MOHAN BANAVALIKAR ಖಾರ್ವಿ ಸಮಾಜದ ಆಶಾಕಿರಣ

Rome is not built in a day ಅನ್ನೋ ಹಾಗೆ ಯಾವುದೇ ಸಾಧನೆಯನ್ನು ಒಂದೇ ದಿನ ಸಾಧಿಸಬೇಕು ಎನ್ನುವುದು ಅಸಾಧ್ಯವಾದ ಮಾತು.ಪ್ರತಿಯೊಂದಕ್ಕೂ ಕಠಿಣ ಪರಿಶ್ರಮ ಅತ್ಯಗತ್ಯ.ಕಠಿಣ ಪರಿಶ್ರಮ ಎಂಬ ಆತ್ಮಕ್ಕೆ ಸಂಯಮ, ತಾಳ್ಮೆ, ಸಹನೆ, ಏಕಾಗ್ರತೆ ಸೇರಿಕೊಂಡರೆ ಸಾಧನೆಯ ಹಾದಿ ಸುಗುಮವಾಗುವುದರಲ್ಲಿ ಎರಡು ಮಾತಿಲ್ಲ.ಇವೆಲ್ಲದರ ಜೊತೆಗೆ ಮಾನಸಿಕ ದೃಢತೆ, ಗುರಿ ಸಾಧಿಸುವ ಛಲ ಅತ್ಯಗತ್ಯ. ಈ ಎಲ್ಲಾ ಮೈಲಿಗಲ್ಲುಗಳನ್ನು ದಾಟಿ ಅಪೂರ್ವವಾದ ಸಾಧನೆಯ ಮೂಲಕ ಕೊಂಕಣಿ ಖಾರ್ವಿ ಸಮಾಜದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಶ್ರೀ ಮೋಹನ್ ಬನಾವಳಿಕಾರ್ ರವರು ನಿಜವಾಗಿಯೂ ಹೃದಯಸ್ಪರ್ಶಿ ಅಭಿನಂದನೆಗೆ ಪಾತ್ರರಾಗುತ್ತಾರೆ.

ಅಂಕೋಲಾದ ಅವರ್ಸಾ ಮೋಹನ್ ಬನಾವಳಿಕಾರ್ ರವರ ಹುಟ್ಟೂರು. ಕಾರವಾರದ ದೀವೇಕರ ಕಾಲೇಜಿನಲ್ಲಿ ಪದವಿ ವಿದ್ಯಾಭ್ಯಾಸ ಪಡೆದಿದ್ದ ಬನವಾಳಿಕಾರ್ ರವರು 1982 ರಲ್ಲಿ ಗೋವಾದ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಬಳಿಕ Import and Export Department ನಲ್ಲಿ ಕಮಿಷನ್ ಏಜೆಂಟ್ ಆಗಿ ಕಾರ್ಯನಿರ್ವಹಿಸಿದರು. ಇದರ ಅನುಭವದೊಂದಿಗೆ ಮುಂಬೈನಲ್ಲಿ ಕಸ್ಟಮ್ಸ್ ಪರೀಕ್ಷೆಗೆ ಕೂತು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದರು.1995 ರಲ್ಲಿ ಗೋವಾದಲ್ಲಿ ಕಾತ್ಯಾಯನಿ ಬಾಣೇಶ್ವರಿ ಎಂಬ lmport and export ಕ್ಲಿಯರೆನ್ಸ್ ಕಂಪನಿಯನ್ನು ಸ್ಥಾಪಿಸಿದರು. Member of federation of freight forwarders associations in india (FFFAI)

