ಅಪ್ಪ-ಅಮ್ಮ ಸೇವಾ ಸಂಸ್ಥೆ ಮೂಲಕ ಅಗಣಿತ ಸೇವೆ, ಜಿ. ಆರ್. ತಾಂಡೇಲ, ಮಂಜುಗುಣಿ.

ಅಂಕೋಲಾ: ಪಟ್ಟಣದ ಪಿಎಂ ಹೈಸ್ಕೂಲಿನ ಶಿಕ್ಷಕರಾಗಿರುವ ಜಿ. ಆರ್. ತಾಂಡೇಲ ರವರು ಎನ್. ಸಿ .ಸಿ ಅಧಿಕಾರಿಯಾಗಿ ಸಲ್ಲಿಸುತ್ತಿರುವ ಅತ್ಯುತ್ತಮ ಸೇವೆಯಿಂದಾಗಿ ಗುರುತಿಸಿಕೊಂಡಿದ್ದಾರೆ ಕಟ್ಟಿಕೊಂಡಿರುವ ಅಪ್ಪ-ಅಮ್ಮ ಸಂಸ್ಥೆಯ ಮೂಲಕ ಕೈಗೊಳ್ಳುತ್ತಿರುವ ಸಮಾಜಮುಖಿ ಕಾರ್ಯಗಳಿಂದ ಇವರು ಮನೆಮಾತಾಗಿದ್ದಾರೆ.

ಮಂಜುಗುಣಿಯ ಮೀನುಗಾರರ ಕುಟುಂಬದಲ್ಲಿ ಜನಿಸಿರುವ ಜಿ. ಆರ್. ತಾಂಡೇಲ ರವರು. ಮಾನವೀಯ ಅಂತಃಕರಣವನ್ನು ಹೊಂದಿದವರು. ಶೈಕ್ಷಣಿಕ ಸೇವೆ ಬಿಡುವಿನಲ್ಲಿ ಬಡಬಗ್ಗರಿಗೆ ಆಸರೆಯಾಗುವ ಮನೋಭಾವನೆ ಇವರದ್ದು ಇವರ ಸಾರ್ವಜನಿಕ ಸೇವೆಗೆ ದಾನಿಗಳ ನೆರವಿನ ಹಸ್ತ ನೀಡುತ್ತಿದ್ದಾರೆ ಹಿಂದೆ ನಡೆದ ಪ್ರವಾಹ ಪೀಡಿತ ಸಂದರ್ಭ ಎದುರಾಗಿರುವ ಕೋರೋನ ತಡೆಗಟ್ಟುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ಇವರ ನೇತೃತ್ವದಲ್ಲಿ ಜನಜಾಗೃತಿ ನಡೆಸಿ ಸಂಕಷ್ಟದಲ್ಲಿರುವವರಿಗೆ ಕಿಟ್ ವಿತರಿಸಲಾಗಿದೆ.

ಸಾಹಿತ್ಯಾಸಕ್ತರು ಆಗಿರುವ ಜಿ. ಆರ್. ತಾಂಡೇಲ ರವರು. ಹಲವಾರು ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದು ಅಗಲಿರುವ ತಂದೆತಾಯಿಯನ್ನು ಸ್ಮರಿಸಿ ಸೇವೆ ಒದಗಿಸುವ ನಿಟ್ಟಿನಲ್ಲಿ ಹುಟ್ಟಿಕೊಂಡಿರುವ ಅಪ್ಪ-ಅಮ್ಮ ಸೇವಾ ಸಂಸ್ಥೆ ಮೂಲಕ ಅಗಣಿತ ಸೇವೆ.

ಜಿ. ಆರ್. ತಾಂಡೇಲರವರಿಗೆ ಸಾಹಿತ್ಯ ಕುಸುಮ ಆವಾರ್ಡ್

ಸಾಹಿತ್ಯ ಕುಸುಮ ವೇದಿಕೆಯಿಂದ ಸಾಹಿತ್ಯ ಕುಟುಂಬ ಅವಾರ್ಡ್ ಲಭಿಸಿದೆ. 37 ಕವನ,17 ಚುಟುಕು,14 ಹನಿಗವನ ನಾಲ್ಕು ಸಣ್ಣ ಕಥೆಗಳನ್ನು ರಚಿಸಿರುವ ಇವರು ಅಂತರ್ಜಾಲದ ಮೂಲಕ ಕನ್ನಡದ ಲೇಖನ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ದಾವಣಗೆರೆಯ ಶಿಕ್ಷಣ ಜ್ಞಾನ ಮಾಸಪತ್ರಿಕೆ ಯಿಂದ “ಜ್ಞಾನಸಿಂಧು” ಗೌರವ. ಕರ್ನಾಟಕ ಬಟಾಲಿಯನ್ N.C C ಕಾರವಾರ ಇದರ ಕಮಾಂಡರ್ ಆಗಿರುವ ಮಹಾರಾಷ್ಟ್ರ ರಾಜ್ಯದಲ್ಲಿರುವ ಮಿಲಿಟರಿ ಆಫೀಸರ್ ತರಬೇತಿ ಅಕಾಡೆಮಿಗೆ ಆಯ್ಕೆಯಾಗಿದ್ದರು.

ನಿಮ್ಮ ಈ ಸಮಾಜ ಸೇವೆಯೂ ನಿರಂತರವಾಗಿರಲಿ ಮತ್ತು ತಾಯಿ ಕುಂದೋದರಿ ದೇವಿಯೂ ತಮಗೆ ಮತ್ತಷ್ಟು ಶಕ್ತಿಯನ್ನು ನೀಡಿ ಇನ್ನೂ ಹೆಚ್ಚಿನ ಸೇವೆ ಮಾಡುವಂತಾಗಲಿ ಎಂದು ಆಶಿಸೋಣ .

ವರದಿ: ಸುಧಾಕರ್ ಖಾರ್ವಿ
www.kharvionline.com

Leave a Reply

Your email address will not be published. Required fields are marked *