ಹಾಗದರೆ ಹಿಂದೆ ಮಾಡಿದ ಪಾಪಕ್ಕೆ ಪರಿಹಾರ ಇಲ್ಲವೇ ? ಪರಿಹಾರ ಇದೆ, ನಾವು ಜೀವನದಲ್ಲಿ ಸಾಧ್ಯವಾದಷ್ಟು ಪುಣ್ಯದ ಕೆಲಸವನ್ನು ಮಾಡಬೇಕು. ಆವಾಗಲೇ ನಾವು ಉನ್ನತಿಯನ್ನು ಹೊಂದುತ್ತೇವೆ. ಈ ಜೀವನದಲ್ಲಿ ತಪ್ಪುಗಳನ್ನು ಮಾಡಿದವರು ಉನ್ನತಿ ಹಾಗೂ ಸ್ಥಾನ ಮಾನವನ್ನು ಹೊಂದಿದ ಉದಾಹರಣೆಗಳು ಸಾಕಷ್ಟು ಇದ್ದರೂ ಅದು ಶಾಶ್ವತವಲ್ಲ ಮುಂದಿನ ಜನ್ಮದಲ್ಲಾದರೂ ಆ ಆತ್ಮಕ್ಕೆ ತಪ್ಪಿದಲ್ಲ, ಹಾಗಾಗಿ ಎಲ್ಲರೂ ಪಾಪ ಕಾರ್ಯವನ್ನು ಮಾಡದೇ ಸಾಧ್ಯವಾದಷ್ಟು ಪುಣ್ಯದ ಕೆಲಸವನ್ನು ಮಾಡಬೇಕು ಎಂದು ಸ್ವಾಮೀಜಿಯವರು ಉಪದೇಶ ನೀಡಿದರು ಆ ಮುಖೇನ ಸಂತೋಷ, ಆಯುಷ್ಯ, ಆರೋಗ್ಯ, ಸಂಪತ್ತು ಸತ್‌ಕೀರ್ತಿ ಪ್ರಾಪ್ತವಾಗುತ್ತದೆ. ಆದುದರಿಂದ ಪ್ರತಿಯೊಬ್ಬರೂ ಧಾರ್ಮಿಕರಾಗಬೇಕು, ಗುರುಗಳಲ್ಲಿ ಹಾಗೂ ದೇವರಲ್ಲಿ ವಿಶೇಷವಾದ ಭಕ್ತಿ-ಭಾವವನ್ನು ಹೊಂದಬೇಕು. ಮಠದೊಂದಿಗೆ ನಿರಂತರ ಸಂಪರ್ಕವನ್ನು ಇಟ್ಟುಕೊಳ್ಳಿ ಎಲ್ಲರಿಗೂ ಒಳಿತಾಗಲಿ ಎಂದು ಆಶೀರ್ವಚಿಸಿದರು.

ನಮ್ಮದು ಶ್ರೇಷ್ಠವಾದ ಋಷಿ ಪರಂಪರೆಯ ಸನಾತನ ಧರ್ಮ, ಈಗ ಹಿಂದೂ ಧರ್ಮವೆಂತಲೂ ನಾವು ಕರೆಯುತ್ತೇವೆ. ಎಲ್ಲರೂ ಸನಾತನವಾದ ನಮ್ಮ ಸಂಸ್ಕೃತಿಯನ್ನು ಆಚರಿಸಬೇಕು. ಸಂಸ್ಕಾರ-ಸಂಸ್ಕೃತಿಯನ್ನು ನಿತ್ಯನಿರಂತರವಾಗಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆ ಜೀವನ ಕ್ರಮವೇ ಹಿಂದೂ ಧರ್ಮ.

