ಸಣ್ಣ ವಯಸ್ಸಲ್ಲೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಗುರುಪ್ರಸಾದ್ ಖಾವಿ೯

ಸುತ್ತಮುತ್ತಲಿರುವ ಜನರ ಅನುಕೂಲಕ್ಕಾಗಿ ಪ್ರತಿಫಲವನ್ನು ಬಯಸದೆ ಸಮಾಜ ಸೇವೆಯಲ್ಲಿ ನಿರತರಾಗಿರುವ ಕುಂದಾಪುರ ಖಾವಿ೯ ಮಧ್ಯಕೇರಿ ಯಾ ಶಂಕರ್ ಖಾವಿ೯ ಮತ್ತು ರಾಧಾ ಖಾವಿ೯ ಅವರ ಪುತ್ರರಾದ ಗುರುಪ್ರಸಾದ್ ಖಾವಿ೯, ಈತನ ಮಾನವೀಯತೆ ಕಾಯ೯ಕ್ಕೆ ಎಷ್ಟು ಸಲಾಂ ಹೊಡೆದರು ಕಮ್ಮಿನೇ ಬಾಲ್ಯದಿಂದಲೇ ಸಮಾಜ ಸೇವೆಯಲ್ಲಿ ಆಸಕ್ತಿ ಹೊಂದಿದ್ದರು, ಸಮಾಜಕ್ಕೆ ಬೇಡವಾಗಿರುವ ಎಷ್ಟೋ ಜೀವಗಳಲ್ಲಿ ಬುದ್ಧಿಮಾಂದ್ಯ ಮಕ್ಕಳು ಒಬ್ಬರು. ದೇಹ ಬೆಳೆದರು ಬುದ್ದಿ ಬೆಳೆಯದ ಆ ಮಗು ದೊಡ್ಡದಾದಾಗ ಎಲ್ಲರಿಗೂ ಬೇಡವಾಗಿ ಬದುಕುತ್ತದೆ. ಆ ಮಕ್ಕಳನ್ನು ಸಮಾಜ ಬೇರೆ ರೀತಿನೆ ನೋಡುತ್ತದೆ. ನಮ್ಮಲ್ಲಿ ಅವರು ಒಬ್ಬರು ಎಂದು ಒಪ್ಪಿಕೊಳ್ಳುವ ಸಮಾಜ ಮರೆಯಾಗುತ್ತಿದೆ. ಇಂತಹ ಮನಸ್ಥಿತಿಯ ಜನಗಳ ನಡುವೆ ವಿಭಿನ್ನ ವ್ಯಕ್ತಿತ್ವದ ಅದಮ್ಯ ಮಮಕಾರದ ಗುರುಪ್ರಸಾದ್ ಖಾವಿ೯ ಅವರು ಬುದ್ದಿಮಾಂದ್ಯ ಮಕ್ಕಳ ಪಾಲಿನ ಬೆಳಕಾಗಿದ್ದಾರೆ, ಮಕ್ಕಳಲ್ಲಿ ಮನೋಸ್ಥೈರ್ಯವನ್ನು ತುಂಬುವಲ್ಲಿ ಗುರುಪ್ರಸಾದ್ ಖಾವಿ೯ ಯವರ ಕಾರ್ಯ ಶ್ಲಾಘನೀಯವಾದದ್ದು

ತನ್ನ ದುಡಿಮೆಯಲ್ಲಿ ಸ್ವಲ್ಪ ಹಣವನ್ನು ಸಮಾಜಕ್ಕಾಗಿ ಮೀಸಲಿಟ್ಟು ಅಶಕ್ತರಿಗೆ, ಅನಾರೋಗ್ಯ ಪೀಡಿತರಿಗೆ, ಧನಸಹಾಯ ನೀಡುವ, ತುರ್ತು ರಕ್ತದ ಅವಶ್ಯಕತೆ ಇರುವವರಿಗೆ ರಕ್ತ ಪೂರೈಸುವ ಸದಾ ಸಮಾಜಮುಖೀ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಯುವಕ.

