ಉದ್ಯೋಗ ಮತ್ತು ಉದ್ಯಮ ಶೀಲತೆಗಾಗಿ ಕೌಶಲ್ಯ ಅಭಿವೃದ್ಧಿಯ ಮಹತ್ವ” ಕುರಿತು ವೆಬ್ನಾರ್

ಎಲ್ಲ ಸಮಾಜ ಭಾಂಧವರಿಗೆ ನನ್ನ ಹೃತ್ಪೂರ್ವಕ ನಮನಗಳು, ನನ್ನ ಹೆಸರು ರಾಮ್ ಪ್ರಸನ್ನ ಖಾರ್ವಿ

ಭಾಂಧವರೇ… ನಿಮಗೆ ತಿಳಿದಂತೆ ಭಾರತದ ಸಾಕ್ಷರತೆ ಪ್ರಮಾಣವು ಸುಮಾರು 70% ಇದೆ, ಆದರೆ ಉದ್ಯೋಗಾರ್ಹತೆ ವಿಷಯಕ್ಕೆ ಬಂದಾಗ, ಅವರಲ್ಲಿ ಕೇವಲ 20% ಮಾತ್ರ ಅರ್ಹತೆಯನ್ನು ಹೊಂದ್ದಿದರೆ. ಇದ್ದಕ್ಕೆ ಮುಖ್ಯ ಕಾರಣ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಕೌಶಲ್ಯ ಅಭಿವೃದ್ಧಿ ಅಥವಾ ವೃತ್ತಿಪರ ತರಬೇತಿಯನ್ನು ಹೊಂದಿರುವುದಿಲ್ಲ, ಅದು ಕೇವಲ ಪಠ್ಯ ಪುಸ್ತಕ ಆಧಾರಿತವಾಗಿದೆ.

ಆದ್ದರಿಂದ ಸರ್ಕಾರವು, ವಿಶ್ವದ ಪ್ರಮುಖ ಆರ್ಥಿಕವಾಗಿ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳೊಡನೆ ಸ್ಪರ್ಧಿಸಲು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆಯನ್ನು ಕೊಡುತ್ತಿದೆ. ಈ ನಿಟ್ಟಿನಲ್ಲಿ ದೇಶಾದ್ಯಂತದ ಎಲ್ಲಾ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಂಘಟಿಸಲು, 9 ನವೆಂಬರ್ 2014 ರಂದು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯವನ್ನು (Ministry of Skill Development and Entrepreneurship, MSDE) ಸ್ಥಾಪಿಸಲಾಯಿತು.

ಈ ಸಚಿವಾಲಯದ ಉದ್ದೇಶ ದೇಶಾದ್ಯಂತ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತರುವುದು ಹಾಗೆ ನುರಿತ ಮಾನವಸಂಪನ್ಮೂಲದ ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಂತರವನ್ನು ಗುರುತಿಸಿ ಅದನ್ನು ಕಡಿಮೆ ಮಾಡುವುದು. ಇದನ್ನು ಒಂದು ವೃತ್ತಿಪರ ಮತ್ತು ತಾಂತ್ರಿಕ ಚೌಕಟ್ಟನ್ನು ರಚಿಸುವ ಮೂಲಕ ಮಾಡಲಾಗುತ್ತದೆ. ಅಸ್ತಿತ್ವದಲ್ಲಿರುವ ಕೌಶಲ್ಯಗಳನ್ನು ನವೀಕರಿಸಲಾಗುತ್ತಿದೆ. ಈ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ನೀತಿಗಳನ್ನು ರಚಿಸುವ ಮುಖ್ಯವಾದ ಕಾರಣಗಳು * ನಿರುದ್ಯೋಗಿಗಳಿಗೆ ಮತ್ತು ಕಡಿಮೆ ಸಂಬಳ ಪಡೆಯುವ ಯುವಕರಿಗೆ ಉದ್ಯಮ-ನಿರ್ದಿಷ್ಟ ತರಬೇತಿಯನ್ನು ನೀಡುವುದು.

* ಬದಲಾಗುತ್ತಿರುವ ತಂತ್ರಜ್ಞಾನ ಮತ್ತು ಕಾರ್ಮಿಕ ಮಾರುಕಟ್ಟೆಯ ಬೇಡಿಕೆಗಳಿಗೆ ಹೊಂದಿಕೊಳ್ಳಲು ಒಂದು ವ್ಯಕ್ತಿಯ ಉದ್ಯೋಗಾರ್ಹತೆ ಸಾಮರ್ಥ್ಯವನ್ನು ಹೆಚ್ಚಿಸುವುದು.

