ಚಿರತೆಯಂತೆ ಹಾರುತ್ತಾನೆ, ಸಿಂಹದಂತೆ ಎರಗುತ್ತಾನೆ, ಹಾವಿನಂತೆ ಸುತ್ತಿ ಕೊಳ್ಳುತ್ತಾನೆ….ಆಬ್ಭಾ!!

ಚಿರತೆಯಂತೆ ಹಾರುತ್ತಾನೆ. ಸಿಂಹದಂತೆ ಎರಗುತ್ತಾನೆ.ಹಾವಿನಂತೆ ಸುತ್ತಿ ಕೊಳ್ಳುತ್ತಾನೆ….ಆಬ್ಭಾ ..!! ಪ್ರಚಂಡ ಕಬಡ್ಡಿ ಆಟಗಾರ.

ಪ್ರಜ್ವಲ್ ಉಮಾನಾಥ್ ಪಂಡಿತ್ ಗಂಗೊಳ್ಳಿ.

ಕೇವಲ 20 ವರ್ಷ.ಕಬಡ್ಡಿ ಅಖಾಡಕ್ಕೆ ಇಳಿದರೆ ಎಂಥವರನ್ನೂ ಆಲುಗಾಡಿಸಿ ಗಾಬರಿ ಬಿಳಿಸುತ್ತಾನೆ ಇವನು. ಕಾಲುಗಳಿಂದಲೆ ಲಾಕ್ ಮಾಡುತ್ತಾನೆ. ನೇರವಾಗಿ ಅಟ್ಟಾಕ್ ಮಾಡಿ ಅಲ್ಲಿಯೇ ಕೆಡವಿ ಹಾಕುತ್ತಾನೆ ಎದುರಾಳಿಯನ್ನು. ಬಂದ ಸುಂಕ ಇಲ್ಲದೆ ಅಲ್ಲೇ ಮಲಗುತ್ತಾನೆ. ಕಬಡ್ಡಿ ಎಂದರೆ ಪ್ರಜ್ವಲ್ ಪ್ರಜ್ವಲ್ ಅಂದರೆ ಕಬಡ್ಡಿ ಅನ್ನೋ ಹಾಗೆ ಇಂದು ಕಬಡ್ಡಿ ರಂಗದಲ್ಲಿ ಈ ಹುಡುಗ ಮಿಂಚಿನಂತೆ ಪ್ರಜ್ವಲಿಸುತ್ತಿದ್ದಾನೆ. No doubt he is a fantastic Kabaddi Player ಬಾಲ್ಯದಿಂದಲೂ ಕಬಡ್ಡಿ ಬಗ್ಗೆ ವಿಪರೀತ ಪ್ರೀತಿ. ಕೋರ್ಟ್ ಹೊರಗಡೆ ನಿಂತು ಅಡುತ್ತಿದ್ದವರನ್ನು ನೋಡುತ್ತಿದ್ದ ಈ ಹುಡುಗನಿಗೆ ಆ ದಿನ ಸುದಿನವಾಗಿತ್ತು

ಅಂದು ಒಬ್ಬ ಆಟಗಾರನ ಬದಲಿಗೆ ಈತನಿಗೆ ಅಖಾಡಕ್ಕೆ ಧುಮುಕುವ ಅವಕಾಶ ದೊರಕಿತು. ವಾವ್ ..ಈತ ಅದನ್ನು ಸದುಪಯೋಗ ಪಡಿಸಿಕೊಂಡ. ಎಲ್ಲರೂ ಮೂಗಿನ ಮೇಲೆ ಬೆರಳನಿಟ್ಟು ಕೊಳ್ಳುವಂತೆ ಆತ ಆಡಿದ. …Yes. ಮುಂದೆ….ಅವನದೇ ಆಟ… ಇಂದಿಂಗೂ ಅವನದೇ ಆಟ… ಅವನ್ನಾಡಿದ್ದೆ ಆಟ… ಕಬಡ್ಡಿ..ಕಬಡ್ಡಿ…ಕಬಡ್ಡಿ…ಕಬಡ್ಡಿ ಆಟ.