ಗುರುಪೀಠವನ್ನು ಬಹಳ ಶೃದ್ಧೆಯಿಂದ ಆರಾಧಿಸಿಕೊಂಡು ಬಂದಂತ ಕೊಂಕಣಿಖಾರ್ವಿ ಸಮುದಾಯದವರಿಗೆ ಶ್ರೀ ಚಂದ್ರ ಮೌಳೀಶ್ವರ, ಶ್ರೀ ಶಾರದಾ ಮಾತೆಯ ಸಂಪೂರ್ಣ ಅನುಗ್ರಹ ಪ್ರಾಪ್ತಿಯಾಗಲಿ ನಮ್ಮ ಹಾಗೂ ನಮ್ಮ ಗುರುಗಳ ಸಂಪೂರ್ಣ ಅನುಗ್ರಹ ನಿಮ್ಮ ಸಮಾಜದ ಮೇಲೆ ಇದೆ ಎಂದು ಆಶೀರ್ವಚಿಸಿದರು. ಮಂತ್ರಾಕ್ಷತೆ ಮತ್ತು ಫಲವನ್ನು ನೀಡುವಾಗ ವೈಯಕ್ತಿಕವಾಗಿ ಸಮಾಜದ ಜನರ ಸಮಸ್ಯೆ ಆಲಿಸಿ ಹರಸಿದರು. ವಿಶೇಷವಾಗಿ ಗುರುವಂದನಾ ಸಮಿತಿ ಸದಸ್ಯರಿಗೆ ಹಾಗೂ ಈ ಆಧ್ಯಾತ್ಮಿಕವಾದ ಕಾರ್ಯಕ್ರಮದ ಯಶಸ್ಸಿಗೆ ಕಾರಣೀಕರ್ತರಾದ ಬಂದಂತ ಎಲ್ಲಾ ಸಮಾಜ ಬಾಂಧವರ ಪರವಾಗಿ ಕೆಲವು ಮುಖಂಡರನ್ನು ಗೌರವಿಸಿ. ವಿಶೇಷವಾಗಿ ಮಾತೆಯರಿಗೆ ಶಾರದಾ ದೇವಿಯ ಪ್ರಸಾದವಾಗಿ ಸೀರೆಯನ್ನು ವಿತರಿಸಿದರು.

“ ಓಂ ನಮಃ ಶಂಕರಾಯ” ಎನ್ನುವ ಸರಳವಾದ ಮಂತ್ರವನ್ನು ೧೦೮ ಸಾರಿ ಪಠಿಸುವುದು ತಮ್ಮ ದಿನಚರಿಯಲ್ಲಿ ಅನುಷ್ಠಾನಗೊಳಿಕೊಳ್ಳಿ ಎಂದು ನೆನಪಿಸಿದರು.

