ರಕ್ತದಾನಿಗಳ ಅಪತ್ಪಾಂಧವ ಚರಣ್ ಖಾವಿ೯ ಗಂಗೊಳ್ಳಿ

ಯಾವುದೇ ಕೆಲಸವನ್ನು ಪ್ರಚಾರ ಮಾಡದೇ ತನ್ನಷ್ಟಕ್ಕೆ ತಾನು ಮಾಡಿಕೊಂಡು ಹೋಗುತಿರುವವರ ಸಾಲಿನಲ್ಲಿ ಮುಂಚೂಣಿಯಲ್ಲಿರುವ ವ್ಯಕ್ತಿಯೆಂದರೆ ರಕ್ತದಾನಿ ಚರಣ್ ಖಾವಿ೯ ಗಂಗೊಳ್ಳಿ

ಚರಣ್ ಖಾವಿ೯ ಗಂಗೊಳ್ಳಿ ಯಾವುದೇ ಪ್ರಚಾರವಿಲ್ಲದೇ ಹಲವಾರು ಜನರಿಗೆ ತುತು೯ ಸಮಯದಲ್ಲಿ ರಕ್ತ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆತ್ತಿರುವ ಚರಣ್ ಖಾವಿ೯ಯವರ ಬಗ್ಗೆ ಎಷ್ಟೇ ಹೇಳಿದ್ರು ಕಮ್ಮಿನೇ.

ಸ್ವತಹ ತಾವೇ 38 ಬಾರಿ ರಕ್ತದಾನ ಮಾಡಿ ಇತರರಿಗೆ ರಕ್ತದಾನದ ಶ್ರೇಷ್ಠತೆ ಮನವರಿಕೆ ಮಾಡಿ ದಿನದ 24 ಗಂಟೆಯಲ್ಲಿ 10ಗಂಟೆಯನ್ನು ಸಾಮಾಜಿಕ ಕಾಯ೯ದಲ್ಲೂ ನಿರತರಾಗುತ್ತರೆ.

ಕಾರವಾರದಿಂದ ಮಂಗಳೂರು, ಮಣಿಪಾಲ್ ದಲ್ಲಿ ತುರ್ತು ಯಾರಿಗದರೂ ರಕ್ತ ಬೇಕಿದ್ದಾರೆ ಸ್ವತಹ ತಾವೇ ಸ್ವಂತ ಕಾರಿನ ವ್ಯವಸ್ಥೆ ಮಾಡಿ ಕಷ್ಟದಲ್ಲಿರೋ ಪರವಾಗಿ ನಿಲ್ಲುವ ಸ್ನೇಹ ಜೀವಿ.

ಕಳೆದ 10 ವರ್ಷಗಳಿಂದ ಸಮಾಜಮುಖಿಯಾದ ಸಂಸ್ಥೆಯನ್ನು ಕಟ್ಟಿ ಅದಕ್ಕೆ ಯಕ್ಷಾಭಿಮಾನಿ ಬಳಗವೆಂದು ನಾಮಕರಣ ಮಾಡಿ ಸಾಮಾಜಿಕ ಕೆಲಸವನ್ನು ಮಾಡಿಕೊಂಡು ಬಂದಿರುತ್ತಾರೆ

ಇವರ ಕಾರ್ಯ ಇಷ್ಟಕ್ಕೆ ನಿಲ್ಲದೇ ಪ್ರತಿವರ್ಷ ರಕ್ತದಾನದ ಪ್ರಚಾರ ಮಾಡುತ್ತ ಗಂಗೊಳ್ಳಿಯಿಂದ ಧರ್ಮಸ್ಥಳದವರೆಗೆ ಸುಮಾರು 10 ವರ್ಷದಿಂದಲೂ ತಂಡ ಕಟ್ಟಿಕೊಂಡು ಪಾದಯಾತ್ರೆ ಮಾಡುತ್ತಾ ಬಂದಿರುತ್ತಾರೆ.

ಬಹುತೇಕ ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಸಮಾಜಮುಖಿ ಕಾರ್ಯ ಮಾಡುತ್ತಿರುವ ಇವರ ಒಳ್ಳೆಯ ಕಾಯ೯ವನ್ನು ಗುರುತಿಸಿ ರಕ್ತದಾನಿ ಬಳಗ ಕುಂದಾಪುರ ಹಾಗೂ ಹ್ಯಾಲ್ಪಿಂಗ ಹ್ಯಾಂಡ್ಸ್ ಕುಂದಾಪುರ ಗುರುತಿಸಿ ಮಹತ್ವದ ಜವಾಬ್ದಾರಿ ನೀಡಿದೆ.

ಮುಂದೆಯೂ ಕೂಡ ಇನ್ನಷ್ಟು ಜನರಿಗೆ ಇವರ ಸೇವೆ ಲಭಿಸುವಂತಾಗಲಿ.

ಚೇತನ್ ಯುವಾ✍

2 thoughts on “ರಕ್ತದಾನಿಗಳ ಅಪತ್ಪಾಂಧವ ಚರಣ್ ಖಾವಿ೯ ಗಂಗೊಳ್ಳಿ

  1. ಶ್ರೀ ತಾಯಿ ಮಹಾಕಾಳಿ ಅಮ್ಮನವರು ನಿಮಗೆ ಇನ್ನೂ ಹೆಚ್ಚಿನ ಸೇವೆಯನ್ನು ಮಾಡುವ ಶಕ್ತಿ ನೀಡಲಿ ನಿಮ್ಮ ಯೋಜನೆಗಳೆಲ್ಲ ಯಶಸ್ವಿಯಾಗಿ ನಿಮ್ಮೆಲ್ಲರ ಜೊತೆ ಕೆಲಸ ಮಾಡ್ತಾ ಇರೋದೇ ಖುಷಿ ಕೊಡ್ತಾ ಇದೆ.

Leave a Reply

Your email address will not be published. Required fields are marked *