ಹಲವು ಸಂಘ ಸಂಸ್ಥೆಗಳಲ್ಲಿ ಕಾಯ೯ ನಿವ೯ಹಿಸಿ, ಖಾವಿ೯ಕೇರಿಯಾ ಯುವಕರನ್ನು ಒಗ್ಗೂಡಿಸಿ ಸಮಾಜಸೇವೆ ಮಾಡಲು ಪ್ರೇರಪಿಸಿದ ವ್ಯಕ್ತಿ, ಈತನ ಪ್ರೇರಣೆಯಿಂದ ಸಾಕಷ್ಟು ಯುವಕರು ಸಮಾಜಸೇವೆ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಯುವಾಬ್ರಿಗೇಡ್ , ರಕ್ತದಾನಿ ಬಳಗ, ಹ್ಯಾಲ್ಪಿಂಗ್ ಹ್ಯಾಂಡ್ಸ್ , ಮಧ್ಯೆಕೇರಿ ಹೋಳಿ ಸಮಿತಿಯಾ ಅಧ್ಯಕ್ಷನಾಗಿ, ತನ್ನ ಕಾಯ೯ ಅಚ್ಚುಕಟ್ಟಾಗಿ ನಿರಂತರವಾಗಿ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ

ಗುರುಪ್ರಸಾದ್ ಅವರ ವೈಯಕ್ತಿಕ ಸಾಧನೆಗಳು ಮತ್ತು ಅವರ ಮಾತಿನಲ್ಲಿ…………

*ರಕ್ತದ ಅವಶ್ಯಕತೆ ಇರುವವರಿಗೆ ಆದಷ್ಟು ಬೇಗನೇ ರಕ್ತದ ವ್ಯವಸ್ಧೆ ಮಾಡಿರುತ್ತೇನೆ.


*ಮಣಿಪಾಲ ಮತ್ತು ಇತರ ದೂರದ ಆಸ್ಪತ್ರೆ ಗಳಿಗೆ ರೋಗಿಗಳನ್ನು ಕರೆದುಕೊಂಡು ಹೋಗುವ ವಾಹನ ಮತ್ತು ಇತರ ವ್ಯವಸ್ಥೆ.


*ಹಲವು ಬಾರಿ ಅನಾಥಶ್ರಮಗಳಿಗೆ ಭೇಟಿ ನೀಡಿ ಕಿರು ಸಹಾಯ.
ರೋಡಿನಲ್ಲಿ ಮಲಗಿರುವ ನಿರ್ಗತಿಕರಿಗೆ ರಾತ್ರಿ ಹೊತ್ತು ಚಳಿ ಯಿಂದ ರಕ್ಷಣೆ ಪಡೆಯಲು ಬೆಡ್ ಶೀಟ್ ಕೂಡ ವಿತರಣೆ.


*7ಲಕ್ಷ ಮೌಲ್ಯದ ಚಿನ್ನದ ಸೊಂಟದ ಪಟ್ಟಿ ಸಿಕ್ಕಿದ್ದು ಅದನ್ನು ವಾರಸುದಾರರಿಗೆ ತಲುಪಿಸಿದ್ದು ಸಮಾಜ ಮತ್ತು ಹಲವು ತಂಡ ಪ್ರಶಂಸೆ ಮಾಡಿತ್ತು.


*ಲೊಕ್ಡೌನ್ ಸಮಯದಲ್ಲಿ ಅಗತ್ಯವುಳ್ಳವರಿಗೆ ಇದ್ದವರಿಗೆ ಸ್ವಂತ ಖರ್ಚಿನಿಂದ ರೇಷನ್ ಕಿಟ್ ಗಳ ವಿತರಣೆ.


*ಕೆಲವೊಂದು ಬಾರಿ ದೂರದ ಊರಿನಿಂದ ಬಂದ ಕೆಲವರಿಗೆ ಹಣದ ವ್ಯವಸ್ಥೆ ಮಾಡಿ ಅವರ ಊರಿಗೆ ಹೋಗುವಂತ ಚಿಕ್ಕ ಸಹಾಯ.


*ಶುಭಾರಂಭದ ಸಮಯದಲ್ಲಿ ಬಂದವರಿಗೆ ಹಸಿರನ್ನು ಬೆಳೆಸುವ ಉದ್ದೇಶದಿಂದ ಹಲವು ಗಿಡಗಳನ್ನು ಸ್ಮರಣಿಕೆ ರೂಪದಲ್ಲಿ ವಿತರಣೆ.