ಕಬಡ್ಡಿ ಎಂದರೆ ಪಂಚ ಪ್ರಾಣ ಇವನಿಗೆ. ಹಲವಾರು ಕಬಡ್ಡಿ ಪಂದ್ಯಾಟದಲ್ಲಿ ತನ್ನ ಆಕರ್ಷಕ ಆಟದಿಂದ ಗಮನ ಸೆಳೆದ ಪ್ರಜ್ವಲ್ ಕುಂದಾಪುರ ಖಾರ್ವಿ ಕೇರಿಯಲ್ಲಿ ದೀಪಾವಳಿಯ ಕಬಡ್ಡಿ ಪಂದ್ಯಾಟದಲ್ಲಿ ಅಪ್ರತಿಮ ಆಟ ಪ್ರದರ್ಶಿಸಿ ಅಂದು ಮನೆ ಮನೆ ಮಾತಾಗಿ ಹೋದ.

ಕಬಡ್ಡಿಯಲ್ಲಿ ಏನಾದರೂ ಸಾಧಿಸ ಬೇಕೆಂಬ ಹೊಂಗನಸು ಇವನದು. ಅದಕ್ಕೆ ಆತನ ತಯಾರಿ ದಿನೇ ದಿನೇ ಹೆಚ್ಚಾಗುತ್ತಿದೆ. ಒಂದು ಒಳ್ಳೆಯ ಅವಕಾಶ ದೊರೆತಲ್ಲಿ ಈತ ರಾಷ್ಟ್ರ ಮಟ್ಟದಲ್ಲಿ ಮಿಂಚು ಬಲ್ಲ. ಕಬಡ್ಡಿ ಅಖಾಡೆಮಿ ಇವನ ಬಗ್ಗೆ ಗಮನ ನೀಡ ಬೇಕಾಗಿದೆ.

ಮುಂದೊಂದು ದಿನ ಇವನ ಅದ್ಭುತ ಆಟ TV ಪರದೆಯಲ್ಲಿ ನೋಡುವ ಅವಕಾಶ ಒದಗಿ ಬರಲೂ ಬಹುದು. ಯಾಕಂದರೆ ಈತನ ಛಲ, ಹಠ, ಪ್ರತಿಭೆ ಈತನ ಕನಸು ನನಸು ಮಾಡುವುದು ಗ್ಯಾರಂಟಿ. ಗಂಗೊಳ್ಳಿಯ ಸಹರಾ ಟೀಂ ನಲ್ಲಿ ಪ್ರಜ್ವಲ್ ಭರವಸೆಯ ಆಟಗಾರನಾಗಿ ಮುನ್ನುಗುತ್ತಿದ್ದಾನೆ. ಮಂಗಳೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಈತನ ಆಟದ ಪರಿಚಯ ಇಲ್ಲದವರೆ ಇಲ್ಲ. ರಿಶಾಂಕ್ ದೇವಾಡಿಗ ಗಂಗೊಳ್ಳಿ ಇವರ ಹಾಗೆ ನಮ್ಮ ಖಾರ್ವಿ ಸಮುದಾಯದ ಈ ಪ್ರಜ್ವಲ್ ಹೆಸರು ಕೂಡ ರಾಷ್ಟ್ರೀಯ ಮಟ್ಟದಲ್ಲಿ ಬೆಳಗ ಬೇಕು.

ಗಂಗೊಳ್ಳಿಯ ಈ ಯುವ ಪ್ರತಿಭೆ ಪ್ರಜ್ವಲ್ ಉಮಾನಾಥ್ ಪಂಡಿತ್ ಇವನಿಗೆ ಒಳ್ಳೆಯ ಅವಕಾಶ ದೊರಕಲಿ ಸಮುದಾಯ ಈತನಿಗೆ ಸಪೋರ್ಟ್ ಮಾಡ ಬೇಕಾಗಿದೆ.

ರವಿ ಕುಮಾರ್ ಗಂಗೊಳ್ಳಿ

Leave a Reply

Your email address will not be published. Required fields are marked *