* ತರಬೇತಿ ಪಡೆದ ಜನರ ಆರ್ಥಿಕ ಉತ್ಪಾದಕತೆ ಹೆಚ್ಚಳ ಮತ್ತು ಜೀವನ ಮಟ್ಟವನ್ನು ಸುಧಾರಿಸುವುದು.

* ಯುವಕರು, ಮಹಿಳೆಯರು ಮತ್ತು ಹಿಂದುಳಿದವರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು.

15 ಜುಲೈ ವಿಶ್ವವು ಯುವ ಕೌಶಲ್ಯ ದಿನವಾಗಿತ್ತು, ಆದ್ದರಿಂದ ನಮ್ಮ ಸಮುದಾಯದ ಯುವಜನರಿಗೆ ಕೌಶಲ್ಯ ಅಭಿವೃದ್ಧಿಯ ಕಾರ್ಯಕ್ರಮಗಳ ಅಂಗವಾಗಿ ಮತ್ತು ರಾಷ್ಟ್ರೀಯ ಅಭಿವೃದ್ಧಿಗೆ ನಮ್ಮ ಕಿರು ಕೊಡುಗೆಯನ್ನು ನೀಡಲು … KharviOnline ತಂಡವು ಆಗಸ್ಟ್ 1, 2021 ರಂದು “ಸ್ವ-ಉದ್ಯೋಗ ಮತ್ತು ಉದ್ಯಮಶೀಲತೆಗಾಗಿ ಕೌಶಲ್ಯ ಅಭಿವೃದ್ಧಿಯ ಮಹತ್ವ” ಕುರಿತು ವೆಬ್ನಾರ್ ಅನ್ನು ಆಯೋಜಿಸುತಿದೆ. ಇದು ನಮ್ಮ ಸಮುದಾಯದ ಯುವಕರಲ್ಲಿ ಉದ್ಯಮಶೀಲತೆ ಮನೋಭಾವ ಮತ್ತು ಕೌಶಲ್ಯಾಭಿವೃದ್ಧಿ ಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮವಾಗಲಿದೆ. ಈ ಕಾರ್ಯಕ್ರಮವು ವಿದ್ಯಾರ್ಥಿಗಳು, ಪಾಲಕರು, ಉದ್ಯೋಗಾಕಾಂಕ್ಷಿಗಳು ಮತ್ತು ಯಾವುದೇ ಕ್ಷೇತ್ರದಲ್ಲಿ ಉದ್ಯಮಿಗಳಾಗಲು ಬಯಸುವವರಿಗೆ ಆಯೋಜಿಸಲ್ಪಟ್ಟಿದ್ದೆ.

ಈ ಕಾರ್ಯಕ್ರಮವನ್ನು ವೃತ್ತಿಪರ ಯುವಕ ಶ್ರೀ ಮಲ್ಲೇಶ್ಡೆ ಅವರು ನೆಡಸಲಿದ್ದಾರೆ. ಇವರು ಕಂಪ್ಯೂಟರ್ ಸೈನ್ಸ್ನಲ್ಲಿ ಎಂಟೆಕ್ ಮಾಡಿ ಪ್ರಸ್ತುತ ಎಂಜಿನಿಯರಿಂಗ್ ಕಾಲೇಜ್ ಒಂದರಲ್ಲಿ Regional Coordinator & Incubation Centre Manager of New Age Incubation Network Centre ಆಗಿದ್ದರೆ. ಹಾಗೇಯೇ ರಾಜ್ಯ ಸರ್ಕಾರದ Dept. of IT, BT and S&T, ಜೋತೆ ಜಿಲ್ಲಾ ಇನ್ನೋವೇಶನ್ ಅಸೋಸಿಯೇಟ್ಆಗಿ ಸ್ಟಾರ್ಟ್-ಅಪ್ ಬೇಕಾಗುವ ವ್ಯವಸ್ಥೆ ಮತ್ತು ಉದ್ಯಮಶೀಲತಾ ಮನೋಭಾವ ರಚಿಸಲು ಕೆಲಸ ಮಾಡುತ್ತಿದ್ದಾರೆ. ಹಾಗೆ ಅವರು SEED ಎಂಬ ಸಂಸ್ಥೆಯೊಂದಿಗೆ ಜಾಗತಿಕ ಮಟ್ಟದಲ್ಲಿ ವ್ಯಾಪಾರ ಅಭಿವೃದ್ಧಿ ಸೇವಾ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಂಸ್ಥೆ ಉದ್ಯಮಶೀಲತೆಯ ಸುಸ್ಥಿರ ಅಭಿವೃದ್ಧಿಗಾಗಿ ಉತ್ತೇಜಿಸುವ ಒಂದು ಸಂಸ್ಥೆ.