*ಹಲವಾರು ರೋಗಿಗಳಿಗೆ ಕೆಲವೊಂದು ಅವರ ಕಠಿಣ ಸಮಯದಲ್ಲಿ ವೈಯಕ್ತಿಕವಾಗಿ ಸಹಾಯ.

*ಖಾವಿ೯ ಕೇರಿ ಏರಿಯಾದಲ್ಲಿ ಸಾರ್ವಜನಿಕ ಆಸ್ತಿ ದುರಸ್ತಿ ಮಾಡುವಲ್ಲಿ ನಿಷ್ಠೆ ಯಿಂದ ಪ್ರಯತ್ನ .
ಕೆಲಸ ಮಾಡುತ್ತಿರುವ ಸಂಸ್ಥೆ ಬಳಿ ಪಕ್ಷಿಗಳಿಗೆ ನೀರು ಮತ್ತು ಆಹಾರದ ವ್ಯವಸ್ಥೆ ಯನ್ನು ಮಾನವೀಯ ದ್ರಷ್ಟಿ ಯಿಂದ ಸೇವೆ.

*ಖಾವಿ೯ ಕೇರಿ ಏರಿಯಾದ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಮುಂಚೂಣಿಯಲ್ಲಿ ನಿಂತು ಸೇವೆ.



*ಯುವಾ ಬ್ರಿಗೇಡ್ ನೊಂದಿಗೆ ಕೆಲವು ವರ್ಷಗಳಿಂದ ಸ್ವತಂತ್ರ ದಿನಾಚರಣೆ, ಗಣ ರಾಜ್ಯೋತ್ಸವ ಮತ್ತು ಸ್ವತಂತ್ರಕ್ಕಾಗಿ ಬಲಿದಾನ ಕೊಟ್ಟ ಮಹನೀಯರ ದಿನಾಚರಣೆಗಳ ಆಚರಿಸಿದ್ದೇವೆ.


*ಪ್ರಕ್ರತಿಯನ್ನು ಉಳಿಸಿ ಬೆಳೆಸುವ ಸಲುವಾಗಿ ನಮ್ಮ ತಂಡದೊಂದಿಗೆ ಸುಮಾರು 500 ಅಧಿಕ ಗಿಡ ನೆಟ್ಟಿದ್ದೇವೆ ಮತ್ತು ಹಲವು ಸಂಸ್ಥೆಗಳಿಗೆ ಕೊಟ್ಟಿದ್ದೇವೆ.


*ಲೊಕ್ಡೌನ್ ಸಮಯದಲ್ಲಿ ಈ ವರ್ಷದಲ್ಲಿ helping hands ಮತ್ತು ಹೋದ ವರ್ಷದಲ್ಲಿ ಯುವಾ ಬ್ರಿಗೇಡ್ ಸಂಘಟನೆ ಯೊಂದಿಗೆ ಸುಮಾರು 350000 ರೂಪಾಯಿ ಮೌಲ್ಯದ ಆಹಾರ ಕಿಟ್ ಅನ್ನು ವಿತರಿಸುವ ಕೆಲಸದಲ್ಲಿ ಬಾಗಿಯಾಗಿದ್ದೇನೆ.


*ಜನರಿಗೆ ಅವಶ್ಯಕತೆ ಇರುವ ಆಧಾರ್ ಕಾರ್ಡ್ ಯೋಜನೆ ಯನ್ನು ಯುವಬ್ರಿಗೇಡ್ ನೊಂದಿಗೆ ಸುಮಾರು 1000 ಜನರಿಗೆ ಅದರ ಉಪಯೋಗ ದೊರೆಯುವಂತಹ ಕೆಲಸ ಮಾಡಿರುತ್ತೇವೆ.


* ನದಿಯಲ್ಲಿ ಕಸ ಮತ್ತು ಪ್ಲಾಸ್ಟಿಕ್ ಎಸೆಯುವುದನ್ನು ತಡೆಯುವ ಉದ್ದೇಶದಿಂದ ಏರಿಯಾದ ಎಲ್ಲಾ ಕಡೆ ಕಸದ ಬುಟ್ಟಿ ಮತ್ತು ಪಲಕಗಳನ್ನು ಅಳವಡಿಸಿದೆವು.


