ಪಶ್ಚಿಮದಲ್ಲಿ ನಯನ ಮನೋಹರವಾದ ಅರಬ್ಬೀ ಸಮುದ್ರ ಪೂರ್ವದಲ್ಲಿ ಸುಂದರವಾಗಿ ಕಂಗೊಳಿಸುವ ಹೆಮ್ಮೆಯಿಂದ ತಲೆಹೆತ್ತಿ ನಿಂತಿರುವ ಘಟ್ಟಗಳ ಸಾಲು ಸುಮಾರು ಕಣ್ಣು ಹಾಯಿಸಿದೆಲಲ್ಲ 75ಶೇಖಡಾ ಅರಬ್ಬೀ ಸಮುದ್ರದಿಂದ ಕೂಡಿದ ಪ್ರದೇಶವಾಗಿದೆ.ತಮ್ಮ ತಮ್ಮ ಪ್ರದೇಶಕ್ಕೆ ಅನುಗುಣವಾಗಿ ಜನರು ಕಸಬುಗಳಲ್ಲಿ ತೊಡಗಿದ್ದಾರೆ.ಶೇಖಡಾವಾರು ಅವಲೋಕಿಸಿದರೆ ಕರಾವಳಿ ಭಾಗದಲ್ಲಿ ಅತ್ಯಂತ ಕಸಬುಗಳಲ್ಲಿ ತೊಡಗಿಸಿಕೊಂಡಿರಬಹುದಾದ ಕೆಲಸ ಅದುವೇ ಮೀನುಗಾರಿಕೆ.
ಮೀನುಗಾರಿಕೆ ಬಗ್ಗೆ ಹೇಳುವುದಾದರೆ ತಮ್ಮ ಜೀವನವನ್ನು ಮೀನು ಹಿಡಿಯುವ ಮೂಲಕ ಮೂಡಿಪಾಗಿಡುವ ಕಸುಬು ಅಲ್ಲದೇ ತಮ್ಮ ತಮ್ಮ ಜೀವವನ್ನೇ ಮುಷ್ಠಿಯಲ್ಲಿ ಹಿಡಿದುಕೊಂಡು ಭೋರ್ಗೈರುವ ಈ ರೌದ್ರ ನರ್ತನದ ಸಮುದ್ರಕ್ಕೆ ತಮ್ಮ ಬದುಕಿಗೆ ಅಲ್ಲದೇ ಜೀವನಕ್ಕೆ ಬೇಕಾಗುವ ತಮ್ಮ ಪಯಣವನ್ನು ಬೆಳೆಸುತ್ತಾರೆ.
ಗಾಳಿ ,ಮಳೆ,ಚಳಿ ಲೆಕ್ಕಿಸದೇ ಸಮುದ್ರದಲ್ಲಿ ಧುಮುಕುವ ಮೀನುಗಾರರು ಅನೇಕ ಕಷ್ಟ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಅಲ್ಲದೇ ಕಡಲಿಗೆ ಇಳಿದರೆ ಪುನಃ ದಡಕ್ಕೆ ಸೇರುತ್ತೇವೆ ಎಂಬುದೇ ಸಂದೇಹ ಕಾರಣ ಸಮುದ್ರದಲ್ಲಿ ಆ ರಕ್ಕಸ ಗಾತ್ರದ ಅಲೆಗಳಿಂದ ದೋಣಿಯು ದಡಕ್ಕೆ ಸೇರುವುದು ಕಷ್ಟ.ಈ ಮೀನುಗಾರಿಕೆ ಅವಲಂಭಿಸಿರುವವರು ಅತಿಯಾಗಿ ಬಡುವರು ಮತ್ತು ಮಾಧ್ಯಮ ವರ್ಗದವರು ಆಗಿದ್ದಾರೆ.ಅವರು ಜೀವನವನ್ನು ಸಾಗಿಸಲು ಮಳೆ,ಗಾಳಿ,ಬಿಸಿಲು ಇದ್ದರೂ ಕೂಡ ಸಮುದ್ರದಲ್ಲಿ ದೋಣಿಯ ಮುಖಾಂತರ ರಾತ್ರಿ ಹಗಲು ಲೆಕ್ಕಿಸದೇ ಮೀನನ್ನು ಹಿಡಿಯುತ್ತಾರೆ.ಮೀನುಗಾರರಿಗೆ ಮೀನು ಇಲ್ಲದಿದ್ದರೆ ಜೀವನವನ್ನು ಸಾಗಿಸಲು ತುಂಬಾ ಕಷ್ಟ.ಮೀನುಗಾರಿಕೆಗೆ ಹೊರಟವರ ಮನೆಯು ಕೂಡ ತಮ್ಮ ಮನೆಯವರು ಸುರಕ್ಷಿತರಾಗಿ ದಡಕ್ಕೆ ಸೇರುತ್ತಾರೋ ಎಂಬ ಕಾತರದಿಂದ ಭಯಭೀತರಾಗುವುದು ವಿಷಾಧನೀಯ ಸಂಗತಿ.ಅಲ್ಲದೇ ರಕ್ಕಸ ಗಾತ್ರದ ಅಲೆಗಳ ರೌದ್ರ ನರ್ತನಕ್ಕೆ ಸರಿಸುಮಾರು ತಮ್ಮ ಜೀವವನ್ನೇ ಮುಡಿಪಾಗಿಟ್ಟಿದ್ದಾರೆ.ಮೀನುಗಾರಿಕೆಯಲ್ಲಿ ಹಲವು ರೀತಿಯ ವಿಧಗಳಿವೆ.
