ಮತ್ಯಕ್ಷಾಮ ಮತ್ತು ಕೊರಾನ ಸಂಕಷ್ಟದಲ್ಲಿ ನಮ್ಮ ಮೀನುಗಾರರು

ನಮ್ಮ ಕೊಂಕಣಿ ಖಾರ್ವಿ ಸಮಾಜದ ಶೇಕಡಾವಾರು 75-ರಿಂದ 80 ಪರ್ಶಂಟ್ ಜನರು ಮೀನುಗಾರಿಕೆಗೆ ಅವಲಂಬಿಸಿದ್ದರೆ.‌‌‌ 25-30% ಮಹಿಳೆಯರು ಬಂದರುನಲ್ಲಿ ಕಾರ್ಮಿಕರಾಗಿ, 10-15% ಮಹಿಳೆಯರು ಮೀನಿನ ವ್ಯಾಪಾರ. ಸತತವಾಗಿ 6 ತಿಂಗಳಿಂದ ಮ್ಯತ್ಯಕ್ಷಾಮ ಮತ್ತು ಕೊರಾನ ನಿಂದ ಮೀನುಗಾರರು ಸಂಕಷ್ಟದಲ್ಲಿದ್ದು ಯಾರು ಮೀನುಗಾರರ ಗೋಳು ಕೆಳವರಿಲ್ಲ ಸರ್ಕಾರವು ನಾವು ಮೀನುಗಾರಿಕೆಗೆ ಡಿಸೀಲ್ ಮತ್ತು ಸೀಮೆ ಎಣ್ಣೆ ಸಬ್ಸಿಡಿ ದರದಲ್ಲಿ ಕೋಟ್ಟಿದ್ದೇವೆ. ಅಂಥ ತಿಳಿಸಿದ್ದಾರೆ. ಆದರೆ ಡಿಸೀಲ್ ಸಬ್ಸಿಡಿ ಕೇವಲ ಬೋಟ್ ಮಾಲಕರಿಗೆ ಮಾತ್ರ ಆದರೆ ಸೀಮೆ ಎಣ್ಣೆ ಸಬ್ಸಿಡಿ ಯಾಲ್ಲಾ ಕಾರ್ಮಿಕರರಿಗೆ ಸೇರಿ ಹೋಗುತ್ತದೆ. ಆದರೆ ತಿಂಗಳಿಗೆ 100ರಿಂದ 150ಲೀ ಮಾತ್ರ ಸೀಗುತ್ತದೆ ಕೇವಲ 3-4 ದಿನಕ್ಕೆ ಸಾಕಗುತ್ತದೆ ಮತ್ತೆ 25 ದಿನ ಮೀನುಗಾರಿಕೆಗೆ ಕಷ್ಟಸಾಧ್ಯ.

ಸರ್ಕಾರವು 2019-20 ಸಾಲಿನಲ್ಲಿ 60 ಕೋಟಿ ರೂಪಾಯಿ ಸಾಲ ಮನ್ನ ಮಾಡಿದರು ಆದರೆ ನಮ್ಮ ಸಮಾಜದ ಯಾವುದೇ ಮಹಿಳಿಯರಿಗೆ ಸಿಕ್ಕಿಲ. ಕರವಳಿ ಉದ್ದಕ್ಕೂ ನಮ್ಮ ಸಾಮಾಜಬಾಂದವರು ಮೀನುಗಾರಿಕೆಯನ್ನೂ ನಂಬಿಕೊಂಡುದ್ದು ಕಷ್ಟದ ಜೀವನ ನೆಡೆಸುತ್ತೀದ್ದರೆ ಕಳೆದ ವರ್ಷವು ಇದೆ ರೀತಿ “ಲಾಕ್ ಡೌನ್” ಈ ಸಲ ಪ್ರಥಮವಾಗಿ “ಮ್ಯತ್ಯಕ್ಷಾಮ” ಮತ್ತು “ಲಾಕ್ ಡೌನ್” ಒಟ್ಟರೆ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ದೈನಂದಿನ ದುಡಿಮೆಯಿಂದ ಜೀವನ ರೂಪಿಸಿಕೋಳ್ಳುವರಿಗೆ ದಿಕ್ಕೂ ತೋಚಾದಗಿದೆ ಮೀನುಗಾರರ ಕುಟುಂಬಕ್ಕೆ ಒಂದೂತ್ತೀನ ಊಟಕ್ಕೆ ಗತಿಯಿಲ್ಲದ್ದಂತಾಗಿದೆ ಉದ್ದೋಗಕ್ಕಾಗಿ ಬ್ಯಾಂಕಿನಲ್ಲಿ ಸಾಲ ಮಾಡಿ ದೊಡ್ಡ ದೊಡ್ಡ ದೋಣಿಯನ್ನು ಮಾಡಿ ಪೀಸಿಂಗ್ ಮಾಡಲು ಆವಕಾಶ ಇಲ್ಲಾವಾಗಿದೆ ಸಮಸ್ಯೆಗೆ ಸಿಲುಕಿರುವ ಮೀನುಗಾರರ ಬದುಕು ಕಷ್ಟವಾಗಿದೆ.

ವಿಶ್ಚದಲ್ಲಿ ಮೀನು ಉತ್ಪಾದನೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ ಆದರೆ ಮೀನುಗಾರಿಗೆ ಆನ್ಯಯ ಆಗಿದೆ.ಈ ಸಮಯದಲ್ಲಿದರೂ ಸರ್ಕಾರವು ಮೀನುಗಾರರ ಸಮಸ್ಯೆಗೆ ಸ್ಪಂದಿಸಿ ವಿಶೇಷ ಪ್ಯಾಕೇಜ್ ಯನ್ನ ಘೋಷಣೆ ಮಾಡಿ ನಮ್ಮ ಸಮಾಜದ ಎಲ್ಲಾ ಕಟ್ಟಕಡೆ ವ್ಯಕ್ತಿಗು ಸೀಗಬೇಕು ನಮ್ಮ ಮೀನುಗಾರರು ಯಾವತ್ತೂ ದೃತಿಗೆಡವುದಿಲ್ಲ ಏನಾದರೂ ಆಗಲಿ ಮೀನುಗಾರಿಕೆಯೇ ನಮ್ಮ ಗುರಿ ಕಷ್ಟಗಳಿಗೆ ಹೇದರಿಸುವ ಶಕ್ತಿ ಇದೆ ಆತ್ಮಹತ್ಯೆಗೆ ಶರಣಗುವ ಜಾಯಮಾನವೆ ನಮ್ಮದಲ್ಲ ನಮಗೆ ತೊಂದರೆ ಆಗಿದ್ದ “ಲಾಕ್ ಡೌನ್” ನಿಂದ ನಾವು ಹಿಡಿದು ತಂದ ಮೀನುಗಳು ಖರೀದಿಸವರಿಲ್ಲ ಆದೆ ನಮಗಾದ ನಷ್ಠ. ಆದರಿಂದ ಸರ್ಕಾರದ ವತಿಯಿಂದ ನಮಗಾದ ನಷ್ಟಕ್ಕೆ ವಿಶೇಷವಾಗಿ ಪ್ಯಾಕೇಜ್ ಕೊಡಬೇಕೆಂದು ಆಗ್ರಹಿಸುತ್ತೇವೆ.


ಕೆ.ನಾಗೇಶ್ ಖಾರ್ವಿ ಕಂಚುಗೋಡು.

Leave a Reply

Your email address will not be published. Required fields are marked *