*ವಿದ್ಯಾರಂಗ ಮತ್ತು ಯುವ ಬ್ರಿಗೇಡ್ ಒಟ್ಟು ಗೂಡಿ ಉಚಿತ ನೇತ್ರ ಚಿಕಿತ್ಸೆ ಕಾರ್ಯಕ್ರಮ ಮಾಡಿದ್ದೆವು ಇದರಲ್ಲಿ ಸುಮಾರು 300ಕ್ಕೂ ಹೆಚ್ಚು ಜನ ಇದರ ಉಪಯೋಗ ಪಡೆದಿದ್ದರೂ


*ಕ್ಷೇತ್ರ ಸ್ವಚ್ಛತೆ ಕಾರ್ಯಕ್ರಮದಡಿ ಹಲವಾರು ದೇವಸ್ಥಾನ ವನ್ನು ಸ್ವಚ್ಛ ಮಾಡುವ ಕೆಲಸದಲ್ಲಿ ಭಾಗಿಯಾಗಿರುತ್ತನೇ.


*ಕೆರೆಗಳ ಹೂಳು ಎತ್ತುವ ಯೋಜನೆ ಯಲ್ಲಿ ಕೂಡ ಕೈ ಜೋಡಿಸಿದ್ದೇನೆ ಮತ್ತು ಪಂಚಗಂಗಾವಳಿ ನದಿ ಸ್ವಚ್ಛತಾ ಕಾರ್ಯಕ್ರಮ ಭಾಗವಹಿಸಿದ್ದೇನೆ.


*ಪುರಾತನ ದೇಗುಲ ಸ್ವಚ್ಛತ ಮತ್ತು ಅಭಿವೃದ್ಧಿ ಕೆಲಸಗಳಲ್ಲಿ ನನ್ನ ತಂಡದ ಮೂಲಕ ಕೆಲಸ ನಿರ್ವಹಿಸಿದ್ದೇನೆ.


*ರಕ್ತ ದಾನಿಗಳು ಬಳಗ ಕುಂದಾಪುರ ಇದರ ಅಧ್ಯಕ್ಷನಾಗಿ ಹಲವಾರು ಜನರಿಗೆ ಕ್ಲಪ್ತ ಸಮಯದಲ್ಲಿ ರಕ್ತವನ್ನು ನಾವು ಕೊಡಿಸುವಲ್ಲಿ ಸದಾ ಕಾರ್ಯದಲ್ಲಿ ನಿರತನಾಗಿದ್ದೇನೆ.


*Helping Hands ಎಂಬ ತಂಡದಲ್ಲಿ ದಿನಸಿ ಸಾಮಾನು ಮತ್ತು ಹಣದ ವ್ಯವಸ್ಥೆ ಕೆಲಸ ಮಾಡಿರುತ್ತೇನೆ.


*ನಿರ್ಗತಿಕರಿಗೆ ಬೆಡ್ ಶೀಟ್ ಈ ತಂಡದೊಂದಿಗೆ ಹಂಚುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ.


*ಅನಾಥಾಲಯ ಗಳಿಗೆ ಬೇಟಿ ನೀಡಿ ನಮ್ಮ ತಂಡ ಆದಷ್ಟು ಅವರಿಗೆ ಆರ್ಥಿಕ ಮತ್ತು ಆಹಾರದ ವ್ಯವಸ್ಥೆಯ ಸೇವೆಯನ್ನು ಮಾಡಿರುತ್ತೇವೆ.


*ಹಲವಾರು ಗೋ ಶಾಲೆಗಳಿಗೆ ಮೇವು ನೀಡುವ ಪುಣ್ಯದ ಕಾರ್ಯದಲ್ಲಿ ನಮ್ಮ ತಂಡದೊಂದಿಗೆ ಬಾಗವಸಿರುತ್ತೇನೆ.


*ಕ್ಯಾನ್ಸರ್ ಪೀಡಿತರು ಮತ್ತು ಅನಾರೋಗ್ಯ ಪೀಡಿತರಿಗೆ ಆರ್ಥಿಕ ಸಹಾಯವನ್ನು ನಮ್ಮ ತಂಡದೊಂದಿಗೆ ಮಾಡಿರುತ್ತೇನೆ.


