ಶ್ರೀ ಶೃಂಗೇರಿ ಪೀಠವು ಸಮಸ್ತ ಕೊಂಕಣಿ ಖಾರ್ವಿ ಸಮಾಜದ ಗುರುಪೀಠವಾಗಿದ್ದು, ಅನಾದಿಕಾಲದಿಂದಲೂ ಕೊಂಕಣಿ ಖಾರ್ವಿ ಸಮಾಜದವರು ಶ್ರೀ ಶೃಂಗೇರಿ ಪೀಠದ ಪರಂಪಾರುನುಗತ ಶಿಷ್ಯರಾಗಿದ್ದಾರೆ. ಪ್ರತಿವರ್ಷವೂ ಕೊಂಕಣಿ ಖಾರ್ವಿ ಸಮಾಜದವರು ಗುರುಗಳ ಪವಿತ್ರ ಚಾತುರ್ಮಾಸ್ಯದಂದು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಗುರುಗಳ ಅನುಗ್ರಹ ಪಡೆಯುತ್ತಾರೆ.
ಈ ವರ್ಷದ ವಾಡಿಕೆಯಂತೆ ತಾರೀಕು 9 ಜುಲೈ 2023 ರಂದು ಕೊಂಕಣಿ ಖಾರ್ವಿ ಸಮಾಜದ ಗುರುದರ್ಶನ ಸಮಿತಿಯ ಆಶ್ರಯದಲ್ಲಿ ಶೃಂಗೇರಿಗೆ ಹೋಗಿ ಶ್ರೀ ಗುರುಗಳ ಪಾದಪೂಜೆ ನಡೆಸಿ ಆಶೀರ್ವಚನ ಪಡೆದುಕೊಂಡರು. ಬಳಿಕ ಆಶೀರ್ವಚನ ನೀಡಿದ ಪರಮಪೂಜ್ಯ ಗುರುಗಳು ಕೊಂಕಣಿ ಖಾರ್ವಿ ಸಮಾಜದವರು ಅನಾದಿಕಾಲದಿಂದಲೂ ಶೃಂಗೇರಿ ಪೀಠದ ಶಿಷ್ಯರಾಗಿದ್ದು, ಪ್ರತಿವರ್ಷ ಶೃಂಗೇರಿಗೆ ಆಗಮಿಸಿ ಗುರುಗಳ ಅನುಗ್ರಹ ಪಡೆಯುತ್ತಿರುವುದು ಸಂತೋಷದ ಸಂಗತಿ ಎಂದು ಹೇಳಿದರು. ಅನಾದಿಕಾಲದಿಂದಲೂ ಹಿಂದೂ ಧರ್ಮದ ಪರಂಪರೆ ಪ್ರಪಂಚದಲ್ಲಿಯೇ ಅತ್ಯಂತ ಶ್ರೇಷ್ಠ ಎಂದು ಈ ಸಂದರ್ಭದಲ್ಲಿ ನುಡಿದರು.
ಈ ಪವಿತ್ರ ಸಂದರ್ಭದಲ್ಲಿ ಶೃಂಗೇರಿ ಪೀಠದ ಕುಂದಾಪುರದ ಪ್ರಾಂತೀಯ ಧರ್ಮಾಧಿಕಾರಿ ವೇದಮೂರ್ತಿ ಶ್ರೀ ಲೋಕೇಶ ಅಡಿಗರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಉತ್ತರ ಕನ್ನಡ, ಶಿವಮೊಗ್ಗ, ಬೆಂಗಳೂರು ಜಿಲ್ಲೆ ಹಾಗೂ ಗೋವಾದಿಂದ ಸಾವಿರಾರು ಸಂಖ್ಯೆಯಲ್ಲಿ ಕೊಂಕಣಿ ಖಾರ್ವಿ ಸಮಾಜದವರು ಆಗಮಿಸಿ ಗುರುಗಳಿಂದ ಆಶೀರ್ವಾದ ಪಡಗದರು. ಗುರು ದರ್ಶನ ಕಾರ್ಯಕ್ರಮದಲ್ಲಿ ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನಾ ಸಭಾದ ಅಧ್ಯಕ್ಷ ಮೋಹನ್ ಬನಾವಳಿಕಾರ್, ಪ್ರಧಾನ ಕಾರ್ಯದರ್ಶಿ ಕೃಷ್ಣ ತಾಂಡೇಲ್ ಕುಮಟಾ, ಗೋವಾ ಸಮಿತಿಯ ಉಪಾಧ್ಯಕ್ಷ ಅಶೋಕ್ ಪಾಲೇಕರ, ಮುಂತಾದವರು ಉಪಸ್ಥಿತರಿದ್ದರು.
Thank you on behalf of Gomantak konkan Kharvi Samaj Goa