ಎಲ್ಲರೂ ಅನ್ನ ಪ್ರಸಾದವನ್ನು ಸ್ವೀಕರಿಸಿದ ನಂತರ ಸಮಾಲೋಚನೆ ಸಭೆಯನ್ನು ದೇಗುಲದ ಅಕ್ಷರಾಭ್ಯಾಸ ಮಂಟಪದಲ್ಲಿ ಪ್ರಾಂತ್ಯಾಧಿಕಾರಿಯವರ ಸಹಕಾರದೊಂದಿಗೆ ವ್ಯವಸ್ಥಿತವಾಗಿ ಮಾಡಲಾಯಿತು. ಅನಾನುಕೂಲತೆಯಿಂದಾಗಿ ಕೆಲವೊಂದು ಮುಖಂಡರು ಗೈರಾಗಿರುವುದು ಎದ್ದು ಕಾಣುತ್ತಿತ್ತು ಆದರು ಬಹಳ ಸಭೆ ಚಂದರೀತಿಯಲ್ಲಾಯಿತು. ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಕುಂದಾಪುರ ನಾರಾಯಣ ಖಾರ್ವಿಯವರು ಪ್ರಾಸ್ತಾವಿಕವಾಗಿ ಕೆಲವೊಂದು ವಿಚಾರವನ್ನು ಮಂಡಿಸಿದರು. ಕುಂದಾಪುರ ಪ್ರಾಂತೀಯ ಧರ್ಮಾಧಿಕಾರಿಯವರಾದ ವೆ|| ಮೂ|| ಲೋಕೇಶ ಅಡಿಗರ ಉಪಸ್ಥತಿ ಹಾಗೂ ಸಹೋದರಾದ ಶ್ರೀ ನಾಗೇಂದ್ರ ಅಡಿಗರ ಉಪಸ್ಥಿತಿ ಸಭೆಗೆ ಮರುಗನ್ನು ನೀಡಿತು ಮತ್ತು ಮಠದಿಂದ ಯಾವುದೇ ಸಹಕಾರಕ್ಕೆ ನಾವು ಸಮಾಜದೊಂದಿಗೆ ಇದ್ದೇವೆ. ಮತ್ತು ಕುಂಭಾಸಿ ಮಠದ ಆಡಳಿತಕ್ಕೊಳಪಟ್ಟ ದೇವಸ್ಥಾನ ನಾಗಾಚಲ ಅಯ್ಯಪ್ಪ ದೇವಸ್ಥಾನ ಆನೆಗುಡ್ಡೆಯಲ್ಲಿ ಮಕರ ಸಂಕ್ರಾಂತಿ ಮತ್ತು ಶರನ್ನವರಾತ್ರಿಯ ದಿನದಂದು ವಿಶೇಷ ಧಾರ್ಮಿಕ ಕಾರ್ಯಕ್ರಮ ನೆಡೆಯುವುದು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕು ಮತ್ತು ಸರ್ಪಸಂಸ್ಕಾರ ಮತ್ತು ಸರ್ಪಸಂಬಂಧಿ ಇನ್ನಿತರ ಧಾರ್ಮಿಕ ಕರ‍್ಯ ಕಡಿಮೆ ವೆಚ್ಚದಲ್ಲಿ ನೆಡೆಸಿ ಸಮಾಜಕ್ಕೆ ಅನುಕೂಲವಾಗುವಂತೆ ನೀಡಬೇಕೆಂದು ಗುರುಗಳು ಆದೇಶಿಸಿದ ಬಗ್ಗೆ ಸಭೆಯಲ್ಲಿ ತಿಳಿಸಿದರು. ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಬಿ. ಮಾಧವ ಖಾರ್ವಿ ಅಧ್ಯಕ್ಷೀಯ ನುಡಿಯೊಂದಿಗೆ ನಾವು ಇಂದು ಆಚರಿಸದೇ ಇದ್ದ ನಮ್ಮ ಹಿಂದಿನ ರೀತಿ-ರಿವಾಜುಗಳನ್ನು ನಾವು ವಾಪಾಸು ಅನುಷ್ಠಾನಗೊಳಿಸಬೇಕು, ಉದಾಹರಣೆಗೆ ” ಜನಿವಾರಧಾರಣೆ” ಹಾಗೂ ಇನ್ನಿತರ ಸಂಸ್ಕಾರಯುತವಾದ ಪದ್ದತಿಗಳನ್ನು ಎಲ್ಲರೂ ಸಮಾನವಾಗಿ ಆಚರಿಸಬೇಕು. ಮುಂದಿನ ದಿನದಲ್ಲಿ ನಾವು ಈ ಬಗ್ಗೆ ಕಾರ್ಯಪ್ರವೃತ್ತರಾಗಬೇಕಾದ ಅನಿವಾರ್ಯತೆಯನ್ನು ತಿಸಿಸಿದರು. ಕಾರ್ಯದರ್ಶಿಗಳು ವಂದಾರ್ಪಣೆಯನ್ನು ಮಾಡಿ ಸಭೆಗೆ ಪೂರ್ಣವಿರಾಮ ಹಾಕಿದರು.

ಸಭೆಯಲ್ಲಿ ಸಮಿತಿಯ ಬಲವನ್ನು ವೃದ್ಧಿಸುವ ಸಲುವಾಗಿ ಕೆಲವೊಂದು ವಿಚಾರಗಳು ಚರ್ಚೆಗೆ ಬಂದವು. ಅಗತ್ಯವಾಗಿ ಎಲ್ಲಾ ಊರಿನ ಮುಖಂಡರ ಅಭಿಪ್ರಾಯದೊಂದಿಗೆ ಶೀಘ್ರದಲ್ಲೇ ಸಭೆಯನ್ನು ಕರೆಯಲಾಗುವುದು. ಎಲ್ಲರ ಸಹಕಾರವನ್ನು ಅಪೇಕ್ಷಿಸುತ್ತೇವೆ.

ಸುರೇಶ್ ಖಾರ್ವಿ, ಕೋಡಿ
ಪ್ರಧಾನ ಕಾರ್ಯದರ್ಶಿ
ಗುರುವಂದನ ಸಮಿತಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ

Leave a Reply

Your email address will not be published. Required fields are marked *