*ನಮ್ಮ ತಂಡದೊಂದಿಗೆ ನಮ್ಮ ಏರಿಯಾದಲ್ಲಿ ಹಲವು ಸ್ವತಂತ್ರ ಹೋರಾಟಗಾರ ಜೀವನ ಚರಿತ್ರೆ ಪುಸ್ತಕ ಮತ್ತು ಚಿತ್ರ ಪಟ ವನ್ನು ಹಂಚಿರುತ್ತೇವೆ ಮತ್ತು ಲೈಬ್ರರಿ ಗೂ ಕೂಡ ಪುಸ್ತಕವನ್ನು ಕೊಟ್ಟಿದ್ದೇವೆ.


*ರಸ್ತೆ ಸ್ವಚ್ಛತ ಅಭಿಯಾನದಲ್ಲಿ ಯುವಾ ಬ್ರಿಗೇಡ್ ತಂಡದೊಂದಿಗೆ ರಸ್ತೆಯನ್ನು ಸ್ವಚ್ಛಗೊಳಿಸಿ ತಿರುಗಾಟಕ್ಕೆ ಸೂಕ್ತ ವ್ಯವಸ್ಥೆ ಮಾಡಿರುತ್ತೇನೆ.

ನಿಮ್ಮ ಈ ಸಮಾಜ ಸೇವೆಯೂ ನಿರಂತರವಾಗಿರಲಿ ಮತ್ತು ತಾಯಿ ಮಹಾಕಾಳಿ ಅಮ್ಮ ತಮಗೆ ಮತ್ತಷ್ಟು ಶಕ್ತಿಯನ್ನು ನೀಡಿ ಇನ್ನೂ ಹೆಚ್ಚಿನ ಸೇವೆ ಮಾಡುವಂತಾಗಲಿ ಎಂದು ಆಶಿಸೋಣ .


ಸಹಕಾರ :ಚೇತನ್ ಯುವಾ


ವರದಿ : www.kharvionline.com

13 thoughts on “ಸಣ್ಣ ವಯಸ್ಸಲ್ಲೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಗುರುಪ್ರಸಾದ್ ಖಾವಿ೯

  1. ನಾನು ಅವರ ಸಾಮಾಜಿಕ ಕಾರ್ಯಗಳನ್ನು ತುಂಬಾ ನೋಡಿದ್ದೀನಿ……
    ನಿಮ್ಮ ಒಂದೊಂದು ಸಾಮಾಜಿಕ ಕಾರ್ಯವು ನಮಗೆ ಮಾದರಿ ನಿಮ್ಮ ಕಾರ್ಯವು ಪ್ರತಿಯೊಬ್ಬ ಯುವ ಪೀಳಿಗೆಗೆ ಪ್ರೇರಣೆ ಆಗಲಿ….ಭಗವಂತ ನಿಮಗೆ ಒಳ್ಳೆಯದು ಮಾಡಲಿ

  2. ಬಡವರು ಮತ್ತು ಕೆಳ ಮದ್ಯಮ ವರ್ಗದವರೇ ಹೆಚ್ಚಿರುವ ನಮ್ಮ ಸಮಾಜದಲ್ಲಿ ಪ್ರಸ್ತುತ ಸನ್ನಿವೇಶದಲ್ಲಿ ಇಂತಹ ಸಮಾಜ ಸೇವಕರ ಅಗತ್ಯ ತುಂಬಾ ಇದೆ. ಶ್ರೀಯುತ ಗುರುಪ್ರಸಾದ್ ಖಾರ್ವಿ ಮತ್ತು ಅವರ ನೇತ್ರತ್ವದಲ್ಲಿ ಮುಂದುವರಿಯುತ್ತಿರುವ ಸಂಘಟನೆಯ ನಿಸ್ವಾರ್ಥ ಸೇವೆಗೆ ಕೋಟಿ ಕೋಟಿ ನಮನ. ಇಂತಹ ಸಂಘಟನೆಗಳು ಹೆಚ್ಚು ಹೆಚ್ಚು ಬೆಳೆದು ಸಮಾಜದ ಜನರ ಬಾಳಿನಲ್ಲಿ ಸಂಜೀವಿನಿಯಾಗಲಿ ಎಂದು ಶುಭ ಹಾರೈಕೆ.

