ಶೀಲಾ ಮೇಸ್ತ ಅವರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ

ಶೀಲಾ ಮೇಸ್ತ ತಮ್ಮ ಉತ್ತಮ ಹಾಗೂ ಸ್ವಚ್ಛ ಕನ್ನಡದ ನಿರೂಪಣೆಯ ಮೂಲಕ ಕರ್ನಾಟಕ ಮಾತ್ರವಲ್ಲದೆ ಹೊರರಾಜ್ಯ ಗೋವಾದಲ್ಲಿಯೂ ಪ್ರಸಿದ್ಧಿ ಪಡೆದಿರುವ ಕರ್ನಾಟಕದ ಅಂಕೋಲಾ ಬೆಳಂಬಾರ ಗ್ರಾಮ ಮೂಲದ ನಿರೂಪಕಿ ಶೀಲಾ ಪ್ರಭಾಕರ್ ಮೇಸ್ತ ಇವರಿಗೆ 2023ನೇ ಸಾಲಿನ ರಾಷ್ಟ್ರಮಟ್ಟದ ಭಾರತೀಯ ಸಾಂಸ್ಕೃತಿಕ ರತ್ನ ಪ್ರಶಸ್ತಿ ಒಲಿದು ಬಂದಿದೆ.

ಕರ್ನಾಟಕದ ಗದಗದ ಡಾಕ್ಟರ್ ಬಿ .ಆರ್ .ಅಂಬೇಡ್ಕರ್ ಭವನದಲ್ಲಿ ಜುಲೈ 16ರಂದು ಬೆಳಿಗ್ಗೆ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ಆಯೋಜಿಸಿರುವ ಅಖಿಲ ಭಾರತ ಆರನೇ ಸಾಂಸ್ಕೃತಿಕ ಸಮ್ಮೇಳನದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಕರ್ನಾಟಕದ ವಿವಿಧ ಕಾರ್ಯಕ್ರಮಗಳು ಮಾತ್ರವಲ್ಲದೆ ಗೋವಾ ರಾಜ್ಯದಲ್ಲಿ ನಡೆಯುವ ವಿವಿಧ ಕನ್ನಡ ಸಂಘಟನೆಗಳ ಕಾರ್ಯಕ್ರಮಗಳ ನಿರೂಪಕಿಯಾಗಿ ಹೊರರಾಜ್ಯ ಗೋವಾದಲ್ಲಿ ಕನ್ನಡ ಸೇವೆ ಸಲ್ಲಿಸುತ್ತಿರುವ ಇವರ ಸಾಧನೆಗೆ ರಾಷ್ಟ್ರಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಇವರು ಕನ್ನಡ ಡಿಜಿಟಲ್ ವಾಹಿನಿಯಲ್ಲಿ ವಾರ್ತಾ ವಾಚಕರಾಗಿ ಪ್ರೋಗ್ರಾಮರಾಗಿ ದಿನಪತ್ರಿಕೆ ವರದಿಗಾರರಾಗಿಯೂ ಕೆಲಸ ನಿರ್ವಹಿಸಿದ್ದಾರೆ ವಿವಾಹದ ನಂತರ ಗೋವಕ್ಕೆ ಬಂದು ವಾಸ್ತವ ವಾಸ್ತವ ವಾಸ್ತವ್ಯ ಹೂಡಿದನಂತರ ಗೋವಾದಲ್ಲಿ ಕನ್ನಡ ಸಂಘಟನೆಗಳ ಕಾರ್ಯಕ್ರಮಗಳ ನಿರೂಪಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಸಮಸ್ತ ಕೊಂಕಣಿ ಖಾರ್ವಿ ಸಮಾಜದ ಪರವಾಗಿ ಖಾರ್ವಿ ಆನ್ಲೈನ್ ಅಭಿನಂದನೆಯನ್ನು ಸಲ್ಲಿಸುತ್ತದೆ.

www.kharvionline.com

Leave a Reply

Your email address will not be published. Required fields are marked *