ಮೀನುಗಾರಿಕೆಯಲ್ಲಿ ಕಾಲಕಾಲತಕಂತೆ ದೋಣಿಗಳನ್ನು ಬಳಸುವುದು ಒಂದು ಸಂಗಂತಿ ಅದರಲ್ಲಿ ಸೀಸನ್ ನಲ್ಲಿ ದೊಡ್ಡ ಗಾತ್ರದ ದೋಣಿಗಳನ್ನು ಬಳಸುವುದು.ಅಂದರೆ ಪರ್ಸಿನ್ ಬೋಟ್ ಮತ್ತು ಫಿಶಿಂಗ್ ಬೋಟ್ ಎಂಬ ನಾಮಧೇಯ.ಈ ಪರ್ಸಿನ್ ಬೋಟ್ ಗಳಲ್ಲಿ ಸುಮಾರು ಮೀನುಗಾರರು ಪ್ರಯಾಣ ಬಳಸಬಹುದು.ಅಲ್ಲದೇ 4ದಿನ ಸಮುದ್ರದಲ್ಲಿ ಉಳಿದು ಮೀನುಗಾರಿಕೆಯನ್ನು ತೊಡಗಿಸಿಕೊಂಡು ದಡಕ್ಕೆ ಬರುವುದು ಸಾಮಾನ್ಯ.ಆದರೆ ಹವಾಮಾನದ ವೈಪರೀತದಿಂದ ಮೀನುಗಾರರ ಬದುಕಿಗೆ ಎಷ್ಟು ಸುರಕ್ಷಿತವೋ? ಇನ್ನೊಂದು ಪಿಶಿಂಗ್ ಬೋಟ್ ಇದರಲ್ಲಿ 4ರಿಂದ 5ಜನ ಮೀನುಗಾರರು ಮೀನುಗಾರಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ.ಬೆಳ್ಳಿಗ್ಗೆ ಕಡಲಿಗಿಳಿದರೆ ಸಂಜೆ ದಡಕ್ಕೆ ಸೇರುವುದು ಅಲ್ಲದೇ ಚಿಕ್ಕ ಗಾತ್ರದ ಗಿಲ್ ನೆಟ್ ದೋಣಿಗಳು ಕೂಡ ಮೀನುಗಾರಿಕೆಗೆ ತೆರಳುತ್ತದೆ.ಕೆಲವರು ತಮ್ಮಲ್ಲಿದ್ದ ಗಾಳ ಬಲೆಗಳನ್ನು ಸೇರಿಸಿ ದಡದಿಂದಲೇ ಹವ್ಯಾಸದ ಕ್ರೀಡೆಗೆ ತೊಡಗಿರುತ್ತಾರೆ ಅಲ್ಲದೇ ಮಳೆಗಾಲದಲ್ಲಿ ಕಷ್ಟದ ಈ ಮೀನುಗಾರರಿಗೆ ಸಂಕಷ್ಟದ ಸಮಯ ಎನ್ನಲೇಬಹುದು.
ಕಾರಣ “ತೂಪಾನ”ಎಂಬ ಮಹಾಮಾರಿ ರಕ್ಕಸ ಗಾತ್ರದ ಅಲೆಗಳು ಬಂದು ದೋಣಿಯ ಮೇಲೆ ಪರಿಣಾಮ ಬೀರುತ್ತದೆ.ಅದಕ್ಕೆ ಸರಕಾರದವರು ಜೂನ್ ನಿಂದ ಅಗೋಸ್ಟ್ ನವರೆಗೆ ಕಡಲಿಗೆ ಇಳಿಯಬಾರದು ಎಂಬ ನಿರ್ಬಂಧ ಹೇರುತ್ತಾರೆ ಆದರೂ ಹೊಟ್ಟೆಪಾಡಿಗಾಗಿ ತಮ್ಮ ಕುಟುಂಬದ ದೃಷ್ಟಿಯಿಂದ ಸಣ್ಣ ಪ್ರಮಾಣದ ದೋಣಿ(ಪಾತಿ)ಯನ್ನು ಹಿಡಿದು ಹೊಳೆಯಲ್ಲಿ ಮೀನುಗಾರಿಕೆಗೆ ಅವಲಂಭಿಸಿರುತ್ತಾರೆ.ಈ ಮೀನನ್ನು ತಂದು ಹೆಂಗಸರು ಮೀನನ್ನು ಮಾರಿ ಜೀವನ ಸಾಗಿಸುತ್ತಾರೆ. ಈ ಮೀನುಗಾರರಿಗೆ ಮೀನು ಸಿಕ್ಕರೆ ಮಾತ್ರ ಮುಖದಲ್ಲಿ ಸಂತಸ.