  3. “ಗುರು ಪ್ರಸಾದ್ ಖಾರ್ವಿ‌”
    ನನ್ನ ಈ ಗೆಳೆಯನ ಬಗ್ಗೆ ಎಷ್ಟು‌ ನೀವು ಬರೆದರೂ ಸಹ ಅದು ಕೊಂಚ ಕಡಿಮೆಯೇ ಆಗುತ್ತದೆ. ಸಮಾಜ ಸೇವೆ ಎಂಬ ಹೆಸರಿನಲ್ಲಿ ಪ್ರಚಾರಕಾಗಿ ಕೆಲಸ‌ ಮಾಡುವ ಈಗಿನ‌ ಪೀಳಿಗೆಯಲ್ಲಿ ,ಯಾವುದೇ ಫಲಾಪೆಕ್ಷೆ ಇಲ್ಲದೇ ಕೇವಲ ಮನಸ್ಸಿನ ಸಂತ್ರಪ್ತಿಗಾಗಿ‌ ಸೇವೆ ಮಾಡುವ್ಜಾ ಇವರಂತಹ ಸೇವಕರು ಸೀಗುವುದು ಬಹಳ ಕಷ್ಟ..
    ನನ್ನ ಮತ್ತು ಗೆಳೆತನವಾಹಿ ಇನ್ನೂ ಒಂದು ವರ್ಷ ಆಗದಿದ್ದರು ನಮ್ಮಿಬ್ಬರ ಸಮಾನ‌ ಮನಸ್ಥಿತಿ ಮತ್ತು ನಿಷ್ಕಲ್ಮಶ ಸ್ನೇಹ ಒಟ್ಟಾಗಿ‌ ಸಮಾಜಪರ ಕೆಲಸ ಮಾಡುವಲ್ಲಿ ಸಹಾಯವಾಗುತ್ತಿದೆ.
    ಸಮಾಜಪರ ಕಾರ್ಯವೆಂದ ತಕ್ಷಣ‌ ತಮ್ಮ‌ ಎಲ್ಲಾ ಕೆಲ್ಸವನ್ನು ಬಿಟ್ಟು ಓಡಿ ಬರುವ ಇವರು ಯುವ ಪೀಳಿಗೆಗೆ ದೊಡ್ಡ ಪ್ರೇರಣೆ. ಇವರ ಸಮಾಜ ಸೇವೆಯ ಗೌರವ ನೀಡುವ ಸಲುವಾಗಿ ನಮ್ಮ ಪರಿಚಯವಾದ ಕೇವಲ ಹತ್ತು ದಿನಗಳ ಅವಧಿಯಲ್ಲಿ ನಮ್ಮ‌ “ಹೆಲ್ಪಿಂಗ್ ಹ್ಯಾಂಡ್ಸ್ ಕುಂದಾಪುರ” ಎನ್ನುವ ಸಂಸ್ಥೆಯಲ್ಲಿ ಜವಾಬ್ಧಾರಿಯುವ ಪದವಿಯಾದ “ಕಾರ್ಯದರ್ಶಿ* ಎನ್ನುವ ಸ್ಥಾನವನ್ನು ನೀಡಿ ಗೌರವಿಸಿ‍ದ್ದೆವೆ. ನಮ್ಮ ತಂಡದ ಎಲ್ಲಾ ಸಾಮಾಜಿಕ ಕಾರ್ಯದಲ್ಲೂ ಸಹಾ ಗುರು ಪ್ರಸಾದ್ ಅವರ ಕಾರ್ಯವೈಕರಿ ಶ್ಲಾಘನೀಯ. ರಕ್ತದಾನ ಕ್ಷೇತ್ರದಲ್ಲೂ ಸಹಾ ಹಲವಾರು ವರ್ಷಗಳಿಂದ ರಕ್ತದಾನ ಹಾಗೂ ರಕ್ತದಾನಿಗಳ ಪೂರೈಕೆ ಮಾಡುತ್ತಾ ಬಂದಿರುವ ಇವರು ೨೦ ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ್ದಾರೆ.
    ನಮ್ಮ‌ ಹೆಲ್ಪಿಂಗ್ ಹ್ಯಾಂಡ್ಸ್ ಕುಂದಾಪುರ ಸಂಸ್ಥೆಯ ” ಚಳಿಗಾಲದಲ್ಲಿ ನಿರ್ಗತಿಕರಿಗೆ ಬೆಡ್ ಶಿಟ್ ನೀಡುವ ಯೋಜನೆ” ಯಿಂದ ನಮ್ಮೊಂದಿಗೆ ಸಹಕಾರ ನೀಡುತ್ತಾ ಬಂದಿರುವ ಇವರು ನಮ್ಮ ತಂಡದ ಬೆನ್ನೆಲುಬಾಗಿದ್ದಾರೆ.
    ಇಂತಹ ಒಬ್ಬ ಗೆಳೆಯ ಸಿಕ್ಕಿರುವುದು ವೈಯಕ್ತಿಕವಾಗಿ‌ ನನಗೆ ಬಹಳಷ್ಟು ಖುಷಿ ಕೊಟ್ಟಿರುವ ವಿಷಯವಾಗಿದೆ.
    ನಿಮಗೆ ಇನ್ನಷ್ಟು ಸಮಾಜಪರ ಕೆಲಸ ಮಾಡುವ ಶಕ್ತಿಯನ್ನು “ಶಕ್ತಿ ದೇವತೆ” ಮಹಾಕಾಳಿ ಅಮ್ಮ ಕರುಣಿಸಲಿ. ಹಾಗೂ ನಿಮ್ಮ ಸೇವೆಯಿಂದ ನಮ್ಮ ಹೆಲ್ಪಿಂಗ್ ಹ್ಯಾಂಡ್ಸ್ ಸಂಸ್ತ್ಗೆಗೆ ಇನ್ನಷ್ಟು ಸಮಾಜಪರ ಕೆಲಸ ಮಾಡಲು ಸಹಾಯವಾಗಲಿ ಎಂದು ಆಶಿಸುತ್ತೆನೆ.