ಅವರ್ಸಾ ಮತ್ತು ಬೇಲೇಕೇರಿಯಲ್ಲಿ ಸಕ್ರಿಯ ಸಮಾಜ ಸೇವೆಯಲ್ಲಿ ನಿರತರಾಗಿದ್ದ ಬನಾವಳಿಕಾರ್ ರವರು ಪರಿಸರದ ಹತ್ತು ಹಲವು ಸಮಸ್ಯೆಗಳನ್ನು ಅತ್ಯಂತ ಮುತುವರ್ಜಿಯಿಂದ ಪರಿಹರಿಸುತ್ತಿದ್ದರು. ಎಲ್ಲದ್ದಕ್ಕೂ ಸಮರ್ಪಕ ಪರಿಹಾರ ನೀಡುತ್ತಿದ್ದ ಇವರು ಪರಿಸರದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ ಗುರುತಿಸಿಕೊಂಡಿದ್ದರು. ಹಾಗೇಯೇ ಗೋವಾದ ವಾಸ್ಕೋ ಕೊಂಕಣಿ ಖಾರ್ವಿ ಸಮಾಜದ ಮುಂದಾಳತ್ವ ವಹಿಸಿಕೊಂಡು ಹಲವು ಸಮಾಜ ಸೇವಾಕೈಂಕರ್ಯದಲ್ಲಿ ತೊಡಗಿಸಿಕೊಂಡ ಕೀರ್ತಿ ಇವರದ್ದಾಗಿರುತ್ತದೆ. ಕೊಂಕಣಿ ಖಾರ್ವಿ ಸಮಾಜ ಅವರ್ಸಾ ಇದರ ಅಧ್ಯಕ್ಷರಾಗಿಯೂ ಅನುಪಮ ಸೇವೆ ಸಲ್ಲಿಸಿದ್ದಾರೆ. ಕುಂದಾಪುರದ ಪದ್ಮಾವತಿ ಸಾರಂಗರ ಪುತ್ರಿ ಸುಜಾತರನ್ನು ಮದುವೆಯಾಗಿರುವ ಇವರು ಓರ್ವ ಪುತ್ರನನ್ನು ಹೊಂದಿರುತ್ತಾರೆ. ಇವರ ಪುತ್ರ Mechanical Engineering, M BA ಪದವಿ ಹೊಂದ್ದಿದು ಪ್ರಸ್ತುತ ವಿಪ್ರೋ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆ.

ಸಮಾಜದ ಏಳಿಗೆಗಾಗಿ ತನ್ನನ್ನು ಮುಡಿಪಾಗಿಸಿಕೊಂಡಿರುವ ಮೋಹನ್ ಬನಾವಳಿಕಾರ್ ರವರು ಸಮಾಜದ ಎಲ್ಲಾ ಸ್ಥರಗಳ ಜನರನ್ನು ಒಂದೇ ಸೂರಿನಡಿಯಲ್ಲಿ ತಂದು ಪ್ರತಿಯೊಬ್ಬರ ಬಗ್ಗೆ ಕಾಳಜಿ ವಹಿಸಿ ಸೂಕ್ತ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಮಹಾತ್ವಾಕಾಂಕ್ಷೆಯುಳ್ಳ ಬಹುಮುಖ್ಯವಾದ ವಿಚಾರವಿಟ್ಟುಕೊಂಡು ಅದನ್ನು ಕಾರ್ಯರೂಪಕ್ಕೆ ತರಲು ದೃಡ ಸಂಕಲ್ಪ ಮಾಡಿದ್ದಾರೆ. ಸಮಸ್ತ ಕೊಂಕಣಿ ಖಾರ್ವಿ ಸಮಾಜದ ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾದ ಉಪಾಧ್ಯಕ್ಷರಾಗಿ ಶ್ರೀಯುತರು ಅಗಣಿತ ಸೇವೆ ಸಲ್ಲಿಸಿದ್ದಾರೆ. ಸಭಾಭವನ ನಿರ್ಮಾಣ ಮಾಡುವಲ್ಲಿ ತನು ಮನ ಧನದಿಂದ ಅದ್ಯಮ್ಯ ಸೇವೆ ಸಲ್ಲಿಸಿರುವ ಇವರು ಸಭಾಭವನ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ ಸಂಗತಿಯಾಗಿದೆ. ಕೊಂಕಣಿ ಖಾರ್ವಿ ಸಮಾಜ ಭಾಂಧವರು ಅಭಿವೃದ್ಧಿಯಾಗಬೇಕು ಎಂಬ ದೂರಗಾಮಿ ದೃಷ್ಟಿಕೋನದ ಇವರ ಕರ್ತೃತ್ವ ಶಕ್ತಿಗೆ ಇಲ್ಲಿ ಅನಾವರಣಗೊಂಡ ಸಾಧನೆಗಳೇ ಜ್ವಲಂತ ಉದಾಹರಣೆ.

