ಕೊವೀಡ್ ಮೊದಲ ಮತ್ತು ಎರಡನೆ ಅಲೆಯಲ್ಲಿ ಲಸಿಕೆ ವಿತರಣೆ ಯಲ್ಲಿ ದಕ್ಷಿಣ ಭಾರತದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ, 45 ವರ್ಷ ಮೆಲ್ಪಟ್ಟ ಸೂಮಾರು 20 ಲಕ್ಷ ಜನರು ಎರಡು ಡೋಸ್ ಲಸಿಕೆ ಪಡೆದಿದ್ದು, 18 ರಿಂದ 44 ವರ್ಷದವರಲ್ಲಿ ಸೂಮಾರು 9 ಲಕ್ಷ ಮಂದಿ ಮೊದಲ ಡೋಸ್ ಪಡೆದಿದ್ದು. ಕುಂದಾಪುರ ದಲ್ಲೂ 45 ವರ್ಷ ಮೆಲ್ಪಟ್ಟವರಿಗೆ ಹಾಗೂ ಪ್ರೆಂಟ್ ಲೈನ್ ವಾರಿಯರ್ ಗಳಿಗೆ ಹಂತ ಹಂತವಾಗಿ ಡೋಸ್ ನೀಡಲಾಗುತ್ತಿದ್ದು. ಬಿಜೆಪಿ ಹಾಗೂ ಆರ್.ಎಸ್.ಎಸ್. ಸಂಘ ಪರಿವಾರದ ಕಾರ್ಯಕರ್ತರು ಜನರ ಸಮಸ್ಯೆ ಗೆ ಶ್ರಮಿಸುತ್ತಿದ್ದಾರೆ.
ಸದ್ಯ ದಿನಕ್ಕೆ ಇಂತಿಷ್ಟೇ ಲಸಿಕೆ ಲಭ್ಯವಾಗುತ್ತಿದ್ದು, ಕುಂದಾಪುರ ದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಾಗೂ ಪುರಸಭಾ ವ್ಯಾಪ್ತಿಯಲ್ಲಿ ನಿರಂತರವಾಗಿ ಲಸಿಕೆ ವಿತರಣೆ ನೆಡೆಯುತ್ತಿದೆ. ಮುಂದಿನ ಒಂದಿಷ್ಟು ದಿನಗಳಲ್ಲಿ ಲಸಿಕೆ ಪ್ರತಿಯೊಬ್ಬರಿಗೂ ಸಿಗಲಿದೆ. ಕುಂದಾಪುರ ದ ಶಾಸಕರಾದ ಶ್ರೀ ಹಾಲಾಡಿ ಶ್ರೀನಿವಾಸ್ ಶೇಟ್ಟಿಯವರು ಕೋವಿಡ್ ತಡೆಗಟ್ಟುವ ನಿಟ್ಟಿಯಲ್ಲಿ ಅಧಿಕಾರಿಗಳ, ಜನಪ್ರತಿನಿಧಿಗಳ ಸಾಲು ಸಾಲು ಸಬೆಗಳನ್ನು ನಡೆಸುತ್ತಿದ್ದು, ನಿರಂತರ ಸಂಪರ್ಕದಲ್ಲಿದ್ದಾರೆ, ಕಾರ್ಯಕರ್ತರು ಮಾಸ್ಕ್, ಆಹಾರ ಕಿಟ್, ಮೆಡಿಕಲ್ ಕಿಟ್ ವಿತರಣೆಯಲ್ಲಿ ಜನರ ಸಮಸ್ಯೆಗಳಿಗೆ ಸ್ವಂದಿಸುತ್ತಿದ್ದಾರೆ. ಕೋವಿಡ್ ನಿಂದ ಮತ್ರಪಟ್ಟವರ ಅoತ್ಯಕ್ರಿಯೆ ಕಾರ್ಯದಲ್ಲಿ ಸೂಮಾರು ಜನ ಕಾರ್ಯಕರ್ತರು ಸ್ವಯಂಸೇವಕರಾಗಿ ಶ್ರಮಿಸುತ್ತಿದ್ದಾರೆ.
ಕುಂದಾಪುರ ದ ಖಾರ್ವಿಕೇರಿ ಸೇರಿದಂತೆ, ಹತ್ತಿರ-ಹತ್ತಿರ ಮನೆಗಳಿರುವ ಪರಿಸರದ ನಾಗರಿಕರಿಗೆ ಆದ್ಯತೆಯ ಆಧಾರದಲ್ಲಿ ಲಸಿಕೆ ನೀಡಬೇಕೆಂದು ಶ್ರೀ ಮಹಾಕಾಳಿ ದೇವಸ್ಥಾನ ದ ಅದ್ಯಕ್ಷರು ಸಂಭಂದ ಪಟ್ಟವರಿಗೆ ಈಗಾಗಲೇ ಮನವಿ ಮಾಡಿದ್ದು. ಅತೀ ಶೀಘ್ರದಲ್ಲಿ ಲಸಿಕೆ ಪ್ರತಿಯೊಬ್ಬರಿಗೂ ದೊರೆಯಲಿದೆ.