ಎಲ್ಲರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಮನವಿ ಹಾಗೇ ವೆಬ್ನಾರ್ ವಿಷಯಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿದ್ದರೆ, ದಯವಿಟ್ಟು ಆ ಪ್ರಶ್ನೆಗಳನ್ನು Sudhakar Kharvi Editor KharviOnline.com ಗೆ ಕಳುಹಿಸಿ. ವೆಬ್ನಾರ್ ದಿನದಂದು ಅದಕ್ಕೆ ಪ್ರೆಸೆಂಟರ್ ಉತ್ತರಿಸುತ್ತಾರೆ.

4 thoughts on “ಉದ್ಯೋಗ ಮತ್ತು ಉದ್ಯಮ ಶೀಲತೆಗಾಗಿ ಕೌಶಲ್ಯ ಅಭಿವೃದ್ಧಿಯ ಮಹತ್ವ” ಕುರಿತು ವೆಬ್ನಾರ್

  1. ಸ್ವ ಉದ್ಯೋಗ ಮತ್ತು ಉದ್ಯಮಶೀಲತೆಗಾಗಿ ಕೌಶಲ್ಯ ಅಭಿವೃದ್ಧಿಯ ಮಹತ್ವದ ಕುರಿತು ಆಯೋಜಿಸಲ್ಪಡುವ ವೆಬ್ನಾರ್ ಯಶಸ್ವಿಯಾಗಿ ಸಂಪನ್ನಗೊಳ್ಳಲ್ಲಿ.ಇದರಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡುವ ಶ್ರೀ ಮಲ್ಲೇಶ್ k s ,ಕಾರ್ಯಕ್ರಮದ ಆಯೋಜಕರಾದ ನಮ್ಮ ಸಮಾಜದ ಚಿಂತಕರಾದ ಶ್ರೀ ರಾಮ್ ಪ್ರಸನ್ನ ಖಾರ್ವಿ ಸರ್ ,ಖಾರ್ವಿ ಸಮಾಜದ ಸತ್ಕಾರ್ಯದ ಸತ್ಪರುಷ ಶ್ರೀ ರವಿ t ನಾಯ್ಕ್ ಮತ್ತು ಖಾರ್ವಿ ಆನ್ಲೈನ್ ಸಂಪಾದಕರಾದ ಶ್ರೀ ಸುಧಾಕರ ಖಾರ್ವಿ ಯವರಿಗೂ ಅಭಿನಂದನೆಗಳು. ಈ ಕಾರ್ಯಕ್ರಮದಿಂದ ಸಮಾಜ ಭಾಂಧವರು ಸದುಪಯೋಗ ಪಡೆದುಕೊಳ್ಳಲ್ಲಿ.ಎಲ್ಲರಿಗೂ ಶುಭವಾಗಲಿ.👌👌👌👍👍👍👏👏👏🙏🙏🙏🙏🙏

  2. ಇಂದಿನ ಗ್ರಾಮೀಣ ಮತ್ತು ಸಣ್ಣ ಪಟ್ಟಣ ಯುವಕರಿಗೆ ಇಂತಹ ವೆಬ್‌ನಾರ್ ತುಂಬಾ ಅಗತ್ಯವಿದೆ. ಅವರು ಪ್ರತಿಭಾವಂತರು. ಈ ರೀತಿಯ ವೆಬ್ನಾರ್ ಮತ್ತು ಮಾರ್ಗದರ್ಶನದಿಂದ ಅವರು ತಮ್ಮ ಪ್ರತಿಭೆಯನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬಹುದು. ರಾಮ ಪ್ರಸನ್ನ ಅವರಿಗೆ ಮತ್ತು ಖಾರ್ವಿ ಆನ್ಲೈನ್ ತಂಡಕ್ಕೆ ನನ್ನ ಅಭಿನಂದನೆಗಳು.

Leave a Reply

Your email address will not be published. Required fields are marked *