ಹೊನ್ನಾವರದ ಕಾಸರಕೋಡು ಟೊಂಕದಲ್ಲಿ ಉದ್ದೇಶಿತ ಖಾಸಗಿ ಬಂದರು ನಿರ್ಮಾಣ ಯೋಜನೆಯಿಂದ ನಮ್ಮ ಸಮಾಜದ ಮೀನುಗಾರರಿಗೆ ಆಗುವ ತೊಂದರೆಗಳನ್ನು ಮನವರಿಕೆ ಮಾಡಿಕೊಡಲು ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾದ ನೀಯೋಗದೊಂದಿಗೆ ಉತ್ತರ ಕನ್ನಡ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದಾಗ ಬಂದರು ನಿರ್ಮಾಣ ಯೋಜನೆಯಿಂದ ಆಗುವ ತೊಂದರೆಗಳ ಬಗ್ಗೆ ಮೋಹನ್ ಬನಾವಳಿಕಾರ್ ರವರು ಸವಿಸ್ತಾರವಾಗಿ ಉತ್ತರ ಕನ್ನಡ ಜಿಲ್ಲಾಧಿಕಾರಿಯವರಿಗೆ ಗೋವಾದ ಉದಾಹರಣೆಯೊಂದಿಗೆ ಅಂಕಿ ಅಂಶಗಳ ಸಮೇತ ಅತ್ಯಂತ ಸಮರ್ಪಕವಾಗಿ ಮನದಟ್ಟು ಪಡಿಸಿದ್ದರು.

Where there is will there is way. Strength respects strength ಅನ್ನೋ ಹಾಗೆ ಸಾಧಿಸಬೇಕು ಅನ್ನೋ ಛಲ,ಕಷ್ಟಪಟ್ಟಾದರೂ ಸರಿ ಸಾಧಿಸಿಯೇ ತೋರಿಸುತ್ತೇನೆ ಎಂಬ ದೃಡ ಮನಸ್ಸಿನ ಮೋಹನ್ ಬನಾವಳಿಕಾರ್ ನಮ್ಮ ಸಮಾಜದ ಧ್ರುವತಾರೆ. ಜಗತ್ತಿನಲ್ಲಿ ಘಟಿಸುವ ಅನೇಕ ಮಹಾತ್ಕಾರ್ಯಗಳ ಹಿಂದಿರುವ ವ್ಯಕ್ತಿಗಳು ಅನಾಮಧೇಯರಾಗಿಯೇ ಉಳಿಯ ಬಯಸುತ್ತಾರೆ. ಉನ್ನತ ಉದ್ದೇಶವನ್ನಿರಿಸಿಕೊಂಡು ಸಮಾಜ ಸೇವೆ ಮಾಡುವ ನಿಜವಾದ ಸಾಧಕ ಯಾವಾಗಲೂ ಪ್ರಚಾರ ವಿಮುಖನಾಗಿರುತ್ತಾನೆ. ಆದರೆ ಕೆಲವು ಪ್ರಚಾರ ಪ್ರಿಯರು ಅವಕಾಶ ಸಿಕ್ಕಾಗಲೆಲ್ಲಾ ತಮ್ಮನ್ನು ಪ್ರಚಾರಕ್ಕೆ ಒಡ್ಡಿಕೊಳ್ಳಲು ಕಾತುರರಾಗಿರುತ್ತಾರೆ. ವೇದಿಕೆ ಮೇಲೆ ಹೊರಗೆ ಒಳಗೆ ಪ್ರಚಾರ ಪ್ರಿಯರೇ ವಿಜೃಂಭಿಸುತ್ತಾರೆ. ಶ್ರೀ ಮೋಹನ್ ಬನಾವಳಿಕಾರ್ ರವರು ಇದಕ್ಕೆ ಹೊರತಾಗಿದ್ದು,ಕೊಂಕಣಿ ಖಾರ್ವಿ ಸಮಾಜದ ಅಭಿವೃದ್ಧಿಗಾಗಿ ತನು ಮನ ಧನದಿಂದ ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಹೃದಯವಂತ ಮೋಹನ ಬನಾವಳಿಕಾರ್ ರವರು ಕೊಂಕಣಿ ಖಾರ್ವಿ ಸಮಾಜದ ಶ್ರೇಷ್ಠ ಔನತ್ಯದ ಕನಸುಗಳನ್ನು ಸಾಕಾರಗೊಳಿಸಲು ಪಣ ತೊಟ್ಟಿದ್ದಾರೆ. ಸಮಾಜದ ಪ್ರತಿಭಾವಂತರು, ವಿದ್ಯಾರ್ಥಿಗಳು, ಕ್ರೀಡಾಲೋಕದ ಸಾಧಕರು, ಮೀನುಗಾರರು ಹೀಗೆ ಎಲ್ಲರನ್ನೂ ಒಂದೇ ಸೂರಿನಡಿಯಲ್ಲಿ ತಂದು ಬಲಿಷ್ಠ ಸಮಾಜವನ್ನು ಕಟ್ಟುವ ಮಹೋನ್ನತ ಉದ್ದೇಶ ಹೊಂದ್ದಿದು, ಇದಕ್ಕಾಗಿ ಸಮಾಜದ ವಿವಿಧ ಅಂಗ ಸಂಸ್ಥೆಗಳ ಸಹಕಾರದಿಂದ ಖಾರ್ವಿ ಸಮಾಜವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನೆಡೆಸಲು ,ಕಂಡ ಕನಸುಗಳನ್ನು ಸಾಕ್ಷಾತ್ಕಾರಗೊಳಿಸಲು ದೃಡ ಸಂಕಲ್ಪ ತೊಟ್ಟಿದ್ದಾರೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಏಳಿಗೆಯ ಪಥದಲ್ಲಿ ಮುನ್ನೆಡೆಯಬೇಕು ಎಂಬ ಧ್ಯೇಯೋದ್ದೇಶ ಹೊಂದಿರುವ ಮೋಹನ್ ಬನಾವಳಿಕಾರ್ ರವರಿಗೆ ಖಾರ್ವಿ ಆನ್ಲೈನ್ ಶುಭ ಹಾರೈಕೆಯ ಅಭಿನಂದನೆಗಳನ್ನು ಸಲ್ಲಿಸುತ್ತದೆ.ಕೊಂಕಣಿ ಖಾರ್ವಿ ಸಮಾಜಕ್ಕೆ ಅವರಿಂದ ಮತ್ತಷ್ಟೂ ಸೇವೆ ಲಭಿಸಲಿ ಎಂಬುದು ನಮ್ಮ ಆಶಯವಾಗಿದೆ.

