ಕುಂದಾಪುರ ಪುರಸಭಾ ವ್ಯಾಪ್ತಿಯ ಬಹದ್ದೂರ್ ಷಾ ರಸ್ತೆ ಇಂದೊಮ್ಮೆ ಕ್ರಷಿ ಚಟುವಟಿಕೆ ನಡೆಯುವ ಗದ್ದೆ ಬೈಲ್ ಎನ್ನುತ್ತಲ್ಲೆ ಜನ ಕರೆಯುತ್ತಿದ್ದರು, ಬೆರಳೆಣಿಕೆಯ ಎರಡು ಮೂರು ಮನೆಗಳು ಬಿಟ್ಟರೆ ಎಲ್ಲವೂ ಗದ್ದೆ ಪರಿಸರದಿಂದ ಸುಂದರತೆಗೆ ಸಾಕ್ಷಿಯಾಗಿತ್ತು. ಗದ್ದೆಯ ಭತ್ತ ಕ್ರಷಿ ಚಟುವಟಿಕೆ ಗೆ ಹಾಗೂ ಧನ ಕರುಗಳ ನೆರವಿಗಾಗಿ ಗದ್ದೆಯ ಮಧ್ಯಭಾಗದಲ್ಲಿ ಕೆರಗಳು ಹಲವಾರು ಇದ್ದವು. ಕಾಲ ಕ್ರಮೇಣ ರಸ್ತೆ ನಿರ್ಮಾಣವಾದಗ ಮಡಿವಾಳ ರ ಕೆರೆ ಒಂದು ರಸ್ತೆಯ ಪಕ್ಕದಲ್ಲೇ ಇತ್ತು.ಮಳೆಗಾಲ ಕ್ಕೆ ರಸ್ತೆ ಮತ್ತು ಈ ಕೆರೆ ಒಂದೂಗೂಡಿ ಜನ ನಡೆದು ಸಾಗಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸೂಮಾರು 80 ರ ದಶಕ ದಲ್ಲಿ ಇಲ್ಲಿನ ಮಹಿಳೆಯೊಬ್ಬರು ನಡೆದು ಹೋಗುವಾಗ ಕರೆಗೆ ಬಿದ್ದು ಮ್ರತ ಪಟ್ಟ ಘಟನೆಯು ನಡೆದಿದೆ.
ಅಂದು 2-3 ಮನೆಗಳಿದ್ದ ಬಹದ್ದೂರ್ ಷಾ ರಸ್ತೆ ಇಂದು 200 ಮನೆಗಳ ನಿರ್ಮಾಣಗೊಂಡಿದೆ.
ಕಳೆದ 20 ವರ್ಷಗಳ ಹಿಂದೆ ಲೇನಿ ಕ್ರಾಸ್ತ ಪುರಸಭಾ ಚುನಾವಣೆಯಲ್ಲಿ ಗೆದ್ದು ಬಂದಾಗ ಅವರ ವಿಶೇಷ ಪ್ರಯತ್ನದಿಂದ ಈ ಕೆರೆಗೆ ಅಡ್ಡಾಲಾಗಿ ಕಂಪೋಂಡ್ ನಿರ್ಮಿಸಿಕೊಟ್ಟರು. ತದ ನಂತರ 2007-08 ರ ವೇಳೆಗೆ ಈ ವಾರ್ಡ್ ನ ಸದಸ್ಯರಾದ ಶ್ರೀ ಶಂಕರ್ ಖಾರ್ವಿ ಹಾಗೂ ಅಂದಿನ ಪುರಸಭಾ ಅದ್ಯಕ್ಷರಾಗಿರುವ ಶ್ರೀ ಮೋಹನ್ ದಾಸ್ ಶಣೈ ಯವರ ಪ್ರಯತ್ನದಿಂದ ಈ ಕೆರೆ ಅಭಿವ್ರದ್ದಿಗೆ ಅನುಧಾನ ತಂದರಾದರು ಕೆರೆ ಅಭಿವ್ರದ್ದಿಗೆ ವಿಘ್ನ ತೊರಿಬಂದು ಈಗಲೂ ಕೆರೆ ಕಸದ ಕೊಂಪೆ ಯಂತೆ ಪಾಳು ಬಿದ್ದೆದೆ.