ಒಟ್ಟಾರೆ ಹೇಳುವುದಾದರೆ ಆ ಬೋರ್ಗೈರುವ ರುದ್ರ ನರ್ತನವಾಡುವ ಆ ಕಡಲಿನಲ್ಲಿ ಅನೇಕ ಕಷ್ಟ ನಷ್ಟ ನೋವುಗಳನ್ನು ಮೀನುಗಾರರು ನುಂಗಿ ಜೀವನ ಸಾಗಿಸುತ್ತಾರೆ ಅಲ್ಲದೇ ಮೀನುಗಾರರಿಗೆ ಹಲವು ಕಷ್ಟಗಳು ಎದುರಾಗಬಹುದು ಅವುಗಳಲ್ಲಿ ಹೊಳೆಯ ನೀರು ಸಮುದ್ರಕ್ಕೆ ಸೇರುವ ಭಾಗ ಅಂದರೆ “ಅಳಿವೆ ಭಾಗ”ಈ ಭಾಗದಲ್ಲಿ ಸಮುದ್ರದಿಂದ ಬರುವ ಆ ಅಲೆಗಳಿಗೆ ಮರಳು ಬಂದು ಬೀಳುವ ಸಂಭವವಿದೆ.ಈ ಭಾಗದಲ್ಲಿ ಅನೇಕ ಬೋಟ್ ಗಳು ದೋಣಿಗಳು ಅನಾಹೂತಕ್ಕೀಡಾಗಿ ಸಾವನ್ನಪ್ಪೀ ಅನೇಕ ಬಡ ಕುಟುಂಬಗಳು ಬೀದಿಗೆ ಬಂದಿರುವುದು ವಿಷಾಧನೀಯ ಸಂಗತಿ.ಮುಂದೆ ಜೀವನ ಸಾಗಿಸಲು ಕಷ್ಟವಾದಗ ತಮ್ಮ ಹೆಂಡತಿ ಕೂಡ ಮೀನುಗಾರಿಕೆಯನ್ನು ಅವಲಂಭಿಸುತ್ತಾರೆ.ಅಲ್ಲದೇ ಶಾಲೆಗೆ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕುಟುಂಬದ ಜವಾಬ್ದಾರಿಯನ್ನು ತನ್ನ ಮೀನುಗಾರಿಕಾ ಮೂಲವಾದ ಹೆಡಿಗೆಯನ್ನು ಒಯ್ಯುವ ಮೂಲಕ ಅಲ್ಲದೇ ಹೊಟ್ಟೆಪಾಡಿಗಾಗಿ ಜೀವನ ಸಾಗಿಸಲು ಮುಂದಾಗುತ್ತಾಳೆ.
ಒಟ್ಟಾರೆ ಹೇಳುವುದಾದರೆ ಗಾಳಿ,ಮಳೆ,ಚಳಿ,ಬಿಸಿಲು ಲೆಕ್ಕಿಸದೇ ಮೀನುಗಾರರ ಬದುಕಿನ ಬಗ್ಗೆ ನನ್ನ ಒಂದು ಕೊನೆಯ ಅನಿಸಿಕೆ.ಸರಕಾರದಿಂದ ನೀಡುವ ಸವಲತ್ತುಗಳು ಮೀನುಗಾರರಿಗೂ ಸಿಗುವಂತಾಗಬೇಕು.ದೋಣಿಯ ಇನ್ಸುರೆನ್ಸ್ ಎಲ್ಲಾ ಪರಿಕರಗಳನ್ನು ಸರಕಾರದಿಂದ ಸಿಗಬೇಕು.ಅಲ್ಲದೇ ಮೀನುಗಾರರಿಗೆ ಕೂಡ ಎಲ್ಲಾ ರೀತಿಯಲ್ಲಿ ಮಾನ್ಯತೆ ದೊರೆಯಬೇಕು.ಇಲ್ಲವಾದಲ್ಲಿ ಒಂದು ಬಡ ಕುಟುಂಬ ಬೀದಿಗೆ ಬರುವುದು ಖಡಾಖಂಡಿತ.ಈ ಗಾಳಿ ಮಳೆ ಚಳಿ ಬಿಸಿಲು ರಕ್ಕಸ ಗಾತ್ರದ ಅಲೆಗಳು ರೌದ್ರನರ್ತನದ ಸಮುದ್ರದ ಮಧ್ಯೆ ಜೀವನ ಸಾಗಿಸುತ್ತಿರುವ ಮೀನುಗಾರರಿಗೆ ಒಂದು ಹಾಟ್ಸ್ ಆಫ್
ಧನ್ಯವಾದಗಳೊಂದಿಗೆ
ರೂಪೇಶ ಕುಮಾರ್ ಗಂಗೊಳ್ಳಿ