ಸುಧಾಕರ್ ಖಾರ್ವಿ
Editor
www.kharvionline.com

5 thoughts on “MOHAN BANAVALIKAR ಖಾರ್ವಿ ಸಮಾಜದ ಆಶಾಕಿರಣ

  1. ಸಾಧನೆಯ ಸರದಾರನಿಗೆ ಹೃದಯಸ್ಪರ್ಶಿ ಅಭಿನಂದನೆಗಳು.ಕೊಂಕಣಿ ಖಾರ್ವಿ ಸಮಾಜದ ಉತ್ಕರ್ಷದ ಕನಸು ಕಂಡಿರುವ ನಿಮ್ಮ ದೃಡಸಂಕಲ್ಪ,ನಾಯಕತ್ವದ ಗುಣಗಳು ಶ್ಲಾಘನೀಯ.🙏🙏🙏👋👋👋👋👋👌👍👌👍🙏🙏🙏🙏🙏💐💐💐💐💐💐💐

  2. Mohan Sir, this is a long due recognition and appreciation for you. The youngsters of our community look forward towards you with lots of hope. Your life’s achievement of being a self built man is also a great example for a lot of us. Good luck and congratulations Sir.

  3. ನಿಜವಾಗಲೂ ಮೋಹನ್ ಸರ್ ಅಭಿನಂದನೆಗೆ ಅರ್ಹರು…ನಮ್ಮ ಸಮಾಜದ ಅಭಿವೃದ್ಧಿಗಾಗಿ ತಮ್ಮನ್ನು ತೊಡಗಿಸಿಕೊಂಡಿರುವ ವ್ಯಕ್ತಿ….🙏🙏

  4. ಮೋಹನ್ ಸರ್ ಅವರು ಒಬ್ಬ ಉತ್ತಮ ದೂರದೃಷ್ಟಿ ಇರುವ ವ್ಯಕ್ತಿಯಾಗಿದ್ದು ಸಮುದಾಯದ ಸರ್ವತೋಮುಖವಾದ ಬೆಳವಣಿಗೆಗೆ ಹಿಂದಿನಿಂದಲೂ ಶ್ರಮಿಸುತ್ತಿದ್ದು ಮುಂದಿನ ದಿನಗಳಲ್ಲಿ ಇವರ ನಾಯಕತ್ವದಲ್ಲಿ ಸಮಾಜವು ಇನ್ನಷ್ಟು ಬೆಳವಣಿಗೆ ಕಾಣುವುದರಲ್ಲಿ ಸಂದೇಹವಿಲ್ಲ.
    ಅಹಂಕಾರ ಇಲ್ಲದ ಇವರಿಗೆ ಜೀವನದಲ್ಲಿ ಶ್ರೀ ದೇವರು ಉತ್ತಮ ಆರೋಗ್ಯ ಆಯಸ್ಸು ನೀಡಿ ಸಮಾಜದ ಬೆಳವಣಿಗೆಯಲ್ಲಿ ಉತ್ತಮ ಸೇವೆ ಸಿಗುವಂತಾಗಲಿ ಎಂದು ಹಾರೈಸುತ್ತೇನೆ

Leave a Reply

Your email address will not be published. Required fields are marked *