    🖋 ಪ್ರದೀಪ್ ಮೊಗವೀರ ಕೋಟೆಶ್ವರ
    ಅಧ್ಯಕ್ಷರು ಹಾಗೂ ಸಂಸ್ಥಾಪಕರು
    ಹೆಲ್ಪಿಂಗ್ ಹ್ಯಾಂಡ್ಸ್ ಕುಂದಾಪುರ

  4. ಪ್ರಚಾರಕ್ಕಾಗಿ ನಾ ಮುಂದು ತಾ ಮುಂದು ಎನ್ನುವ ಈ ಕಾಲದಲ್ಲಿ,ಅದ್ಯಾವುದನ್ನು ಬಯಸದ ವ್ಯಕ್ತಿ ನಮ್ಮ ಗುರುಪ್ರಸಾದ್..ಇವರ ಜೊತೆ ನಾನು ೂಡಾ ಭಾಗಿಯಾಗಿದ್ದು ಹೆಮ್ಮೆ ಅನಿಸುತ್ತಿದೆ..ಇವರ ಮುಂದಿನ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೆರಲಿ ಎಂದು ಆಶಿಸುವೆನು..

  5. ಗುರುಪ್ರಸಾದ್ ಖಾರ್ವಿ ಪ್ರಚಾರ ಬಯಸದ ನಿಸ್ವಾರ್ಥ ಜನಸೇವಕ…ಯಾವದೇ ಕೆಲಸಕ್ಕೆ ಕರೆ ಮಾಡಿದಾಗ ಅಗುವುದಿಲ್ಲ ಎಂಬ ಮಾತು ಬಹಳ ಕಡಿಮೆ….ಹಾ ಅಣ್ಣ ಪ್ರಯತ್ನ ಮಾಡುತ್ತೆನೆ ಎನ್ನುವ ಮಾತು‌ ಸದಾ ಇದ್ದೆ ಇರುತ್ತೆದೆ…ಪ್ರಯತ್ನದಿಂದ ಸಿಗುವ ಯಶಸ್ಸು ಯಾವಾಗಲೂ ಶಾಶ್ವತವಾಗಿರುತ್ತದೆ…ಯಾರ ಸಹಕಾರವು ಇಲ್ಲದೆ ಗುರುಪ್ರಸಾದ್ ಖಾರ್ವಿ ಅವರು ತನ್ನದೆ ಆದ ರಕ್ತದಾನ ಹಾಗೂ ಸಮಾಜಸೇವೆಯ ಯುವಕ ತಂಡವನ್ನು ಕಟ್ಟಿರುವುದು‌.‌ ನಿಮ್ಮ ಸೇವಾ ಮಾನೋಭಾವ ಗುರುತಿಸಿ ಕುಂದಾಪುರದ ಪ್ರತಿಷ್ಟಿತ ಸಮಾಜಸೇವ ಸಂಸ್ಥೆ HELPING HANDS ಕುಂದಾಪುರ ಇದರ ಸಂಸ್ಥಾಪಕ‌‌ ಅಧ್ಯಕ್ಹರಾದ ಪ್ರದೀಪ್‌ ಮೊಗವೀರ ಅವರು ಪ್ರಧಾನ‌ ಕಾರ್ಯದರ್ಶಿ ಹುದ್ದೆ ನೀಡಿರುವುದು ನಮ್ಮಲ್ಲರಿಗೂ ಹೆಮ್ಮೆಯ ವಿಷಯ….