ವಾರ್ಡ್ ಸದಸ್ಯರು, ಪುರಸಭಾ ಉಪಾಧ್ಯಕ್ಷರಾಗಿರುವ ಸಂದೀಪ್ ಖಾರ್ವಿಯವರಲ್ಲೂ ಈ ವಿಚಾರ ಪ್ರಸ್ಥಾಪಿಸಿದರೂ ಕೊರ್ಟ್ ನಲ್ಲಿದೆ ಎನ್ನುವ ಮಾತು ಕೇಳಿಬಂದಿದೆ.
ಈ ಬಗ್ಗೆ ಇಲ್ಲಿನ ಪರಿಸರದವರು ಹಾಗೂ ಬಿಜೆಪಿ ಪಕ್ಷದ ಪದಾಧಿಕಾರಿಯಾಗಿರುವ ಸುನೀಲ್ ಖಾರ್ವಿ ಯವರನ್ನು ಕೇಳಿದಾಗ,, ಇದರ ವಿಚಾರವಾಗಿ ಹಲವಾರು ಭಾರಿ ಸಂಭದ ಪಟ್ಟ ಅಧಿಕಾರಿಗಳಿಗೆ ಮಾತಾನಡಿದ್ದೇನೆದಾರು, ಸ್ಥಳಿರೊಬ್ಬರು ಈ ಕೆರೆ ವಿಚಾರವಾಗಿ ಕೊರ್ಟ್ ಮೆಟ್ಟಿಲೆರಿದ್ದು ಇದರ ಅಭಿವ್ರದ್ದಿಗೆ ತಡೆಯಾಗಿದೆ, ಈಗಲೂ ಇದರ ಅಭಿವ್ರದ್ದಿಯ ಪ್ರಯತ್ನದಲ್ಲಿ ಇದ್ದೇವೆ ಸ್ಥಳಿಯರು ಒಗ್ಗೂಡಿ ಬೆಂಬಲಿಸಿದರೆ ಸಾದ್ಯವಾದಿತು ಎನ್ನುತ್ತಾರೆ.
ಅದೇನೆ ಇರಲಿ ಈ ಕೆರೆ ವಿಚಾರ ದ ಕಡತಗಳು, ಕೆರೆ ಸಂಭಂದಿಸಿದ ವಿಚಾರಗಳು ಪುರಸಭೆಯಲ್ಲಿ ಇದ್ದೆ ಇರುತ್ತದ್ದೆ, ಈಗಾಲಾದರು ಪುರಸಭೆ ಮೌನ ಮುರಿದು ಇದರ ಅಭಿವ್ರದ್ದಿಗೆ ಮನಸ್ಸು ಮಾಡಬೇಕಿದೆ ಎಂದೂ ಈ ಮೂಲಕ ಖಾರ್ವಿ ಆನ್ಲೈನ್ ಮನವಿ ಮಾಡುತ್ತಿದ್ದೆ.
Great Work
ವರದಿ ಅರ್ಥಪೂರ್ಣವಾಗಿದೆ. ಮಳೆಗಾಲದಲ್ಲಿ ಆವರಣರಹಿತ ಈ ಕೆರೆಯಿಂದ ಪರಿಸರದ ನಿವಾಸಿಗರಿಗೆ ಬಹಳ ತೊಂದರೆಯಿದೆ.ಆದ್ದರಿಂದ ಮೊದಲ ಆದ್ಯತೆಯಲ್ಲಿ 0.10 ಎಕರೆ ವಿಸ್ತೀರ್ಣದ ಮಡಿವಾಳ ಕೆರೆಯನ್ನು ಅಭಿವೃದ್ಧಿ ಪಡಿಸುವ ಅಗತ್ಯವಿದೆ.
ಸಂಬಂಧಿಸಿದವರು ಈ ವಿಚಾರದಲ್ಲಿ ಗಮನ ಹರಿಸಬೇಕಾಗಿ ವಿನಂತಿ.