    ನಿಮ್ಮ ನಿಶ್ವಾರ್ಥ ಸೇವೆ ಹೀಗೆ ಮುಂದುವರಿಯಲಿ ದೇವರು ಆಯುಷ್ಯಾ ಆರೋಗ್ಯ ಕರುಣಿಸಲಿ ಉಡುಪಿ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಕೃಪೆ ಸದಾ ಇರಲಿ…

    ರಕ್ತದ ಅಪತ್ಬಾಂಧವ ಸತೀಶ್ ಸಾಲ್ಯಾನ್‌ ಮಣಿಪಾಲ್
    ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರು
    ಗೌರವ ಅಧ್ಯಕ್ಹರು
    ಹೆಲ್ಪಿಂಗ್ ಹ್ಯಾಂಡ್ಸ್ ಕುಂದಾಪುರ
    ಸಂಸ್ಥಾಪಕ ಅಧ್ಯಕ್ಹರು
    ಅಭಯಹಸ್ತ ಹೆಲ್ಪ್ ಲೈನ್ ಉಡುಪಿ

  6. ಶ್ರೀ ತಾಯಿ ಮಹಾಕಾಳಿ ಅಮ್ಮನವರು ನಿಮಗೆ ಇನ್ನೂ ಹೆಚ್ಚಿನ ಸೇವೆಯನ್ನು ಮಾಡುವ ಶಕ್ತಿ ನೀಡಲಿ ನಿಮ್ಮ ಯೋಜನೆಗಳೆಲ್ಲ ಯಶಸ್ವಿಯಾಗಿ ನಿಮ್ಮೆಲ್ಲರ ಜೊತೆ ಕೆಲಸ ಮಾಡ್ತಾ ಇರೋದೇ ಖುಷಿ ಕೊಡ್ತಾ ಇದೆ.

  7. ಗುರುಅಣ್ಣಾ..ನಿಮ್ಮ ಈ ಸಮಾಜ ಸೇವೆ ಇನ್ನು ಉತ್ತಮವಾಗಿ ನಿರಂತರವಾಗಿ ಸಾಗಲಿ…ಶ್ರೀ ಮಹಾಕಾಳಿ ಅಮ್ಮನವರ ಆಶೀರ್ವಾದ ಸದಾ ನಿಮಗಿರಲಿ..

  8. Keep it up Bro..I am proud to you say u r my friend ❤️🙏.God bless you…
    U r real hero 👍

  9. ಒಳ್ಳೆದಾಗಲಿ ಗುರು. ನಿಮ್ಮ ಬಳಗ ಇನ್ನಷ್ಟು ಸಮಾಜ ಮುಖಿ ಕಾರ್ಯಕ್ರಮ ಮಾಡಲು ಮಂಜುನಾಥ ಸ್ವಾಮಿ ಮತ್ತು ಮಹಾಕಾಳಿ ಅಮ್ಮ ನಿಮಗೆ ಶಕ್ತಿ ನೀಡಲಿ. All the best bro

Leave a Reply

Your email address will not be published. Required fields are marked *